ಕಲಬುರಗಿ: ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಆ್ಯಂಟಿ ರೇಪ್ ಫುಟ್‌ವೇರ್ ಎನ್ನುವ ಸಾಧನವನ್ನು ಕಂಡುಹಿಡಿದ 10ನೇ ತರಗತಿ ವಿದ್ಯಾರ್ಥಿನಿ

ಜಿಲ್ಲೆಯ ವಿದ್ಯಾರ್ಥಿಯೊಬ್ಬಳು ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಆ್ಯಂಟಿ ರೇಪ್ ಪುಟವೇರ್ ಎನ್ನುವ ಸಾಧನವನ್ನು ಕಂಡುಹಿಡಿದಿದ್ದಾಳೆ. ಇದರಿಂದ ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಕಲಬುರಗಿ: ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಆ್ಯಂಟಿ ರೇಪ್ ಫುಟ್‌ವೇರ್ ಎನ್ನುವ ಸಾಧನವನ್ನು ಕಂಡುಹಿಡಿದ 10ನೇ ತರಗತಿ ವಿದ್ಯಾರ್ಥಿನಿ
ಕಲಬುರಗಿ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 29, 2022 | 6:08 PM

ಕಲಬುರಗಿ:  ದೇಶದಲ್ಲಿ ಪ್ರತಿನಿತ್ಯ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ಮಾಡಿದರು ಸಹ ಲೈಂಗಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಕಲಬುರಗಿಯ ಬಾಲಕಿಯೋರ್ವಳು ಕಾಮುಕರಿಗೆ ಶಾಕ್ ಕೊಡುವ ಒಂದು ಸಾಧನವನ್ನು ಕಂಡು ಹಿಡಿದಿದ್ದಾಳೆ.

ಹೌದು..ಕಲಬುರಗಿ ನಗರದ ಎಸ್.ಆರ್.ಎನ್ ಮೆಹತಾ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿಜಯಲಕ್ಷ್ಮಿ ಬಿರಾದಾರ್ ಎನ್ನುವ ವಿದ್ಯಾರ್ಥಿನಿ ಆ್ಯಂಟಿ ರೇಪ್ ಫುಟ್‌ವೇರ್ ಸಿದ್ದಗೊಳಿಸಿದ್ದಾಳೆ.  ಪಾದರಕ್ಷೆಯ ಕೆಳಗೆ ಎಲೆಕ್ಟ್ರಾನಿಕ್ ಸಾಧನವನ್ನು ಅಳವಡಿಸಿದ್ದು, ಯಾರಾದರೂ ಕಾಮುಕರು ಅಥವಾ ಅಪರಿಚಿತರು ಬಂದು ಮಹಿಳೆಯರನ್ನು ಮುಟ್ಟಿದರೆ ಆ ಪಾದರಕ್ಷೆಗಳಿಂದ ಎದುರಿಗಿರುವ ವ್ಯಕ್ತಿಗೆ ಕಿಕ್ ಮಾಡಿದರೆ 0.5 ರಷ್ಟು ಆಂಪಿಯರ್ ನಷ್ಟು ವಿದ್ಯುತ್ ಉತ್ಪಾದನೆಯಾಗಿ ಕಾಮುಕರಿಗೆ ಶಾಕ್ ಹೊಡೆಯುವಂತೆ ಮಾಡುತ್ತದೆ.

ಅಪಾಯದ ಸಂದೇಶವನ್ನು ಕೂಡ ಕಳುಹಿಸಬಹುದು

ಇನ್ನು ಈ ಮಷಿನ್, ನಡೆಯುವಾಗಲೇ ಬ್ಯಾಟರಿ ಚಾರ್ಜ್ ಆಗುವಂತೆ ರೂಪಿಸಲಾಗಿದೆ. ಈ ಪಾದರಕ್ಷೆಯಲ್ಲಿ ಬ್ಲಿಂಕ್ ಆಪ್ ತಂತ್ರಜ್ಞಾನ ಅಳವಡಿಸಿದ್ದು, ಸಂಕಷ್ಟದಲ್ಲಿರುವ ಮಹಿಳೆ ಹೆಬ್ಬೆರೆಳು ಬಳಿ ಬಟನ್ ಒತ್ತಿದರೆ ಸಾಕು, ಪೊಲೀಸರಿಗೆ ಮತ್ತು ಕುಟುಂಬದವರಿಗೆ ಎಚ್ಚರಿಕೆಯ ಸಂದೇಶ ಹೋಗುವಂತಹ ವ್ಯವಸ್ಥೆಯನ್ನು ಕೂಡಾ ರೂಪಿಸಲಾಗಿದೆ. ಅಪ್ಲಿಕೇಶನ್​ನಲ್ಲಿ ಯಾರ ನಂಬರ್​ನ್ನು ದಾಖಲಿಸಿರುತ್ತೆವೆಯೋ ಆ ನಂಬರ್​ಗೆ ಸಹಾಯದ ಸಂದೇಶ ಹೋಗುತ್ತದೆ. ಇದರಿಂದ ಸಂಕಷ್ಟಕ್ಕೊಳಗಾದವರು ಎಲ್ಲಿ ಇದ್ದಾರೆ ಎನ್ನುವುದನ್ನು ಕೂಡಾ ಟ್ರ್ಯಾಕ್ ಮಾಡಲು ಪೊಲೀಸರಿಗೆ ನೆರವಾಗುವಂತೆ ತಂತ್ರಜ್ಞಾನವನ್ನು ರೂಪಿಸಲಾಗಿದೆ.

ಬಾಲಕಿಯ ಸಾಧನೆಗೆ ಎಲ್ಲರಿಂದ ಮೆಚ್ಚುಗೆ

ಬಾಲಕಿ ತಾನು ಕಂಡು ಹಿಡಿದ ಆ್ಯಂಟಿ ರೇಪ್ ಪುಟವೇರ್​ನ್ನು, ಇತ್ತೀಚೆಗೆ ಗೋವಾದಲ್ಲಿ ನಡೆದ ಇಂಡಿಯಾ ಇಂಟರ್ ನ್ಯಾಷನಲ್ ಇನೋವೇಷನ್ ಎಕ್ಸ್​ಪೋದಲ್ಲಿ ಕೂಡಾ ಪ್ರದರ್ಶಿಸಿದ್ದು, ನಿರ್ಣಾಯಕರು, ವಿದ್ಯಾರ್ಥಿನಿಯ ಮಾದರಿಯನ್ನು ಮೆಚ್ಚಿ, ದ್ವಿತೀಯ ಬಹುಮಾನವನ್ನು ನೀಡಿದ್ದಾರೆ. ದೇಶ, ವಿದೇಶದಿಂದ ಬಂದಿದ್ದ ಅನೇಕ ಮಾದರಿಗಳಲ್ಲಿ ಕಲಬುರಗಿಯ ಬಾಲಕಿಯ ಮಾದರಿಗೆ ದ್ವಿತೀಯ ಬಹುಮಾನ ಬಂದಿದೆ. ಇನ್ನು ವಿದ್ಯಾರ್ಥಿನಿಯ ಈ ಪ್ರಯತ್ನದಲ್ಲಿ ಶಾಲೆಯ ವಿಜ್ಞಾನ ಶಿಕ್ಷಕಿ ಸುಮಯ್ಯಖಾನ್, ಟ್ರಸ್ಟಿ ಚಕೋರ್ ಮೆಹ್ತಾ ಸೇರಿದಂತೆ ಅನೇಕರು ನೆರವು ನೀಡಿದ್ದಾರೆ. ಇಂತಹದೊಂದು ಇನೋವೆಷನ್ ಮಾಡಿರುವ ಬಾಲಕಿಯ ಈ ಸಾಧನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇಂತಹದೊಂದು ಐಡಿಯಾ ಬಂದಿದ್ದು ಹೇಗೆ?

ದೇಶದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಮಹಿಳೆಯರು, ಮಕ್ಕಳು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ಕಳೆದ ತಿಂಗಳಷ್ಟೇ ಕಲಬುರಗಿ ಜಿಲ್ಲೆಯಲ್ಲಿಯೇ ಹದಿನಾಲ್ಕು ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಒಂದೇ ತಿಂಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಮೂರು ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದವು. ಇದು ಬಾಲಕಿಯ ಚಿಂತೆಗೆ ಕಾರಣವಾಗಿತ್ತು. ಅತ್ಯಾಚಾರವಾದ ಮೇಲೆ ನ್ಯಾಯಕ್ಕಾಗಿ ಹೋರಾಡುವುದಕ್ಕಿಂತ ಅತ್ಯಾಚಾರವಾಗದಂತೆ ತಡೆಯುವುದು ಉತ್ತಮ ಎನ್ನುವ ಯೋಚನೆ ವಿದ್ಯಾರ್ಥಿನಿಗೆ ಹೊಳೆದಿತ್ತು. ಹೀಗಾಗಿ ಶಾಲೆಯ ವಿಜ್ಞಾನ ಶಿಕ್ಷಕಿಯ ಜೊತೆ ಚರ್ಚಿಸಿದ್ದ ವಿದ್ಯಾರ್ಥಿನಿ, ಆ್ಯಂಟಿ ರೇಪ್ ಪುಟವೇರ್ ಸಿದ್ದಗೊಳಿಸಿ, ಯಶಸ್ಸನ್ನು ಪಡೆದಿದ್ದಾಳೆ.

ಇದನ್ನೂ ಓದಿ:ಕಲಬುರಗಿಯಲ್ಲಿ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ದಂಧೆ: ಕಣ್ಣಿದ್ದು ಕುರುಡರಾದ ಪೊಲೀಸರು, ಅಧಿಕಾರಿಗಳು

ಇನ್ನು ಬಾಲಕಿಯ ಆ್ಯಂಟಿ ರೇಪ್ ಪುಟವೇರ್ ಮಾಡಲು ಸದ್ಯ ಎರಡು ಸಾವಿರ ರೂಪಾಯಿ ಖರ್ಚಾಗಿದೆಯಂತೆ. ಅತ್ಯಾಚಾರ ಪ್ರಕರಣಗಳನ್ನು ಕಡಿಮೆ ಮಾಡಲು ಈ ಮಾದರಿ ತುಂಬಾ ಅನಕೂಲವಾಗುತ್ತದೆ. ಎಲ್ಲಾ ಸಮಯದಲ್ಲಿ ಮಹಿಳೆಯರು ಪೆಪ್ಪರ್ ಸ್ಪ್ರೇ ಸೇರಿದಂತೆ ಕೆಲ ಸುರಕ್ಷಿತಾ ಸಾಧನಗಳನ್ನು ತಗೆದುಕೊಂಡು ಹೋಗಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಈ ಮಾದರಿಯನ್ನು ಬಳಸಿಕೊಂಡು, ಮಹಿಳೆಯರಿಗೆ ಈ ರೀತಿಯ ಪಾದರಕ್ಷೆಗಳು ಸಿಗುವಂತೆ ಮಾಡಿದರೆ ಮಹಿಳೆಯರು ನಿರ್ಭೀತಿಯಿಂದ ಓಡಾಡಲು ಅನುಕೂಲವಾಗುತ್ತದೆ ಎನ್ನುವುದು ಬಾಲಕಿಯ ಆಶಯವಾಗಿದೆ.

ವರದಿ; ಸಂಜಯ್ ಟಿವಿ9 ಕಲಬುರಗಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:52 pm, Tue, 29 November 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್