ಮನೆಯವರು ಬೇಡವೆಂದರೂ ಆ ವಿದ್ಯಾರ್ಥಿ ಕಲಬುರಗಿ ಪ್ರವಾಸಕ್ಕೆ ಬಂದು ಕ್ವಾರಿ ನೀರಲ್ಲಿ ಮುಳುಗಿ ಸತ್ತ, ಕುಟುಂಬ ಕಂಗಾಲು
ಶಾಲೆಗೆ ಹೋಗಿ, ಪಿಕ್ ನಿಕ್ ಬೇಡಾ ಅಂತ ಹೇಳಿದ್ದರು. ಆದ್ರು ಕೂಡಾ ಹೆತ್ತವರ ಮಾತು ಕೇಳದ ಐವರು ಶಾಲಾ ಬಾಲಕರು, ಮಂಗಳವಾರ ಮುಂಜಾನೆ ಬೀದರ್ ನಿಂದ ರೈಲು ಹತ್ತಿ, 10 ಗಂಟೆ ಸಮಯದಲ್ಲಿ ಕಲಬುರಗಿ ನಗರಕ್ಕೆ ಬಂದಿದ್ದರು.

ಆ ವಿದ್ಯಾರ್ಥಿಗಳು (Students) ಸಂಭ್ರಮಪಟ್ಟು ಬೀದರ್ (Bidar) ನಗರದಿಂದ ಕಲಬುರಗಿಗೆ (kalaburagi) ಪಿಕ್ ನಿಕ್ ಗೆ ಅಂತ ಬಂದಿದ್ದರು. ಮನೆಯಲ್ಲಿ ಹೆತ್ತವರು ಪಿಕ್ ನಿಕ್ ಬೇಡಾ, ಶಾಲೆಗೆ ಹೋಗಿ ಅಂತ ಬುದ್ದಿ ಮಾತು ಹೇಳಿದರೂ ಕೂಡಾ, ಯಾರ ಮಾತನ್ನೂ ಕೇಳದೆ, ಪಿಕ್ ನಿಕ್ ಗೆ ಬಂದಿದ್ದರು. ಆದ್ರೆ ಪಿಕ್ ನಿಕ್ ಗೆ ಬಂದವರು, ಪ್ರವಾಸಿ ಸ್ಥಳಗಳನ್ನು ನೋಡಲು ಹೋಗುವುದನ್ನು ಬಿಟ್ಟು, ಕಲ್ಲಿನ ಕ್ವಾರಿ (stone quarry) ನೀರಲ್ಲಿ ಈಜಲು ಹೋಗಿದ್ದರು. ಹೀಗೆ ಈಜಲು ಹೋದ ಓರ್ವ ವಿದ್ಯಾರ್ಥಿ ಬಾರದ ಲೋಕಕ್ಕೆ ಹೋಗಿದ್ದಾನೆ (death). ಇದೀಗ ಮಗನನ್ನು ಕಳೆದುಕೊಂಡು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ.
ಕಲ್ಲು ಕಣಿಯ ಸುತ್ತಮುತ್ತ ಸೇರಿರೋ ನೂರಾರು ಜನರು. ಒಂದೆಡೆ ಅನೇಕರು ಆಕ್ರಂದನ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದಡೆ ಕೆಲವರು ನೀರಲ್ಲಿ ಇಳಿದು ಹುಡುಕಾಟ ನಡೆಸಿದ್ದರು. ಮಂಗಳವಾರದಿಂದ ನಿರಂತರವಾಗಿ ಹುಡುಕಾಟ ನಡೆಸಿದ್ದ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು, ನೀರಲ್ಲಿ ಮುಳುಗಿದ್ದ ಶಾಲಾ ಬಾಲಕನ ಶವವನ್ನು ಬುಧವಾರದ ವೇಳೆಗೆ ಹೊರತಗೆಯುವಲ್ಲಿ ಯಶಸ್ವಿಯಾಗಿದ್ದರು. ಇಂತಹ ದೃಶ್ಯಗಳು ಕಂಡುಬಂದಿದ್ದು ಕಲಬುರಗಿ ನಗರದ ಹೊರವಲದಲ್ಲಿರುವ ರಾಮತೀರ್ಥ ಪ್ರದೇಶದಲ್ಲಿನ ಕಲ್ಲಿನ ಕ್ವಾರಿಯಲ್ಲಿ.
ಹೌದು ಬೀದರ್ ನಗರದ ಆಶೀಶ್ ಗುಪ್ತಾ ಸೇರಿದಂತೆ ಐವರು ವಿದ್ಯಾರ್ಥಿಗಳು ಮಂಗಳವಾರ ಮುಂಜಾನೆ ಬೀದರ್ ನಗರದಿಂದ ಕಲಬುರಗಿಗೆ ರೈಲು ಮೂಲಕ ಪಿಕ್ ನಿಕ್ ಗೆ ಅಂತ ಬಂದಿದ್ದರು. ಕಲಬುರಗಿ ನಗರದಲ್ಲಿರುವ ಬುದ್ದ ಮಂದಿರ ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳು ಇವೆ. ಅವುಗಳನ್ನು ನೋಡಿಕೊಂಡು ಮತ್ತೆ ಸಂಜೆ ಬರ್ತೇವೆ ಅಂತ ಹೇಳಿದ್ದರು. ಮನೆಯಲ್ಲಿ ಪಿಕ್ ನಿಕ್ ಗಾಗಿ ಕಲಬುರಗಿಗೆ ಹೋಗ್ತಾಯಿದ್ದೇವೆ ಅಂತ ಸ್ನೇಹಿತರು ಹೇಳಿದಾಗ, ಹೆತ್ತವರು ಬೈದಿದ್ದರು.
ಶಾಲೆಗೆ ಹೋಗಿ, ಪಿಕ್ ನಿಕ್ ಬೇಡಾ ಅಂತ ಹೇಳಿದ್ದರು. ಆದ್ರು ಕೂಡಾ ಹೆತ್ತವರ ಮಾತು ಕೇಳದ ಐವರು ಶಾಲಾ ಬಾಲಕರು, ಮಂಗಳವಾರ ಮುಂಜಾನೆ ಬೀದರ್ ನಿಂದ ರೈಲು ಹತ್ತಿ, 10 ಗಂಟೆ ಸಮಯದಲ್ಲಿ ಕಲಬುರಗಿ ನಗರಕ್ಕೆ ಬಂದಿದ್ದರು. ಹೀಗೆ ಬಂದವರು, ಕಲಬುರಗಿ ನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ, ಅಲ್ಲಿದ್ದ ಇನ್ನಿಬ್ಬರು ಸ್ನೇಹಿತರನ್ನು ಕರೆದುಕೊಂಡು, ಕಲಬುರಗಿ ನಗರದ ರಾಮತೀರ್ಥ ದೇವಸ್ಥಾನದ ಹಿಂಭಾಗದಲ್ಲಿರುವ ಕಲ್ಲಿನ ಕ್ವಾರಿಗೆ ಹೋಗಿದ್ದರು.
ಕಲ್ಲಿನ ಕ್ವಾರಿಯಲ್ಲಿ ಸಾಕಷ್ಟು ನೀರು ಇದ್ದು, ಅಲ್ಲಿ ಈಜಲು ಹೋಗಿದ್ದರು. ಹೀಗೆ ಈಜಲು ಹೋದಾಗ, ಆಶೀಶ್ ಗುಪ್ತಾ ಅನ್ನೋ 14 ವರ್ಷದ ಬಾಲಕ, ನೀರಲ್ಲಿ ಮುಳುಗಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು ಉಳಿದ ಸ್ನೇಹಿತರು ಮುಂದಾಗಿದ್ದಾರೆ. ಸ್ಥಳೀಯರು ಕೂಡಾ ಪ್ರಯತ್ನಿಸಿದ್ದಾರೆ. ಆದ್ರೆ ನೀರಿನ ಮಧ್ಯದಲ್ಲಿದ್ದ ಆಶೀಶ್ ಗುಪ್ತಾ, ನೀರಲ್ಲಿ ಮುಳುಗಿದ್ದ. ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ಮಾಹಿತಿ ತಿಳಿದ ನಂತರ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಆಗಮಿಸಿ, ಆಶೀಶ್ ಗಾಗಿ ಹುಡುಕಾಟ ನಡೆಸಿದ್ದರು. ಆದ್ರೆ ಆತ ಬುಧವಾರ ಮಧ್ಯಾಹ್ನ ಶವವಾಗಿ ಪತ್ತೆಯಾಗಿದ್ದಾನೆ.
ಆಶೀಶ್, ಬೀದರ್ ನಗರದ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದನಂತೆ. ಇನ್ನುಳಿದ ಸ್ನೇಹಿತರು ಕೂಡಾ ಬೇರೆ ಬೇರೆ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದರಂತೆ. ಆದ್ರೆ ಕಲಬುರಗಿ ನಗರದಲ್ಲಿರುವ ಬುದ್ದ ಮಂದಿರ ನೋಡಬೇಕು ಅಂತ ಆಸೆ ಪಟ್ಟು, ಬೀದರ್ ನಿಂದ ಹೊರಟಿದ್ದ ಸ್ನೇಹಿತರು, ಬುದ್ದ ಮಂದಿರಕ್ಕೆ ಹೋಗುವ ಮುನ್ನವೇ, ಕಲ್ಲಿನ ಕ್ವಾರಿಯಲ್ಲಿನ ನೀರಿಗೆ ಇಳದಿದ್ದರಿಂದ, ಆಶೀಶ್ ಗುಪ್ತಾ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಇನ್ನು ಕಲಬುರಗಿ ಸುತ್ತಮುತ್ತ ಸಾಕಷ್ಟು ಕಲ್ಲಿನ ಕ್ವಾರಿಗಳಿದ್ದು, ಅವುಗಳಲ್ಲಿ ಸಾಕಷ್ಟು ನೀರು ತುಂಬಿದೆ. ಕಲ್ಲು ತಗೆದ ಮೇಲೆ, ಮಾಲೀಕರು ಅವುಗಳನ್ನು ಮುಚ್ಚದೇ ಹಾಗೆ ಬಿಟ್ಟಿದ್ದರಿಂದ, ಅನೇಕ ಕಡೆ ನೀರು ಸಂಗ್ರಹವಾಗಿದ್ದು, ಈ ನೀರಲ್ಲಿ ಈಜಲು ಹೋಗಿ, ಅನೇಕ ಮಕ್ಕಳು ಬಾರದ ಲೋಕಕ್ಕೆ ಹೋಗುತ್ತಿದ್ದಾರೆ.
ಸದ್ಯ ಆಶೀಶ್ ಗುಪ್ತಾ ಸಾವಿನ ಸಂಬಂಧ, ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು, ಆಕಸ್ಮಿಕವಾಗಿ ಈಜು ಬಾರದ ವಿದ್ಯಾರ್ಥಿ ಮೃತಪಟ್ಟಿರುವುದಾ ಅಥವಾ ಬೇರೆ ಏನಾದರೂ ಕಾರಣಗಳು ಕೂಡಾ ಇವೆಯಾ ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ವರದಿ: ಸಂಜಯ್, ಟಿವಿ 9, ಕಲಬುರಗಿ