ಗ್ಯಾಸ್ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!

ಇರಾನ್​ ಮತ್ತು ಅಮೆರಿಕ, ಇಸ್ರೇಲ್​ ಯುದ್ಧದಾಹಕ್ಕೆ ದೇಶದಲ್ಲಿ ಗ್ಯಾಸ್​ ಸಿಲಿಂಡರ್​ಗಳ ಕಥೆಯೇ ಅಯೋಮಯವಾಗಿದೆ. ಇತ್ತ ಕರ್ನಾಟಕದಲ್ಲಿ ಕೂಡ ಗ್ಯಾಸ್​ ಸಿಲಿಂಡರ್​​ ಕೊರತೆ ವಿಷಯವೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಸಿಟಿ ಜನರಿಗೆ ಮತ್ತೊಂದು ಶಾಕ್​​ ಎದುರಾಗಿದೆ. ಅದೇನೆಂದರೆ ಅಡುಗೆ ಎಣ್ಣೆ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಎದುರಾಗಿದೆ.

ಗ್ಯಾಸ್ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!
ಅಡುಗೆ ಎಣ್ಣೆ
Image Credit source: tv9 kannada

Updated on: Mar 13, 2026 | 3:11 PM

ಬೆಂಗಳೂರು, ಮಾರ್ಚ್​​ 13: ಇಸ್ರೇಲ್​, ಅಮೆರಿಕ ಮತ್ತು ಇರಾನ್​ ಯುದ್ಧದ ಕಿಚ್ಚು ಈಗಾಗಲೇ ಭಾರತದ ಅಡುಗೆ ಮನೆಯ ಬಾಗಿಲು ತಟ್ಟಿದೆ. ಯುದ್ಧದ ಎಫೆಕ್ಟ್​​ಗೆ ರಾಜ್ಯದಲ್ಲಿ ಕಮರ್ಷಿಯಲ್​ ಗ್ಯಾಸ್​​​ನ ಅಭಾವ ಸೃಷ್ಟಿಯಾಗಿದೆ. ಈ ಮಧ್ಯೆ ಹೋಟೆಲ್​​ ನಂತರ ಇದೀಗ ಅಡುಗೆ ಎಣ್ಣೆ (cooking oil) ಅಂಗಡಿಯ ಸರದಿ. ಗ್ಯಾಸ್​​ನಂತೆ ಅಡುಗೆ ಆಯಿಲ್ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ. ಆ ಮೂಲಕ ಸಿಟಿ ಜನರಿಗೆ ಮತ್ತೊಂದು ಶಾಕ್​​ ಎದುರಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಕಮರ್ಷಿಯಲ್​ ಸಿಲಿಂಡರ್​ಗಳ ಪೂರೈಕೆಯಲ್ಲಿ ವ್ಯತ್ಯಯ ಶುರುವಾಗಿದ್ದು, ಹೋಟೆಲ್​ ಮಾಲೀಕರ ಸ್ಥಿತಿ ಕೇಳತೀರದಾಗಿದೆ. ಬೆಂಗಳೂರಿನಲ್ಲಿ ಕೆಲ ಹೋಟೆಲ್​​ಗಳು ಬಂದ್​ ಕೂಡ ಆಗಿವೆ. ಹೀಗಿರುವಾಗ ಅಡುಗೆ ಎಣ್ಣೆ ಅಂಗಡಿಯ ಸರದಿ ಶುರುವಾಗಿದೆ. ಕಮರ್ಷಿಯಲ್ ಗ್ಯಾಸ್​ನಂತೆ ಅಡುಗೆ ಆಯಿಲ್ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ.

ಅಡುಗೆ ಎಣ್ಣೆ ಅಂಗಡಿಯ ಮಾಲೀಕರು ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಅಡುಗೆ ಎಣ್ಣೆ ಅಂಗಡಿಯ ಮಾಲೀಕರೊಬ್ಬರು ಪ್ರತಿಕ್ರಿಯಿಸಿದ್ದು, ಕಳೆದ 1 ವಾರದಿಂದ ಅಡುಗೆ ಎಣ್ಣೆ ಸರಬರಾಜು ಆಗುತ್ತಿಲ್ಲ. 100 ರಿಂದ 200 ಬಾಕ್ಸ್ ಬುಕ್ ಮಾಡಿದರೆ ಕೇವಲ 20 ರಿಂದ 50 ಬಾಕ್ಸ್​​ ಮಾತ್ರ ಏಜೆಂಟರು ಕಳಿಸುತ್ತಿದ್ದಾರೆ. ಏಕೆ ಅಂತಾ ಕೇಳಿದರೆ ಸಪ್ಲೈ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಹೆಚ್ಚು ಬಾಕ್ಸ್ ನೀಡುವುದಕ್ಕೆ ಆಗಲ್ಲ ಎನ್ನುತ್ತಿದ್ದಾರೆ. ಇದರ ನಡುವೆ 15 ರಿಂದ 20 ರೂ ದರ ಕೂಡ ಜಾಸ್ತಿ ಆಗಿದೆ. ಇದರಿಂದ ನಮಗೆ ತುಂಬಾ ಸಮಸ್ಯೆ ಆಗಿದೆ ಎನ್ನುತ್ತಿದ್ದಾರೆ ಮಾಲೀಕರು.

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲೂ ಸಿಲಿಂಡರ್ ಅಭಾವ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೂ ಕಮರ್ಷಿಯಲ್ ಸಿಲಿಂಡರ್​​ ಅಭಾವದ ಎಫೆಕ್ಟ್​ ತಟ್ಟಿದೆ. ಆಸ್ಪತ್ರೆ ಹೊರಗಿರುವ ಫುಡ್​ ಪ್ಯಾಲೇಸ್​​ನಲ್ಲಿ ಅನ್ನ ಸಾಂಬಾರ್, ರೈಸ್ ಬಾತ್ ಸೇರಿ ಕೆಲವೇ ಕೆಲವು ಆಹಾರ ಲಭ್ಯವಾಗುತ್ತಿದೆ. ಚೈನೀಸ್, ತಂದೂರ್ ಆಹಾರಗಳ ತಯಾರಿಕೆಯನ್ನ ನಿಲ್ಲಿಸಿದ್ದಾರೆ.

ಕೆ.ಆರ್​ ಮಾರ್ಕೆಟ್​ನಲ್ಲಿ ತರಕಾರಿ ವ್ಯಾಪಾರಕ್ಕೆ ತಟ್ಟಿದ ಬಿಸಿ

ಕಮರ್ಷಿಯಲ್ ಸಿಲಿಂಡರ್ ಇಲ್ಲದೇ ದರ್ಶಿನಿ, ಬೀದಿ ಬದಿ ಹೋಟೆಲ್​​ಗಳು ಕ್ಲೋಸ್ ಆಗಿವೆ. ಇದರಿಂದ ಕೆ.ಆರ್​ ಮಾರ್ಕೆಟ್​​ನಲ್ಲಿ ತರಕಾರಿ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಹೋಟೆಲ್​ಗಳು ಬಂದ್ ಆಗಿರೋದ್ರಿಂದ ತರಕಾರಿ ತೆಗೆದುಕೊಳ್ಳೋರೇ ಇಲ್ಲದಂತಾಗಿದೆ.

ವರದಿ: ಅರುಣ್​​ ಕುಮಾರ್​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us