
ಕಲಬುರಗಿ, ಜೂನ್ 25: ಕಲಬುರಗಿ (Kalaburagi) ಹೊರವಲಯದ ಪಟ್ನಾ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ಮೂವರನ್ನು ಬರ್ಬರವಾಗಿ ಹತ್ಯೆ (Murder) ಮಾಡಲಾಗಿದೆ. ಕೊಲೆಯಾದವರನ್ನು ಸಿದ್ಧಾರೂಢ (32), ಜಗದೀಶ್ (25), ರಾಮಚಂದ್ರ (35) ಎಂದು ಗುರುತಿಸಲಾಗಿದೆ. ಹತ್ಯೆಯಾದವರು ಸಂಬಂಧಿಕರಾಗಿದ್ದಾರೆ. ತಡರಾತ್ರಿ 1.30 ರ ಸುಮಾರಿಗೆ ಡ್ರೈವರ್ ಡಾಬಾಗೆ ನುಗ್ಗಿದ ಹಂತಕರು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹಳೆಯ ದ್ವೇಷದ ಕಾರಣ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಲಬುರಗಿ ಸಬ್ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಮಾಡಿದ ಬಳಿಕ ಹಂತಕರು ಡಾಬಾದಲ್ಲಿನ ಸಿಸಿಟಿವಿಯ ಹಾರ್ಡ್ ಡಿಸ್ಕ್ ಕದ್ದೊಯ್ದಿರುವುದು ತಿಳಿದುಬಂದಿದೆ. ಸಿಸಿಟಿವಿಯಲ್ಲಿ ಹಂತಕರ ಸಂಪೂರ್ಣ ಚಲನವಲನ ರೇಕಾರ್ಡ್ ಆಗಿತ್ತು. ಹೀಗಾಗಿ ಸಾಕ್ಷ್ಯ ಸಿಗಬಾರದು ಎಂದು ಸಿಸಿಟಿವಿಯ ಹಾರ್ಡ್ ಡಿಸ್ಕ್ ಅನ್ನೇ ಕದ್ದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ, ಘಟನೆ ನಡೆದ ಸ್ಥಳದ ಅಕ್ಕ ಪಕ್ಕದಲ್ಲಿರುವ ಸಿಸಿಟಿವಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಲಬುರಗಿ ಹೊರವಲಯದ ಪಟ್ನಾ ಬಳಿ ನಡೆದ ತ್ರಿವಳಿ ಕೊಲೆ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈರಣ್ಣ ತಾಳಕೋಟಿ, ರಾಚಣ್ಣ ಸೇರಿ 7 ಆರೋಪಿಗಳನ್ನು ಕಲಬುರಗಿಯ ಸಬ್ಅರ್ಬನ್ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪರಿಂದಲೂ ವಿಚಾರಣೆ ನಡೆದಿದೆ.
ಇದನ್ನೂ ಓದಿ: ಗಂಡನನ್ನು ಕೊಲ್ಲುವುದು ಹೇಗೆಂದು ಯೂಟ್ಯೂಬ್ನಲ್ಲಿ ಹುಡುಕಾಟ; ಕೊನೆಗೆ ಪತ್ನಿ ಆಯ್ಕೆ ಮಾಡಿಕೊಂಡ ವಿಧಾನವಿದು!
Published On - 7:12 am, Wed, 25 June 25