ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಕಿಂಗ್​ಪಿನ್ ರುದ್ರಗೌಡ ಪಾಟೀಲ್ ಸಹಚರ ಬಂಧನ

| Updated By: sandhya thejappa

Updated on: May 28, 2022 | 9:51 AM

ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಪ್ರಕಾಶ್ ಬಂಧಿತ ಆರೋಪಿ. ಪ್ರಕಾಶ್ ರುದ್ರಗೌಡ ಪಾಟೀಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಅಭ್ಯರ್ಥಿಗಳಿಗೆ ಬ್ಲೂಟೂತ್, ಎಲೆಕ್ಟ್ರಾನಿಕ್ ಡಿವೈಸ್ ನೀಡುವುದು ಮತ್ತು ಹಣ ಪಡೆಯುವ ಕೆಲಸ ಮಾಡುತ್ತಿದ್ದ.

ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಕಿಂಗ್​ಪಿನ್ ರುದ್ರಗೌಡ ಪಾಟೀಲ್ ಸಹಚರ ಬಂಧನ
ಸಿಐಡಿ ಅಧಿಕಾರಿಗಳು ಕಿಂಗ್ಪಿನ್ ರುದ್ರಗೌಡ ಪಾಟೀಲ್ ಸಹಚರ ಪ್ರಕಾಶ್​ನನ್ನು ಅರೆಸ್ಟ್ ಮಾಡಿದ್ದಾರೆ
Follow us on

ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ (PSI Recruitment Scam) ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣದಲ್ಲಿ ಈಗಾಗಲೇ ಹಲವರು ಬಂಧನಕ್ಕೆ ಒಳಗಾಗಿದ್ದಾರೆ. ಇನ್ನು ನಿನ್ನೆ (ಮೇ 27) ಪ್ರಕರಣದ ಕಿಂಗ್​ಪಿನ್​ ಆಗಿರುವ ರುದ್ರಗೌಡ ಪಾಟೀಲ್ ಸಹಚರನನ್ನು ಸಿಐಡಿ (CID) ಅಧಿಕಾರಿಗಳು ಬಂಧಿಸಿದ್ದಾರೆ. ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಪ್ರಕಾಶ್ ಬಂಧಿತ ಆರೋಪಿ. ಪ್ರಕಾಶ್ ರುದ್ರಗೌಡ ಪಾಟೀಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಅಭ್ಯರ್ಥಿಗಳಿಗೆ ಬ್ಲೂಟೂತ್, ಎಲೆಕ್ಟ್ರಾನಿಕ್ ಡಿವೈಸ್ ನೀಡುವುದು ಮತ್ತು ಹಣ ಪಡೆಯುವ ಕೆಲಸ ಮಾಡುತ್ತಿದ್ದ.

ಬೆಂಗಳೂರಿನಲ್ಲಿ ಇಂದು ಧರಣಿ:
ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಬಯಲಾದ ಬೆನ್ನಲ್ಲೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮರು ಪರೀಕ್ಷೆ ನಡೆಸುವುದಾಗಿ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಆದರೆ ಈ ನಿರ್ಧಾರವನ್ನು ವಿರೋಧಿಸಿ ಅಭ್ಯರ್ಥಿಗಳು ಈಗಾಗಲೇ ಪ್ರತಿಭಟನೆ ನಡೆಸಿದ್ದರು. ಇಂದು ಕೂಡಾ ಮರು ಪರೀಕ್ಷೆ ಆದೇಶ ರದ್ದುಗೊಳಿಸುವಂತೆ ಆಗ್ರಹಿಸಿ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಫ್ರೀಡಂಪಾರ್ಕ್​​ನಲ್ಲಿ ಧರಣಿ ನಡೆಸಲಿದ್ದಾರೆ.

ಇದನ್ನೂ ಓದಿ: Vijay Singla: ಭ್ರಷ್ಟಾಚಾರ ಪ್ರಕರಣ; ಪಂಜಾಬ್ ಮಾಜಿ ಸಚಿವ ವಿಜಯ್ ಸಿಂಗ್ಲಾಗೆ 14 ದಿನ ನ್ಯಾಯಾಂಗ ಬಂಧನ

ಇದನ್ನೂ ಓದಿ
Faf du Plessis: ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ರು ಗೊತ್ತೇ?
Vijay Singla: ಭ್ರಷ್ಟಾಚಾರ ಪ್ರಕರಣ; ಪಂಜಾಬ್ ಮಾಜಿ ಸಚಿವ ವಿಜಯ್ ಸಿಂಗ್ಲಾಗೆ 14 ದಿನ ನ್ಯಾಯಾಂಗ ಬಂಧನ
ಇಂದು ಹು-ಧಾ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ: ಮಧ್ಯಾಹ್ನ 1.30ಕ್ಕೆ ಕೈ ಎತ್ತುವ ಮೂಲಕ ಮೇಯರ್ ಆಯ್ಕೆ ಪ್ರಕ್ರಿಯೆ
‘RRR ಚಿತ್ರದಲ್ಲಿ ಇರೋದು ಸಲಿಂಗಕಾಮದ ಕಥೆ’: ಈ ರೀತಿ ಆರೋಪ ಮಾಡಿದ್ದು ಯಾರು?

ಕೆಲವರು ನಾಪತ್ತೆ:
ಪಿಎಸ್​ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರಿರುವ ಕೆಲವರು ನಾಪತ್ತೆಯಾಗಿದ್ದು, ನಾಪತ್ತೆಯಾದ ಅಭ್ಯರ್ಥಿಗಳಿಗಾಗಿ ಸಿಐಡಿ ಶೋಧ ಕಾರ್ಯ ಮುಂದುವರೆದಿದೆ. ಬಂಧಿತ ಕಿಂಗ್​ಪಿನ್​ಗಳು ಹಲವು ಅಭ್ಯರ್ಥಿಗಳ ಹೆಸರು ಹೇಳಿದ್ದರು. ಪರೀಕ್ಷಾ ಅಕ್ರಮಕ್ಕೆ ನೆರವು ನೀಡಿದ್ದಾಗಿ ಕಿಂಗ್​ಪಿನ್​ಗಳು ಹೇಳಿದ್ದರು. ಕಿಂಗ್​ಪಿನ್​ಗಳು ನೀಡಿರುವ ಮಾಹಿತಿ ಮೇರೆಗೆ ಪೊಲೀಸರು ಶೋಧ ಮಾಡಲಾಗುತ್ತಿದೆ. ಕಳೆದ 1 ತಿಂಗಳಿಂದ ಅಭ್ಯರ್ಥಿ ಶಾಂತಿಬಾಯಿ ನಾಪತ್ತೆಯಾಗಿದ್ದು, PSI ಪರೀಕ್ಷೆಯಲ್ಲಿ ಅಕ್ರಮವೆಸಗಿ ಶಾಂತಿಬಾಯಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 9:42 am, Sat, 28 May 22