Invest Karnataka: ₹7 ಲಕ್ಷ ಕೋಟಿ ಹೂಡಿಕೆ, 3 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ: ಸಿಎಂ ಬೊಮ್ಮಾಯಿ

| Updated By: Ganapathi Sharma

Updated on: Nov 01, 2022 | 3:27 PM

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ಖಾಸಗಿ ವಲಯದಲ್ಲಿ 3 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Invest Karnataka: ₹7 ಲಕ್ಷ ಕೋಟಿ ಹೂಡಿಕೆ, 3 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ: ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ (Invest Karnataka)’ ನಾಳೆಯಿಂದ ಆರಂಭವಾಗಲಿದ್ದು, 7 ಲಕ್ಷ ಕೋಟಿ ರೂ. ಹೂಡಿಕೆ (Investment) ಹರಿದು ಬರುವ ಸಾಧ್ಯತೆ ಇದೆ. ಖಾಸಗಿ ವಲಯದಲ್ಲಿ 3 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪ್ರಗತಿಯಲ್ಲಿ ದೇಶದ ‘ನಂಬರ್ 1’ ರಾಜ್ಯವಾಗುವ ಕಾಲ ಸನ್ನಿಹಿತವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಬಂಡವಾಳ ಹೂಡಿಕೆದಾರರಿಗೆ ನೆಚ್ಚಿನ ತಾಣವಾಗಿದೆ. ನಾಳೆಯಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಒಟ್ಟು 7 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಅಂದಾಜು 3 ಲಕ್ಷ ಉದ್ಯೋಗ ಸೃಷ್ಟಿಯಾಗುವ ನೀರಿಕ್ಷೆಯಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ತಾವು ಮಾತನಾಡಿರುವ ವಿಡಿಯೊ ತುಣುಕನ್ನು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ
ಟ್ವಿಟರ್​ಗೆ ಮರಳಲಿದ್ದಾರೆ ಶ್ರೀರಾಮ್ ಕೃಷ್ಣನ್; ಯಾರಿವರು, ಎಲಾನ್ ಮಸ್ಕ್​ಗೆ ಹೇಗೆ ನೆರವಾಗಲಿದ್ದಾರೆ?
World Savings Day 2022: ವಿಶ್ವ ಉಳಿತಾಯ ದಿನ; ಮಹತ್ವ, ಇತಿಹಾಸ, ಧ್ಯೇಯದ ಬಗ್ಗೆ ಇಲ್ಲಿದೆ ವಿವರ
ವೈರಸ್ ದಾಳಿ; ಎಸ್​​ಬಿಐ ಸೇರಿ 18 ಬ್ಯಾಂಕ್​ಗಳ ಗ್ರಾಹಕರ ದತ್ತಾಂಶ ಅಪಾಯದಲ್ಲಿ
FD Rates: ಎಫ್​ಡಿ ಬಡ್ಡಿ ದರ ಹೆಚ್ಚಳ; ವಿವಿಧ ಬ್ಯಾಂಕ್​ಗಳ ಎಫ್​ಡಿ ದರ ವಿವರ ಇಲ್ಲಿದೆ

ಇದನ್ನೂ ಓದಿ: ಹೂಡಿಕೆದಾರರ ಸಮಾವೇಶಕ್ಕೆ ನ. 2ರಂದು ಪ್ರಧಾನಿ ಮೋದಿ ಚಾಲನೆ, ₹5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ: ನಿರಾಣಿ

ಭಾರತ ಪ್ರಗತಿಪರವಾಗಿರುವ ದೇಶ. ಇಲ್ಲಿ ಆರ್ಥಿಕ ಪ್ರಗತಿ ನಿರಂತರವಾಗಿದೆ. ಕೋವಿಡ್​ನಿಂದ ಜಗತ್ತು ಆರ್ಥಿಕ ಸಂಕಷ್ಟವನ್ನು ಎದುರಿಸಿತ್ತು. ಜಗತ್ತಿನ ಪ್ರಬಲ ದೇಶಗಳು ಕೋವಿಡ್ ನಂತರ ಆರ್ಥಿಕ ಹಿಂಜರಿತದಿಂದ ಬಳಲುತ್ತಿವೆ. ಆದರೇ ಭಾರತ ಕೋವಿಡ್ ನಂತರ ಶೇಕಡಾ 7 ರಷ್ಟು ಜಿ.ಡಿ‌.ಪಿ ಪ್ರಗತಿಯನ್ನು ಸಾಧಿಸಿದೆ ಎಂದು ಬೊಮ್ಮಾಯಿ ಹೇಳಿದರು.

ಈ ಕಾಲಘಟ್ಟದಲ್ಲಿ ವಿಶ್ವದ ಜಾಗತಿಕ ಮಟ್ಟದ ಉದ್ಯಮಿಗಳಿಗೆ ಇರುವ ಮೊದಲ ಆದ್ಯತೆಯ ಹೂಡಿಕೆ ತಾಣ ಬೆಂಗಳೂರು. ಎಲ್ಲಾ ಜಾಗತಿಕ ಉದ್ಯಮಿಗಳ ರಸ್ತೆ ಅವರನ್ನು ಬೆಂಗಳೂರಿನ ಕಡೆಗೆ ಒಯ್ಯುತ್ತದೆ. ಮುಂದಿನ ಐದು ವರ್ಷಗಳಲ್ಲಿ ಅವರ ಪ್ರಗತಿಗೆ ಭದ್ರ ಬುನಾದಿ ಹಾಕುವ ಅತ್ಯಂತ ಸೂಕ್ತ ವಾತಾವರಣವನ್ನು ನಾವು ಬೆಂಗಳೂರಿನಲ್ಲಿ ನಿರ್ಮಿಸಿದ್ದೇವೆ ಎಂದು ಅವರು ಹೇಳಿದರು.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬುಧವಾರ ಬೆಳಿಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಪಿಯೂಷ್ ಗೋಯಲ್​​​ ಭಾಗಿಯಾಗಲಿದ್ದಾರೆ. ನವೆಂಬರ್ 2ರಿಂದ 4ರ ವರೆಗೆ ಸಮಾವೇಶ ನಡೆಯಲಿದೆ.

ನವೆಂಬರ್ 4 ರಂದು ಹೂಡಿಕೆದಾರರ ಸಮಾವೇಶದ ಸಮಾರೋಪ ನಡೆಯಲಿದ್ದು, ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರ ಹಲವು ಕ್ಷೇತ್ರಗಳಲ್ಲಿ ಕೈಗೊಂಡಿರುವ ಕ್ರಮಗಳಿಂದಾಗಿ ರಾಜ್ಯಕ್ಕೆ ಬಂಡವಾಳ ಹೆಚ್ಚಿನ ಪ್ರಮಾಣದಲ್ಲಿ ಹರಿದುಬರಬಹುದೆಂದು ನಿರೀಕ್ಷಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸೋಮವಾರ ತಿಳಿಸಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Tue, 1 November 22