AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಪ್ರಶಂಸೆಗೆ ಪಾತ್ರವಾದ ಕಲಬುರಗಿ ರೊಟ್ಟಿಯ ವಿಶೇಷತೆ ಏನು?

ಕಲಬುರಗಿಯ ಖಡಕ್ ರೊಟ್ಟಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾನ್ ಕಿ ಬಾತ್ ಕಾರ್ಯಕ್ರಮದಲ್ಲಿ ರೊಟ್ಟಿ ಮತ್ತು ರೊಟ್ಟಿ ಮಾಡುವ ಮಹಿಳೆಯರನ್ನು ಶ್ಲಾಘಿಸಿದ್ದಾರೆ. ಜಿಲ್ಲಾಡಳಿತದ ಪ್ರಯತ್ನದಿಂದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ರೊಟ್ಟಿ ಲಭ್ಯವಾಗಿದೆ. ಇದು ಸ್ಥಳೀಯ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ನೀಡುತ್ತಿದೆ.

ಪ್ರಧಾನಿ ಮೋದಿ ಪ್ರಶಂಸೆಗೆ ಪಾತ್ರವಾದ ಕಲಬುರಗಿ ರೊಟ್ಟಿಯ ವಿಶೇಷತೆ ಏನು?
ಪ್ರಧಾನಿ ಮೋದಿ, ಕಲಬುರಗಿ ರೊಟ್ಟಿ
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ|

Updated on:Jun 29, 2025 | 6:58 PM

Share

ಕಲಬುರಗಿ, ಜೂನ್​ 29: ಉತ್ತರ ಕರ್ನಾಟಕದ ಜೋಳದ ರೊಟ್ಟಿ (Jolad Rotti) ಊಟ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ಕಲಬುರಗಿಯ ಖಡಕ್ ರೊಟ್ಟಿ (Kalaburagi Kadhak Rotti) ಸಾಕಷ್ಟು ಬೇಡಿಕೆ ಇದೆ. ಕಳೆದ ವರ್ಷ ಕಲಬುರಗಿ ಜಿಲ್ಲಾಡಳಿತ ರೊಟ್ಟಿಯನ್ನು ಜಿಲ್ಲೆಯ ಬ್ರ್ಯಾಂಡ್ ಎಂದು ಗುರಿತಿಸಿ, ಆನ್‌ಲೈನ್ ಮಾರುಕಟ್ಟೆ ಒದಗಿಸಿದೆ. ಆನ್​ಲೈನ್​ ಮೂಲಕವೂ ಖಡಕ್ ರೊಟ್ಟಿ ಸಿಗುವ ಹಾಗೆ ಮಾಡಿದೆ. ಸದ್ಯ, ಕಲಬುರಗಿಯ ಖಡಕ್ ರೊಟ್ಟಿ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ತಮ್ಮ ಮನ್​ ಕಿ ಬಾತ್​ನಲ್ಲಿ (Mann Ki Baat) ಮಾತನಾಡಿದ್ದು, ರೊಟ್ಟಿ ಮಾಡುವ ಮಹಿಳೆಯರನ್ನು ಶ್ಲಾಘಿಸಿದ್ದಾರೆ.

ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಶೆಂಗಾ ಚಟ್ನಿ, ಪುಂಡಿಪಲ್ಯ ಊಟ ಅಮೃತಕ್ಕೆ ಸಮಾನ ಎಂದು ರುಚಿ ಸವಿದವರು ಹೇಳುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜೋಳದ ರೊಟ್ಟಿ ಊಟಕ್ಕೆ ವಿಶೇಷ ಬೇಡಿಕೆಯಿದೆ. ಅದರಲ್ಲೂ ಕಲಬುರಗಿ ಖಡಕ್ ರೊಟ್ಟಿಗೆ ವಿದೇಶದಲ್ಲೂ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ, ಕಲಬುರಗಿ ಜಿಲ್ಲಾಡಳಿತ ರೊಟ್ಟಿಯನ್ನು ಬ್ರ್ಯಾಂಡ್ ಮಾಡಿದೆ. ಈ ಕಲಬುರಗಿ ಖಡಕ್​ ರೊಟ್ಟಿ ವಿಶ್ವದ ಎಲ್ಲ ಜನರ ಕೈಗೆ ಸುಲಭವಾಗಿ ಸಿಗುವಂತೆ ಮಾಡಲು ಕಲಬುರಗಿ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಜಂಟಿಯಾಗಿ ಆನ್​ಲೈನ್​ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಹೀಗಾಗಿ, 2024ರ ನವೆಂಬರ್ 16 ರಿಂದ ಕಲಬುರಗಿ ಖಡಕ್ ರೊಟ್ಟಿ ಆನ್​ಲೈನ್​ಲ್ಲೂ ಸಿಗಲು ಆರಂಭಿಸಿದೆ.

ವಿವಿಧ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸರ್ಕಾರದಿಂದಲೇ ಸಬ್ಸಿಡಿ ಆಧಾರದಲ್ಲಿ ರೊಟ್ಟಿ ಮಾಡುವ ಯಂತ್ರಗಳನ್ನು ಜಿಲ್ಲಾಡಳಿತ ನೀಡಿದೆ. ಅವರು ತಯಾರಿಸುವ ರೊಟ್ಟಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ. ಕಲಬುರಗಿ ರೊಟ್ಟಿ ಉತ್ಪಾದಕರ ಸಂಘದ ಹೆಸರಿನಲ್ಲಿ ರೊಟ್ಟಿಯನ್ನು ಮಾರುಕಟ್ಟೆಗೆ ಕಳಿಹಿಸಲಾಗುತ್ತಿದೆ.

ಇದನ್ನೂ ಓದಿ
Image
ಯೋಗ, ತೀರ್ಥಯಾತ್ರೆಯಿಂದ ಟ್ರಾಕೋಮಾವರೆಗೆ ಮೋದಿ ಹೇಳಿದ್ದೇನು?
Image
ಅನ್ಯಕೋಮಿನ ಯುವತಿಗೆ ಡ್ರಾಪ್​​ ಕೊಟ್ಟಿದ್ದಕ್ಕೆ​ ಯುವಕನಿಗೆ ಹಲ್ಲೆ: ಬಂಧನ
Image
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ: ಇಲ್ಲಿದೆ ಮಾಹಿತಿ
Image
ಹಣ ಕೊಟ್ಟವರಿಗೆ ಬೇಕಾಬಿಟ್ಟಿ ಅಂಕ: ಗುಲಬರ್ಗಾ ವಿವಿಯ ಕರ್ಮಕಾಂಡ ಬಯಲು

ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಜಿಲ್ಲೆಯ ನೂರಕ್ಕೂ ಹೆಚ್ಚು ರೊಟ್ಟಿ ಉತ್ಪಾದಕ ಕೇಂದ್ರಗಳಿಂದ ರೊಟ್ಟಿ ತರಸಿಕೊಂಡು ಮಾರುಕಟ್ಟೆಗೆ ಕಳುಹಿಸುತ್ತಿವೆ. ಈ ಮೂಲಕ ಕಲಬುಗರಿ ಜಿಲ್ಲೆಯ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಹಾಯ ಮಾಡುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್​ ಕಿ ಬಾತ್​ನಲ್ಲಿ ಕಲಬುರಗಿ ಖಡಕ್​ ರೊಟ್ಟಿ ಕುರಿತು ಮಾತನಾಡಿದ್ದಾರೆ.

ರೊಟ್ಟಿ ಮಾಡುವ ಮಹಿಳೆಯರನ್ನು ಹಾಡಿ ಹೊಗಳಿದ ಮೋದಿ

“ಕಲಬುರಗಿಯ ಮಹಿಳೆಯರು ಖಡಕ್​ ರೊಟ್ಟಿಯನ್ನು ಬ್ರ್ಯಾಂಡ್​ ಮಾಡಿದ್ದಾರೆ. ಕಲಬುರಗಿಯ ಮಹಿಳೆಯರು ಪ್ರತಿದಿನ 3 ಸಾವಿರ ರೊಟ್ಟಿಗಳನ್ನು ಮಾಡುತ್ತಾರೆ. ಈ ರೊಟ್ಟಿಗಳನ್ನು ಮಾರಾಟ ಮಾಡುವ ಕೇಂದ್ರಗಳು ಕೇವಲ ಹಳ್ಳಿಗಳಿಗೆ ಸೀಮತವಾಗಿಲ್ಲ, ಬದಲಿಗೆ ಬೆಂಗಳೂರಿನಲ್ಲೂ ರೊಟ್ಟಿ ಮಾರಾಟ ಕೇಂದ್ರ ತೆರೆಯಲಾಗಿದೆ. ಆನ್​ಲೈನ್​ ಮೂಲಕವೂ ರೊಟ್ಟಿಗಳನ್ನು ಆರ್ಡರ್ ಮಾಡಲಾಗುತ್ತಿದೆ. ಕಲಬುರಗಿಯ ಖಡಕ್ ರೊಟ್ಟಿ ದೊಡ್ಡ ದೊಡ್ಡ ನಗರಗಳ ಅಡುಗೆ ಮನೆಗಳವರೆಗೂ ತಲುಪಿದೆ. ರೊಟ್ಟಿ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಕಲಬುರಗಿ ಮಹಿಳೆಯರ ಪರಿಶ್ರಮ ಅಧಿಕವಾಗಿದೆ. ಈ ಎಲ್ಲ ಪ್ರತಿಫಲ ಕಲಬುರಗಿ ಮಹಿಳೆಯರಿಗೆ ಸಲ್ಲಬೇಕು” ಎಂದು ಪ್ರಧಾನಿ ಮೋದಿ ತಮ್ಮ ಮನ್​ ಕಿ ಬಾತ್​ ಹಾಡಿ ಹೊಗಳಿದರು.

ಕಲಬುರಗಿ ರೊಟ್ಟಿ ಆರ್ಡ್​ರ್​ ಮಾಡುವುದು ಹೇಗೆ?

ಒಂದು ರೊಟ್ಟಿಗೆ 6 ರೂಪಾಯಿ ದರ‌ ನಿಗದಿ ಮಾಡಲಾಗಿದೆ. ಅಲ್ಲದೆ, 10 ರೊಟ್ಟಿ ಇರುವ ಒಂದು ಬಾಕ್ಸ್‌ ಮಾಡಲಾಗಿದ್ದು, ಬಾಕ್ಸ್ ಮೇಲೆ ಕಲಬುರಗಿ ಖಡಕ್ ರೊಟ್ಟಿ ಎಂದು ನಮೂದಿಸಲಾಗಿದೆ. ಮತ್ತು ರೊಟ್ಟಿ ಬಾಕ್ಸ್ ಮೇಲೆ ಕ್ಯೂಆರ್‌ ಕೋಡ್ ಹಾಕಲಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಕಲಬುರಗಿ ಖಡಕ್ ರೊಟ್ಟಿಯನ್ನು ಆರ್ಡರ್ ಮಾಡಬಹುದು.

ಇದನ್ನೂ ನೋಡಿ: ಪ್ರಧಾನಿ ಮೋದಿ ಮನ್ ಕೀ ಬಾತ್​ನಲ್ಲಿ ಸದ್ದು ಮಾಡಿದ ಕಲಬುರಗಿಯ ಖಡಕ್ ರೊಟ್ಟಿ

ಕಲಬುರಗಿ ರೊಟ್ಟಿಯ ಬಗ್ಗೆ ನ್ಯೂಜಿಲೆಂಡ್ ರಾಯಭಾರಿ ಕಚೇರಿ ಸಹ ಮಾಹಿತಿ ಪಡೆದುಕೊಂಡಿದೆ. ಜೋಳದ ರೊಟ್ಟಿ ಮಾತ್ರವಲ್ಲದೆ ಸಜ್ಜೆ ರೊಟ್ಟಿ, ದಪಾಟಿ, ಶೇಂಗಾ ಹೊಳಿಗೆ ಖರೀದಿ ಮಾಡಲು ಹೋಟೆಲ್ ಮಾಲೀಕರ ಸಂಘ ಮುಂದಾಗಿದೆ ಎಂದು ತಿಳಿದುಬಂದಿದೆ. ಕಲಬುರಗಿ ಖಡಕ್ ರೊಟ್ಟಿ ಇದೀಗ ವಿಶ್ವಮಟ್ಟದಲ್ಲಿ ಪರಿಚಯಿಸುವ ಕೆಲಸಕ್ಕೆ ಕಲಬುರಗಿ ಜಿಲ್ಲಾಡಳಿತ ಮುಂದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Sun, 29 June 25