AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಾಂತ್ಯ ಕರ್ಫ್ಯೂ; ಗುಲಬರ್ಗಾ ವಿಶ್ವವಿದ್ಯಾಲಯದ ವಾರಾಂತ್ಯ ನಡೆಯಬೇಕಿದ್ದ ಪರೀಕ್ಷೆಗಳು ರದ್ದು

ರದ್ದುಗೊಂಡ ವಾರಾಂತ್ಯ ಪರೀಕ್ಷೆಯ ದಿನಾಂಕಗಳನ್ನು ಆಗಸ್ಟ್ 27 ರ ನಂತರ ವಿಶ್ವವಿದ್ಯಾಲಯ ಪ್ರಕಟಿಸಲಿದೆ.

ವಾರಾಂತ್ಯ ಕರ್ಫ್ಯೂ; ಗುಲಬರ್ಗಾ ವಿಶ್ವವಿದ್ಯಾಲಯದ ವಾರಾಂತ್ಯ ನಡೆಯಬೇಕಿದ್ದ ಪರೀಕ್ಷೆಗಳು ರದ್ದು
ಕಲಬುರಗಿ ವಿಶ್ವವಿದ್ಯಾಲಯ
TV9 Web
| Updated By: guruganesh bhat|

Updated on:Aug 06, 2021 | 9:25 PM

Share

ಕಲಬುರಗಿ: ಕೊರೊನಾ ನಿಯಂತ್ರಣಕ್ಕಾಗಿ ಗಡಿ ಜಿಲ್ಲೆಗಳಲ್ಲಿ ಇಂದಿನಿಂದಲೇ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿರುವ ಕಾರಣ ಗುಲಬರ್ಗಾ ವಿಶ್ವವಿದ್ಯಾಲಯದ ವಾರಾಂತ್ಯಗಳಂದು ನಡೆಯಲಿದ್ದ ಪದವಿಯ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ವಾರಾಂತ್ಯ ಕರ್ಫ್ಯೂ ಇರುವ ಕಾರಣ ಆಗಸ್ಟ್ 7 ಮತ್ತು 8 ಜೊತೆಗೆ 14 ರಂದು ನಡೆಯುವ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, ಪರೀಕ್ಷೆ ರದ್ದು ಮಾಡಿ ಗುಲಬರ್ಗಾ ವಿವಿ ಮೌಲ್ಯಮಾಪನ ಕುಲಸಚಿವ ಸೋನಾರ್ ನಂದಪ್ಪ ಆದೇಶ ಪ್ರಕಟಿಸಿದ್ದಾರೆ. ರದ್ದುಗೊಂಡ ವಾರಾಂತ್ಯ ಪರೀಕ್ಷೆಯ ದಿನಾಂಕಗಳನ್ನು ಆಗಸ್ಟ್ 27 ರ ನಂತರ ವಿಶ್ವವಿದ್ಯಾಲಯ ಪ್ರಕಟಿಸಲಿದೆ.

ಕೊರೊನಾ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕರ್ನಾಟಕ ಸರ್ಕಾರ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಇಂದು (ಆಗಸ್ಟ್ 6) ಮಧ್ಯಾಹ್ನ ಆದೇಶ ಹೊರಡಿಸಿದ್ದಾರೆ. ಇದೀಗ ರಾತ್ರಿ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಗೈಡ್‌ಲೈನ್ಸ್‌ ಪ್ರಕಟವಾಗಿದೆ. ಆಗಸ್ಟ್ 16ರವರೆಗೂ ಹೊಸ ಮಾರ್ಗಸೂಚಿ ಅನ್ವಯ ಆಗಲಿದೆ. ರಾತ್ರಿ 9 ಗಂಟೆಯಿಂದ ಮುಂಜಾನೆ 5ರವರೆಗೆ ನೈಟ್ ಕರ್ಫ್ಯೂ ಇರಲಿದೆ. ಮಹಾರಾಷ್ಟ್ರ, ಕೇರಳ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಇರಲಿದೆ. ರಾಜ್ಯಾದ್ಯಂತ ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿ ಆಗಲಿದೆ.

ಕೇರಳ ಗಡಿ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಇರಲಿದೆ. ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಇರಲಿದೆ. ರಾಜ್ಯದಲ್ಲಿ ರಾತ್ರಿ 9ರಿಂದ ಮುಂಜಾನೆ 5 ಗಂಟೆ ವರೆಗೆ ನೈಟ್ ಕರ್ಫ್ಯೂ ಜಾರಿ ಆಗಲಿದೆ. ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: 

Sigandur Chowdeshwari Temple: ವೀಕೆಂಡ್‌ನಲ್ಲಿ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಭೇಟಿ ನೀಡಿದ್ರೆ ಸಿಗೊಲ್ಲ ತಾಯಿಯ ದರ್ಶನ

(Weekend curfew Gulbarga University canceled exams to be held over the weekend)

Published On - 8:55 pm, Fri, 6 August 21