ಕೊರೊನಾ ಸೋಂಕಿತನ ನರಳಾಟದ ಸಾವು ಕಂಡು ಹೃದಯಾಘಾತದಿಂದ ಮೃತಪಟ್ಟ ಕಲಬುರ್ಗಿ ಕಾನ್ಸ್​ಟೇಬಲ್

ಕಾನ್ಸ್​ಟೇಬಲ್ ಮೃತಪಟ್ಟ ನಂತರ ಅವರ ಕೊರೊನಾ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಕೊರೊನಾ ಸೋಂಕು ಅವರಿಗೆ ತಗುಲಿರಲಿಲ್ಲ. ಕೊರೊನಾ ಸೋಂಕಿತರ ಮರಣವನ್ನು ನೋಡಿ ಆಘಾತವಾಗಿಯೇ ಅವರು ಜೀವ ಕಳೆದುಕೊಂಡರು.

ಕೊರೊನಾ ಸೋಂಕಿತನ ನರಳಾಟದ ಸಾವು ಕಂಡು ಹೃದಯಾಘಾತದಿಂದ ಮೃತಪಟ್ಟ ಕಲಬುರ್ಗಿ ಕಾನ್ಸ್​ಟೇಬಲ್
ಕೊವಿಡ್-19
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 14, 2021 | 4:45 PM

ಕಲಬುರ್ಗಿ: ಕೊರೊನಾ ಸೋಂಕು ನಮ್ಮನ್ನು ಹೇಗೆಲ್ಲ ಆವರಿಸಬಹುದು ಎಂಬುದು ದಿನೇ ದಿನೇ ಪ್ರಕಟವಾಗುತ್ತಿದೆ. ನೇರವಾಗಿ ಸೋಂಕು ತಗುಲುವುದು ಒಂದೆಡೆಯಾದರೆ ಇನ್ನೊಂದೆಡೆ ಪರೋಕ್ಷವಾಗಿಯೂ ಕೊರೊನಾ ತೊಂದರೆ ಕೊಡುತ್ತಿದೆ. ಆರ್ಥಿಕವಾಗಿ, ಮಾನಸಿಕವಾಗಿಯೂ ಹಲವರನ್ನು ಕುಗ್ಗಿಸುತ್ತಿದೆ. ಕೊರೊನಾದಿಂದ ಕಣ್ಣು ತೇವಗೊಳಿಸುವ ಘಟನೆಯೊಂದು ಕಲಬುರ್ಗಿಯಲ್ಲಿ ನಡೆದಿರುವುದು ವರದಿಯಾಗಿದೆ.

ಕಳೆದ 5 ದಿನಗಳ ಹಿಂದೆ ಕಲಬುರ್ಗಿ ನಗರದ ಪೊಲೀಸ್ ಕಾನ್ಸ್​ಟೇಬಲ್​ ಓರ್ವರು ನ್ಯುಮೋನಿಯಾ ಮತ್ತು ಕೊರೊನಾ ಸೋಂಕಿಗೆ ಸಂಬಂಧಿಸಿದ ಕೆಲವು ಲಕ್ಷಣಗಳು ಕಂಡುಬಂದ ಕಾರಣ ನಗರದ ಜಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ದಾಖಲಾಗಿದ್ದ ಪಕ್ಕದ ವಾರ್ಡ್​ನಲ್ಲಿಯೇ ಕೊವಿಡ್ ಸೋಂಕಿತರೋರ್ವರು ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಸೋಂಕಿತ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ವೈದ್ಯರು ನೀಡುವ ಚಿಕಿತ್ಸೆಯ ಪ್ರಕ್ರಿಯೆಗಳನ್ನು ಪೊಲೀಸ್ ಕಾನ್ಸ್​ಟೇಬಲ್ ಸ್ವತಃ ತಮ್ಮ ಕಣ್ಣಾರೆ ಗಮನಿಸುತ್ತಿದ್ದರು.

ಆದರೆ, ಮೂರು ದಿನಗಳ ಹಿಂದೆ ಪಕ್ಕದ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊವಿಡ್ ಸೋಂಕಿತ ವ್ಯಕ್ತಿ ಪ್ರಾಣಬಿಟ್ಟರು. ಅವರ ಸಾವು ಸಹಜವಾಗಿರಲಿಲ್ಲ. ಅವರು ತೀವ್ರ ಅನಾರೋಗ್ಯಕ್ಕೀಡಾಗಿ ನರಳಿ ಸಾವನ್ನಪ್ಪಿದ್ದರು. ಈ ಹೃದಯ ಹಿಂಡುವ ಘಟನೆಯನ್ನು ಪೊಲೀಸ್ ಕಾನ್ಸ್​ಟೇಬಲ್ ಅತ್ಯಂತ ಹತ್ತಿರದಿಂದಲೇ ವೀಕ್ಷಿಸಿದ್ದರು. ಆ ಸಾವು ಮತ್ತು ಸಾವಿನ ರೀತಿಯನ್ನು ಕಂಡು ಪೊಲೀಸ್ ಕಾನ್ಸ್​ಟೇಬಲ್ ಬಹಳ ಸಂಕಟಪಟ್ಟರು. ಮಾನಸಿಕವಾಗಿ ಕುಗ್ಗಿಹೋದರು. ನನಗೂ ಇಂತಹ ಸಾವು ಬರಬಹುದು ಎಂದು ಯೋಚಿಸಿ ಆಘಾತಕ್ಕೊಳಗಾದರು. ಕುಟುಂಬಸ್ಥರಿಗೆ ಕರೆ ಮಾಡಿ ಆತಂಕ ವ್ಯಕ್ತಪಡಿಸಿದರು.

ಪಕ್ಕದ ವಾರ್ಡ್​ನ ಕೊವಿಡ್ ಸೋಂಕಿತ ವ್ಯಕ್ತಿಯ ಸಾವು ಅವರ ಹೃದಯವನ್ನೇ ತಲ್ಲಣಗೊಳಿಸಿತ್ತು. ತನಗೂ ಹೀಗೆಯೇ ಸಾವು ಬಂದರೆ ಎಂದು ಮಾನಸಿಕವಾಗಿ ನೊಂದುಕೊಂಡಿದ್ದರು. ಇದನ್ನೇ ತೀವ್ರವಾಗಿ ಯೋಚಿಸಿ ನಿನ್ನೆ ಪೊಲೀಸ್ ಕಾನ್ಸ್​ಟೇಬಲ್ ಹೃದಯಾಘಾತದಿಂದ ಮೃತಪಟ್ಟರು. ಮೃತಪಟ್ಟ ನಂತರ ಅವರ ಕೊರೊನಾ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಕೊರೊನಾ ಸೋಂಕು ಅವರಿಗೆ ತಗುಲಿರಲಿಲ್ಲ. ಕೊರೊನಾ ಸೋಂಕಿತರ ಮರಣವನ್ನು ನೋಡಿ ಆಘಾತವಾಗಿಯೇ ಅವರು ಜೀವ ಕಳೆದುಕೊಂಡರು.

ಹೀಗೆ ಕೊರೊನಾ ಕಲಬುರ್ಗಿಯ ಪೇದೆಯೊಬ್ಬರ ಪ್ರಾಣವನ್ನು ಪರೋಕ್ಷವಾಗಿ ಕಿತ್ತುಕೊಂಡಿದೆ. ಕೊರೊನಾದಿಂದ ಹಿಂದಿನ ವರ್ಷದ ಇದೇ ಹೊತ್ತಲ್ಲಿ ಕಣ್ಣಾಲಿಗಳು ಒದ್ದೆಯಾಗುವ ಘಟನೆಗಳು ನಡೆದಿದ್ದವು. ಈಗ ಮತ್ತೊಮ್ಮೆ ಅಂತಹುದೇ ನಡೆಯಬಾರದಿದ್ದ ಘಟನೆಯೊಂದು ಜರುಗಿಹೋಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರ; ಕಠಿಣ ನಿರ್ಬಂಧ ಘೋಷಿಸಿದ ಸಿಎಂ ಉದ್ಧವ್ ಠಾಕ್ರೆ

Coronavirus India Update: ಕಳೆದ 24 ಗಂಟೆಗಳಲ್ಲಿ 1.61ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 879 ಮಂದಿ ಸಾವು

(Kalaburagi police constable died by cardiac arrest after he see Covid patient’s groaning death)

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್