ಟರ್ಕಿ ಬೆನ್ನಲ್ಲೆ ಅಜೆರ್ಬೈಜಾನ್ ಬಾಯ್ಕಾಟ್ಗೆ ಮುಂದಾದ ಪ್ರವಾಸಿಗರು: ನೂರಾರು ಕನ್ನಡಿಗರಿಂದ ಟ್ರಿಪ್​ ಕ್ಯಾನ್ಸಲ್

ಪಾಕಿಸ್ತಾನಕ್ಕೆ ಅಜೆರ್ಬೈಜಾನ್ ನೀಡಿದ ಬೆಂಬಲದಿಂದಾಗಿ ಭಾರತೀಯರು ಅದರಲ್ಲೂ ಕನ್ನಡಿಗರು, ಅಜೆರ್ಬೈಜಾನ್ ಬಾಯ್ಕಾಟ್ಗೆ ಮುಂದಾಗಿದ್ದಾರೆ. ರಾಜ್ಯದ ಸಾವಿರಾರು ಕನ್ನಡಿಗರು ಅಜೆರ್ಬೈಜಾನ್​ ಪ್ರವಾಸವನ್ನು ರದ್ದುಗೊಳಿಸುತ್ತಿದ್ದಾರೆ. ಆ ಮೂಲಕ ಉಗ್ರರಿಗೆ ಸಪೋರ್ಟ್ ದೇಶಕ್ಕೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ. ಇದು ಅಜೆರ್ಬೈಜಾನ್‌ನ ಆರ್ಥಿಕತೆಗೆ ಗಂಭೀರ ಹೊಡೆತ ನೀಡಲಿದೆ ಎನ್ನಲಾಗುತ್ತಿದೆ.

ಟರ್ಕಿ ಬೆನ್ನಲ್ಲೆ ಅಜೆರ್ಬೈಜಾನ್ ಬಾಯ್ಕಾಟ್ಗೆ ಮುಂದಾದ ಪ್ರವಾಸಿಗರು: ನೂರಾರು ಕನ್ನಡಿಗರಿಂದ ಟ್ರಿಪ್​ ಕ್ಯಾನ್ಸಲ್
ಅಜೆರ್ಬೈಜಾನ್ ಬಾಯ್ಕಾಟ್ಗೆ ಮುಂದಾದ ಕನ್ನಡಿಗರು
Edited By:

Updated on: May 17, 2025 | 10:31 AM

ಬೆಂಗಳೂರು, ಮೇ 17: ಭಾರತ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡ ವೇಳೆ ಅಜೆರ್ಬೈಜಾನ್ (Azerbaijan) ದೇಶವು ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು. ಇದರಿಂದ ಕೆರಳಿ ಕೆಂಡವಾಗಿರುವ ಭಾರತೀಯರು, ಆ ದೇಶಕ್ಕೆ ಸರಿಯಾಗಿ ಬುದ್ದಿ ಕಲಿಸಲು ಬಾಯ್ಕಾಟ್ ಅಜೆರ್ಬೈಜಾನ್ ಅಭಿಯಾನಕ್ಕೆ ಮುಂದಾಗಿದ್ದು, ಅಲ್ಲಿಗೆ ಟ್ರಿಪ್ ಹೊರಟ್ಟಿದ್ದ ಸಾವಿರಾರು ಕನ್ನಡಿಗರು (Kannadigas) ಟಿಕೆಟ್ ಕ್ಯಾನ್ಸಲ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಆ ದೇಶಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕ ಸಂಕಷ್ಟ ‌ಎದುರಾಗಲಿದೆಯಂತೆ.

ಭಾರತ ಪಾಕಿಸ್ತಾನದ ಉಗ್ರರ ವಿರುದ್ಧ ಕಾರ್ಯಚರಣೆ ವೇಳೆ, ಟರ್ಕಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಿದ್ದರಿಂದ ಈಗಾಗಲೇ ಭಾರತೀಯರು ಬಾಯ್ಕಾಟ್ ಟರ್ಕಿ ಅಭಿಯಾನಕ್ಕೆ ಮುಂದಾಗಿದ್ದರು. ಇದರಿಂದ ಆ ದೇಶಕ್ಕೆ ದೊಡ್ಡಮಟ್ಟದ ಹೊಡೆತ ಬೀದಿದೆ. ಇದೀಗ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಿದ್ದ ಮತ್ತೊಂದು ದೇಶಕ್ಕೂ ಬಾಯ್ಕಾಟ್ ಬಿಸಿ ತಟ್ಟಿದೆ.

ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಿದ್ದರಿಂದ ಟ್ರಿಪ್ ಕ್ಯಾನ್ಸಲ್

ಅಜೆರ್ಬೈಜಾನ್ ದೇಶದ ರಾಜಧಾನಿ ಬಾಕೂಗೆ ಟ್ರಿಪ್ ಹೊರಟ್ಟಿದ್ದ ರಾಜ್ಯದ ಸಾವಿರಾರು ಕನ್ನಡಿಗರು ಟ್ರಿಪ್ ಕ್ಯಾನ್ಸಲ್ ಮಾಡಿಕೊಳ್ಳುವ ಮೂಲಕ ಉಗ್ರರಿಗೆ ಸಪೋರ್ಟ್ ಮಾಡಿದ ಅಜೆರ್ಬೈಜಾನ್ ದೇಶಕ್ಕೆ ಆರ್ಥಿಕವಾಗಿ ಹೊಡೆತ ಕೊಡಲು ತೀರ್ಮಾನ ಮಾಡಿದ್ದು, ‘ನಮಗೆ ದೇಶ ಮುಖ್ಯ, ನಾವು ಜುಲೈ ಆಗಸ್ಟ್​ನಲ್ಲಿ ಬಾಕೂಗೆ ಹೋಗಲು ಟಿಕೆಟ್ ಬುಕ್ ಮಾಡಿದ್ವಿ. ಆದರೆ ಅವರು ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಿದ್ದರಿಂದ ನಾವು ಟ್ರಿಪ್ ಕ್ಯಾನ್ಸಲ್ ಮಾಡಿಕೊಳ್ಳಲು ಮುಂದಾಗಿದ್ದೇವೆ’ ಎಂದು ನರೇಂದ್ರ ಎಂಬುವವರು ಹೇಳಿದ್ದಾರೆ.

ಇದನ್ನೂ ಓದಿ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಬೆಂಗಳೂರು ಏರ್ಪೋರ್ಟಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್‌ ಕಾರ್ಯಾಚರಣೆ ಸ್ಥಗಿತ
ಬೂಟಾಟಿಕೆಗೆ 4 ಫ್ಲೈಟ್ ಕಳ್ಸಿದ್ದು ಬಿಟ್ರೆ ಏನೂ ಮಾಡಿಲ್ಲ: ಕಾಂಗ್ರೆಸ್ ಶಾಸಕ
ಹೊನ್ನಾವರದ ವೀಳ್ಯದೆಲೆಗೆ ಪಾಕ್ ದೊಡ್ಡ ಮಾರುಕಟ್ಟೆ! ಆದರೂ ಕಳ್ಸಲ್ಲ ರೈತರು

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟರ್ಕಿಯ ಸೆಲೆಬಿ ಏವಿಯೇಷನ್‌ ಕಾರ್ಯಾಚರಣೆ ಸ್ಥಗಿತ

ಇನ್ನೂ ಅಜೆರ್ಬೈಜಾನ್​ಗೆ ಐದು ದಿನಗಳ ಪ್ರವಾಸಕ್ಕೆ 1 ಲಕ್ಷದ 20 ಸಾವಿರ ರೂ ಖರ್ಚಾಗುತ್ತದೆ. ಆದರೆ ಬುಕ್ ಮಾಡಿದ್ದ ಎಲ್ಲಾ ಕನ್ನಡಿಗರು ಟ್ರಿಪ್ ಕ್ಯಾನ್ಸಲ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಪ್ರತಿವರ್ಷ ಅಜರ್ ಬಾಯ್ಜಾನ್ ದೇಶಕ್ಕೆ ಭಾರತದಿಂದ ಸುಮಾರು 2 ಲಕ್ಷದ 43 ಸಾವಿರ ಜನರು ಪ್ರವಾಸಕ್ಕೆ ಹೋದರೆ, ಬೆಂಗಳೂರಿನಿಂದ ವಾರಕ್ಕೆ 46 ಫ್ಲೈಟ್​ಗಳು ಅಲ್ಲಿಗೆ ಸಂಚಾರ ಮಾಡುತ್ತಿವೆ. ಬಾಯ್ಕಾಟ್ ಅಜೆರ್ಬೈಜಾನ್​ನಿಂದ ಈಗಾಗಲೇ ಸಾವಿರಾರು ಜನರು ತಮ್ಮ ತಮ್ಮ ಟ್ರಿಪ್ ಕ್ಯಾನ್ಸಲ್ ಮಾಡಿಕೊಳ್ಳಲು ಮುಂದಾಗಿದ್ದು, ಅಜೆರ್ಬೈಜಾನ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶರಾವತಿ ನದಿ ತೀರದ ‘ರಾಣಿ ವೀಳ್ಯದೆಲೆ’ಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆ! ಆದರೂ ರಫ್ತು ನಿರಾಕರಿಸಿದ ರೈತರು

ಒಟ್ಟಿನಲ್ಲಿ ಅಜೆರ್ಬೈಜಾನ್ ದೇಶಕ್ಕೆ ಪ್ರತಿವರ್ಷ ಲಕ್ಷಾಂತರ ಜನರು ಪ್ರವಾಸಕ್ಕೆ ಹೋಗುತ್ತಿರುವುದರಿಂದ ಆ ದೇಶಕ್ಕೆ ಆರ್ಥಿಕವಾಗಿ ಸಹಾಯವಾಗುತ್ತಿತ್ತು. ಆದರೆ ಅಜೆರ್ಬೈಜಾನ್ ಬಾಯ್ಕಾಟ್ ಅಭಿಯಾನದಿಂದ ದೊಡ್ಡಮಟ್ಟದಲ್ಲಿ ಹೊಡೆತ ಬೀಳೋದಂತು ಗ್ಯಾರಂಟಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.