ಪೈಪ್ ನೋಟ್ ಶಾಂತನಗೌಡ ಮನೆಯಲ್ಲಿ ಸಿಕ್ತು ದುಬೈನಿಂದ ಚಿನ್ನದ ಗಟ್ಟಿ ಖರೀದಿಸಿದ ರಶೀದಿ, ಮತ್ತಷ್ಟು ಬಯಲಾಗಿದೆ ಭ್ರಷ್ಟ ಕುಬೇರನ ವಿವರ
ಕೋಟಿ ಕೋಟಿ ಹಣ ಮಾಡಿರುವ ಬಿರಾದರ್ ದುಬೈನಿಂದ ಚಿನ್ನದ ಗಟ್ಟಿ ಖರೀದಿ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಬೆಂಗಳೂರಿನ ಬಿರಾದರ್ ಮನೆಯಲ್ಲಿ ಶಾಂತಗೌಡನ ಮಗನ ಹೆಸರಲ್ಲಿ ಇರುವ ಚಿನ್ನದ ಗಟ್ಟಿಯ ರಶೀದಿ ಪತ್ತೆಯಾಗಿದೆ.
ಕಲಬುರಗಿ: ಕೋಟಿ ಕೋಟಿ ಹಣ ಬಾಚಿ ನುಂಗಿ ನೀರು ಕುಡಿದಿರುವ ಭ್ರಷ್ಟರ ಲೆಕ್ಕವನ್ನ ಎಸಿಬಿ ಇಂಚಿಂಚಾಗಿ ಕೌಂಟಿಂಗ್ ಮಾಡಿದೆ. ಸದ್ಯ ಕಲಬುರಗಿ ಜಿಲ್ಲೆ ಜೇವರ್ಗಿ PWD ಕಚೇರಿ ಜೆಇ ಶಾಂತಗೌಡ ಬಿರಾದರ್ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇಂದು ಮತ್ತಷ್ಟು ಬ್ಯಾಂಕ್ ಖಾತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ದುಬೈನಿಂದ ಚಿನ್ನದ ಗಟ್ಟಿ ಖರೀದಿ ಮಾಡಿ ತಂದಿರುವ ರಶೀದಿ ಕೂಡ ಪತ್ತೆಯಾಗಿದೆ.
ಕೋಟಿ ಕೋಟಿ ಹಣ ಮಾಡಿರುವ ಬಿರಾದರ್ ದುಬೈನಿಂದ ಚಿನ್ನದ ಗಟ್ಟಿ ಖರೀದಿ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಬೆಂಗಳೂರಿನ ಬಿರಾದರ್ ಮನೆಯಲ್ಲಿ ಶಾಂತಗೌಡನ ಮಗನ ಹೆಸರಲ್ಲಿ ಇರುವ ಚಿನ್ನದ ಗಟ್ಟಿಯ ರಶೀದಿ ಪತ್ತೆಯಾಗಿದೆ.
ಕಳೆದ ನಾಲ್ಕು ವರ್ಷದಿಂದ ಶಾಂತಗೌಡನ ಕುಟಂಬ ಬೆಂಗಳೂರಿನಲ್ಲೇ ವಾಸವಾಗಿತ್ತು. ಹೀಗಾಗಿ ಬಿರಾದರ್ ಬೆಂಗಳೂರಿನಲ್ಲೂ ಬ್ಯಾಂಕ್ ಖಾತೆ ಹೊಂದಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಬ್ಯಾಂಕ್ ಖಾತೆ ಪರಿಶೀಲನೆಗೆಗಾಗಿ ಅಧಿಕಾರಿಗಳು ಕಲಬುರಗಿಯಿಂದ ಬೆಂಗಳೂರಿಗೆ ತೆರಳಿದ್ದಾರೆ. ಬೆಂಗಳೂರಿನ ಜಯನಗರದಲ್ಲಿರುವ ಮನೆ ಮತ್ತು ಬೆಂಗಳೂರು ಬ್ಯಾಂಕ್ ಖಾತೆಗೆಳ ಪರಿಶೀಲನೆ ನಡೆಸಲಿದ್ದಾರೆ. ಬೆಂಗಳೂರಿನ ಮನೆಯಲ್ಲಿ ದುಬೈನಿಂದ ಚಿನ್ನದ ಗಟ್ಟಿ ಖರೀದಿ ಮಾಡಿರುವ ರಿಸಿಪ್ಟ್ ಸಿಕ್ಕಿದೆ. ಇನ್ನು ಬೆಂಗಳೂರಿನ ಬ್ಯಾಂಕ್ ಲಾಕರ್ ಓಪನ್ ಆದ್ರೆ ಚಿನ್ನದ ಗಟ್ಟಿಯ ರಹಸ್ಯ ಬಯಲಾಗುವ ಸಾಧ್ಯತೆ ಇದೆ.
ಪುತ್ರಿಯ ನೆನಪಿಗೆ ಆಶ್ರಮ ಕಟ್ಟಿಸಿರುವ ಶಾಂತಗೌಡ ಕೋಟ್ಯಂತರ ರೂ. ಅಕ್ರಮ ಆಸ್ತಿ ಸಂಪಾದಿಸಿರುವ ಶಾಂತಗೌಡ ಹಂಗರಗಾ ಬಿ ಗ್ರಾಮದಲ್ಲಿರುವ ತನ್ನ ಫಾರ್ಮ್ಹೌಸ್ನಲ್ಲಿ ಪುತ್ರಿಯ ನೆನಪಿಗೆ ಆಶ್ರಮ ಕಟ್ಟಿಸಿದ್ದಾರೆ. ಆಶ್ರಮದ ಎರಡು ಎಕರೆ ಜಾಗವನ್ನು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ.
ಬಿರಾದರ್ ಬಳಿ ಆದಾಯಕ್ಕಿಂತ 406.17 ರಷ್ಟು ಹೆಚ್ಚು ಆಸ್ತಿ ಎಸ್ ಎಂ ಬಿರಾದರ್ ಮನೆಯಲ್ಲಿ ಸುಮಾರು ರೂ.4,15,12,491 ರೂ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಯೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ ಹಣ ಜಪ್ತಿ ಮಾಡಲಾಗಿದೆ. ಆದಾಯಕ್ಕೆ ಕಂಪೇರ್ ಮಾಡಿದ್ರೆ, 406.17 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಪತ್ತೆಯಾಗಿದೆ.
ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಶಾಂತಗೌಡ 15 ವರ್ಷದಲ್ಲೇ ಶ್ರೀಮಂತನಾದ ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಶಾಂತಗೌಡನ ಸಂಪತ್ತಿನ ಖಜಾನೆ ದಿಢೀರನೇ 15 ವರ್ಷದಲ್ಲಿ ಹೆಚ್ಚಾಗಿದೆ. 15 ವರ್ಷಗಳ ಹಿಂದೆ ಬೈಕ್ನಲ್ಲಿ ಓಡಾಡ್ತಿದ್ದ ಶಾಂತಗೌಡ ಜೇವರ್ಗಿ PWD ಇಲಾಖೆಗೆ ಬಂದ ಮೇಲೆ ಸಂಪತ್ತು ಹೆಚ್ಚಳವಾಗಿದೆ. ಸ್ವಂತ ತಾಲೂಕಿಗೆ ಬಂದ ಮೇಲೆ ಅಕ್ರಮ ವ್ಯವಹಾರ ಹೆಚ್ಚಾಗಿ ಕಳಪೆ ಕಾಮಗಾರಿ, ಬೇನಾಮಿ ಹೆಸರಲ್ಲಿ ಗುತ್ತಿಗೆ ಪಡೆದು ಹಣ ಸಂಪಾದಿಸಿದ್ದಾನೆ. 6 ಸೋದರರ ಪೈಕಿ ನೌಕರಿ ಮಾಡ್ತಿದ್ದದ್ದು ಶಾಂತಗೌಡ ಮಾತ್ರ.
ಇದನ್ನೂ ಓದಿ: ಪೈಪ್ ಮಾಸ್ಟರ್ ಶಾಂತಗೌಡ ಬಿರಾದರ್ನ 14 ಎಕರೆ ಫಾರ್ಮ್ಹೌಸ್ ಹೇಗಿದೆ ಗೊತ್ತಾ? ವಿಡಿಯೋ ನೋಡಿ
Published On - 11:32 am, Fri, 26 November 21