ಬೆಂಗಳೂರು: ಇನ್ನೇನು ಕೊರೊನಾ(Covid-19)ಅಬ್ಬರ ಮುಗಿಯಿತು ಎಂದು ಜನ ನಿರಾಳರಾಗಿದ್ದಾರೆ. ಆದರೆ ಮತ್ತೆ ಇದೀಗ ಸದ್ದಿಲ್ಲದೆ ನಿಧಾನಗತಿಯಲ್ಲಿ ಕೊರೊನಾ ಹಾವಳಿ ಶುರುವಾಗುತ್ತಿದೆ. ಹೌದು ರಾಜ್ಯದಲ್ಲಿ ಮತ್ತೆ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಿದೆ. ಕಳೆದ 1 ವಾರದಿಂದ ಬೆಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಕೊರೊನಾ ಏರಿಕೆಯಾಗಿದ್ದು, ಶಿವಮೊಗ್ಗ, ಕಲಬುರಗಿ, ಮೈಸೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಗಾವಹಿಸಲಾಗಿದೆ. ಈ 4 ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಆರೋಗ್ಯ ಇಲಾಖೆ ಕೊವಿಡ್ ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕೆಗೆ ಒತ್ತು ಕೊಡಲು ಸೂಚನೆ ನೀಡಿದೆ. ಮತ್ತು ಸೋಂಕಿನ ಬಗ್ಗೆ ತೀವ್ರ ನಿಗಾ ಇಡಲು ಆರೋಗ್ಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ರಾಜ್ಯದ ಚುನಾವೆಣೆಯ ಮೇಲೆ ಕೊರೊನಾ ಕರಿನೇರಳು ?
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಕೊರೊನಾ ಕೇಸ್‌ಗಳು ಏರಿಕೆಯತ್ತ ಸಾಗಿದೆ. ಕಳೆದ ಒಂದು ವಾರದಿಂದ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ ಕೊರೊನಾ ಏರಿಕೆಯಾಗಿದೆ. ರಾಜ್ಯದಲ್ಲಿ ಕಳೆದ 5 ತಿಂಗಳಿಂದ ನಿಯಂತ್ರಣದಲ್ಲಿದ್ದ ಕೊರೋನಾ ಮಾ.8 ರಿಂದ ಕಳೆದ ಎರಡು ವಾರದ ಅವಧಿಯಲ್ಲಿ ಶೇ.2.77 ಪಾಸಿಟಿವಿಟಿದರ ಹೆಚ್ಚಿದೆ.
ಇನ್ನು ದೇಶದಲ್ಲಿ ಈಗಾಗಲೇ ಎಚ್3ಎನ್2 ಸೋಂಕಿನಿಂದ ಹೆಚ್ಚೆಚ್ಚು ಜನರು ಬಳಲುತ್ತಿರುವ ನಡುವೆಯೇ ಕೋವಿಡ್ 19 ಪ್ರಕರಣಗಳು ನಿಧಾನವಾಗಿ ಏರಿಕೆ ಕಾಣುತ್ತಿದೆ. ಕಳೆದ 129 ದಿನಗಳಲ್ಲೇ ಗರಿಷ್ಠ ಪ್ರಮಾಣದ ಹೊಸ ಪ್ರಕರಣಗಳು ಭಾನುವಾರ ವರದಿಯಾಗಿದೆ. ಕೇವಲ 24 ಗಂಟೆಗಳಲ್ಲಿ ದೇಶಾದ್ಯಂತ 1,071 ಹೊಸ ಕೊರೊನಾ ಕೇಸ್‌ಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಜೊತೆಗೆ ದೇಶದಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆಯು 6000 ದಾಟಿದೆ.
ಸೋಂಕಿನಿಂದ ಪಾರಾಗಲು ಏನು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.?
1) ನಿಗದಿತವಾಗಿ ಪರೀಕ್ಷೆಗಳನ್ನು ನಡೆಸಬೇಕು.
2) ಹೊಸದಾಗಿ ಹಾಗೂ ಕ್ಲಸ್ಟರ್ ಮಾದರಿಯಲ್ಲಿ ವರದಿಯಾಗುವ ಸೋಂಕು ಪ್ರಕರಣಗಳ ಮೇಲ್ವಿಚಾರಣೆ ಮಾಡಬೇಕು.
3) ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಎಚ್ಚರವಹಿಸಬೇಕು.
4) ಐಎಲ್‌ಐ (ವಿಷಮ ಶೀತ ಜ್ವರ) ಹಾಗೂ ಸಾರಿ (ತೀವ್ರ ಉಸಿರಾಟ ಸಮಸ್ಯೆ) ಪ್ರಕರಣಗಳನ್ನು ಪತ್ತೆಹಚ್ಚಬೇಕು.
5) ಅಂತರಾಷ್ಟ್ರೀಯ ಪ್ರಯಾಣಿಕರು, ಸ್ಥಳೀಯವಾಗಿ ವರದಿಯಾಗುವ ಕ್ಲಸ್ಟರ್ ಪ್ರಕರ‘ಣಗಳಲ್ಲಿ ಸಂಗ್ರಹಿಸಲಾಗುವ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಬೇಕು.
6)ಅರ್ಹರಿಗೆ ಲಸಿಕೆ ಹೆಚ್ಚಿಸಬೇಕು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ