ಕಲಬುರಗಿ ಎಪಿಎಂಸಿ ವರ್ತಕರಿಗೆ 15 ಕೋಟಿ ರೂ. ಪಂಗನಾಮ ಹಾಕಿದ ದಾಲ್​ ಮಿಲ್‌ ಮಾಲೀಕ ಗೋವಿಂದ

ಕಲಬುರಗಿಯ ಎಪಿಎಂಸಿ ವರ್ತಕರು ರೈತರ ಬಳಿ ತೊಗರಿ ಖರೀದಿಸಿ ನಂದೂರು ಇಂಡಸ್ಟ್ರಿಯಲ್ ಏರಿಯಾದಲ್ಲಿನ ದಿನೇಶ್ ದಾಲ್ ಇಂಡಸ್ಟ್ರೀಸ್ ಮಾಲೀಕನಿಗೆ ಮಾರಿದ್ದಾರೆ. ವರ್ತಕರೆಲ್ಲ ಕೋಟ್ಯಾಂತರ ರೂಪಾಯಿ ಮೌಲ್ಯದ ತೊಗರಿಯನ್ನು ಆತನಿಗೆ ಮಾರಿದ್ದಾರೆ. ಆದರೆ, ದಾಲ್​ ಮಿಲ್​ ಮಾಲೀಕ ವರ್ತಕರಿಗೆ ಮಕ್ಮಲ್ ಟೋಫಿ ಹಾಕಿದ್ದಾನೆ.

ಕಲಬುರಗಿ ಎಪಿಎಂಸಿ ವರ್ತಕರಿಗೆ 15 ಕೋಟಿ ರೂ. ಪಂಗನಾಮ ಹಾಕಿದ ದಾಲ್​ ಮಿಲ್‌ ಮಾಲೀಕ ಗೋವಿಂದ
ದಿನೇಶ್​ ದಾಲ್​ ಮಿಲ್​
Updated By: ವಿವೇಕ ಬಿರಾದಾರ

Updated on: May 28, 2025 | 8:31 AM

ಕಲಬುರಗಿ, ಮೇ 28: ಕಲಬುರಗಿಯ (Kalaburagi) ನಂದೂರು ಇಂಡಸ್ಟ್ರಿಯಲ್ ಏರಿಯಾದಲ್ಲಿನ ದಿನೇಶ್ ದಾಲ್ ಇಂಡಸ್ಟ್ರೀಸ್ ಮಾಲೀಕ ಗೋವಿಂದ ವಾಗ್ಮೋರೆ ಎಂಬುವರು ಎಪಿಎಂಸಿಯ (APMC) ಸುಮಾರು 40ಕ್ಕೂ ಹೆಚ್ಚು ವರ್ತಕರಿಗೆ 15 ಕೋಟಿ ರೂಪಾಯಿ ವಂಚಿಸಿದ್ದಾನೆ. ಕಳೆದ ಹಲವಾರು ದಿನಗಳಿಂದ ಪೋನ್ ಮಾಡಿದರೂ ಸ್ವಿಚ್ಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದಾನೆ. ಸೋಮವಾರ (ಮೇ.26) ರಾತ್ರಿ ಏಕಾಏಕಿ ದಾಲ್ ಮಿಲ್​ನಲ್ಲಿದ್ದ ನೂರಾರು ಮೂಟೆ ತೊಗರಿ ಬೇಳೆಯನ್ನು ಯಾರಿಗೂ ಗೊತ್ತಾಗದಂತೆ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಈ ವಿಚಾರ ತಿಳಿದ ಎಪಿಎಂಸಿ ವರ್ತಕರು ಮೀಲ್​ಗೆ ತೆರಳಿ ಲಾರಿಗಳನ್ನು ತಡೆದಿದ್ದಾರೆ. ನಮ್ಮ ಹಣ ವಾಪಸ್ ಕೊಡುವವರೆಗೂ ಕೋಟ್ಯಂತರ ರೂಪಾಯಿ ಮೌಲ್ಯದ ತೊಗರಿ ಬೆಳೆಯನ್ನು ಸಾಗಿಸಲು ಬಿಡಲ್ಲ ಎಂದು ಪಟ್ಟು ಹಿಡಿದರು.

ಆದರೆ, ತೊಗರಿ ಬೇಳೆ ತೆಗೆದುಕೊಂಡು ಹೋಗಲು ಬಂದವರು, ನಾವು ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರಿಗೆ ಸೇರಿದ ದಾಲ್ ಮಿಲ್​ನವರು ಎಂದಿದ್ದಾರೆ. ಗೋವಿಂದ ವಾಗ್ಮೋರೆ ತಮಗೂ ಕೂಡ ಮೋಸ ಮಾಡಿದ್ದಾನೆ. ಹೀಗಾಗಿ, ಆತನ ವಿರುದ್ಧ ನಾವು ಪೊಲೀಸರಿಗೆ ದೂರು ನೀಡಿದ್ದೆವೆ. ನನ್ನ ದಾಲ್ ಮಿಲ್​ನಲ್ಲಿ ನೂರಾರು ಕ್ವಿಂಟಲ್ ತೊಗರಿ ಬೇಳೆಯಿದೆ ಎಂದು ಗೋವಿಂದ ಹೇಳಿದ್ದನು. ಹೀಗಾಗಿ, ತೆಗೆದುಕೊಂಡು ಹೋಗಲು ಬಂದಿದ್ದೆವೆ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಅಕಾಲಿಕ ಮಳೆಯಿಂದ ಕೈಗೆ ಬಂದ ಬಾಳೆ ಬೆಳೆಯನ್ನು ಕಳೆದುಕೊಂಡ ಕಲಬುರಗಿ ನಂದೂರ ಗ್ರಾಮದ ರೈತ

ಇದನ್ನೂ ಓದಿ
ಜಿಮ್ಸ್ ಆಸ್ಪತ್ರೆಯಲ್ಲಿ ಕೈಕೊಟ್ಟ ಲಿಫ್ಟ್, ಗೋಡೆ ಒಡೆದು 9 ಮಂದಿಯ ರಕ್ಷಣೆ
ED Raid: ಕಲಬುರಗಿ ಕಾಂಗ್ರೆಸ್ ಮುಖಂಡನ ಮೇಲೆ ಇಡಿ ದಾಳಿ
ಮಹಿಳೆ ಜತೆ ಲಿವಿಂಗ್ ಟುಗೆದರ್​ಗೆ ಮನೆಯವರ ವಿರೋಧ, ಯುವಕ ಆತ್ಮಹತ್ಯೆ
ಬೀದರ್​ ಬೆನ್ನಲ್ಲೇ ಕಲಬುರಗಿಯಲ್ಲಿ ATMಗೆ ಕನ್ನ: ದರೋಡೆ ಕೇಸ್​ ಹೆಚ್ಚಳ!

ಆಗ ವರ್ತಕರು, ಗೋವಿಂದ ನಮಗೆ 15 ಕೋಟಿ ರೂಪಾಯಿಗೂ ಹೆಚ್ಚು ಹಣ ನೀಡಬೇಕು. ಅಷ್ಟೊಂದು ದೊಡ್ಡ ಮಟ್ಟದಲ್ಲಿ ನಾವು ರೈತರಿಂದ ತೊಗರಿಯನ್ನು ಖರೀದಿ ಮಾಡಿ ಆತನಿಗೆ ಕೊಟ್ಟಿದ್ದೆವೆ. ನೀವು ರಾತ್ರೋರಾತ್ರಿ ಇಲ್ಲಿರುವ ತೊಗರಿ ಬೇಳೆಯನ್ನು ತೆಗೆದುಕೊಂಡು ಹೋದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಸಾಲ ಮಾಡಿ ವ್ಯವಹಾರ ಮಾಡುತ್ತಿದ್ದೆವೆ. ಇವಾಗ ಎಲ್ಲ ತೊಗರಿ ಬೇಳೆ ತೆಗದುಕೊಂಡು ಹೋದರೆ ಹೇಗೆ? ನಮ್ಮ ಹಣ ವಾಪಸ್ ಬರುವವರೆಗೂ ಗೋವಿಂದ ವಾಗ್ಮೋರೆಗೆ ಸೇರಿದ ಯಾವುದೇ ಮಾಲ್ ಬೇರೆಯವರು ತೆಗೆದುಕೊಂಡು ಹೋಗಲು ಬೀಡುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ವಂಚಕ ಗೋವಿಂದನ ವಿರುದ್ಧ ವರ್ತಕರೆಲ್ಲರೂ ಸೇರಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ