
ಕಲಬುರಗಿ, ಫೆಬ್ರವರಿ 27: ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ (Fake Certificates) ತಯಾರಿಸಿ ನಿರುದ್ಯೋಗಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಕಿಂಗ್ ಪಿನ್ನನ್ನು ಕಲಬುರಗಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ದೇಹಲಿ ಮೂಲದ ರಾಜೀವ ಸಿಂಗ್ ಆರೋರಾ ಬಂಧಿತ ಆರೋಪಿ. ನವದೆಹಲಿಯ ರಾಮಪಾರ್ಕ್ ಅಪಾರ್ಟ್ಮೆಂಟ್ ದ್ವಾರಕ್ ಮೋಡ್ನಲ್ಲಿ ಬಂಧಿಸಲಾಗಿದೆ.
ನಕಲಿ ಅಂಕಪಟ್ಟಿ ಜೊತೆಗೆ ನಕಲಿ ವಿಶ್ವವಿದ್ಯಾಲಯ ಸೃಷ್ಟಿ ಮಾಡಿ ಅದರ ಹೆಸರಲ್ಲಿ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ. ಕರ್ನಾಟಕದ ಬೆಂಗಳೂರು, ಮೈಸೂರು, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರಿ ಮಾಡುತ್ತಿದ್ದ.
ಇದನ್ನೂ ಓದಿ: ಹುಡ್ಗಿ ಸಲುವಾಗಿ ಯುವಕನ ಮೇಲೆ ಕ್ರೌರ್ಯ: ಫೇಸ್ಬುಕ್ ಲೈವ್ನಲ್ಲೇ ಮನಸ್ಸೋ ಇಚ್ಛೆ ಹಲ್ಲೆ
ಬಂಧಿತ ಆರೋಪಿ ರಾಜೀವ ಸಿಂಗ್ ಆರೋರಾ ಕಳೆದ ಏಳೆಂಟು ವರ್ಷಗಳಿಂದ ನಕಲಿ ಅಂಕ ಪಟ್ಟಿ ತಯಾರಿ ಮಾಡುತ್ತಿದ್ದ. ಪಿಯುಸಿ, ಡಿಪ್ಲೋಮಾ ಇನ್ ಎಜುಕೇಶನ್, ಡಿಪ್ಲೋಮಾ ಆಫ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಡಾಕ್ಟರ್ ಆಫ್ ಫಿಲಾಸಫಿ, ಬಿ ಟೇಕ್ ಸೇರಿ ವಿವಿಧ ಕೋರ್ಸ್ಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ.
ಸದ್ಯ ಬಂಧಿತನಿಂದ ಬರೋಬ್ಬರಿ 522 ನಕಲಿ ಅಂಕಪಟ್ಟಿಗಳು, 1626 ಖಾಲಿ ಅಂಕಪಟ್ಟಿಗಳು, 36 ಮೊಬೈಲ್, 2 ಲ್ಯಾಪ್ ಟಾಪ್, 1 ಪ್ರಿಂಟರ್, ವಿವಿಧ ವಿಶ್ವವಿದ್ಯಾಲಯಗಳ 122 ನಕಲಿ ಸೀಲ್ಗಳು, ಎಟಿಎಂ ಕಾರ್ಡ್ ಮತ್ತು ಆರೋಪಿಯ 123 ನಕಲಿ ಐಡಿಗಳು, ಆರೋಪಿಯ 85 ಬ್ಯಾಂಕ್ ಅಕೌಂಟ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದ ವಿದ್ಯಾನಗರ ಕಾಲೋನಿಯಲ್ಲಿ ಲಕ್ಷ್ಮೀಕಾಂತ ರೆಡ್ಡಿ ಎಂಬುವವರ ಮನೆ ಬೀಗ ಮುರಿದು ಚಿನ್ನಾಭರಣ, ನಗದು ಕಳವು ಮಾಡಿರುವಂತಹ ಘಟನೆ ನಡೆದಿದೆ. ಮನೆಯಲ್ಲಿದ್ದ 90 ಗ್ರಾಂ ಚಿನ್ನಾಭರಣ, 2 ಲಕ್ಷ ನಗದು ಕಳ್ಳರು ದೋಚಿದ್ದಾರೆ.
ಇದನ್ನೂ ಓದಿ: ಚೆಕ್ಬೌನ್ಸ್ ಪ್ರಕರಣ: ಕೋರ್ಟ್ ಆದೇಶವನ್ನೇ ಧಿಕ್ಕರಿಸಿದ ಆರೋಪಿ ಜೈಲು ಪಾಲು
ಜಾತ್ರೆ ಹಿನ್ನೆಲೆ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಬೇರೆ ಊರಿಗೆ ಲಕ್ಷ್ಮೀಕಾಂತ ರೆಡ್ಡಿ ಹೋಗಿದ್ದರು. ರಾತ್ರಿ ವೇಳೆ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.