AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸುರೇಶ್ ಕುಮಾರ್ ಒಬ್ಬ ಸ್ಯಾಡಿಸ್ಟ್.. ಖಾಸಗಿ ಶಾಲೆಗಳಿಗೆ ತೊಂದರೆ ನೀಡಬೇಕೆಂಬ ಸ್ಯಾಡಿಸ್ಟ್ ಮನೋಭಾವನೆ ಹೊಂದಿದ್ದಾರೆ’

ಶಿಕ್ಷಣ ಸಚಿವ ಸುರೇಶ್ ಕುಮಾರ್ ಒಬ್ಬ ಸ್ಯಾಡಿಸ್ಟ್​ ಎಂದು ಕ್ಯಾಮ್ಸ್ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

‘ಸುರೇಶ್ ಕುಮಾರ್ ಒಬ್ಬ ಸ್ಯಾಡಿಸ್ಟ್.. ಖಾಸಗಿ ಶಾಲೆಗಳಿಗೆ ತೊಂದರೆ ನೀಡಬೇಕೆಂಬ ಸ್ಯಾಡಿಸ್ಟ್ ಮನೋಭಾವನೆ ಹೊಂದಿದ್ದಾರೆ’
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ (ಎಡ); ಶಿಕ್ಷಣ ಸಚಿವ ಸುರೇಶ್ ಕುಮಾರ್ (ಬಲ)
KUSHAL V
|

Updated on: Dec 26, 2020 | 1:24 PM

Share

ಹಾಸನ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಒಬ್ಬ ಸ್ಯಾಡಿಸ್ಟ್​ ಎಂದು ಕ್ಯಾಮ್ಸ್ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಖಾಸಗಿ ಶಾಲೆಗಳಿಗೆ RTE ಶುಲ್ಕ ಪಾವತಿಸಲಾಗಿದೆ ಎಂದಿದ್ದರು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ಅಪ್ಪಟ ಸುಳ್ಳು. ಎರಡು ವರ್ಷಗಳಿಂದ ಯಾವುದೇ RTE ಶುಲ್ಕ ಪಾವತಿಸಿಲ್ಲ. ಸಚಿವರ ಗೊಂದಲದ ಹೇಳಿಕೆಗಳಿಂದ ಸಮಸ್ಯೆ ಸೃಷ್ಟಿಯಾಗಿದೆ. ಕೆಲವು ಪೋಷಕರು ಶಾಲೆಯ ಶುಲ್ಕವನ್ನೇ ಪಾವತಿ ಮಾಡಿಲ್ಲ ಎಂದು ಶಶಿಕುಮಾರ್​ ಹೇಳಿದರು.

‘ಕೇವಲ ಫೇಸ್​ಬುಕ್, ಟ್ವಿಟ್ಟರ್​ನಲ್ಲಿ ಮಾತ್ರ ಸಚಿವರು ಸಿಗ್ತಾರೆ’ ಸಚಿವ ಸುರೇಶ್ ಕುಮಾರ್ ನಮ್ಮ ಕೈಗೆ ಸಿಗೋದೂ ಇಲ್ಲ. ಕೇವಲ ಫೇಸ್​ಬುಕ್, ಟ್ವಿಟ್ಟರ್​ನಲ್ಲಿ ಮಾತ್ರ ಸಚಿವರು ಸಿಗ್ತಾರೆ. ನಮಗೆ ತೊಂದರೆ ನೀಡೋ ಮನೋಭಾವ ಹೊಂದಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ವಿರುದ್ಧ ಶಶಿಕುಮಾರ್ ವಾಗ್ದಾಳಿ ನಡೆಸಿದರು.

ಕೊರೊನ‌ ಲಾಕ್​ಡೌನ್ ಬಳಿಕ ಖಾಸಗಿ ಶಾಲೆಯ ಶೇಕಡಾ 50ಷ್ಟು ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತೊಂದರೆ ನೀಡಬೇಕೆಂಬ ಸ್ಯಾಡಿಸ್ಟ್ ಮನೋಭಾವನೆಯನ್ನು ಸಚಿವರು ಹೊಂದಿದ್ದಾರೆ. ಸಚಿವರು ಖಾಸಗಿ ಶಾಲೆಗಳ ಶಿಕ್ಷಕರು ಹಾಗು ಶಿಕ್ಷಕೇತರ ಸಿಬ್ಬಂದಿ ಉಳಿಸಲು ಏನೂ ಕ್ರಮ ಕೈಗೊಂಡಿಲ್ಲ ಎಂದು ಶಶಿಕುಮಾರ್​ ಹೇಳಿದರು.

‘ಸರ್ಕಾರ ಕೂಡಲೆ RTE ಹಣ ಮರುಪಾವತಿ‌ ಮಾಡಲಿ’ ಸರ್ಕಾರ ಕೂಡಲೆ RTE ಹಣ ಮರುಪಾವತಿ‌ ಮಾಡಲಿ. ಶಿಕ್ಷಣ ಸಚಿವರ ನಡೆ ಅತ್ಯಂತ ಖಂಡನೀಯ. ಇದನ್ನು ಖಂಡಿಸಿ ರಾಜ್ಯದಲ್ಲಿ ಮತ್ತೆ ಉಗ್ರ ಹೋರಾಟಕ್ಕೆ ತಯಾರಾಗಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಓದಿದರೆ ಭಾಗ್ಯಲಕ್ಷ್ಮಿ‌ ಬಾಂಡ್ ಸಿಗಲ್ಲ ಅಂತಾರೆ. ಖಾಸಗಿ ಶಾಲೆಯಿಂದ ಟಿ.ಸಿ. ತಂದರೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಗಮ ಅಟೆಂಡ್ ಮಾಡಬಹುದು ಅಂತಾರೆ. ಆದ್ರೆ ರಾಜ್ಯದ ಬಹುತೇಕ ಖಾಸಗಿ ಶಾಲೆಗಳು ಕಡಿಮೆ ಶುಲ್ಕಕ್ಕೆ ಶಿಕ್ಷಣ ನೀಡುತ್ತಿವೆ ಎಂದು ಹೇಳಿದರು.

ಜನವರಿಯಿಂದ ಶಾಲೆಗಳನ್ನ ತೆರೆಯಬೇಕೆಂಬ ಸರ್ಕಾರದ ನಿರ್ಧಾರಕ್ಕೆ ನಾವು ಶಾಲೆ ಓಪನ್ ಮಾಡಬೇಕು ಎಂದು ಇದ್ದರೆ ಸರ್ಕಾರ ಶಿಕ್ಷಕರಿಗೆ ಉಚಿತ ಕೊವಿಡ್ ಪರೀಕ್ಷೆ ನಡೆಸಲಿ. ವಿದ್ಯಾರ್ಥಿಗಳಿಗೂ ಸರ್ಕಾರವೇ ಪರೀಕ್ಷೆ ನಡೆಸಲಿ. ಇವರು ಕೊವಿಡ್ ಪರೀಕ್ಷೆ ಮಾಡಿಸಿದರೆ 72 ಗಂಟೆಯಲ್ಲಿ ವರದಿ ಬರುತ್ತೆ ಅಂತಾರೆ. ಆದ್ರೆ ವಾಸ್ತವದಲ್ಲಿ ವರದಿ ಬರೋಕೆ ಕನಿಷ್ಠ 10 ದಿನ ಆಗುತ್ತೆ. ಸರ್ಕಾರ ಶಾಲೆ ತೆರೆಯಲು ನಿಗದಿ ಮಾಡಿರೋ ಮಾರ್ಗಸೂಚಿಯೇ ಸರಿಯಿಲ್ಲ. ರಾಜ್ಯದಲ್ಲಿ ಕೊರೊನಾದಿಂದ ಕನಿಷ್ಠ 500 ಶಾಲೆಗಳು ಬಂದ್ ಆಗಿವೆ. ಆರ್ಥಿಕ ಸಂಕಷ್ಟದಿಂದ ಶಾಲೆಗಳನ್ನ ಮುಚ್ಚೋ ಪರಿಸ್ಥಿತಿ ಎದುರಾಗಿದೆ ಎಂದು ಶಶಿಕುಮಾರ್ ಕಳವಳ ವ್ಯಕ್ತಪಡಿಸಿದರು.

ನಮ್ಮದೇನೂ ವೈಯಕ್ತಿಕ ಪ್ರತಿಷ್ಠೆ ಅಲ್ಲ.. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಆರಂಭ ಮಾಡ್ತಿದ್ದೇವೆ -ಸುರೇಶ್​ ಕುಮಾರ್​