GST ಪಾವತಿಸದೆ ಸ್ವಂತಕ್ಕೆ ಬಳಕೆ ಆರೋಪ: JW ಮ್ಯಾರಿಯೆಟ್ ಹೋಟೆಲ್ ಮಾಲೀಕರಿಂದ ದೂರು
ಸರ್ಕಾರಕ್ಕೆ GST ಮೊತ್ತ ಪಾವತಿಸದೆ ಹಣವನ್ನು ಸ್ವಂತಕ್ಕೆ ಬಳಕೆಮಾಡಿರುವ ಆರೋಪದಡಿ ನಗರದ JW ಮ್ಯಾರಿಯೆಟ್ ಹೋಟೆಲ್ ಮಾಲೀಕರಿಂದ ದೂರು ನೀಡಲಾಗಿದೆ. ಹೋಟೆಲ್ ನಿರ್ವಹಣೆಯ ಗುತ್ತಿಗೆ ಪಡೆದಿದ್ದವರ ವಿರುದ್ಧ JW ಮ್ಯಾರಿಯೆಟ್ನ ಮಾಲೀಕರು ದೂರು ನೀಡಿದ್ದಾರೆ.
ಬೆಂಗಳೂರು: ಸರ್ಕಾರಕ್ಕೆ GST ಮೊತ್ತ ಪಾವತಿಸದೆ ಹಣವನ್ನು ಸ್ವಂತಕ್ಕೆ ಬಳಕೆಮಾಡಿರುವ ಆರೋಪದಡಿ ನಗರದ JW ಮ್ಯಾರಿಯೆಟ್ ಹೋಟೆಲ್ ಮಾಲೀಕರಿಂದ ದೂರು ನೀಡಲಾಗಿದೆ. ಹೋಟೆಲ್ ನಿರ್ವಹಣೆಯ ಗುತ್ತಿಗೆ ಪಡೆದಿದ್ದವರ ವಿರುದ್ಧ JW ಮ್ಯಾರಿಯೆಟ್ನ ಮಾಲೀಕರು ದೂರು ನೀಡಿದ್ದಾರೆ.
ರಾಜ್ ಮೆನನ್, ಕ್ರಿಸ್ಟಿನಾ ಚಾನ್, ನೀರಜ್ ಗೋವಿಲ್ ಸೇರಿ 10 ಜನರ ವಿರುದ್ಧ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಹೋಟೆಲ್ ಮಾಲೀಕ ಆದಿತ್ಯ ದೀಪಕ್ ರಹೇಜಾ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಆದಿತ್ಯ ದೀಪಕ್ ರಹೇಜಾ 2013-14ರಿಂದ ಹೋಟೆಲ್ ನಿರ್ವಹಣೆಯ ಗುತ್ತಿಗೆ ಪಡೆದವರ ಜೊತೆ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಆದರೆ, ಕಳೆದ ಏಪ್ರಿಲ್ನಲ್ಲಿ ಹೋಟೆಲ್ನ ಗುತ್ತಿಗೆ ಪಡೆದವರು GST ಹಣ ಕಟ್ಟಿಲ್ಲವೆಂದು ಆದಿತ್ಯ ಆರೋಪಿಸಿದ್ದಾರೆ. ಜೊತೆಗೆ, ಹೋಟೆಲ್ ವ್ಯವಹಾರದ ಬಗ್ಗೆ ಗುತ್ತಿಗೆ ಪಡೆದವರು ಅಂಕಿ ಅಂಶ ಸಹ ನೀಡಿಲ್ಲವೆಂದು ಆದಿತ್ಯ ಆರೋಪ ಮಾಡಿದ್ದಾರೆ.
ಇದಲ್ಲದೆ, ಈವರೆಗೆ ಆಡಿಟ್ ಸಹ ಮಾಡಿಸಿಲ್ಲವೆಂದು ಮಾಲೀಕರು ಆರೋಪಿಸಿದ್ದಾರೆ. ಜೊತೆಗೆ, ಗುತ್ತಿಗೆ ಪಡೆದವರು GST ತೆರಿಗೆ ಪಾವತಿಸದೆ ಅಗ್ರಿಮೆಂಟ್ ಷರತ್ತು ಉಲ್ಲಂಘನೆ ಮಾಡಿದ್ದಾರೆ ಎಂದು ಆದಿತ್ಯ ಆರೋಪ ಮಾಡಿದ್ದಾರೆ. ಸರ್ಕಾರಕ್ಕೆ ಕಟ್ಟಬೇಕಾಗಿದ್ದ GST ಮೊತ್ತವನ್ನು ಸ್ವಂತಕ್ಕೆ ಬಳಕೆ ಮಾಡಿರುವ ಆರೋಪದಡಿ ಹೋಟೆಲ್ ಮಾಲೀಕ ಆದಿತ್ಯ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.