ಗಾಣಗಾಪುರದ ದತ್ತಾತ್ರೇಯನ ಸನ್ನಿಧಿಯಲ್ಲಿ ಪುಡಿ ರೌಡಿಯಿಂದ ದೌರ್ಜನ್ಯ: ಕಣ್ಮುಚ್ಚಿ ಕುಳಿತ ಪೊಲೀಸರು

ಮಾಜಿ ಪ್ರಧಾನಿ, ಅನೇಕ ಮಾಜಿ ಮುಖ್ಯಮಂತ್ರಿಗಳ ನೆಚ್ಚಿನ ದೇವಸ್ಥಾನವಾದ ಗಾಣಗಾಪುರದ ದತ್ತಾತ್ರೇಯನ ಸನ್ನಿಧಿಯಲ್ಲಿ ಪುಡಿ ರೌಡಿಯ ದೌರ್ಜನ್ಯ ಮಿತಿ ಮೀರಿದೆ.

ಗಾಣಗಾಪುರದ ದತ್ತಾತ್ರೇಯನ ಸನ್ನಿಧಿಯಲ್ಲಿ ಪುಡಿ ರೌಡಿಯಿಂದ ದೌರ್ಜನ್ಯ: ಕಣ್ಮುಚ್ಚಿ ಕುಳಿತ ಪೊಲೀಸರು
ಪುಡಿ ರೌಡಿಯ ಅಟ್ಟಹಾಸ
Follow us
ವಿವೇಕ ಬಿರಾದಾರ
|

Updated on:May 29, 2023 | 7:35 AM

ಕಲಬುರಗಿ: ಮಾಜಿ ಪ್ರಧಾನಿ, ಅನೇಕ ಮಾಜಿ ಮುಖ್ಯಮಂತ್ರಿಗಳ ನೆಚ್ಚಿನ ದೇವಸ್ಥಾನವಾದ ಗಾಣಗಾಪುರದ (Gangapur) ದತ್ತಾತ್ರೇಯನ (Dattatreya) ಸನ್ನಿಧಿಯಲ್ಲಿ ಪುಡಿ ರೌಡಿಯ (Rowdy) ದೌರ್ಜನ್ಯ ಮಿತಿ ಮೀರಿದೆ. ಅಫಜಲಪುರ (Afzalpur) ತಾಲೂಕಿನ ಗಾಣಗಾಪುರದಲ್ಲಿರುವ ಗರು ದತ್ತಾತ್ರೇಯರ ಸನ್ನಿಧಿಗೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಬಳಿ ಇರುವ ಔದುಂಬರ ವೃಕ್ಷದ ಕಳೆಗೆ ಭಕ್ತರು ಕೂತು ದತ್ತ ಚರಿತ್ರೆ ಪಾರಾಯಣ ಮಾಡುವ ಸಮಯದಲ್ಲಿ ಯಲ್ಲಪ್ಪ ಕಲ್ಲೂರ್ ಪುಡಿ ರೌಡಿ ಅಲ್ಲಿಗೆ ಬಂದು ಭಕ್ತರ ತಲೆ ಮೇಲೆ ಕಾಲಿಟ್ಟು, ಹಲ್ಲೆ ಮಾಡಿ ದೌರ್ಜನ್ಯವೆಸಗುತ್ತಿದ್ದಾನೆ. ಗಾಣಗಾಪುರ ನಿವಾಸಿಯಾಗಿರುವ ರೌಡಿ ಯಲ್ಲಪ್ಪ ಈ ರೀತಿಯಾಗಿ ಕಳೆದ ಕೆಲ ವರ್ಷಗಳಿಂದ ಭಕ್ತರಿಗೆ ಕಿರುಕುಳ ನೀಡುತ್ತಿದ್ದರೂ, ಪೊಲೀಸರು ಕ್ರಮಕೈಗೊಂಡಿಲ್ಲ. ಅಲ್ಲದೇ ಈತನ ಮೇಲೆ ನಲವತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇನ್ನು ಗಾಣಗಾಪುರ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕುಖ್ಯಾತ ದರೋಡೆ ಗ್ಯಾಂಗ್ ಪೋಲಿಸ್​ ಬಲೆಗೆ; ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕುವ ವೇಳೆ ಅರೆಸ್ಟ್

ಖಾಸಗಿ ಕಂಪನಿ ಮಾಲೀಕನ ಮಗನ ಅನುಮಾನಾಸ್ಪದ ಸಾವು

ಮೈಸೂರು: ಖಾಸಗಿ ಕಂಪನಿ ಮಾಲೀಕನ ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೈಸೂರಿನ ವಿಜಯನಗರದ ವಾಟರ್ ಟ್ಯಾಂಕ್​ ಬಳಿ ಶವ ಪತ್ತೆಯಾಗಿದೆ. ಸೆನ್ ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಕೆ.ಎಂ.ಚೆರಿಯನ್ ಪುತ್ರ ಕ್ರಿಸ್ಟೋ ಚೆರಿಯನ್(34) ಮೃತ ದುರ್ದೈವಿ. ಕೊಲೆ ಮಾಡಿ‌ ಹಳ್ಳದಲ್ಲಿ ಮೃತದೇಹವನ್ನು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರಿನ ಆರ್​ಟಿಪಿಎಸ್​​ ಘಟಕದಲ್ಲಿ ಗುತ್ತಿಗೆ ಕಾರ್ಮಿಕ ಸಾವು

ರಾಯಚೂರು: ಕೋಲ್ ಸ್ಯಾಂಪ್ಲಿಂಗ್ ರೀಡಿಂಗ್ ವೇಳೆ ಕಾರ್ಮಿಕ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲ್ಲೂಕಿನ ಶಕ್ತಿನಗರದಲ್ಲಿರುವ ಆರ್​ಟಿಪಿಎಸ್ ಘಟಕದಲ್ಲಿ  ನಡೆದಿದೆ. ನಾಗರಾಜ್ ತಂಗಡಗಿ (35) ಮೃತ ಕಾರ್ಮಿಕ. ಮೃತ ಕಾರ್ಮಿಕ ನಾಗರಾಜ್ ಗುತ್ತಿಗೆ ಆಧಾರದಲ್ಲಿ ಆರ್ ಟಿಪಿಎಸ್​ನಲ್ಲಿ ಕೆಲಸ ಮಾಡುತ್ತಿದ್ದನು. ಇಂದು (ಮೇ.29) ಬೆಳಗಿನ ಜಾವ ಕೋಲ್ ಸ್ಯಾಂಪ್ಲಿಂಗ್ ರೀಡಿಂಗ್​ಗೆ ಹೋಗಿದ್ದ ವೇಳೆ ಕಲ್ಲಿದ್ದಲು ಪೂರೈಕೆಯ ರೈಲು ಹರಿದು ನಾಗರಾಜ್ ಸಾವನ್ನಪ್ಪಿದ್ದಾನೆ.

ಘಟನೆಯಲ್ಲಿ ನಾಗರಾಜ್ ಮೃತದೇಹ ಛಿದ್ರಗೊಂಡಿದ್ದು, ರುಂಡ, ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ನಾಗರಾಜ್ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಶಕ್ತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿದೇಶಕ್ಕೆ ಸ್ಮಗಲ್ ಮಾಡಲು ಯತ್ನಿಸುತ್ತಿದ್ದ ವಜ್ರ ವಶ

ಮಂಗಳೂರು: ಅಕ್ರಮವಾಗಿ ವಜ್ರದ ಹರಳುಗಳನ್ನು ವಿದೇಶಕ್ಕೆ ಸಾಗಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಸಿಐಎಸ್​​ಎಫ್​  ಅಧಿಕಾರಿಗಳು ಬಂಧಿಸಿದ್ದರು. ಕೇರಳದ ಕಾಸರಗೋಡು ನಿವಾಸಿಯಾಗಿರುವ ವ್ಯಕ್ತಿ ದುಬೈಗೆ ತೆರಳಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದನು. ಈ ವೇಳೆ ಪ್ರಯಾಣಿಕನ ಅನುಮನಾಸ್ಪದ ವರ್ತನೆ ಕಂಡು CISF ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಪ್ರಯಾಣಿಕನ ಒಳ ಉಡುಪಿನಲ್ಲಿ ಅಡಗಿಸಿಟ್ಟಿದ್ದ ವಜ್ರದ ಹರಳುಗಳು ಪತ್ತೆಯಾಗಿದ್ದವು.

ಪ್ರಯಾಣಿಕನಲ್ಲಿ 13 ಪೌಚ್​ಗಳಲ್ಲಿ ಒಟ್ಟು 1.69 ಕೋಟಿ ಮೌಲ್ಯದ ವಜ್ರದ ಹರಳುಗಳು ಪತ್ತೆಯಾಗಿದ್ದವು. ಕೂಡಲೆ ಸಿಐಎಸ್​ಫ್​​ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು, ಕಸ್ಟಮ್ಸ್ ಅಧಿಕಾರಿಗಳಿಗೆ ಒಪ್ಪಿಸಿದ್ದರು.

ಮತ್ತಷ್ಟು  ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:19 am, Mon, 29 May 23