ಕಲಬುರಗಿಯಲ್ಲಿ ಊಟ ಕೇಳಿದ್ದಕ್ಕೆ 4 ವರ್ಷದ ಮಗುವಿಗೆ ಬೆಂಕಿಯಿಂದ ಸುಟ್ಟು ಮಲತಾಯಿ ಕ್ರೌರ್ಯ!

ಊಟ ಕೇಳಿದ್ದಕ್ಕೆ ಬೆಂಕಿಯಿಂದ ಸುಟ್ಟು ದೌರ್ಜನ್ಯ ಎಸಗಿರುವ ಮಲತಾಯಿ ಮರೆಮ್ಮ, ಮಗುವನ್ನು ಮನೆಯಲ್ಲಿ ಕೂಡಿ ಹಾಕಿದ್ದಳಂತೆ. ಮರೆಮ್ಮಳ ದೌರ್ಜಜ್ಯವನ್ನು ಕಂಡ ಸ್ಥಳೀಯರು ವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಲಬುರಗಿಯಲ್ಲಿ ಊಟ ಕೇಳಿದ್ದಕ್ಕೆ 4 ವರ್ಷದ ಮಗುವಿಗೆ ಬೆಂಕಿಯಿಂದ ಸುಟ್ಟು ಮಲತಾಯಿ ಕ್ರೌರ್ಯ!
ಮಲತಾಯಿ ಮರೆಮ್ಮ 4 ವರ್ಷದ ಮಗುವಿನ ಕೈ ಸುಟ್ಟಿದ್ದಾಳೆ
Follow us
TV9 Web
| Updated By: sandhya thejappa

Updated on:Jun 07, 2022 | 2:49 PM

ಕಲಬುರಗಿ: ಊಟ (Lunch) ಕೇಳಿದ್ದಕ್ಕೆ 4 ವರ್ಷದ ಮಗುವಿನ (Baby) ಮೇಲೆ ಮಲತಾಯಿ (Stepmother) ಕ್ರೌರ್ಯ ಎಸಗಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಸ್ಟೇಷನ್ ತಾಂಡಾದಲ್ಲಿ ನಡೆದಿದೆ. 4 ವರ್ಷದ ಸೋನಾಲಿಕಾಗೆ ಬೆಂಕಿಯಿಂದ ಸುಟ್ಟು ಮಲತಾಯಿ ಮರೆಮ್ಮ ಕ್ರೌರ್ಯ ಎಸಗಿದ್ದಾಳೆ. ಕಳೆದ 4 ವರ್ಷದ ಹಿಂದೆ ಸೋನಾಲಿಕಾ ತಾಯಿ ಮೃತಪಟ್ಟಿದ್ದಾರೆ. ಮಗುವಿನ ತಂದೆ ತಿಪ್ಪಣ್ಣ ಆರೈಕೆಗಾಗಿ ಮತ್ತೊಂದು ಮದುವೆಯಾಗಿದ್ದ. ಕೂಲಿ ಕೆಲಸಕ್ಕೆ ಎಂದು ತಿಪ್ಪಣ್ಣ ಮಹಾರಾಷ್ಟ್ರದ ಮುಂಬೈಗೆ ಹೋಗಿದ್ದಾಗ ಮಲತಾಯಿ ಈ ಕೃತ್ಯ ಎಸಗಿದ್ದಾಳೆ.

ಊಟ ಕೇಳಿದ್ದಕ್ಕೆ ಬೆಂಕಿಯಿಂದ ಸುಟ್ಟು ದೌರ್ಜನ್ಯ ಎಸಗಿರುವ ಮಲತಾಯಿ ಮರೆಮ್ಮ, ಮಗುವನ್ನು ಮನೆಯಲ್ಲಿ ಕೂಡಿ ಹಾಕಿದ್ದಳಂತೆ. ಮರೆಮ್ಮಳ ದೌರ್ಜಜ್ಯವನ್ನು ಕಂಡ ಸ್ಥಳೀಯರು ವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯವನ್ನು ಮಗುವನ್ನು ಪೊಲೀಸರು ಬಾಲ ಮಂದಿರದಲ್ಲಿ ಬಿಟ್ಟಿದ್ದಾರೆ.

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ರಾಮನಗರ: ‌ಜಿಲ್ಲೆy ಮಾಗಡಿ ತಾಲೂಕಿನ ಗುಡ್ಡ ಜಲಾಶಯದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ‌ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಮಾಗಡಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಘಟನೆ ನಡೆದಿದೆ.

ಇದನ್ನೂ ಓದಿ
Image
Ekta Kapoor Birthday: ಏಕ್ತಾ ಕಪೂರ್ ನಿರ್ಮಾಣ ಮಾಡಿರೋ ಈ ಚಿತ್ರಗಳನ್ನು ವೀಕ್ಷಿಸಿದ್ದೀರಾ? ಮಿಸ್ ಮಾಡಲೇಬೇಡಿ
Image
ಪ್ರಯಾಣಿಕರ 60 ಸಾವಿರ ಬೆಲೆ ಬಾಳುವ ಮೊಬೈಲ್ ಫೋನ್ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದ ಆಟೋ ಚಾಲಕ; ಮೈಸೂರು ಡಿಸಿಪಿಯಿಂದ ಸನ್ಮಾನ
Image
Facebook ಬಳಕೆದಾರರೇ ಎಚ್ಚರ… ನಂಬಿದರೆ ಪಂಗನಾಮ ಗ್ಯಾರಂಟಿ
Image
PM Narendra Modi: ಹೈದರಾಬಾದ್​ನ ಕಾರ್ಪೊರೇಟರ್‌ಗಳು, ಬಿಜೆಪಿ ನಾಯಕರೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ

ಇದನ್ನೂ ಓದಿ: ಪ್ರಯಾಣಿಕರ 60 ಸಾವಿರ ಬೆಲೆ ಬಾಳುವ ಮೊಬೈಲ್ ಫೋನ್ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದ ಆಟೋ ಚಾಲಕ; ಮೈಸೂರು ಡಿಸಿಪಿಯಿಂದ ಸನ್ಮಾನ

ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ: ಪ್ರೇಯಸಿ ಮದುವೆಗೆ ನಿರಾಕರಿಸಿದ್ದಕ್ಕೆ ಬೆಂಗಳೂರಿನಲ್ಲಿ ಯುವಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಾಮುಂಡೇಶ್ವರಿ ಲೇಔಟ್​​ನಲ್ಲಿ ಚರಣ್(25) ಆತ್ಮಹತ್ಯೆಗೆ ಶರಣಾಗಿರುವ ಯುವಕ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯುವಕ ಸಮುದ್ರ ಪಾಲು: ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಯುವಕ ಸಮುದ್ರ ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಮಾಂಗಟೇಶ್ವರ ಗುಡ್ಡದ ಬಳಿ ಸಂಭವಿಸಿದೆ. 32 ವರ್ಷದ ಅಂಕುಶ ರಾಮದಾಸ್ ಅಂಕೋಲೆಕರ್ ಸಾವನ್ನಪ್ಪಿದ ಯುವಕ. ಯುವಕ ಕೈ ಬಲೆ ಬಳಸಿ ಮೀನುಗಾರಿಕೆಗೆ ತೆರಳಿದ್ದ. ಆಕಸ್ಮಿಕವಾಗಿ ಸಮುದ್ರ ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:34 am, Tue, 7 June 22