ಹೌದಾ! ಎಲ್ಲರ ಅಚ್ಚುಮೆಚ್ಚಿನ ಡೆಟಾಲ್, ಕೊರೊನಾ ವೈರಸ್​ನ ಕಿಲ್ ಮಾಡುತ್ತಾ?

ಬೆಂಗಳೂರು: ನಮ್ಮ ಹಿರಿಯರ ಕಾಲದಿಂದಲೂ ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಹಾಗೂ ನಮ್ಮನ್ನು ಬ್ಯಾಕ್ಟೀರಿಯಾ, ವೈರಸ್​ಗಳಿಂದ ಕಾಪಾಡುವ ನಮ್ಮೆಲ್ಲರ ಅಚ್ಚುಮೆಚ್ಚಿನ ಡೆಟಾಲ್ ಕೊರೊನಾ ವೈರಸ್​ಗೂ ರಾಮಬಾಣವಂತೆ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಬಗ್ಗೆ ಡೆಟಾಲ್ ಈ ಮುಂಜೆಯೇ ಮೆನ್ಶನ್ ಮಾಡಿದೆ. ಸಾಮಾನ್ಯವಾಗಿ ಬಹಳಷ್ಟು ಮನೆಗಳಲ್ಲಿ ಗೃಹಿಣಿಯರು ಸ್ವಚ್ಛತೆಗೆ ಡೆಟಾಲ್ ಬಳಸುತ್ತಾರೆ. ಈಗ ಇದೇ ಡೆಟಾಲ್ ಭಯಂಕರ ವೈರಸ್​ಗೆ ಮದ್ದು. ಡೆಟಾಲ್ ನಮ್ಮ ಸುತ್ತ ಮುತ್ತಲಿರುವ ಸೂಕ್ಷ್ಮ ವೈರಸ್​ನ ಹುಡುಕಿ ನಾಶ ಮಾಡಿ ಅದರಿಂದ ನಮ್ಮನ್ನು ಸಂರಕ್ಷಿಸುತ್ತದೆ. ಸೋಮವಾರ, […]

ಹೌದಾ! ಎಲ್ಲರ ಅಚ್ಚುಮೆಚ್ಚಿನ ಡೆಟಾಲ್, ಕೊರೊನಾ ವೈರಸ್​ನ ಕಿಲ್ ಮಾಡುತ್ತಾ?

Updated on: Feb 04, 2020 | 3:00 PM

ಬೆಂಗಳೂರು: ನಮ್ಮ ಹಿರಿಯರ ಕಾಲದಿಂದಲೂ ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಹಾಗೂ ನಮ್ಮನ್ನು ಬ್ಯಾಕ್ಟೀರಿಯಾ, ವೈರಸ್​ಗಳಿಂದ ಕಾಪಾಡುವ ನಮ್ಮೆಲ್ಲರ ಅಚ್ಚುಮೆಚ್ಚಿನ ಡೆಟಾಲ್ ಕೊರೊನಾ ವೈರಸ್​ಗೂ ರಾಮಬಾಣವಂತೆ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಬಗ್ಗೆ ಡೆಟಾಲ್ ಈ ಮುಂಜೆಯೇ ಮೆನ್ಶನ್ ಮಾಡಿದೆ. ಸಾಮಾನ್ಯವಾಗಿ ಬಹಳಷ್ಟು ಮನೆಗಳಲ್ಲಿ ಗೃಹಿಣಿಯರು ಸ್ವಚ್ಛತೆಗೆ ಡೆಟಾಲ್ ಬಳಸುತ್ತಾರೆ. ಈಗ ಇದೇ ಡೆಟಾಲ್ ಭಯಂಕರ ವೈರಸ್​ಗೆ ಮದ್ದು. ಡೆಟಾಲ್ ನಮ್ಮ ಸುತ್ತ ಮುತ್ತಲಿರುವ ಸೂಕ್ಷ್ಮ ವೈರಸ್​ನ ಹುಡುಕಿ ನಾಶ ಮಾಡಿ ಅದರಿಂದ ನಮ್ಮನ್ನು ಸಂರಕ್ಷಿಸುತ್ತದೆ.

ಸೋಮವಾರ, ಫೇಸ್‌ಬುಕ್ ಬಳಕೆದಾರರೊಬ್ಬರು ಡೆಟಾಲ್ ಬಾಟಲಿ ಮೇಲಿನ ಸ್ಟಿಕರ್ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಡೆಟಾಲ್ ಕೊರೊನಾ ವೈರಸ್​ನ ಕೊಲ್ಲುತ್ತದೆ ಎಂದು ಮುದ್ರಿಸಿರುವುದು ಕಣ್ಣಿಗೆ ಬೀಳುತ್ತದೆ.

ಅನಾದಿ ಕಾಲದಿಂದಲೂ ಬಳಕೆಯಲ್ಲಿರುವ ಡೆಟಾಲ್ ಈ ಹಿಂದೆಯೇ ಕೊರೊನಾ ಬಗ್ಗೆ ಮೆನ್ಶನ್ ಮಾಡಿದೆ. ಬಹಳ ಜನ ಈ ಪೋಸ್ಟನ್ನು ಶೇರ್ ಮಾಡಿದ್ದಾರೆ. ಕೊರೊನಾ ವೈರಸ್ ಎನ್ನುವುದು ವೈರಸ್​ನ ಒಂದು ವರ್ಗವಾಗಿದ್ದು, ಇದು ವಿವಿಧ ಉಸಿರಾಟದ ತೊಂದರೆಯನ್ನುಂಟು ಮಾಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಎನೂ! ಯಾವುದಾದರೆ ಏನು? ಒಟ್ನಲ್ಲಿ ಕೊರೊನಾ ವೈರಸ್​ನ ನಾಶ ಮಾಡಿದ್ರೆ ಸಾಕು.

Published On - 2:28 pm, Tue, 4 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us