ವಿಕ್ಕಿ ಕೌಶಲ್ (Vicky Kaushal) ಹಾಗೂ ಕತ್ರಿನಾ ಕೈಫ್ (Katrina Kaif) ಸದ್ಯ ಎಲ್ಲರ ಗಮನ ಸೆಳೆದಿರುವ ತಾರಾ ಜೋಡಿ. ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಸಂತಸದಿಂದ ದಿನಗಳನ್ನು ಕಳೆಯುತ್ತಿದ್ದಾರೆ. ನಿನ್ನೆ (ಶನಿವಾರ) ವಿಕ್ಕಿ ಕೌಶಲ್ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಕತ್ರಿನಾ ವಿಕ್ಕಿಯ ತೋಳ ತೆಕ್ಕೆಯಲ್ಲಿ ಬಂಧಿಯಾಗಿದ್ದರು. ಅಭಿಮಾನಿಗಳ ಮನಗೆದ್ದ ಈ ಚಿತ್ರಕ್ಕೆ ವಿಶೇಷ ಕಾರಣವೊಂದಿದೆ. ನಿನ್ನೆ ಕ್ರಿಸ್ಮಸ್. ಕತ್ರಿನಾ ಹಾಗೂ ವಿಕ್ಕಿ ಜತೆಯಾಗಿ ಆಚರಿಸುತ್ತಿರುವ ಮೊದಲ ಕ್ರಿಸ್ಮಸ್ ಹಬ್ಬವಿದು. ಆದ್ದರಿಂದಲೇ ಕ್ರಿಸ್ಮಸ್ ಟ್ರೀ ಮುಂದೆ ನಿಂತು ಈರ್ವರೂ ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದರು. ಇದೀಗ ಚಿತ್ರಗಳು ವೈರಲ್ ಆಗಿದ್ದು, ಕತ್ರಿನಾ ಕೈಫ್ ಕೂಡ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಅಲ್ಲದೇ ವಿಕ್ಕ- ಕತ್ರಿನಾ ಹಂಚಿಕೊಂಡ ಚಿತ್ರದಲ್ಲಿ ಅಭಿಮಾನಿಗಳು ಹೊಸ ಅಂಶವೊಂದನ್ನು ಗುರುತಿಸಿದ್ದಾರೆ. ಅದೇನೆಂದರೆ, ವಿಕ್ಕಿ- ಕತ್ರಿನಾ ಪ್ರಸ್ತುತ ತೆಗೆಸಿಕೊಂಡಿರುವ ಚಿತ್ರ ಅವರ ನೂತನ ಮನೆಯದ್ದಾಗಿದೆ. ವಿಕ್ಕಿ- ಕತ್ರಿನಾ ಹೊಸ ಮನೆಯಲ್ಲಿ ಮೊದಲ ಕ್ರಿಸ್ಮಸ್ ಸಂಭ್ರಮ ಆಚರಿಸಿದ್ದಾರೆ ಎಂದು ಫ್ಯಾನ್ಸ್ ಸಂಭ್ರಮ ಪಟ್ಟಿದ್ದಾರೆ.
View this post on Instagram
ವಿಕ್ಕಿ- ಕತ್ರಿನಾ ಚಿತ್ರಕ್ಕೆ ಅಭಿಮಾನಿಗಳು ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ವಿಕ್ಕಿ ತಮ್ಮ ಚಿತ್ರಗಳನ್ನು ಹಂಚಿಕೊಂಡಾಗ ಕತ್ರಿನಾ ಎಲ್ಲಿ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಇದೀಗ ಈರ್ವರೂ ಜತೆಯಿರುವ ಚಿತ್ರವೊಂದನ್ನು ಹಂಚಿಕೊಂಡಂತಾಗಿದ್ದು, ‘‘ಈ ಚಿತ್ರಕ್ಕಾಗಿ ಇಡೀ ದಿನ ನಾನು ಕಾಯುತ್ತಿದ್ದೆ’’ ಎಂದು ಅಭಿಮಾನಿಯೋರ್ವರು ಪ್ರತಿಕ್ರಿಯಿಸಿದ್ದಾರೆ.
ಕತ್ರಿನಾ ಹಾಗೂ ವಿಕ್ಕಿ ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ಅದ್ದೂರಿ ವಿವಾಹವಾಗುವ ಮೂಲಕ ದಾಂಪತfಯ ಜೀವನಕ್ಕೆ ಕಾಲಿರಿಸಿದ್ದರು. ಅಚ್ಚರಿಯ ವಿಚಾರವೆಂದರೆ ಈ ಜೋಡಿ ಕೊನೆಯ ಕ್ಷಣದವರೆಗೂ ತಮ್ಮ ಸಂಬಂಧ, ವಿವಾಹದ ಕುರಿತು ಅಧಿಕೃತವಾಗಿ ತಿಳಿಸಿರಲಿಲ್ಲ. ನಂತರ ಮದುವೆಯ ಚಿತ್ರಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಚಿತ್ರೀಕರಣದ ಕಾರಣಕ್ಕಾಗಿ ಈ ಜೋಡಿ ಹನಿಮೂನ್ನಿಂದ ಬೇಗ ಮರಳಿತ್ತು. ಇದೀಗ ಈರ್ವರೂ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ:
Katrina Kaif: ಕತ್ರಿನಾ ಸಿನಿಮಾ ಪ್ರೀತಿಗೆ ಫ್ಯಾನ್ಸ್ ಫಿದಾ; ಶೂಟಿಂಗ್ ಸೆಟ್ನಲ್ಲಿರುವ ಚಿತ್ರಗಳು ವೈರಲ್
‘ನಾನು ದೊಡ್ಡವನಾದ್ಮೇಲೆ ರಾಮ್ ಚರಣ್, ಜ್ಯೂ. ಎನ್ಟಿಆರ್ ರೀತಿ ಡ್ಯಾನ್ಸ್ ಮಾಡ್ತೀನಿ’: ಸಲ್ಮಾನ್ ಖಾನ್