ಕಲ್ಬುರ್ಗಿ: 545 ಪಿಎಸ್ಐ (PSI Recruitment) ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ನೂರಾರು ಕೋಟಿ ರೂಪಾಯಿ ಒಡತಿ ದಿವ್ಯಾ ಹಾಗರಗಿ ಅಕ್ಷರಶಃ ಏಕಾಂಗಿಯಾಗಿದ್ದಾರೆ. ಜಿಲ್ಲೆಯ ಎಲ್ಲಾ ರಾಜಕಾರಣಿಗಳಿಗೆ ಚಿರಪರಿಚಿತಳಾಗಿದ್ದ ದಿವ್ಯಾ ಹಾಗರಗಿ, ಬಂಧನದಿಂದ ತಪ್ಪಿಸಲು ತೆರೆಯ ಮರೆಯಲ್ಲಿ ಸಹಾಯ ಮಾಡಿದ್ದವರೀಗ ಗಪ್ ಚುಪ್ ಆಗಿದ್ದಾರೆ. ದಿವ್ಯಾ ಹಾಗರಗಿ ಆ್ಯಂಡ್ ಲೇಡಿ ಗ್ಯಾಂಗ್ ಬಂಧನವಾಗುತ್ತಿದ್ದಂತೆ ಪರಿಚಿತರೆಲ್ಲ ಸೈಲೆಂಟ್ ಆಗಿದ್ದು, ಕಡಕ್ ಸಿಐಡಿ ಅಧಿಕಾರಿಗಳ ತಂಡದಿಂದ ನಿನ್ನೆಯಿಂದ ವಿಚಾರಣೆ ಮಾಡಲಾಗುತ್ತಿದೆ. ದಿವ್ಯಾ ಹಾಗರಗಿಯನ್ನ ಕೋರ್ಟ್ ಮುಂದೆ ಹಾಜರು ಪಡಿಸಿ ಸಿಐಡಿ ಕಚೇರಿಗೆ ಕರೆತರುತ್ತಿದಂತೆ, ಸಿಐಡಿ ಕಚೇರಿಗೆ ದಿವ್ಯಾ ಹಾಗರಗಿ ಕುಟುಂಬಸ್ಥರು ಮಗ ಬಂದಿದ್ದು, ಸಿಐಡಿ ಟೀಂ ನೋಡಲು ಅವಕಾಶ ಕೊಟ್ಟಿಲ್ಲ. ದೂರದಿಂದಲೇ ಮಗನನ್ನ ಸಂಬಂಧಿಕರನ್ನ ನೋಡಿ ರೂಮ್ನೊಳಗಡೆ ಹೋಗಿದ್ದಾರೆ. ಪರಿಚಯಸ್ಥ ಶಾಸಕರು ಸಚಿವರು ನನಗೆ ಸಹಾಯ ಮಾಡುತ್ತಾರೆಂದುಕೊಂಡಿದ್ದ ದಿವ್ಯಾಗೆ ಶಾಕ್ ಆಗಿದೆ. ಸಿಐಡಿಯವರು ಕೆಳುವ ಪ್ರತಿ ಪ್ರಶ್ನೆಗೆ ಮೌನ್ ಇಲ್ಲವೇ ಗೊತ್ತಿಲ್ಲ ಎನ್ನುತ್ತಿದ್ದ ದಿವ್ಯಾ ಹಾಗರಗಿ ಆ್ಯಂಡ್ ಟೀಂ ಹೀಗಾಗಿ ದಾಖಲೆಗಳನ್ನ ಮುಂದಿಟ್ಟುಕೊಂಡು ದಾಖಲೆ ತೋರಿಸಿ ಸಿಐಡಿ ಟೀಂ ಪ್ರಶ್ನೆ ಕೇಳುತ್ತಿದೆ. ಸಿಐಡಿ ಅಧಿಕಾರಿಗಳ ಕಡಕ್ ಪ್ರಶ್ನೇಗಳಿಗೆ ಕುಳಿತಲ್ಲೆ ಲೇಡಿ ಕಿಂಗ್ ಪಿನ್ ಬೆವರುತ್ತಿದ್ದಾರೆ.
ಸಿಐಡಿ ವಶದಲ್ಲಿರುವ ಸುರೇಶ ಕಾಟೇಗಾಂವ್ ದರ್ಪದ ಮಾತುಗಳನ್ನಾಡಿದ್ದಾನೆ. ಸಿಐಡಿ ಕಸ್ಟಡಿಯಲ್ಲಿರುವ ಕಾಟೇಗಾಂವ್ ಕ್ಯಾಮರಾ ಕಂಡು ವಿಡಿಯೋ ಮಾಡ್ತೀಯಾ ಮಾಡ್ಕೋ ಮಾಡ್ಕೋ ಎಂದು ದರ್ಪದ ಮಾತಗಳನ್ನಾಡಿದ್ದಾನೆ. ಅಕ್ರಮದ ರುವಾರಿ ದಿವ್ಯಾ ಹಾಗರಗಿಗೆ ರಕ್ಷಣೆ ಕೊಟ್ಟು ಬಂಧಿತನಾಗಿರುವ ಮಹಾರಾಷ್ಟ್ರದ ಉದ್ಯಮಿ ಸುರೇಶ ಕಾಟೇಗಾಂವ್, ಪೊಲೀಸ್ ಭದ್ರತೆಯಲ್ಲಿ ಕಚೇರಿ ಹೊರಗಡೆ ಬಂದಿದ್ದ. ಆತನ ವಿಜುವಲ್ಸ್ ಸೆರೆಹಿಡಿಯಲು ಹೋದ ಕ್ಯಾಮರಾಮನ್ಗಳಿಗೆ ಕಾಟೇಗಾಂವ್ ಏಕವಚನದಲ್ಲಿ ಮಾತನಾಡಿದ್ದಾರೆ. ಅರೆಸ್ಟ್ ಆದ್ರೂ ಬುದ್ದಿ ಕಲಿಯದೇ ದರ್ಪದ ಮಾತನಾಡಿದ್ದಾರೆ ಎನ್ನಲ್ಲಾಗುತ್ತಿದೆ.
ಪೊಲೀಸರು ಬಂದಿದ್ದಾರೆಂದು ತಿಳಿದು ಸಾಕ್ಷ್ಯ ನಾಶಮಾಡಿದ ದಿವ್ಯಾ ಹಾಗರಗಿ
ನಿನ್ನೆ (ಏಪ್ರಿಲ್ 29) ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು (Divya Hagargi) ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ದಿವ್ಯಾ ಹಾಗರಗಿ ಬಂಧನಕ್ಕೆ ಒಳಗಾಗಿದ್ದರು. ಪೊಲೀಸರು ಬಂದಿದ್ದಾರೆಂದು ತಿಳಿದಾಗ ದಿವ್ಯಾ ಮೊಬೈಲ್ ಒಡೆದು ಹಾಕಿದ್ದರಂತೆ. ಈ ಮೂಲಕ ಮೊಬೈಲ್ನಲ್ಲಿರುವ ಸಾಕ್ಷ್ಯ ನಾಶಮಾಡಲು ಯತ್ನಿಸಿದ್ದಾರೆ. ಒಡೆದುಹಾಕಿದ್ದ ಮೊಬೈಲ್ನ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಐವರ ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ಮೊಬೈಲ್ನಲ್ಲಿ ಏನಾದ್ರೂ ಇದೆಯಾ ಎಂದು ತಪಾಸಣೆ ಮಾಡುತ್ತಿದ್ದಾರೆ. ಈ ವೇಳೆ 6 ಆರೋಪಿಗಳು ಮೊಬೈಲ್ನಲ್ಲಿರುವ ಡಾಟಾವನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಚೀನಾ ಮೂಲದ ಶಿಯೋಮಿ ಕಂಪನಿಯ 5,551.27 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.
Published On - 4:12 pm, Sat, 30 April 22