ರೋಹಿಣಿ ಸಿಂಧೂರಿಯವರ ವೈಯಕ್ತಿ ಫೋಟೋ ಏಕೆ ಹಾಕಿದ್ದೀರಿ ಎಂದು ಪ್ರಶ್ನಿಸಿದವರಿಗೆ ರೂಪಾ ಕೊಟ್ಟ ಉತ್ತರ ಹೀಗಿದೆ
ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಕ್ಕೆ ಕೆಲವರು ರೂಪಾ ವಿರುದ್ಧ ಗರಂ ಆಗಿದ್ದಾರೆ. ಈ ಬಗ್ಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ. ಇದೀಗ ಯಾಕೆ ಆ ಫೋಟೋಗಳನ್ನು ಹಾಕಲಾಯ್ತು ಎನ್ನುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರು: ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ((D Roopa Moudgil) ) ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ(Rohini Sindhuri) ಅವರ ಕೆಲ ವೈಯಕ್ತಿ ಫೋಟೋಗಳನ್ನು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಫೋಟೋಗಳನ್ನು ಹಾಕಿದ್ದಕ್ಕೆ ಕೆಲವರು ರೂಪಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಫೋಟೋಗಳನ್ನು ಈ ರೀತಿ ಬಹಿರಂಗವಾಗಿ ಹಾಕುವುದು ಎಷ್ಟು ಸರಿ? ಈ ರೀತಿ ಮತ್ತೊಬ್ಬರ ಫೋಟೋಗಳನ್ನು ಅವರ ಅನುಮತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದು ನಿಮ್ಮ ಸರ್ಕಾರದ ನಾಗರಿಕ ಸೇವಾ ನಿಯಮಗಳ ಉಲ್ಲಂಘನೆಯಾಗುವುದಿಲ್ವಾ? ಅಥವಾ ಇಂಥ ನಿಯಮಗಳು ನಿಮಗೆ ಮಾತ್ರ ಅನ್ವಯಿಸುವುದಿಲ್ವಾ? ಅಂತೆಲ್ಲಾ ರೂಪಾ ವಿರುದ್ಧ ಗರಂ ಆಗಿದ್ದಾರೆ. ಇನ್ನು ಇದೀಗ ಏಕೆ ಪಿಕ್ಚರ್ಸ್ ಹಾಕಿದ್ದೀರಿ ಎಂದು ಕೇಳುವವರಿಗೆ ರೂಪಾ ಖಡಕ್ ಸ್ಪಷ್ಟನೆ ಕೊಟ್ಟಿದ್ದಾರೆ.
ಹೌದು….ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಹರಿಬಿಟ್ಟಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಡಿ. ರೂಪಾ ಅವರು ತಮ್ಮ ಫೇಸ್ಬುಕ್ ಪೋಸ್ಟ್ ಹಾಕುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೇ ರೋಹಿಣಿ ಸಿಂಧೂರಿಯವರನ್ನು ಬೆಂಬಲಿಸಿದವರಿಗೆ ಪರೋಕ್ಷವಾಗಿ ತಿವಿದಿದ್ದಾರೆ.
ಆಕ್ಷೇಪಿಸಿದವರಿಗೆ ರೂಪಾ ಪೋಸ್ಟ್
ನಾನು ಯಾಕೆ ಆಕೆಯ ಪಿಕ್ಚರ್ಸ್ ಹಾಕಿದೆ ಅಂತ ಕೇಳುವವರಿಗೆ ನಾನು ಹೇಳೋದು ಇಷ್ಟೇ. Pictures ಕಳಿಸುವಾಕೆಗೆ ಅದರ ದರ್ದು ಇಲ್ಲ ಅಂದ ಮೇಲೆ ಬೇರೆಯವರಿಗೆ ಯಾಕೆ ಇರಬೇಕು. ಈ ರೀತಿಯ ಪಿಕ್ಚರ್ಸ್ ( ಎಲ್ಲೂ ಅವರ social media ಲ್ಲೀ ಇದುವರೆ ಗಿಲ್ಲ). ಯಾರು ಯಾರಿಗೆ, ಯಾಕೆ ಕಳಿಸಿದರು ಅಂತ ಅವರೇ ಅವರ ಬಾಯಿಂದ ಹೇಳಲಿ. ಅದರ ಹಿಂದಿನ ಉದ್ದೇಶ ಏನು. ಸಂಸಾರಗಳಲ್ಲಿ ಹುಳಿ ಹಿಂಡಲು? ಒಬ್ಬ ಹೆಣ್ಣಾಗಿ ಅನೇಕ ಹೆಣ್ಣು ಮಕ್ಕಳಿಗೆ ಮುಳ್ಳು ಆದ ಈಕೆಯ ಮೇಲೆ ಕನಿಕರ ಇಟ್ಟುಕೊಂಡಿರುವ ಕೆಲವರೇ, ಕೇಳಿ, ನಿಮ್ಮದು misplaced sympathy ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಅವರ ಖಾಸಗಿ ಫೋಟೋಗಳನ್ನು ಏಕೆ ಹಾಕಿದ್ದೀರಿ ಎನ್ನುವವರಿಗೆ ಸ್ಪಷ್ಟೀಕರಣ ನೀಡಿದ್ದಾರೆ.
ಖಾಸಗಿ ಫೋಟೋಗಳು ಹಾಕಿ ಗಂಭೀರ ಆರೋಪ
ಮೊದಲ ಮೊದಲಿಗೆ ರೋಹಿಣಿ ಸಿಂಧೂರಿ ಹಾಗೂ ಡಿ. ರೂಪಾ ನಡುವೆ ಕಾಳಗ ಶುರುವಾಗಿದ್ದೆ ಈ ಫೋಟೋಗಳಿಂದ. ಹೌದು..ರೂಪಾ ಅವರೇ ಸಿಂಧೂರಿ ಅವರ ಒಂದಿಷ್ಟು ಖಾಸಗಿ ಫೋಟೋಗಳನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಈ ರೀತಿಯ ಪಿಕ್ಚರ್ಸ್ ನಾರ್ಮಲ್ ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ ಪಿಕ್ಸ್ ಗಳ ಒನ್ ಟು ಒನ್ ಕಳಿಸ್ತಾರೆ ಅಂದ್ರೆ ಅದಕ್ಕೆ ಏನರ್ಥ? ಎಂದು ಪ್ರಶ್ನಿಸಿದ್ದರು.
ಈ ಪಿಕ್ಸ್ ಈಗ ಯಾಕೆ ಹಾಕಿದ್ದೀರಿ ಅಂತ ಕೇಳುವವರಿಗೆ ಹೇಳುವುದು ಇಷ್ಟೇ. ಈ ಚಿತ್ರಗಳು ನನ್ನ ಕೈ ಸೇರಿದ್ದು ಕೇವಲ ಇತ್ತೀಚೆಗೆ. ವಿಷಯ ತಿಳಿದ ತಕ್ಷಣ ಸರ್ಕಾರ ಮಟ್ಟದಲ್ಲಿ ವಿಷಯ ಎಲ್ಲೆಲ್ಲಿ ತಿಳಿಸಬೇಕು ಅಲ್ಲಿ ತಿಳಿಸಿದ್ದೇನೆ. ನಾನು ಹಾಕಿದ 20 ಅಂಶಗಳ ಪೋಸ್ಟ್ನಲ್ಲಿ ಒಂದಂಶ ಈ ಚಿತ್ರಗಳ ಬಗ್ಗೆ ಹೇಳಿದ್ದೇನೆ. ಅದಕ್ಕಾಗಿ ಈ ಚಿತ್ರಗಳನ್ನು ( ಅದರಲ್ಲೂ ಆದಷ್ಟು ಗಂಭೀರ ಚಿತ್ರಗಳನ್ನು) ಹಾಕಿದ್ದೇನೆ. 20 ಅಂಶಗಳ ಬಗ್ಗೆ , ಅಂದರೆ ಕೆಲವು ಹಿಂದಿನವು, ಈಗ ಯಾಕೆ ಪ್ರಸ್ತಾಪ ಮಾಡಿದ್ದೀರಿ ಅಂತ ಕೇಳುವವರಿಗೆ ಹೇಳುವುದು ಇಷ್ಟೇ…ಅನೇಕ ವಿಷಯಗಳು ನನಗೆ ಇತ್ತೀಚೆಗೆ ಒಂದು ವರ್ಷದೊಳಗೆ ಗೊತ್ತಾಗಿದ್ದು. Mla ಒಬ್ಬರ ಹತ್ರ ಡಿಸಿ ಆಗಿದ್ದ ಐಎಎಸ್ ಅಧಿಕಾರಿ ಸಂಧಾನಕ್ಕೆ ಹೋಗಿದ್ದಾರೆ ಎಂಬ ವಿಷಯ ಮಾಧ್ಯಮದಲ್ಲಿ ಬಂದಿದ್ದರಿಂದ ಈ ಐಎಎಸ್ ಅಧಿಕಾರಿಯ( ರೋಹಿಣಿ ಸಿಂಧೂರಿ) ಅವರ ನಡವಳಿಕೆ ಅರ್ಥ ಮಾಡಿಕೊಳ್ಳಲು ಅನುಕೂಲವಾಗುವ ಹಳೆಯ ವಿಷಯಗಳನ್ನು ಪ್ರಸ್ತಾಪ ಮಾಡಿದ್ದೇನೆ. ಯಾಕೆ ಇವರು ಎಂಎಲ್ಎ ಬಳಿ ಸಂಧಾನಕ್ಕೆ ಹೋಗುತ್ತಾರೆ. ಸರ್ಕಾರದ ಯಾವ ನಿಯಮದಲ್ಲಿ ಈ ರೀತಿಯ ಸಂಧಾನಕ್ಕೆ ಅವಕಾಶ ಇದೆ. ಅಂದರೆ, ಇವರು ಏನನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಾ ಇದ್ದಾರೆ. ಈಕೆ ಮಾಡಿದ ಭ್ರಷ್ಟಾಚಾರ ವೋ, ಅನೈತಿಕ ನಡತೆಯೋ, ಆಕೆಯೇ ಉತ್ತರಿಸಬೇಕು ಎಂದಿದ್ದಾರೆ.
Published On - 11:02 pm, Sun, 19 February 23