AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನ್ ಕಿ ಬಾತ್ ಮಾತಿನಲ್ಲಿ ಮೋದಿ ಹೊಗಳಿದ ಕರ್ನಾಟಕದ ಕೋಟೆಯ ವಿಶೇಷತೆ ಏನು? ತಿಳಿದುಕೊಳ್ಳಿ

ಕಳೆದ ತಿಂಗಳಷ್ಟೆ ಪ್ರಧಾನಿ ಮೋದಿಯವರು ಕಲಬುಗರಿಯ ಖಡಕ್ ರೊಟ್ಟಿ ಬಗ್ಗೆ ತಮ್ಮ ಮನ್ ಕೀ ಬಾತ್​ನಲ್ಲಿ‌ ಮಾತನಾಡಿ ಕಲಬುರಗಿಯ ಜನರ ಮನ ಗೆದ್ದಿರುವ ಪ್ರಧಾನಿ ಮೋದಿಯವರು ಮತ್ತೊಮ್ಮೆ ಕಲಬುರಗಿ ಕೋಟೆ ಬಗ್ಗೆ ಮಾತನಾಡಿ, ಮತ್ತೊಮ್ಮೆ ಕಲಬುರಗಿ ಭಾಗದ ಜನರ ಮನಸ್ಸು ಗೆದ್ದಿದ್ದಾರೆ.

ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ|

Updated on: Jul 27, 2025 | 9:54 PM

Share

ಕಲಬುರಗಿ, ಜುಲೈ 27: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮನ್​ ಕೀ ಬಾತ್​ (Mann Ki Baat) ಕಾರ್ಯಕ್ರಮದಲ್ಲಿ ಕಲಬುರಗಿ ನಗರದಲ್ಲಿರುವ ಬಹುಮನಿ ಕೋಟೆಯ (Bahmani Fort) ಬಗ್ಗೆ ಪ್ರಸ್ತಾಪಿಸಿದ್ದು, ಕೋಟೆಯ ವೈಭವದ ಬಗ್ಗೆ ಮಾತನಾಡಿದ್ದಾರೆ. ಯುನೆಸ್ಕೋ ಪಟ್ಟಿಯಲ್ಲಿ 12 ಮರಾಠಾ ಕೋಟೆಗಳು ಸೇರ್ಪಡೆಯಾಗಿದ್ದು, ವಿಶ್ವಪರಂಪರೆಯ ತಾಣಗಳೆಂದು ಗುರುತಿಸಿವೆ. ಅದೇ ಮಾದರಿಯಲ್ಲಿ ದೇಶದ ವಿವಿಧೆಡೆಯಲ್ಲಿ ಅದ್ಭುತವಾದ ಕೋಟೆಗಳು ಇರುವುದನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಲಬುರಗಿಯ ಬಹುಮನಿ ಸುಲ್ತಾನರ ಕಾಲದ ಕೋಟೆಯ ಅದ್ಭುತ ಮತ್ತು ದೊಡ್ಡ ಕೋಟೆಯಾಗಿದೆ ಎಂದು ಹೇಳಿದ್ದಾರೆ.

ದೇಶದ ಹಲವು ಕಡೆ ಇಂತಹ ಅದ್ಭುತ ಕೋಟೆಗಳಿವೆ. ಆತ್ಮಸಮ್ಮಾನದ ಪ್ರತಿಕವಾಗಿವೆ. ರಾಜಸ್ಥಾನ, ಚಿತ್ತೋರ, ರಣತಂಬೋರ, ಅಮೇರ್​ನ ಅದ್ಭುತ ಕೋಟೆಗಳ ಸಾಲಿನಲ್ಲಿ ಕಲಬುರಗಿಯ ಕೋಟೆಯನ್ನು ಉಲ್ಲೇಖಿಸಿ, ನಾಡಿನ ಇತಿಹಾಸ, ಪಾರಂಪರಿಕ ತಾಣದ ಸ್ಮರಣೆ ಮೋದಿ ಮಾಡಿದ್ದಾರೆ. ಕಲಬುರಗಿಯ ಕೋಟೆಯೂ ಅತಿ ದೊಡ್ಡದಾಗಿದೆ. ಆ ಸಮಯದಲ್ಲಿ ಕೋಟೆ ಹೇಗೆ ನಿರ್ಮಾಣ ಮಾಡಿದ್ದಾರೆ ಎಂಬುವುದು ಯೋಚಿಸಬೇಕು. ಆ ನಿಟ್ಟಿನಲ್ಲಿ ದೊಡ್ಡ ಗುರಿಗಳು ನಮ್ಮಲ್ಲಿ ಇರಬೇಕು ಎಂದು ಮೋದಿ ಸ್ಫೂರ್ತಿ ತುಂಬಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಶಂಸೆಗೆ ಪಾತ್ರವಾದ ಕಲಬುರಗಿ ರೊಟ್ಟಿಯ ವಿಶೇಷತೆ ಏನು?

14ನೇ ಶತಮಾನದ ಕೋಟೆ

ಕಲಬುರಗಿಯಲ್ಲಿ 14ನೇ ಶತಮಾನದಲ್ಲಿ ಹಿಂದು ದೊರೆ ರಾಜಾ ಗುಲ್ಚಂದ್​ನಿಂದ ಕೋಟೆಯನ್ನು ನಿರ್ಮಿಸಲಾಗಿತ್ತು. ನಂತರ ಆಡಳಿತಕ್ಕೆ ಬಂದಿದ್ದ ಬಹುಮನಿ ಸುಲ್ತಾನರ ಅಲ್ಲಾಉದ್ದೀನ್​ ಬಹುಮನ್​ ಷಾನಿಂದ ಕೋಟೆಯನ್ನು ನಿರ್ಮಿಸಲಾಗಿತ್ತು. ಪರ್ಷಿಯನ್​ ವಾಸ್ತುಶೈಲಿಯಲ್ಲಿ ಕೋಟೆಯನ್ನು ನಿರ್ಮಿಸಿದ್ದು, ಏಷ್ಯಾದ ಅತಿ ದೊಡ್ಡ ಮಸೀದಿ ಮತ್ತು ವಿಶ್ವದ ಅತಿದೊಡ್ಡ ತೋಪು ಈ ಕೋಟೆಯಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ