ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಸಾವು ಆರೋಪ, ಆಸ್ಪತ್ರೆ ಎದುರು ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ
ಡಾ. ಎ.ಪಿ. ಜಂಪಾ ಅವರ ಸಂಜನಾ ಆಸ್ಪತ್ರೆಗೆ ವಾರದ ಹಿಂದಷ್ಟೇ ಇಟಗಾ ಗ್ರಾಮದ ನಾಗಮ್ಮ ಎಂಬಾಕೆ ದಾಖಲಾಗಿದ್ರು. ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ನಾಗಮ್ಮಗೆ ಶಸ್ತ್ರ ಚಿಕಿತ್ಸೆಯೂ ನಡೆದಿತ್ತು. ಆದ್ರೆ ಆ ಬಳಿಕ ರೋಗ ಮತ್ತಷ್ಟು ಉಲ್ಬಣಗೊಂಡಿದೆ.
ಕಲಬುರಗಿ: ವೈದ್ಯರನ್ನು ಜೀವಂತ ದೇವರು ಎಂದು ಕರೆಯುತ್ತೇವೆ. ಆದ್ರೆ ಅದೇ ವೈದ್ಯರ ಮೇಲೆ ಇಲ್ಲಿ ಪ್ರಾಣ ತೆಗೆದ ಆರೋಪ ಕೇಳಿಬಂದಿದೆ. ಡಾಕ್ಟರ್ ನಿರ್ಲಕ್ಷ್ಯದಿಂದಲೇ ಮಹಿಳೆ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಪ್ರತಿಭಟನೆಯೂ ನಡೆದಿದೆ.
ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಮಹಿಳೆಯ ಜೀವ? ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆಯೋರ್ವರು ಬಲಿಯಾಗಿರೋ ಆರೋಪ ಕಲಬುರಗಿಯಲ್ಲಿ ಕೇಳಿಬಂದಿದೆ. ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ಸಂಜನಾ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಅಂತಾ ಕುಟಂಬಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆಯ ಮುಂಭಾಗ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಡಾ. ಎ.ಪಿ. ಜಂಪಾ ಅವರ ಸಂಜನಾ ಆಸ್ಪತ್ರೆಗೆ ವಾರದ ಹಿಂದಷ್ಟೇ ಇಟಗಾ ಗ್ರಾಮದ ನಾಗಮ್ಮ ಎಂಬಾಕೆ ದಾಖಲಾಗಿದ್ರು. ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ನಾಗಮ್ಮಗೆ ಶಸ್ತ್ರ ಚಿಕಿತ್ಸೆಯೂ ನಡೆದಿತ್ತು. ಆದ್ರೆ ಆ ಬಳಿಕ ರೋಗ ಮತ್ತಷ್ಟು ಉಲ್ಬಣಗೊಂಡಿದೆ. ಹೀಗಾಗಿ ಡಾ. ಜಂಪಾ ಅದೇ ನಾಗಮ್ಮಗೆ ಮತ್ತೊಮ್ಮೆ ಶಸ್ತ್ರ ಚಿಕಿತ್ಸೆ ಮಾಡಿದ್ರು. ಈ ವೇಳೆ ತೀವ್ರ ರಕ್ತಸ್ರಾವದಿಂದ ನಾಗಮ್ಮ ಚಿಂತಾಜನಕ ಸ್ಥಿತಿಗೆ ತಲುಪಿದ್ದು, ಬೇರೊಂದು ಖಾಸಗಿ ಆಸ್ಪತ್ರೆಗೆ ಆಕೆಯನ್ನು ಶಿಫ್ಟ್ ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಾಗಮ್ಮ ಅಸುನೀಗಿದ್ದಾರೆ. ಈ ಸಾವಿಗೆ ವೈದ್ಯರೇ ಕಾರಣ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಆದ್ರೆ ವೈದ್ಯ ಡಾ. ಜಂಪಾ ಮಾತ್ರ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ನಮ್ಮ ಕೈಲಾದ ಎಲ್ಲ ಪ್ರಯತ್ನ ಮಾಡಿದೀವಿ ಅಂತಾ ಸ್ಪಷ್ಟನೆ ಕೊಟ್ಟಿದ್ದಾರೆ. ವೈದ್ಯರ ಸ್ಪಷ್ಟನೆ ಅದೇನೇ ಇದ್ರೂ ಆಗಾಗ ಇಲ್ಲಿ ಇಂಥಹ ಘಟನೆ ಮಾಮೂಲು. ಈ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿರೋದು ನಿಜ ಅನ್ನೋದು ಸಾರ್ವಜನಿಕರ ಆರೋಪ.
ವರದಿ: ಸಂಜಯ್ ಟಿವಿ9, ಕಲಬುರಗಿ
ಇದನ್ನೂ ಓದಿ: Katrina Kaif: ವಿಕ್ಕಿ ತೋಳಿನಲ್ಲಿ ಕತ್ರಿನಾ ಬಂಧಿ; ಈ ಚಿತ್ರಕ್ಕಿದೆ ವಿಶೇಷ ಹಿನ್ನೆಲೆ