AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್! ಜನರ ಆಕ್ರೋಶ

ನಿರ್ಬಂಧದ ನಡುವೆಯೂ ದಸರಾ ಆನೆಗಳ ಜೊತೆ ಶಾಸಕರ ಮಕ್ಕಳ ವಿಶೇಷ ಫೋಟೋಶೂಟ್! ಜನರ ಆಕ್ರೋಶ

ರಾಮ್​, ಮೈಸೂರು
| Edited By: |

Updated on: Oct 14, 2026 | 10:32 AM

Share

ಮೈಸೂರು ಅರಮನೆಯಲ್ಲಿ ದಸರಾ ಗಜಪಡೆಯ ವೀಕ್ಷಣೆಗೆ ಸಾಮಾನ್ಯ ಜನರಿಗೆ ನಿಷೇಧವಿದ್ದರೂ, ಶಾಸಕ ವಿನಯ್ ಕುಲಕರ್ಣಿ ಅವರ ಮಕ್ಕಳಿಗೆ ಆನೆಗಳ ಜೊತೆ ವಿಶೇಷ ಫೋಟೋಶೂಟ್ ನಡೆಸಲು ಅವಕಾಶ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗಿದ್ದು, ಅರಮನೆ ಆಡಳಿತ ಮಂಡಳಿ ಹಾಗೂ ಅರಣ್ಯ ಇಲಾಖೆಯ ಈ ತಾರತಮ್ಯದ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮೈಸೂರು, ಅಕ್ಟೋಬರ್ 14: ಮೈಸೂರು ಅರಮನೆಯಲ್ಲಿ ದಸರಾ ಗಜಪಡೆಯನ್ನು ವೀಕ್ಷಿಸಲು ಹಾಗೂ ಅವುಗಳ ಜೊತೆ ಫೋಟೋ, ವಿಡಿಯೋ ತೆಗೆಯಲು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ. ಆದರೆ, ಶಾಸಕ ವಿನಯ್ ಕುಲಕರ್ಣಿ ಅವರ ಮಕ್ಕಳಿಗೆ ಆನೆಗಳ ಜೊತೆ ಪ್ರತ್ಯೇಕವಾಗಿ ಫೋಟೋಶೂಟ್ ಮಾಡಲು ಅವಕಾಶ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸಾಮಾನ್ಯ ಜನರಿಗೆ ಪ್ರವೇಶ ನಿರಾಕರಿಸಿರುವ ಜಾಗದಲ್ಲೇ ಶಾಸಕರ ಮಕ್ಕಳು ದಸರಾ ಆನೆಯ ದಂತ ಹಿಡಿದು ಫೋಟೋ ತೆಗೆಸಿಕೊಂಡಿದ್ದಾರೆ ಎನ್ನಲಾದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. “ಸಾಮಾನ್ಯರಿಗೊಂದು ನಿಯಮ, ರಾಜಕಾರಣಿಗಳ ಮಕ್ಕಳಿಗೊಂದು ನಿಯಮವೇ?” ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಇಲಾಖೆ ಹಾಗೂ ಅರಮನೆ ಆಡಳಿತ ಮಂಡಳಿಯ ಈ ತಾರತಮ್ಯದ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿಗೆ ನೀಡಿದ್ದ ಶಿಕ್ಷೆಗೆ ಹೈಕೋರ್ಟ್​ ತಡೆ ನೀಡಿದೆ. ಕೋರ್ಟ್​ ಆದೇಶದಂತೆ ಸದ್ಯಕ್ಕೆ ಕುಲಕರ್ಣಿ ಜಾಮೀನು ಪಡೆದು ಹೊರಬಂದಿದ್ದಾರೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಅ.27ಕ್ಕೆ ಮುಂದೂಡಿದೆ. ಇದರ ನಡುವೆ ಅವರ ಮಕ್ಕಳ ಮೇಲಿನ ನಿಯಮ ಉಲ್ಲಂಘನೆಯ ಆರೋಪ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

Video Source: Vaishali Instagram account

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More