ಮನೆಯೊಳಗೆ ಲವ್ವರ್​ ಜತೆ ಪತ್ನಿ ಚಕ್ಕಂದ; ಕಣ್ಣಾರೆ ಕಂಡ ಪತಿ ಮಾಡಿದ್ದೇನು ಗೊತ್ತಾ?

ಆತ ಲೈಬ್ರರಿಯಲ್ಲಿ ಅಟೆಂಡರ್ ಕೆಲಸದ ಜೊತೆ ರೇಷನ್ ಅಂಗಡಿಯಲ್ಲಿ ಕಂಪ್ಯೂಟರ್ ಡಾಟಾ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ನಿತ್ಯ ಹತ್ತಾರು ಜನರು ಬರುವಂತೆ ಆಧಾರ್​ ಕಾರ್ಡ್​ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸಲು ಆರು ತಿಂಗಳ ಹಿಂದೆ ಮಹಿಳೆಯೊಬ್ಬಳು ಬಂದಿದ್ದಳು. ಆದ್ರೆ ಆಧಾರ್​ ಕಾರ್ಡ್​ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸುವುದರ ಜೊತೆ ಸ್ವತಃ ಆ ಮಹಿಳೆಯೇ ಆತನಿಗೆ ಲಿಂಕ್ ಆಗಿ ಬಿಟ್ಟಳು. ಐದಾರು ತಿಂಗಳಿಂದ ನಡೆಯುತ್ತಿದ್ದ ಇವರ ಲವ್ವಿಡವ್ವಿಯನ್ನು ಪತಿ ಕಣಾರೆ ಕಂಡಿದ್ದಾನೆ. ಬಳಿಕ ಆಗಿದ್ದೇ ಘನ ಘೋರ..

ಮನೆಯೊಳಗೆ ಲವ್ವರ್​ ಜತೆ ಪತ್ನಿ ಚಕ್ಕಂದ; ಕಣ್ಣಾರೆ ಕಂಡ ಪತಿ ಮಾಡಿದ್ದೇನು ಗೊತ್ತಾ?
Khajappa And Shrushti
Updated By: ರಮೇಶ್ ಬಿ. ಜವಳಗೇರಾ

Updated on: May 02, 2025 | 11:15 PM

ಕಲಬುರಗಿ, (ಮೇ 02): ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿ ಪರ ಪುರುಷನೊಂದಿಗೆ ಚಕ್ಕಂದವಾಡುತ್ತಿರುವುದನ್ನು ಪತಿ ಕಣ್ಣಾರೆ ಕಂಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಪತಿ ಶ್ರೀಮಂತ, ಕೊಡಲಿಯಿಂದ ಪತ್ನಿ ಸೃಷ್ಟಿ ಹಾಗೂ ಆಕೆಯ ಪ್ರಿಯಕರ ಖಾಜಪ್ಪನನ್ನು ಕೊಚ್ಚಿ ಕೊಂದು ಪರಾರಿಯಾಗಿದ್ದಾನೆ. ಈ ಘಟನೆ ಕಲಬುರಗಿಯ (Kalaburagi) ಆಳಂದ ತಾಲೂಕಿನ ಮಾದನಹಿಪ್ಪರಗಾ (Madanahipparaga) ಗ್ರಾಮದಲ್ಲಿ ನಡೆದಿದೆ.   ಗಂಡ ಮನೆಯಲ್ಲಿ ಇಲ್ಲದಿದ್ದಾಗ ಸೃಷ್ಟಿ, ಪ್ರಿಯಕರನ್ನು ಬರಲು ಹೇಳಿದ್ದಾಳೆ. ಆದ್ರೆ, ಪ್ರಿಯಕರ ಖಾಜಪ್ಪ, ಯಾರಾದರು ನೋಡಿದ್ರೆ ಹೇಗೆ ಎಂದು ಜೆಸ್ಕಾಂಗೆ ಒಂದು ಸುಳ್ಳು ಹೇಳಿ ಕರೆಂಟ್ ತೆಗೆಸಿದ್ದಾನೆ. ಬಳಿ ಕತ್ತಲಲ್ಲಿ ಸೃಷ್ಟಿ ಮನೆಯೊಳಗೆ ನುಗ್ಗಿದ್ದಾನೆ. ಈ ವಿಚಾರ ಪತಿ ಶ್ರೀಮಂತನಿಗೆ ಗೊತ್ತಾಗಿ ಮನೆಗೆ ಬಂದು ನೋಡಿದಾಗ ಪತ್ನಿ ತನ್ನ ಪ್ರಿಯಕರನ ಜೊತೆ ಇರುವುದು ಕಣ್ಣಾರೆ ಕಂಡು ಇಬ್ಬರನ್ನ ಹತ್ಯೆಗೈದಿದ್ದಾನೆ.

ಕಳೆದ ಮೂರು ವರ್ಷಗಳ ಹಿಂದೆ ಮಾದನಹಿಪ್ಪರಗಾ ಗ್ರಾಮದ ಶ್ರೀಮಂತನ ಜೊತೆ 22 ವರ್ಷದ ಸೃಷ್ಟಿ ಸಪ್ತಪದಿ ತುಳಿದಿದ್ದಳು.. ಕೃಷಿ ಕೂಲಿ ಕೆಲಸ ಮಾwಉತ್ತಿದ್ದ ಶ್ರೀಮಂತ ದಿನದಲ್ಲಿ ಬಹುತೇಕ ಸಮಯ ಬೇರೆಯವರ ಜಮೀನಿನಲ್ಲಿ ಕಳೆಯುತ್ತಿದ್ದ. ಇತ್ತ ಪತ್ನಿ ಸೃಷ್ಟಿ ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಮದ ಲೈಬ್ರರಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಖಾಜಪ್ಪ ಎಂಬಾತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಅದರಂತೆ ನಿನ್ನೆ (ಮೇ 01) ಶ್ರೀಮಂತ ಕೆಲಸದ ಮೇಲೆ ಬೇರೆ ಊರಿಗೆ ತೆರಳಿದ್ದ ವೇಳೆ ಇತ್ತ ಸೃಷ್ಟಿ, ರಾತ್ರಿ ಪ್ರಿಯಕರ ಖಾಜಪ್ಪನಿಗೆ ಕರೆ ಮಾಡಿ ಮನೆಗೆ ಆಹ್ವಾನಿಸಿದ್ದಾಳೆ. ಆದ್ರೆ, ಸೃಷ್ಟಿ ಮನೆಗೆ ದಿಢೀರ್ ಅಂತಾ ಹೋದರೆ ಯಾರಾದರೂ ನೋಡಿದ್ರೆ ಕಷ್ಟಎಂದು.. ಜೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಟ್ರಾನ್ಸ್‌ಫಾರಂಗೆ ಬೆಂಕಿ ಬಿದ್ದಿದೆ ಕರೆಂಟ್ ತೆಗೆಯಿರಿ ಎಂದು ಹೇಳಿದ್ದಾನೆ. ಕೂಡಲೇ ಜೆಸ್ಕಾಂ ಸಿಬ್ಬಂದಿ ಕರೆಂಡ್ ತಗೆಯುತ್ತಿದ್ದಂತೆಯೇ ಖಾಸಪ್ಪ ಕತ್ತಲಲ್ಲಿ ಓಡಿ ಹೋಗಿ ಸೃಷ್ಟಿ ಮನೆ ಸೇರಿಕೊಂಡಿದ್ದಾನೆ.

ಇದನ್ನೂ ಓದಿ: ಪಲ್ಯ‌, ಸಾಂಬಾರ್ ಸರಿ ಮಾಡಲ್ಲ ಎಂದು ಪ್ರೀತಿಸಿ ಮದ್ವೆಯಾದ ಹೆಂಡ್ತಿಯನ್ನೇ ಕೊಂದ ಪತಿ

ಆದ್ರೆ, ಮನೆ ಮುಂದೆ ಬೈಕ್ ನಿಂತಿರುವುದನ್ನು ಕಂಡು ಅಕ್ಕಪಕ್ಕದವರು ಶ್ರೀಮಂತ್‌ಗೆ ಕಾಲ್ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಶ್ರೀಮಂತ ಮನೆ ಹತ್ತಿರ ಬಂದು ಹೊರಗಡೆಯಿಂದ ಮನೆ ಲಾಕ್ ಮಾಡಿದ್ದಾನೆ. ಸ್ವಲ್ಪ ಸಮಯದ ಬಳಿಕ ಲಾಕ್ ತೆಗೆಯುತ್ತಿದ್ದಂತೆಯೇ ಪರಾರಿಯಾಲು ಯತ್ನಿಸಿದ ಖಾಜಪ್ಪನನ್ನು ಶ್ರೀಮಂತ ಬೆನ್ನಟ್ಟಿ ದೊಣ್ಣೆಯಿಂದ ತಲೆ ಹೊಡೆದಿದ್ದಾನೆ.

ಇದನ್ನೂ ಓದಿ
ಬೆಂಗಳೂರಿನಲ್ಲಿ ಆಫ್ರಿಕಾದ 32 ವರ್ಷದ ಮಹಿಳೆಯ ಮೃತದೇಹ ಪತ್ತೆ...!
ಬೇರೆ ಜಾತಿ ಹುಡುಗನ ಪ್ರೀತಿಸಿದ್ದಕ್ಕೆ ಮಗಳ ಕೊಲೆ ಮಾಡಿ ನದಿಗೆ ಎಸೆದ ತಂದೆ
ಇನ್ಸ್ಟಾಗ್ರಾಮ್​ನಲ್ಲಿ ರಾಯಚೂರು-ಚಾಮರಾಜನಗರ ನಂಟು: ಯುವತಿ ಕೊರಳಿಗೆ 3 ಗಂಟು!
ಗದಗ: ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್, ಯುವತಿ ಆತ್ಮಹತ್ಯೆ

ಏಟು ಬೀಳುತ್ತಿದ್ದಂತೆಯೇ ಕೆಳಗೆ ಬಿದ್ದಿದ್ದ ಖಾಜಪ್ಪನನ್ನು ಶ್ರೀಮಂತ ಭುಜದ ಮೇಲೆ ಹೊತ್ತುಕೊಂಡು ಬಂದು ಪತ್ನಿಯನ್ನ ನಡಿ ಪೊಲೀಸ್ ಠಾಣೆಗೆ ಹೋಗಿ ಇವನ ವಿರುದ್ಧ ಕಂಪ್ಲೇಂಟ್ ಕೊಡೊಣ ಎಂದಿದ್ದಾನೆ. ಆಗ ಸೃಷ್ಟಿ ಹೋಗಲು ಒಪ್ಪದಿದ್ದಕ್ಕೆ ಮತ್ತಷ್ಟು ಆಕ್ರೋಶಗೊಂಡ ಶ್ರೀಮಂತ, ಮನೆಯಲ್ಲಿದ್ದ ಕೊಡಲಿಯಿಂದ ಕೊಚ್ಚಿ ಇಬ್ಬರನ್ನ ಮನೆಯಂಗಳದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಇನ್ನೂ ವಿಷಯ ತಿಳಿಯುತ್ತಿದ್ದಂತೆಯೇ ಘಟನ ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸುಲು, ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್ಪಿ ಶ್ರೀನಿವಾಸುಲು, ಪ್ರಾಥಮಿಕ ಮಾಹಿತಿ ಪ್ರಕಾರ ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಪತ್ನಿ ಸೃಷ್ಟಿ ಹಾಗೂ ಖಾಜಪ್ಪನನ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜೋಡಿ ಕೊಲೆ ಮಾಡಿ ಪರಾರಿಯಾಗಿರೋ ಶ್ರೀಮಂತನ ಬಂಧನಕ್ಕೆ ಬಲೆ ಬೀಸಲಾಗಿದೆಂದು ಎಂದರು.

ಇನ್ನೂ ಭೀಕರ ಜೋಡಿ ಕೊಲೆಯಿಂದ ಇಡೀ ಗ್ರಾಮವೇ ಅಕ್ಷರಶಃ ಬೆಚ್ಚಿಬಿದ್ದಿದ್ದು, ಈ ಬಗ್ಗೆ ಮಾದನಹಿಪ್ಪರಗಾ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.. ಒಟ್ಟಿನಲ್ಲಿ ಗಂಡನ ಜೊತೆ ಸುಖವಾಗಿ ಸಂಸಾರ ಮಾಡುವುದನ್ನ ಬಿಟ್ಟು ಪರ ಪುರುಷನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ಮಸಣ ಸೇರಿದ್ದು ಮಾತ್ರ ದುರಂತವೇ ಸರಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ