KUDA Golamal: ಕಲಬುರಗಿ ನಗರಾಭಿವೃದ್ಧಿ ಅಧಿಕಾರಿಯಿಂದಲೇ ಉದ್ಯಾನವನ ಜಾಗ ಅತಿಕ್ರಮಣ, ಅಕ್ರಮವಾಗಿ ಮನೆ ನಿರ್ಮಾಣ!?

Kalburgi Urban Development Authority Golamal: ನಂದಿಕೂರ್ ಗ್ರಾ.ಪಂ, ಕೂಡಾ ಮತ್ತು ಕಲಬುರಗಿ ಪಾಲಿಕೆ ಅಧಿಕಾರಿಗಳು ಮಾಡಿರುವ ಯಡವಟ್ಟಿನಿಂದ ಬಡಾವಣೆ ನಿವಾಸಿಗಳು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಒಟ್ನಲ್ಲಿ ಕಲಬುರಗಿ ಮಹಾನಗರದಲ್ಲಿ ಗಾರ್ಡನ್ ಜಾಗ ದಿನೆ ದಿನೆ ಅಕ್ರಮಕ್ಕೆ ಬಲಿಯಾಗುತ್ತಿದೆ. ಇನ್ನಾದ್ರು ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗ್ತಾರಾ ನೋಡಬೇಕು.

KUDA Golamal: ಕಲಬುರಗಿ ನಗರಾಭಿವೃದ್ಧಿ ಅಧಿಕಾರಿಯಿಂದಲೇ ಉದ್ಯಾನವನ ಜಾಗ ಅತಿಕ್ರಮಣ, ಅಕ್ರಮವಾಗಿ ಮನೆ ನಿರ್ಮಾಣ!?
ಕಲಬುರಗಿ ನಗರಾಭಿವೃದ್ಧಿ ಅಧಿಕಾರಿಯಿಂದಲೇ ಉದ್ಯಾನವನ ಜಾಗ ಅತಿಕ್ರಮಣ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಸಾಧು ಶ್ರೀನಾಥ್​

Updated on:Feb 20, 2024 | 7:17 PM

ಆ ಜಿಲ್ಲೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟಿರೋ ಜಾಗವನ್ನ ಕೂಡಾ ಭೂಗಳ್ಳರು ಬಿಡ್ತಿಲ್ಲ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ (Kalburgi Urban Development Authority) ಲೇಔಟ್ ನಲ್ಲಿನ ಗಾರ್ಡನ್ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ವಿಪರ್ಯಾಸವೆಂದ್ರೆ ಜಿಡಿಎ ಅಧಿಕಾರಿಯೇ ಗಾರ್ಡನ್ ಜಾಗ ಕಬಳಿಸಿರೋ ಗಂಭೀರ ಆರೋಪ ಕೇಳಿ ಬಂದಿದೆ. ಹೌದು. ಉದ್ಯಾನವನಕ್ಕೆ ಮೀಸಲಿಟ್ಟಿರುವ ಸ್ಥಳವದು, ಗಾರ್ಡನ್ ಜಾಗದಲ್ಲೇ ಅಕ್ರಮವಾಗಿ ತಲೆ ಎತ್ತಿರೋ ಮನೆಗಳು ಹೀಗೆ… ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ಯಾನವನ ಜಾಗಕ್ಕೆ ನಿರಂತರವಾಗಿ ಕನ್ನ ಬೀಳ್ತಿದೆ. ಕಲಬುರಗಿ ನಗರದ ವರ್ಧಾ ಲೇಔಟ್ ನಲ್ಲಿ ಮೀಸಲಿಟ್ಟಿರುವ ಉದ್ಯಾನವನ ಜಾಗ ಕಬಳಿಸಲಾಗಿದೆ. ಗಾರ್ಡನ್ ಜಾಗದಲ್ಲೇ ಅಕ್ರಮವಾಗಿ ಮನೆಗಳನ್ನ ನಿರ್ಮಿಸಲಾಗಿದೆ. ಉದ್ಯಾನವನ ಜಾಗದಲ್ಲಿ ನಾಲ್ಕು ಮನೆಗಳನ್ನ ಅಕ್ರಮವಾಗಿ ನಿರ್ಮಿಸಿ ಜನ ವಾಸ ಮಾಡ್ತಿದ್ದಾರೆ!

ಅಂದಹಾಗೆ 1990 ರಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕೂಡಾ) ದಿಂದ ಲೇಔಟ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆಯೇ ಕೂಡಾ ಲೇಔಟ್ ನಕಾಶೆ ಸಿದ್ದಪಡಿಸಿ, ಉದ್ಯಾನವನಕ್ಕೆ ಸ್ಥಳ ಮೀಸಲಿಟ್ಟಿತ್ತು. ಆದ್ರೆ ಗಾರ್ಡನ್ ಸ್ಥಳದಲ್ಲಿಯೇ ನಾಲ್ಕು ಮನೆಗಳು ತಲೆ ಎತ್ತಿವೆ. ವಿಪರ್ಯಾಸವೆಂದ್ರೆ ಕೂಡಾ ಪ್ರಾಧಿಕಾರದ ಎಇಇ ದೀಲಿಪ್ ಜಾಧವ್ ಮೇಲೆ ಗಾರ್ಡನ್ ಜಾಗ ಕಬಳಿಸಿರೋ ಆರೋಪ ಕೇಳಿ ಬಂದಿದೆ. ಆದ್ರೆ ಎಇಇ ಜಾಧವ್ ಮಾತ್ರ ನನಗೂ ಗಾರ್ಡನ್ ಜಾಗದಲ್ಲಿರುವ ಮನೆಗೂ ಸಂಬಂಧವೇ ಇಲ್ಲ, ಆ ಮನೆಯಲ್ಲಿ ನಾನು ಬಾಡಿಗೆಗೆ ಇದ್ದೇನೆ. ದುರುದ್ದೇಶದಿಂದ ನನ್ನ ಮೇಲೆ ಸುಳ್ಳು ದೂರು ನೀಡಲಾಗಿದೆ ಅಂತಾ ಆರೋಪ ತಳ್ಳಿ ಹಾಕಿದ್ದಾರೆ.

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಕಂದಾಯ ಇಲಾಖೆಯ ನೌಕರರ ಗೃಹ ನಿರ್ಮಾಣ ಸಂಘದಿಂದ ಲೇಔಟ್ ನಿರ್ಮಾಣ ಮಾಡಲಾಗಿದೆ. ನಂದಿಕೂರ್ ಗ್ರಾಮ ಪಂಚಾಯತಿ ಯಿಂದ ಲೇಔಟ್ ನಿರ್ಮಾಣ ಮಾಡಿ ಸೈಟ್ ಗಳನ್ನ ಮಾರಾಟ ಮಾಡಲಾಗಿದೆ. ಬಳಿಕ ೧೯೯೦ ರಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕೂಡಾ) ಲೇಔಟ್ ಗಾಗಿ ಅರ್ಜಿ ಸಲ್ಲಿಸಲಾಗಿದೆ.

ಕೂಡಾ ಪ್ರಕಾರ ಲೇಔಟ್ ನಕಾಶೆ ನಿರ್ಮಾಣ ಮಾಡಲಾಗಿದೆ. ಕೂಡಾ ದಿಂದ ಲೇಔಟ್ ಅಪ್ರೂವಲ್ ಸಿಗೋದಕ್ಕೂ ಮುನ್ನವೇ ಮತ್ತೊಮ್ಮೆ ನಂದಿಕೂರ್ ಗ್ರಾಮ ಪಂಚಾಯತಿ ಯಿಂದ ಮತ್ತೊಮ್ಮೆ ಲೇಔಟ್ ನಕಾಶೆ ಸೃಷ್ಟಿಸಲಾಗಿದೆ. ಸಧ್ಯ ಗಾರ್ಡನ್ ಗೆ ಮೀಸಲಿಟ್ಟಿರುವ ಜಾಗದಲ್ಲಿ ಅಕ್ರಮವಾಗಿ ನಾಲ್ಕು ಮನೆಗಳು ತಲೆ ಎತ್ತಿವೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನ ಕೇಳಿದ್ರೆ, ಕೂಡಾದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಅದನ್ನ ಸರಿಮಾಡುವ ಕೆಲಸ ಮಾಡೋದಾಗಿ ಹೇಳಿದ್ದಾರೆ.

Published On - 7:10 pm, Tue, 20 February 24

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!