ಪ್ರಯಾಣಿಕರ 60 ಸಾವಿರ ಬೆಲೆ ಬಾಳುವ ಮೊಬೈಲ್ ಫೋನ್ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದ ಆಟೋ ಚಾಲಕ; ಮೈಸೂರು ಡಿಸಿಪಿಯಿಂದ ಸನ್ಮಾನ
ಮೈಸೂರಿನ ಜಗನ್ಮೋಹನ ಅರಮನೆಯಿಂದ ಮೃಗಾಲಯಕ್ಕೆ ತೆರಳಿದ್ದ ಶ್ಯಾಮ್ ಈ ವೇಳೆ 60 ಸಾವಿರ ಮೌಲ್ಯದ ಒನ್ ಪ್ಲಸ್ ಮೊಬೈಲನ್ನು ಆಟೋದಲ್ಲಿಯೇ ಬಿಟ್ಟು ಹೋಗಿದ್ದರು. ಶ್ಯಾಮ್ ಆಟೋ ಇಳಿದ ಮೇಲೆ ಮೊಬೈಲ್ ಗಮನಿಸಿದ ಆಟೋ ಚಾಲಕ ರಾಜು ತಕ್ಷಣವೇ ಫೋನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೈಸೂರು: ಆಟೋದಲ್ಲಿ ಮರೆತು ಹೋಗಿದ್ದ ಪ್ರಯಾಣಿಕರ ಮೊಬೈಲ್ ಹಿಂದಿರುಗಿಸಿ ಆಟೋ ಚಾಲಕ ಪ್ರಾಮಾಣಿಕತೆ ಮೆರೆದ ಘಟನೆ ಸಾಂಸ್ಕೃತಿಕ ನಾಡು ಮೈಸೂರಿನಲ್ಲಿ ನಡೆದಿದೆ. ಮೈಸೂರಿಗೆ ಪ್ರವಾಸಕ್ಕೆಂದು ಬೆಂಗಳೂರಿನಿಂದ ಆಗಮಿಸಿದ್ದ ಶ್ಯಾಮ್ ಎಂಬುವವರು ಆಟೋದಲ್ಲೇ ಮೊಬೈಲ್ ಬಿಟ್ಟು ಹೋಗಿದ್ದರು. ಆಟೋ ಚಾಲಕ 60 ಸಾವಿರ ಬೆಲೆ ಬಾಳುವ ಮೊಬೈಲ್ ಹಿಂದಿರುಗಿಸಿ ಪ್ರಮಾಣಿಕತೆ ಮೆರೆದಿದ್ದಾರೆ.
ಮೈಸೂರಿನ ಜಗನ್ಮೋಹನ ಅರಮನೆಯಿಂದ ಮೃಗಾಲಯಕ್ಕೆ ತೆರಳಿದ್ದ ಶ್ಯಾಮ್ ಈ ವೇಳೆ 60 ಸಾವಿರ ಮೌಲ್ಯದ ಒನ್ ಪ್ಲಸ್ ಮೊಬೈಲನ್ನು ಆಟೋದಲ್ಲಿಯೇ ಬಿಟ್ಟು ಹೋಗಿದ್ದರು. ಶ್ಯಾಮ್ ಆಟೋ ಇಳಿದ ಮೇಲೆ ಮೊಬೈಲ್ ಗಮನಿಸಿದ ಆಟೋ ಚಾಲಕ ರಾಜು ತಕ್ಷಣವೇ ಫೋನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೊಬೈಲ್ ವಾಪಸ್ಸು ನೀಡಿದ ರಾಜುಗೆ ಡಿಸಿಪಿ ಗೀತಾ ಪ್ರಸನ್ನ ಗೌರವಿಸಿ ಸನ್ಮಾನ ಮಾಡಿದ್ದಾರೆ. ರಾಜು ಪ್ರಾಮಾಣಿಕತೆಗೆ ಪ್ರಶಂಸನಾ ಪತ್ರ ನೀಡಿದ್ದಾರೆ. ಇದನ್ನೂ ಓದಿ; ಬೈಕಿನ ಚೇನ್ ಸಾಕೆಟ್ನಲ್ಲಿ ನುಸುಳಿದ್ದ ನಾಗರಹಾವನ್ನು ನೆಲಮಂಗಲದ ಉರಗ ತಜ್ಞ ಲೋಕೇಶ್ ರಕ್ಷಿಸಿದರು
ಮೈಸೂರಿನಲ್ಲಿ 10 ದಿನದಲ್ಲಿ 29 ಲಕ್ಷ ದಂಡ 6,329 ಪ್ರಕರಣ ದಾಖಲು ಮೈಸೂರಿನಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು ಕಳೆದ 10 ದಿನದಲ್ಲಿ 6,329 ಪ್ರಕರಣ ದಾಖಲಿಸಿ 29 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ತ್ರಿಬಲ್ ರೈಡಿಂಗ್, ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ಸಂಚಾರದ ವೇಳೆ ಮೊಬೈಲ್ ಬಳಕೆ, ಅತಿ ವೇಗ, ಸಿಗ್ನಲ್ ಜಂಪ್, ಮದ್ಯಪಾನ ಮಾಡಿ ವಾಹನ ಚಾಲನೆಯಡಿ ಪ್ರಕರಣ ದಾಖಲಿಸಿದ್ದಾರೆ.
ಮೈಸೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ