AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೊ ಭಗವಾನ್, ಭೈರಪ್ಪ ಸೈದ್ಧಾಂತಿಕ ವಿರೋಧಿಗಳಾಗಿದ್ರೂ ಎದುರು ಬದುರು ಮನೆಯ ಸ್ನೇಹಿತರು: ಗೆಳೆತನ ಹೇಗಿತ್ತು ಗೊತ್ತಾ?

ನಾಡಿನ ಹಿರಿಯ ಸಾಹಿತಿ, ಕಾದಂಬರಿಕಾರ ಎಸ್‌ಎಲ್‌ ಭೈರಪ್ಪ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 94 ವರ್ಷದ ಭೈರಪ್ಪ ಅವರು ಇಂದು (ಸೆಪ್ಟೆಂಬರ್ 24) ಬೆಂಗಳೂರಿನ ರಾಜಾಜಿನಗರದ ರಾಷ್ಟ್ರೋತ್ತನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇನ್ನು ಭೈರಪ್ಪ ಅವರ ನಿಧನಕ್ಕೆ ಹಿರಿಯ ಸಾಹಿತಿ ಪ್ರೋ. ಭಗವಾನ್ ಸಂತಾಪ ಸೂಚಿಸಿದ್ದಾರೆ. ಇಬ್ಬರ ನಡುವೆ ಸೈದ್ಧಾಂತಿಕ ವಿಚಾರ ವ್ಯತ್ಯಾಸಗಳು ಇದ್ದರೂ ಸಹ ಇವರು ಮಾತ್ರ ಎದುರು ಬದುರು ಮನೆಯ ಗೆಳೆಯರಾಗಿದ್ದರು. ಹಾಗಾದ್ರೆ, ಭೈರಪ್ಪನವರೊಂದಿಗಿನ ಗೆಳೆತನವನ್ನು ಭಗವಾನ್ ಬಿಚ್ಚಿಟ್ಟಿದ್ದಾರೆ.

ಪ್ರೊ ಭಗವಾನ್, ಭೈರಪ್ಪ ಸೈದ್ಧಾಂತಿಕ ವಿರೋಧಿಗಳಾಗಿದ್ರೂ ಎದುರು ಬದುರು ಮನೆಯ ಸ್ನೇಹಿತರು:  ಗೆಳೆತನ ಹೇಗಿತ್ತು ಗೊತ್ತಾ?
Ks Bhagawan And Sl Bhyrappa
ರಮೇಶ್ ಬಿ. ಜವಳಗೇರಾ
|

Updated on:Sep 24, 2025 | 5:41 PM

Share

ಮೈಸೂರು, (ಸೆಪ್ಟೆಂಬರ್ 24): ಹಿರಿಯ ಸಾಹಿತಿ ಪ್ರೊ. ಭಗವಾನ್ (Kannada veteran writer KS Bhagawan )ಹಾಗೂ ಎಸ್​​ಎಲ್ ಭೈರಪ್ಪ ( SL Bhyrappa) ಅವರು ಸೈದ್ಧಾಂತಿಕ ವಿಚಾರದಲ್ಲಿ ಪಕ್ಕ ವಿರೋಧಿಗಳು. ಭಗವಾನ್ ಎಡಪಂಥಿಯಲ್ಲಿ ಗುರುತಿಸಿಕೊಂಡಿದ್ದರೆ, ಭೈರಪ್ಪ ಅವರು ಬಲಪಂಥೀಯರಾಗಿದ್ದರು. ಟಿವಿ ಮಾಧ್ಯಮಗಳ ಚರ್ಚೆಗಳಲ್ಲಿ ಹಾಗೂ  ಹೊರಗೆ ಇಬ್ಬರು ಸೈದ್ಧಾಂತಿಕ ವಿಚಾರದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದರು. ಆದ್ರೆ,   ಮುಗಿಲಾಗಿ ಇವರಿಬ್ಬರು ಎದುರು ಬದರು ಮನೆಯ ಆಪ್ತ ಸ್ನೇಹಿತರಾಗಿದ್ದರು. ಸೈದ್ಧಾಂತಿಕ ವಿಚಾರ ವ್ಯತ್ಯಾಸಗಳು ಎಷ್ಟೇ ಇರಲಿ ಇವರಿಬ್ಬರ ಗೆಳೆತನ ಎಲ್ಲದಿಕ್ಕಿಂತ ಮಿಗಿಲಾದದ್ದು.  ಇದೀಗ ಭಗವಾನ್ ,  ತಮ್ಮ ಸ್ನೇಹಿತ ಅಗಲಿಕೆಗೆ  ಕಂಬನಿ ಮಿಡಿದಿದ್ದು, ಅವರೊಂದಿಗಿದ್ದ ಒಡನಾಟವನ್ನು ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಭಗವಾನ್, ಭೈರಪ್ಪನವರು ನಮ್ಮನ್ನು ಆಗಲಿ ತುಂಬಾ ದುಃಖಕ್ಕೆ ಈಡು ಮಾಡಿದ್ದಾರೆ. ನಾನು ಅವರು ಒಳ್ಳೆಯ ಸ್ನೇಹಿತರು. ಅವರೊಬ್ಬ ಹೆಸರಾಂತ ಕಾದಂಬರಿಕಾರರು. ಜೀವನದ ಎಲ್ಲಾ ಮಗ್ಗಲುಗಳನ್ನು ಕಷ್ಟಗಳನ್ನು ಕಾದಂಬರಿಯಲ್ಲಿ ಬರೆಯುತ್ತಿದ್ದರು. ಅವರಂತಹ ಜನಪ್ರಿಯ ಕಾದಂಬರಿಕಾರರು ಸದ್ಯಕ್ಕೆ ಯಾರು ಇಲ್ಲ. ಬಹಳ ಪ್ರೀತಿಯಿಂದ ನಮ್ಮ ಜೊತೆ ಇದ್ದರು. ಈಗ ಹಿರಿಯ ಆತ್ಮಿಯ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದರು.

ಇದನ್ನೂ ಓದಿ: ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ಎಸ್​​ ಎಲ್ ಭೈರಪ್ಪ ಅಂತ್ಯಕ್ರಿಯೆ ಎಲ್ಲಿ? ಯಾವಾಗ?

ಎದುರು ಬದರು ಮನೆಯ ಸ್ನೇಹಿತರು

ಅವರ ಕಾದಂಬರಿಗಳು ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. 94 ವರ್ಷಗಳ ಕಾಲ ಬದುಕ್ಕಿದ್ದರು ಅದು ಪೂರ್ಣ ವಯಸ್ಸು. ಜೀವನವನ್ನು ವ್ಯರ್ಥ ಮಾಡದೆ ಸಮಾಜಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ನಾವಿಬ್ಬರು ಎದುರು ಬದರು ಮನೆಯಲ್ಲಿ ಇದ್ದವರು. ನಮ್ಮ ಮನೆಗೆ ಅವರು ಬರುತ್ತಿದ್ದರು. ನಾನು ಸಹ ಅವರ ಮನೆಗೆ ಹೋಗುತ್ತಿದ್ದೆ. ಭೇಟಿಯಾದಾಗ ಸಾಹಿತ್ಯ, ತತ್ವಜ್ಞಾನದ ಬಗ್ಗೆ ಚರ್ಚೆ ಮಾಡುತ್ತಿದ್ದೆವು ಎಂದು ತಮ್ಮ ನಡುವಿನ ಆಪ್ತತೆಯನ್ನು ಬಿಚ್ಚಿಟ್ಟಿದ್ದಾರೆ.

ವಂಶವೃಕ್ಷ, ದಾಟು ನನ್ನ ನೆಚ್ಚಿನ ಕಾದಂಬರಿ

ಅವರ ಅಭಿಪ್ರಾಯ ಅವರಿಗೆ ನಮ್ಮ ಅಭಿಪ್ರಾಯ ನಮಗಿತ್ತು ಅಷ್ಟೇ. ಅವರದು ಸಂಪ್ರದಾಯಿಕ ಬರವಣಿಗೆ ನನ್ನದೇ ಬೇರೆ ತರಹದ ಬರವಣಿಗೆ. ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಯಿಂದ ಕಾಣುತ್ತಿದ್ದೇವು. ಇಬ್ಬರು ಸಾಹಿತ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಅವರ ಬರವಣಿಗೆ ನನ್ನ ಬರವಣಿಗೆ ಬಗ್ಗೆ ವಿಮರ್ಶೆ ಮುನ್ನುಡಿ ಎಲ್ಲವನ್ನು ಚರ್ಚೆ ಮಾಡುತ್ತಿದ್ದೆವು. ನಾನು ಮೈಸೂರಿಗೆ 1975 ರಲ್ಲಿ ಬಂದಿದ್ದೆ. ಬಳಿಕ ಒಂದು ವರ್ಷ ನಂತರ ಭೈರಪ್ಪ ಇಲ್ಲಿಗೆ ಬಂದರು. ಕಳೆದ 6 ತಿಂಗಳ ಹಿಂದೆ ಅವರ ಜೊತೆ ಮಾತನಾಡಿದ್ದೆ. ಅವರು ಬರೆದ ವಂಶವೃಕ್ಷ, ದಾಟು ನನ್ನ ನೆಚ್ಚಿನ ಕಾದಂಬರಿ ಎಂದು ಹೇಳಿದ್ದಾರೆ. ನನ್ನ ಭಿನ್ನಾಭಿಪ್ರಾಯಗಳನ್ನು ಅವರು ಮೆಚ್ಚಿಕೊಂಡಿದ್ದರು. ಅವರು ಶತಾಯುಷಿ ಆಗಲಿ ಎನ್ನುವ ಆಸೆ ನನ್ನದಾಗಿತ್ತು. ಶತಾಯುಶಿಗಳಾದ ಮೇಲೆ ಶತಮಾನದ ಸಮಾರಂಭಾ ಮಾಡುವ ಆಸೆ ಇತ್ತು. ಅವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿಯು ದೊರೆಕಿತ್ತು. ಸರಸ್ವತಿ ಸಮ್ಮಾನ್ ಪ್ರಶಸ್ತಿಯು ಜ್ಞಾನಪೀಠ ಪ್ರಶಸ್ತಿಗಿಂತಲೂ ಉನ್ನತವಾದ ಪ್ರಶಸ್ತಿ ಎಂದು ಅಭಿಪ್ರಾಯಪಟ್ಟರು.

Published On - 5:41 pm, Wed, 24 September 25