Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ದನದ ಚರ್ಮ ಸಾಗಾಟ ಮಾಡುತ್ತಿದ್ದ ಲಾರಿ ಜಪ್ತಿ; 9 ಟನ್ ಗೋವು, ಎಮ್ಮೆ, ಕುರಿಗಳ ಚರ್ಮ ವಶ

ನಂದಿ ಎನಿಮಲ್ ವೆಲ್‌ಫೆರ್ ಸೊಸೈಟಿ ಅಧ್ಯಕ್ಷ ಕೇಶವ್‌ ಮೋಟಗಿ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಅಕ್ರಮವಾಗಿ ಸಾಗಿಸುತ್ತಿದ್ದ ದನದ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಲಾರಿ ಹಾಗೂ ಚಾಲಕ, ನಿರ್ವಾಹಕನನ್ನು‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಲಬುರಗಿ: ದನದ ಚರ್ಮ ಸಾಗಾಟ ಮಾಡುತ್ತಿದ್ದ ಲಾರಿ ಜಪ್ತಿ; 9 ಟನ್ ಗೋವು, ಎಮ್ಮೆ, ಕುರಿಗಳ ಚರ್ಮ ವಶ
ಅಕ್ರಮವಾಗಿ ಸಾಗಿಸುತ್ತಿದ್ದ ದನದ ಚರ್ಮ
Follow us
TV9 Web
| Updated By: preethi shettigar

Updated on:Oct 19, 2021 | 9:04 AM

ಕಲಬುರಗಿ: ದನದ ಚರ್ಮ ಸಾಗಾಟ ಮಾಡುತ್ತಿದ್ದ ಲಾರಿ ಜಪ್ತಿ ಮಾಡಿದ ಪೊಲೀಸರು 9 ಟನ್ ಗೋವು, ಎಮ್ಮೆ, ಕುರಿಗಳ ಚರ್ಮ ವಶಕ್ಕೆ ಪಡೆದಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಳಿ ಪೊಲೀಸರು ಲಾರಿ ಜಪ್ತಿ ಮಾಡಿದ್ದಾರೆ. ನರೋಣಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ನಂದಿ ಎನಿಮಲ್ ವೆಲ್‌ಫೆರ್ ಸೊಸೈಟಿ ಅಧ್ಯಕ್ಷ ಕೇಶವ್‌ ಮೋಟಗಿ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಅಕ್ರಮವಾಗಿ ಸಾಗಿಸುತ್ತಿದ್ದ ದನದ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಲಾರಿ ಹಾಗೂ ಚಾಲಕ, ನಿರ್ವಾಹಕನನ್ನು‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಹೊರಟಿದ್ದ ಲಾರಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಮಂಡ್ಯ: ಹಸು ಕಳ್ಳತನ ಆರೋಪ; ವ್ಯಕ್ತಿಯನ್ನು ಕಟ್ಟಿಹಾಕಿ ಮೆರವಣಿಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದುಗ್ಗನಹಳ್ಳಿಯಲ್ಲಿ ಹಸು ಕಳ್ಳತನ ಮಾಡುತ್ತಾರೆ ಎಂದು ಹಸು ಜತೆ ಸುರೇಶ್ ಎಂಬ ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿಹಾಕಿ ಮೆರವಣಿಗೆ ಮಾಡಿದ್ದಾರೆ. ದುಗ್ಗನಹಳ್ಳಿಯ ರಾಜು, ಆತನ ಸಹಚರರು ಸೇರಿ ಮೆರವಣಿಗೆ ಮಾಡಿಸಿದ್ದಾರೆ. ಹಸುವಿನ ಜೊತೆಯಲ್ಲಿ ಒಂದೂವರೆ ಕಿ.ಮೀ ದೂರ ಮೆರವಣಿಗೆ ನಡೆಸಿದ್ದು, ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ರಾಜುವಿನ ಬಳಿ ಕಳೆದ ಎರಡುವರೆ ತಿಂಗಳ ಹಿಂದೆ 44 ಸಾವಿರ ರೂ. ನೀಡಿ ಹಸು ಖರೀದಿಸಿದ್ದ ಸುರೇಶ್. ಈ ವೇಳೆ ರಾಜು ಈ ಹಸು 15 ರಿಂದ 20 ಲೀಟರ್ ಹಾಲು ನೀಡುತ್ತದೆ ಎಂದು ಹೇಳಿ ಸುರೇಶ್ ನನ್ನ ನಂಬಿಸಿದ್ದರು. ಆದರೆ ಆ ಹಸು 2 ರಿಂದ 3 ಲೀಟರ್​ ಅಷ್ಟೇ ಹಾಲು ನೀಡುತ್ತಿತ್ತು. ಈ ಬಗ್ಗೆ ರಾಜುವನ್ನು ಸುರೇಶ್ ಪ್ರಶ್ನಿಸಿದ್ದಾರೆ. ಆಗ ಮತ್ತೊಂದು ಬೇರೆ ಗರ್ಭಿಣಿ ಹಸು ನೀಡುವುದಾಗಿ ಹೇಳಿ ನಂಬಿಸಿ 14 ಸಾವಿರ ಹಣ ಪಡೆದು ಗರ್ಭಿಣಿ ಅಲ್ಲದ ಹಸು ಕೊಡಿಸಿದ್ದಾರೆ. ಇದರಿಂದ ಕಂಗಾಲಾದ ಸುರೇಶ್ ಮತ್ತೆ ರಾಜುವನ್ನು ಪ್ರಶ್ನಿಸಿದ್ದಾರೆ. ಆ ವೇಳೆ ಊರಿಗೆ ಮತ್ತೊಂದು ಹಸು ಕೊಡುವುದಾಗಿ ಕರೆಸಿದ್ದ ರಾಜು. ಅದರಂತೆ ಇದೇ ತಿಂಗಳ 12 ರಂದು ಊರಿಗೆ ಬಂದ ಸುರೇಶ್​ಗೆ ಮನೆ ಮುಂದೆ ಕಟ್ಟಿಹಾಕಿದ್ದ ಹಸುವನ್ನು ಹಿಡಿದುಕೊಂಡು ಬರುವಂತೆ ಹೇಳಲಾಗಿತ್ತು.

ರಾಜುವಿನ‌ ಸೂಚನೆಯಂತೆ ಆತನ ಮನೆ ಮುಂದೆ ಕಟ್ಟಿಹಾಕಿದ್ದ ಹಸುವನ್ನು ಹಿಡಿದುಕೊಂಡು ನಾಲೆ ಏರಿಯ ಮೇಲೆ ಸುರೇಶ್ ಹೊರಟಿದ್ದಾರೆ. ಈ ವೇಳೆ ಹಸು ಕಳ್ಳತನ‌ ಮಾಡ್ಕೊಂಡು ಹೋಗ್ತಿದ್ದಾನೆ ಎಂದು ಕತೆ ಕಟ್ಟಿದ್ದ ರಾಜು. ಜನರನ್ನು ನಂಬಿಸಿ ಸುರೇಶ್ ಕೈ- ಕಾಲು ಕಟ್ಟಿಹಾಕಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Duplicate Fertilizer: ಮಣ್ಣಿಗೆ ರೆಡ್ ಆಕ್ಸೈಡ್​ ಬಣ್ಣ ಬೆರೆಸಿ ನಕಲಿ ಗೊಬ್ಬರ ತಯಾರಿ – 85 ಮೂಟೆ ಜಪ್ತಿ

ಕೊಡಗು: ಮತಾಂತರಕ್ಕೆ ಯತ್ನಿಸಿದ್ದ ಆರೋಪದಲ್ಲಿ ದಿಡ್ಡಳ್ಳಿ ಹೋರಾಟಗಾರ್ತಿ ಮುತ್ತಮ್ಮ ಪೊಲೀಸರ ವಶಕ್ಕೆ

Published On - 8:39 am, Tue, 19 October 21

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ