ಆನ್​ಲೈನ್​ ಕ್ಲಾಸ್ ನಡೆಯುತ್ತಿದೆ ಡಿಸ್ಟರ್ಬ್ ಮಾಡ್ಬೇಡ ಅಮ್ಮ ಎಂದು ರೂಮಿನಲ್ಲಿ ನೇಣಿಗೆ ಶರಣಾದ ಪಿಯುಸಿ ವಿದ್ಯಾರ್ಥಿ

ವಿದ್ಯಾರ್ಥಿ ಆತ್ಮಹತ್ಯೆ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ವಿದ್ಯಾರ್ಥಿ ಅಂತ್ಯಸಂಸ್ಕಾರ ಈಗಾಗಲೆ ಮುಗಿದಿದ್ದು. ವಾಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆನ್​ಲೈನ್​ ಕ್ಲಾಸ್ ನಡೆಯುತ್ತಿದೆ ಡಿಸ್ಟರ್ಬ್ ಮಾಡ್ಬೇಡ ಅಮ್ಮ ಎಂದು ರೂಮಿನಲ್ಲಿ ನೇಣಿಗೆ ಶರಣಾದ ಪಿಯುಸಿ ವಿದ್ಯಾರ್ಥಿ
ಗುರುಚರಣ್ ಉಡುಪಾ(17)
Edited By:

Updated on: Aug 18, 2021 | 12:05 PM

ಕಲಬುರಗಿ: ಆನ್​ಲೈನ್​ ಕ್ಲಾಸ್ ನಡೆಯುತ್ತಿದೆ ತೊಂದರೆ ಮಾಡಬೇಡ ಅಮ್ಮ ಎಂದು ರೂಮ್​ಗೆ ಹೋದ ವಿದ್ಯಾರ್ಥಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಎರಡು ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್ ನಿವಾಸಿ ಗುರುಚರಣ್ ಉಡುಪಾ(17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಗುರುಚರಣ್ ಉಡುಪಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ಓದುತ್ತಿದ್ದ. ಕಳೆದ ಮಂಗಳವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಆನ್​ಲೈನ್​ ಕ್ಲಾಸ್​ ಎಂದು ಮನೆಯ ಕೋಣೆಗೆ ಹೋಗಿದ್ದ ವಿದ್ಯಾರ್ಥಿ ರೂಮ್ ಲಾಕ್ ಮಾಡಿಕೊಂಡಿದ್ದಾನೆ.

ಎರಡು ಗಂಟೆಯಾದರೂ ಮಗ ಹೊರಬರದ ಕಾರಣ ಪೋಷಕರು ಬಾಗಿಲು ಬಡಿದಿದ್ದಾರೆ. ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ಗಾಬರಿಗೊಂಡ ಪೋಷಕರು ಬಾಗಿಲನ್ನು ಮುರಿದು ನೋಡಿದ್ದಾರೆ. ಈ ವೇಳೆ ಬಾಲಕ ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ.

ಸದ್ಯ ವಿದ್ಯಾರ್ಥಿ ಆತ್ಮಹತ್ಯೆ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ವಿದ್ಯಾರ್ಥಿ ಅಂತ್ಯಸಂಸ್ಕಾರ ಈಗಾಗಲೆ ಮುಗಿದಿದ್ದು. ವಾಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಈ ಬಗ್ಗೆ ಪಾಲಕರು ಠಾಣೆಗೆ ಯಾವುದೇ ದೂರು  ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:
ಮಂಗಳೂರು ದಂಪತಿ ಆತ್ಮಹತ್ಯೆಗೆ ಮೇಜರ್ ಟ್ವಿಸ್ಟ್; ಕೊವಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ರಿಪೋರ್ಟ್

ಅತ್ತಿಬೆಲೆಯಲ್ಲಿ ಅಪ್ಪ, ಇಬ್ಬರು ಹೆಣ್ಣು ಮಕ್ಕಳು ನೇಣಿಗೆ ಶರಣು; ತಿಂಗಳ ಹಿಂದೆ ಕೊರೊನಾದಿಂದ ಪತ್ನಿ ಸಾವು

Published On - 12:04 pm, Wed, 18 August 21

Web contact

TV9 Kannada

Read More
Follow Us