
ಬೆಂಗಳೂರು,ಆ. 6: ರಾಜ್ಯಾದ್ಯಂತ ಮುಂಗಾರು ಮಳೆ ಚುರುಕಾಗಿರುವುದರಿಂದ ಕರ್ನಾಟಕದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚಿ (AQI – Air Quality Index) ಸುಧಾರಿಸಿದ್ದು, ಸಾರ್ವಜನಿಕರಿಗೆ ನಿರಾಳತೆ ತಂದಿದೆ. ಮಳೆಯ ಕಾರಣದಿಂದಾಗಿ ಧೂಳು ಮತ್ತು ಮಾಲಿನ್ಯಕಾರಕ ಕಣಗಳು ಕಡಿಮೆಯಾಗಿದ್ದು, ಗಾಳಿಯ ಗುಣಮಟ್ಟ ‘ಉತ್ತಮ’ (Good) ಹಾಗೂ ‘ಸಾಧಾರಣ’ (Satisfactory) ವಿಭಾಗದಲ್ಲಿ ದಾಖಲಾಗಿದೆ.
ಮಳೆ ಮತ್ತು ಮೋಡಕವಿದ ವಾತಾವರಣದಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸುಧಾರಿಸಿದ್ದು, ಸರಾಸರಿ AQI 35 ರಿಂದ 55 ರಷ್ಟಿದೆ (ಉತ್ತಮದಿಂದ ಸಾಧಾರಣ). ಮೈಸೂರು ಹಾಗೂ ಮಂಡ್ಯದಲ್ಲಿ ಸಂಚಾರ ದಟ್ಟಣೆ ಕಡಿಮೆಯಿರುವ ಈ ಭಾಗಗಳಲ್ಲಿ AQI 25 ರಿಂದ 40 ರಷ್ಟಿದ್ದು, ‘ಉತ್ತಮ’ (Good) ವಿಭಾಗದಲ್ಲಿದೆ.
ಕರಾವಳಿ ಭಾಗ (ಮಂಗಳೂರು, ಉಡುಪಿ)ದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಗಾಳಿಯ ಶುದ್ಧತೆ ಹೆಚ್ಚಾಗಿದ್ದು, AQI 20 ರಿಂದ 35 ರಷ್ಟಿದೆ. ಉತ್ತರ ಕರ್ನಾಟಕ (ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ) ದಲ್ಲಿ ಪ್ರಮುಖ ನಗರ ಪ್ರದೇಶಗಳಲ್ಲಿ AQI 40 ರಿಂದ 65 ರ ನಡುವೆ ದಾಖಲಾಗಿದೆ.
ಹಾಸನ ನಗರ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ AQI 20 ರಿಂದ 45 ರ ರೇಂಜ್‌ನಲ್ಲಿದ್ದು, ವಾಯು ಮಾಲಿನ್ಯ ಅತ್ಯಂತ ಕಡಿಮೆಯಿದೆ. ಉತ್ತಮ ಗಾಳಿಯ ಲಭ್ಯತೆಯಿಂದ ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ನಿರಂತರ ಮಳೆ ಹಾಗೂ ಹಸಿರಿನಿಂದಾಗಿ ಗಾಳಿಯ ಶುದ್ಧತೆ ಹೆಚ್ಚಿದ್ದು, AQI 25 ರ ಸುಮಾರಿಗೆ ದಾಖಲಾಗಿದೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ಆರ್ಭಟ, ಪ್ರಮುಖ ಜಿಲ್ಲೆಗಳಿಗೆ ಅಲರ್ಟ್
ಕೊಡಗು ಜಿಲ್ಲೆಯ ಮಡಿಕೇರಿ ಭಾಗದಲ್ಲಿ ಮಳೆ ಮತ್ತು ಮೋಡಕವಿದ ವಾತಾವರಣದ ನಡುವೆ AQI ಸಾಧಾರಣ ಹಂತದಲ್ಲಿದ್ದು (50-75), ಪ್ರವಾಸಿಗರು ಮತ್ತು ಸ್ಥಳೀಯರಿಗೆ ಉತ್ತಮ ವಾತಾವರಣ ಸಿಗುತ್ತಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ