ಬೀದರ್ ಬೆನ್ನಲ್ಲೇ ಕಲಬುರಗಿಯಲ್ಲಿ ATM ಕಳ್ಳತನ, ಕರ್ನಾಟಕದಲ್ಲಿ ಸಾಲು ಸಾಲು ದರೋಡೆ
ಕರ್ನಾಟಕದ ನಾನಾ ಭಾಗಗಳಲ್ಲಿ ಸಣ್ಣ ಪುಟ್ಟ ಕಳ್ಳತನ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ಇದರ ಮಧ್ಯ ಒಂದಲ್ಲ ಒಂದು ದೊಡ್ಡ ಮಟ್ಟದ ದರೋಡೆಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದರೋಡೆಕೋರರ ಗ್ಯಾಂಗ್ ಬ್ಯಾಂಕ್ ಹಾಗೂ ಎಂಟಿಎಂಗಳೇ ಟಾರ್ಗೆಟ್ ಆಗಿವೆ. ಇತ್ತೀಚೆಗೆ ಬೀದರ್‌ನಲ್ಲಿ ಇಬ್ಬರಿಗೂ ಶೂಟ್ ಮಾಡಿ ಎಟಿಎಂ ಹಣ ದೋಚಿಕೊಂಡು ಹೋಗಿದ್ದರು. ಇದರ ಬೆನ್ನಲ್ಲೇ ಮಂಗಳೂರಿನಲ್ಲಿ ಬ್ಯಾಂಕ್ ದರೋಡೆಯಾಗಿತ್ತು. ಇದೀಗ ಕಲಬುರಗಿಯಲ್ಲಿ ಮತ್ತೊಂದು ಎಟಿಎಂ ದರೋಡೆಯಾಗಿದೆ.

ಕಲಬುರಗಿ, (ಏಪ್ರಿಲ್ 09): ಕರ್ನಾಟಕದಲ್ಲಿ (Karnataka) ದರೋಡೆ ಪ್ರಕರಣಗಳು (robbery Cases) ಹೆಚ್ಚಾಗುತ್ತಲೇ ಇವೆ. ಮಂಗಳೂರು, ಬೀದರ್ ಬ್ಯಾಂಕಿನ ಹಣ ದರೋಡೆ ಬೆನ್ನಲ್ಲೇ ಇದೀಗ ಖದೀಮರು ಕಲಬುರಗಿಯಲ್ಲಿ ಎಸ್‌ಬಿಐ ಎಂಟಿಎಂಗೆ ಕನ್ನ ಹಾಕಿದ್ದಾರೆ. ಹೌದು.. ಗ್ಯಾಸ್ ಕಟರ್ ಬಳಸಿ ಕಳ್ಳರು ಎಟಿಎಂನಿಂದ (ATM) 18 ಲಕ್ಷ ರೂ. ಕದ್ದೊಯ್ದಿರುವ ಘಟನೆ ಕಲಬುಗರಿಯ (Kalaburagi) ಪೂಜಾರಿ ಚೌಕ್‌ನಲ್ಲಿ(Ramanagara) ನಡೆದಿದೆ. ಗುರುತು ಸಿಗಬಾರದು ಎಂದು ಕಿರಾತಕರು ಮೊದಲಿಗೆ ಸಿಸಿಕ್ಯಾಮರಾಗೆ ಬ್ಲ್ಯಾಕ್ ಸ್ಪ್ರೇ ಮಾಡಿ ಬಳಿಕ ಎಟಿಎಂ ಲಾಕರ್ ಕಟ್ ಮಾಡಿ ಬರೋಬ್ಬರಿ 18 ಲಕ್ಷ ರೂ. ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಕಲಬುರಗಿಯಲ್ಲಿ ಏಪ್ರಿಲ್ 9ರ ನಸುಕಿನ ಜಾವ 3 ಗಂಟೆ ಸುಮಾರಿಗೆ ಹರಿಯಾಣದ ಮೂಲದ ಗ್ಯಾಂಗ್ ಎಟಿಎಂಗೆ ನುಗ್ಗಿದೆ. ಮೊದಲಿಗೆ ಸಿಸಿಕ್ಯಾಮರಾಗೆ ಸ್ಪ್ರೇ ಮಾಡಿದ್ದಾರೆ. ಬಳಿಕ ಲಾಕರ್ ಅನ್ನ ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಬರೋಬ್ಬರಿ 18 ಲಕ್ಷ ರೂಪಾಯಿ ದೋಚಿದ್ದಾರೆ.
ಇದನ್ನೂ ಓದಿ: ಬೀದರ್: ಫೈರಿಂಗ್ ಮಾಡಿ ಎಟಿಎಂ ಹಣದ ಟ್ರಂಕ್ ಹೊತ್ತೊಯ್ದ ವಿಡಿಯೋ ನೋಡಿ
ಮೊದಲಿಗೆ ತಡರಾತ್ರಿ 2.18ಕ್ಕೆ ಕಾರೊಂದು ಪಾಸ್ ಆಗಿದೆ. ಅದಾಗಿ 48 ನಿಮಿಷದಲ್ಲೇ ಎಂಟಿಎಂ ಕಳ್ಳತನವಾಗಿದೆ. ಹೀಗಾಗಿ ಇದೇ ಕಾರಿನಲ್ಲಿ ಖದೀಮರು ಬಂದಿರುವ ಶಂಕೆ ವ್ಯಕ್ತವಾಗಿದೆ. ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ಇಲ್ಲದ್ದನ್ನ ಗಮನಿಸಿ ಎಟಿಎಂಗೆ ನುಗ್ಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಕಾರಿನ ನಂಬರ್ ಟ್ರೇಸ್ ಮಾಡುತ್ತಿದ್ದಾರೆ.
ಬೀದರ್‌ನಲ್ಲಿ ಹಾಡಹಗಲೇ ನಡೆದಿದ್ದ ಎಟಿಎಂ ದರೋಡೆ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲೂ ಎಂಟಿಎಂ ಕಳ್ಳತನವಾಗಿದೆ. ಇದಲ್ಲದೇ ಮಂಗಳೂರಿನ ಬ್ಯಾಂಕ್ ಅನ್ನು ಸಹ ದರೋಡೆ ಮಾಡಲಾಗಿತ್ತು. ಇದೀಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆದ್ರೆ, ಬೀದರ್ ಎಂಟಿಎಂ ಹಣ ದರೋಡೆಕೋರರು ಇದುವರೆಗೂ ಪತ್ತೆಯಾಗಿಲ್ಲ. ಇದರ ಬೆನ್ನಲ್ಲೇ ಕಲಬುರಗಿಯಲ್ಲೂ ಸಹ ಎಟಿಎಂ ಕಳ್ಳತನವಾಗಿದೆ. ಎಟಿಎಂ ಹಾಗೂ ಬ್ಯಾಂಕ್ಗಳನ್ನೇ ಟಾರ್ಗೆಟ್ ಮಾಡಿ ಈ ಕೃತ್ಯ ಎಸಗುತ್ತಿರುವುದು ನೋಡಿದ್ರೆ ಒಂದೇ ಗ್ಯಾಂಗ್ ಇರಬಹುದು ಎನ್ನಿಸುತ್ತಿದೆ. ಅದು ಉತ್ತರ ಭಾರತ ಗ್ಯಾಂಗ್ ಮೇಲೆಯೇ ಅನುಮಾನಗಳು ವ್ಯಕ್ತವಾಗುತ್ತಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Wed, 9 April 25