Anekal: ಕುಖ್ಯಾತ ದರೋಡೆ ಗ್ಯಾಂಗ್ ಪೋಲಿಸ್ ಬಲೆಗೆ; ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕುವ ವೇಳೆ ಅರೆಸ್ಟ್
ಕುಖ್ಯಾತ ದರೋಡೆ ಗ್ಯಾಂಗ್ನ್ನ ಸೂರ್ಯನಗರ ಪೊಲೀಸರು ಇದೀಗ ಬಂಧಿಸಿದ್ದಾರೆ. ಸುನೀಲ್ ಹಾವೇರಿ(26), ಸರವಣ ಅಲಿಯಾಸ್ ಚಿಟ್ಟಿ(32), ಕಾಂತರಾಜ(27 ) ಬಂಧಿತರು. ಸೂರ್ಯನಗರ ಪೇಸ್-2 ಹಿನ್ನಕ್ಕಿ ಬಳಿ ಮಾರಕಾಸ್ತ್ರಗಳೊಂದಿಗೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ವೇಳೆ ಬಂಧಿಸಲಾಗಿದೆ.
ಬೆಂಗಳೂರು ಗ್ರಾಮಾಂತರ: ಕುಖ್ಯಾತ ದರೋಡೆ ಗ್ಯಾಂಗ್ನ್ನ ಸೂರ್ಯನಗರ ಪೊಲೀಸರು(Police) ಇದೀಗ ಬಂಧಿಸಿದ್ದಾರೆ. ಸುನೀಲ್ ಹಾವೇರಿ(26), ಸರವಣ ಅಲಿಯಾಸ್ ಚಿಟ್ಟಿ(32), ಕಾಂತರಾಜ(27 ) ಬಂಧಿತರು. ಸೂರ್ಯನಗರ ಪೇಸ್-2 ಹಿನ್ನಕ್ಕಿ ಬಳಿ ಮಾರಕಾಸ್ತ್ರಗಳೊಂದಿಗೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ವೇಳೆ ಬಂಧಿಸಲಾಗಿದೆ. ಹೌದು ಈ ಖತರ್ನಾಕ್ ಗ್ಯಾಂಗ್ ಒಬ್ಬಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡುತ್ತಿತ್ತು. ಅವರನ್ನ ಮಾರಕಾಸ್ತ್ರಗಳಿಂದ ಬೆದರಿಸಿ ಮೊಬೈಲ್, ನಗದು, ಚಿನ್ನಾಭರಣ ದೋಚುತ್ತಿದ್ದರು. ಇದೀಗ ಪೊಲೀಸ್ ಅತಿಥಿಯಾಗಿದ್ದಾರೆ. ಈ ಕುರಿತು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಶಿಪ್ಟ್ ಮಾಡಲಾಗಿದೆ.
ಇನ್ನು ಆರೋಪಿ ಸುನೀಲ್ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಕೇಸ್ ಆರೋಪಿಯಾಗಿದ್ದ. ಅತ್ತಿಬೆಲೆ, ನಗರದ ಜೀವನ್ ಭೀಮಾ ನಗರ ಠಾಣಾ ವ್ಯಾಪ್ತಿಯಲ್ಲೂ ಕೊಲೆ ಯತ್ನ, ಡಕಾಯಿತಿ ಸೇರಿದಂತೆ ಹಲವು ಪ್ರಕರಣಗಳು ಇತನ ಮೇಲೆ ಇದೆ. ಇನ್ನೊಬ್ಬ ಆರೋಪಿ ಸರವಣ ಮೇಲೆ ಕೂಡ ತಮಿಳುನಾಡಿನ ಹೊಸೂರಿನ ಹುಡ್ಕೊ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಮತ್ತು ಮತ್ತೊರ್ವ ಆರೋಪಿ ಕಾಂತರಾಜ್ ಡಕಾಯಿತಿ, ರಾಬರಿ ಸೇರಿದಂತೆ ಹಲವು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಇದೀಗ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಅಸಾಮಿಗಳನ್ನ ಸೂರ್ಯನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಜಾನವಾರು ಕಳ್ಳತನ ಗ್ಯಾಂಗ್: ಹೈಫೈ ಕಾರಲ್ಲಿ ಬರ್ತಾರೆ ಎತ್ತಾಕೊಂಡು ಹೋಗ್ತಾರೆ..!
ಚಲಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಮಹಿಳೆ ಸಾವು
ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಕಲ್ಲದೇನಹಳ್ಳಿ ಬಳಿ ಚಲಿಸುತ್ತಿದ್ದ ಬಸ್‌ನಲ್ಲೇ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ನಂದಮ್ಮ ಹೊರಟ್ಟಿ(60) ಮೃತ ದುರ್ದೈವಿ. ಹುಣಸಗಿ ತಾಲೂಕಿನ ವಜ್ಜಲ ಗ್ರಾಮದವರಾದ ನಂದಮ್ಮ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆ ಕಲಬುರಗಿ ಆಸ್ಪತ್ರೆಗೆ ಹೋಗಿದ್ರು. ಸುರಪುರದಿಂದ ವಜ್ಜಲಕ್ಕೆ ಬಸ್ ನಲ್ಲಿ ವಾಪಸ್ ಬರುವಾಗ ನಂದಮ್ಮರಿಗೆ ಬಸ್ಸಿನಲ್ಲೇ ಎದೆನೋವು ಕಾಣಸಿಕೊಂಡಿದೆ. ತಕ್ಷಣವೇ ಸಮೀಪದ ಕಲ್ಲದೇವನಹಳ್ಳಿ ಆರೋಗ್ಯ ಕೇಂದ್ರಕ್ಕೆ ದಾಖಲಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ನಂತರ ನಂದಮ್ಮ ಮೃತಪಟ್ಟಿರುವುದಾಗಿ ಕುಟುಂಸ್ಥರಿಗೆ ವೈದ್ಯರು ತಿಳಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ