PWD JE ಪರೀಕ್ಷೆಯಲ್ಲಿ ಅಕ್ರಮ ವಿಚಾರ; ವಿಡಿಯೋ ಸಮೇತ ಸಾಕ್ಷಿ ಸಿಕ್ಕರೂ ತನಿಖೆಗೆ ಮುಂದಾಗದ ಸರ್ಕಾರ
ಅವಧಿಗೂ ಮೊದಲೇ ಜೆಇ ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತು. ಹೀಗಾಗಿ ವಿಡಿಯೋದಲ್ಲಿರುವ ವ್ಯಕ್ತಿ ಪರೀಕ್ಷೆ ಅಭ್ಯರ್ಥಿಗಳಿಗೆ ಉತ್ತರ ಹೇಳಿಕೊಡುತ್ತಿದ್ದ. ಇಷ್ಟೆಲ್ಲಾ ಸಾಕ್ಷಿ ಇದ್ದರೂ ಈವರೆಗೂ ಸರ್ಕಾರ ತನಿಖೆಗೆ ವಹಿಸಿಲ್ಲ.
ಕಲಬುರಗಿ: ಲೋಕೋಪಯೋಗಿ ಇಲಾಖೆಯ ಜೆಇ (PWD JE) ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ನಿನ್ನೆ ವಿಡಿಯೋ ಸಮೇತ ಬಯಲಾಗಿದೆ. ವಿಡಿಯೋ ಸಮೇತ ಸಾಕ್ಷಿ ಸಿಕ್ಕರೂ ಸರ್ಕಾರ (Government) ಮಾತ್ರ ತನಿಖೆಗೆ ಮುಂದಾಗಿಲ್ಲ. KPSC ಹಗರಣಗಳು ಹೊರಬಂದರೆ ಅನೇಕರಿಗೆ ಕಂಟಕ ಎದುರಾಗುವ ಸಾಧ್ಯತೆಯಿದ್ದು, ಸರ್ಕಾರದ ಮೇಲೆ ಪ್ರಭಾವಿಗಳು ಒತ್ತಡ ಹಾಕುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕಳೆದ ಡಿಸೆಂಬರ್ 13ರಂದು PWD ಇಲಾಖೆಯ ಜೆಇ ಪರೀಕ್ಷೆ ನಡೆದಿತ್ತು. ಪರೀಕ್ಷೆ ಅಭ್ಯರ್ಥಿಗಳಿಗೆ ವ್ಯಕ್ತಿ ಲಾಡ್ಜ್ನಲ್ಲಿ ಕುಳಿತು ಉತ್ತರ ಹೇಳಿಕೊಡುತ್ತಿದ್ದ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅವಧಿಗೂ ಮೊದಲೇ ಜೆಇ ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತು. ಹೀಗಾಗಿ ವಿಡಿಯೋದಲ್ಲಿರುವ ವ್ಯಕ್ತಿ ಪರೀಕ್ಷೆ ಅಭ್ಯರ್ಥಿಗಳಿಗೆ ಉತ್ತರ ಹೇಳಿಕೊಡುತ್ತಿದ್ದ. ಇಷ್ಟೆಲ್ಲಾ ಸಾಕ್ಷಿ ಇದ್ದರೂ ಈವರೆಗೂ ಸರ್ಕಾರ ತನಿಖೆಗೆ ವಹಿಸಿಲ್ಲ.
ಪರೀಕ್ಷೆ ವೇಳೆ ಸಿಕ್ಕಿ ಬಿದ್ದಿದ್ದ ಅಭ್ಯರ್ಥಿ: ಇನ್ನು ಬೆಂಗಳೂರಿನ ಸೇಂಟ್ ಜಾನ್ಸ್ ಪ್ರೌಢಶಾಲೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ ಕಲಬುರಗಿ ಜಿಲ್ಲೆಯ ಅಫಜಲಪುರ ನಿವಾಸಿ ವೀರಣ್ಣ ಎನ್ನುವ ಅಭ್ಯರ್ಥಿ ಪರೀಕ್ಷೆ ಬರೆಯಲು ಹೋಗಿದ್ದ. ಆದರೆ ಪರೀಕ್ಷೆ ಬರೆಯಲು ಹೋದಾಗ ವೀರಣ್ಣ ಸಿಕ್ಕಿಬಿದ್ದಿದ್ದ. ವೀರಣ್ಣ ರುದ್ರಗೌಡ ಪಾಟೀಲ್ ಮತ್ತು ಮಂಜುನಾಥ ಮೇಳಕುಂದಿ ತಂಡದ ಜೊತೆ ಡೀಲ್ ಮಾಡಿದ್ದ. ಎಲೆಕ್ಟ್ರಾನಿಕ್ ಡಿವೈಸ್ ಆನ್ ಮಾಡಲು ಹೋಗಿ ಪರೀಕ್ಷಾ ಮೇಲ್ವಿಚಾರಕರ ಬಳಿ ಸಿಕ್ಕಿ ಬಿದ್ದಿದ್ದ. ಆಗ ಶಾಲೆ ಸಿಬ್ಬಂದಿ ವೀರಣ್ಣ ಮೇಲೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ರುದ್ರಗೌಡ ಪಾಟೀಲ್ ಮತ್ತು ನೀರಾವರಿ ಇಲಾಖೆ ಇಂಜನೀಯರ್ ಮಂಜುನಾಥ ಮೇಳಕುಂದಿ ಅವರನ್ನು ವಿಚಾರಣೆ ಮಾಡಿದ್ದರು. ಈ ಪ್ರಕರಣದಲ್ಲಿ ಮಂಜುನಾಥ ಮೇಳಕುಂದಿ ಬಂಧಿತನಾಗಿದ್ದ. ಆದರೆ ನಂತರ ಪೊಲೀಸರು ಚಾರ್ಜ್ಶೀಟ್ನಲ್ಲಿ ಆತನ ಹೆಸರು ಕೈಬಿಟ್ಟಿದ್ದರು. ಮಂಜುನಾಥ ಮೇಳಕುಂದಿ, ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಕೂಡಾ ಆರೋಪಿಯಾಗಿದ್ದಾನೆ. ಕಳೆದ ಹದಿನೈದು ದಿನಗಳಿಂದ ಈತ ನಾಪತ್ತೆಯಾಗಿದ್ದಾನೆ.
ಇದನ್ನೂ ಓದಿ
Adani Power: ಅದಾನಿ ಸಮೂಹದಲ್ಲಿ 1 ಲಕ್ಷ ಕೋಟಿ ರೂ. ಬಂಡವಾಳ ಮೌಲ್ಯ ದಾಟಿದ ಆರನೇ ಸಂಸ್ಥೆ ಅದಾನಿ ಪವರ್
‘ಡಾ. ರಾಜ್ಕುಮಾರ್ ಬಗ್ಗೆ ಅವರ ತಂದೆ ನುಡಿದಿದ್ರು ಭವಿಷ್ಯ’: ಅಚ್ಚರಿಯ ಘಟನೆ ಮೆಲುಕು ಹಾಕಿದ ರಾಘಣ್ಣ
Published On - 11:23 am, Mon, 25 April 22