Karnataka Breaking Kannada News Highlights: ಬಿಜೆಪಿ ಅಕ್ಕಿ ಅಭಿಯಾನಕ್ಕೆ ಡಿಕೆ ಶಿವಕುಮಾರ್ ಕೌಂಟರ್
Breaking News Today Live Updates: ಕರ್ನಾಟಕದ ರಾಜಕೀಯ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ ಮೂಲಕ ಪಡೆಯಿರಿ...
Karnataka Latest News Live Updates: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಚಾಲನೆ ನೀಡಲಿದ್ದಾರೆ. ಕೆಂಪೇಗೌಡರ ಜಯಂತಿ ದಿನವಾದ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನ ನೀಡಲಾಗುತ್ತಿದೆ. ಇನ್ನು ವಿಧಾನಸಭೆ ಸೋಲಿನ ಬಳಿಕ ಬಿಜೆಪಿ ಪಕ್ಷ ಸಂಘಟನೆಗೆ ಮುಂದಾಗಿದ್ದು, ಆತ್ಮವಲೋಕನಾ ಸಭೆಗಳನ್ನು ಮಾಡುತ್ತಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ಮುಂಬರುವ ಲೋಕಸಭಾ ಚುನಾವಣೆಗೆ ತಯಾರಾಗುತ್ತಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಅವಕಾಶ ಕೊಟ್ಟರೇ ನಾನು ರಾಜ್ಯಾಧ್ಯಕ್ಷ ಆಗುವೆ ಎಂದು ಹಿರಿಯ ನಾಯಕರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಇತ್ತ ಕಾಂಗ್ರೆಸ್ ಸರ್ಕಾರಕ್ಕೆ ಅನ್ನಭಾಗ್ಯ ಯೋಜನೆ ಅನುಷ್ಠಾನದ್ದೇ ಚಿಂತೆಯಾಗಿದೆ. ಈ ಸಂಬಂಧ ಅನ್ನಭಾಗ್ಯದ ಅಕ್ಕಿ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ಯುದ್ದ ಶುರುವಾಗಿದೆ. ಇನ್ನು ರಾಜ್ಯಕ್ಕೆ ಮುಂಗಾರಿನ ಆಗಮನ ತಡವಾಗಿದ್ದು, ನೀರಿಲ್ಲದೆ ಉತ್ತರ ಕರ್ನಾಟಕದ ಜನ ಪರಿತಪ್ಪಿಸುತ್ತಿದ್ದಾರೆ. ಹಾಗೇ ಅಪರಾಧ ಪ್ರಕರಣಗಳು ಕೂಡ ಜಾಸ್ತಿಯಾಗುತ್ತಿವೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪಡೇಟ್ಸ್ ಇಲ್ಲಿದೆ..
LIVE NEWS & UPDATES
-
Karnataka Breaking News Live: ಸ್ವಾಭಿಮಾನಕ್ಕೆ ಧಕ್ಕೆ ತಂದರೆ ಜನರು ನಿಮ್ಮ ಜೊತೆ ನಿಲ್ಲಲ್ಲ: ಡಿ.ಕೆ.ಶಿವಕುಮಾರ್
ಜನರಿಗಾಗಿ ಶ್ರಮಿಸಿ, ಜನರ ಸ್ವಾಭಿಮಾನಕ್ಕೆ ಯಾವುದೇ ರೀತಿ ಧಕ್ಕೆ ತರಬೇಡಿ. ಸ್ವಾಭಿಮಾನಕ್ಕೆ ಧಕ್ಕೆ ತಂದರೆ ಜನರು ನಿಮ್ಮ ಜೊತೆ ನಿಲ್ಲಲ್ಲ. ಇದಕ್ಕೆ ನಾನೇ ಉದಾಹರಣೆ, ಬಿಜೆಪಿಯವರು ನನ್ನ ಜೈಲಿಗೆ ಹಾಕಿಸಿದರು. ನಾನು ಜೈಲಿಗೆ ಹೋದೆ, ಇಡಿ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದೆ. ಆದರೆ 50ರಿಂದ 75 ಸಾವಿರ ಜನರು ಬಂದು ನನ್ನನ್ನು ಮೆರವಣಿಗೆ ಮಾಡಿದರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಹದೇವಪುರದ ಕ್ಷೇಮವನದಲ್ಲಿ ನೂತನ ಶಾಸಕರ ತರಬೇತಿ ಶಿಬಿರದಲ್ಲಿ ಈ ಮಾತು ಹೇಳಿದ್ದಾರೆ.
-
Karnataka Breaking News Live: ವಿಧಾನಪರಿಷತ್ ಚುನಾವಣೆ: ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಟಿಕೆಟ್‌ಗೆ ಅರ್ಜಿ ಆಹ್ವಾನಿಸಿದ ಕೆಪಿಸಿಸಿ
ವಿಧಾನಪರಿಷತ್‌ನ ಆರು ಕ್ಷೇತ್ರಗಳಿಗೆ ಚುನಾವಣೆ ಹಿನ್ನೆಲೆ ಕೆಪಿಸಿಸಿ ಟಿಕೆಟ್ ಆಕಾಂಕ್ಷಿಗಳಿಗೆ ಅರ್ಜಿ ಆಹ್ವಾನಿಸಿದೆ. ಶಿಕ್ಷಕರ ಕ್ಷೇತ್ರದ 3 ಸ್ಥಾನ, ಪದವೀಧರ ಕ್ಷೇತ್ರದ 3 ಸ್ಥಾನಕ್ಕೆ ಚುನಾವಣೆ ಸ್ಪರ್ಧಿಸಿಲು ಇಚ್ಚಿಸುವವರು ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಟಿಕೆಟ್‌ಗೆ ಅರ್ಜಿ ಹಾಕಬೇಕು. ಅರ್ಜಿ ಶುಲ್ಕ 5,000 ರೂ., ಪಕ್ಷದ ನಿಧಿ 2,00,000 ರೂ. ನೀಡಬೇಕು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆದೇಶ ಮಾಡಿದ್ದಾರೆ.
-
Karnataka Breaking News Live: ರಾಜ್ಯ ಸರ್ಕಾರದ ಆರೋಪಕ್ಕೆ ವಿಪಕ್ಷ ಬಿಜೆಪಿ ಕೌಂಟರ್
ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ಕೌಂಟರ್ ಕೊಟ್ಟ ವಿಪಕ್ಷ ಬಿಜೆಪಿ, ಒಂದು ವಾರದ ಕ್ಯಾಂಪೇನ್ ಕೈಗತ್ತಿಕೊಂಡಿದೆ. ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿರುವ ವಿಚಾರದ ಬಗ್ಗೆ ಮನೆ ಮನೆ ಸಂಪರ್ಕ ಅಭಿಯಾನ ಹಮ್ಮಿಕೊಂಡಿದೆ. ಕೇಂದ್ರದಿಂದ ಉಚಿತವಾಗಿ ಅಕ್ಕಿ ನೀಡುತ್ತಿರುವ ಬಗ್ಗೆ ಕರಪತ್ರ ಹಂಚುಂತೆ ಕಾರ್ಯಕರ್ತರಿಗೆ ಪಕ್ಷ ಸೂಚನೆ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರ ಕೊಡುತ್ತಿರುವ ಅನ್ನಭಾಗ್ಯ ಅಕ್ಕಿಯಲ್ಲಿ ಐದು ಕೆಜಿ ಕೇಂದ್ರ ಸರ್ಕಾರ ಕೊಡುತ್ತಿರುವುದು ಎಂದು ಮನವರಿಕೆ ಮಾಡಿಕೊಡಲು ಸೂಚನೆ ನೀಡಲಾಗಿದೆ. ಅಲ್ಲದೆ, ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಘೋಷಣೆಯಂತೆ ಪ್ರತ್ಯೇಕ 10 ಕೆಜಿ ಅಕ್ಕಿ ನೀಡಬೇಕಿದೆ ಎಂಬ ಸಂದೇಶವನ್ನು ಫಲಾನುಭವಿಗಳಿಗೆ ರವಾನಿಸಲು ಸೂಚಿಸಲಾಗಿದೆ.
Karnataka Breaking News Live: ಹೇಮಾವತಿ ಜಲಾಶಯಕ್ಕೆ ಸಚಿವ ರಾಜಣ್ಣ ಭೇಟಿ
ಹಾಸನ: ಮುಂಗಾರು ಕೈ ಕೊಟ್ಟ ಹಿನ್ನೆಲೆ ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಭೇಟಿ ನೀಡಿದರು. ಜಲಾಶಯದಲ್ಲಿನ ಸದ್ಯದ ನೀರಿನ ಮಟ್ಟ, ಕುಡಿಯುವ ನೀರು ಪೂರೈಕೆ ಬಗ್ಗೆ ಮಾಹಿತಿ ಸಂಗ್ರಹಿಸಿದ ರಾಜಣ್ಣ ಅವರು ಬಳಿಕ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
Karnataka Breaking News Live: ಬಿಜೆಪಿ ಅಕ್ಕಿ ಅಭಿಯಾನಕ್ಕೆ ಡಿಕೆ ಶಿವಕುಮಾರ್ ಕೌಂಟರ್
ನೆಲಮಂಗಲ: ನಾಳೆಯಿಂದ ಅಕ್ಕಿ ಅಭಿಯಾನ ಆರಂಭಿಸುತ್ತಿರುವ ಬಿಜೆಪಿಗೆ ಡಿಸಿಎಂ ಡಿಕೆ ಶಿವಕುಮಾರ್ ಕೌಂಟರ್ ಕೊಟ್ಟಿದ್ದು, ಮಾನ ಮರ್ಯಾದೆ ಇಟ್ಟುಕೊಂಡು ರಾಜಕಾರಣ ಮಾಡಬೇಕು. ಬಡವರಿಗೆ ಅಕ್ಕಿ ಕೊಡಬೇಕು ಅಂತ ಮನಮೋಹನ ಸಿಂಗ್ ಕಾಲದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತರಲಾಗಿದೆ. ಈಗ ಇರುವ ಕೇಂದ್ರ ಸರ್ಕಾರ ಎನು ಕೊಡಿತ್ತಿಲ್ಲ. ಅವರಿಗೆ ಅಕ್ಕಿ, ಭತ್ತ ಖರೀದಿ ಮಾಡುವ ಅವಕಾಶ ಇದೆ. ಮಾಡಿಕೊಡಿ ಅಂತ ಕೇಳಿದ್ದೇವೆ, ಕೊಡದೇ ಇದ್ದರೂ ಚಿಂತೆ ಇಲ್ಲ. ನಾವು ಬಡವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಅಭಿಯಾನ ಆದರು ಮಾಡಲಿ, ಯಡಿಯೂರಪ್ಪ ಹೇಳಿದ ಹಾಗೆ ವಿಧಾನಸಭೆಯಲ್ಲಿ 24 ಗಂಟೆ ತಿಂಡಿ ತಿಂದು ಅಲ್ಲೆ ಕುಳಿತುಕೊಳ್ಳಲಿ. ನಮ್ಮ ಎಲ್ಲಾ ಗ್ಯಾರಂಟಿಗಳನ್ನ ಚೆನ್ನಾಗಿ ಪ್ರಚಾರ ಮಾಡುತ್ತಿದ್ದಾರೆ, ಮಾಡಲಿ ಅವರಿಗೆ ಅಭಿನಂದನೆ. 5 ವರ್ಷ ಜನ ಅವರಿಗೆ ರೆಸ್ಟ್ ಕೊಟ್ಟಿದ್ದಾರೆ ಎಂದರು.
Karnataka Breaking News Live: ಮೂವರು ನಾನ್ ಐಪಿಎಸ್ ಅಧಿಕಾರಿಗಳಿಗೆ ಎಸ್‌ಪಿಯಾಗಿ ಮುಂಬಡ್ತಿ
ಬೆಂಗಳೂರು: ಮೂವರು ನಾನ್ ಐಪಿಎಸ್ ಅಧಿಕಾರಿಗಳನ್ನು ಎಸ್‌ಪಿಯಾಗಿ ಮುಂಬಡ್ತಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಡಿವೈಎಸ್ಪಿ ಹುದ್ದೆಯಿಂದ ಎಸ್ಪಿ ಹುದ್ದೆಗೆ ಮುಂಬಡ್ತಿ ಮಾಡಲಾಗಿದೆ. ರವೀಶ್.ಸಿ.ಆರ್ ಲೋಕಾಯುಕ್ತ ಎಸ್ ಪಿಯಾಗಿ ಮುಂಬಡ್ತಿ (ನಾನ್ ಐಪಿಎಸ್), ಶಶಿಧರ ಎಂ.ಎನ್. ಲೋಕಾಯುಕ್ತ ಎಸ್ ಪಿಯಾಗಿ ಮುಂಬಡ್ತಿ (ನಾನ್ ಐಪಿಎಸ್), ಎಸ್ ಎಸ್ ಕಾಶಿ ಮಡಿಕೇರಿ ಅರಣ್ಯ ಘಟಕದ ಎಸ್‌ಪಿಯಾಗಿ ಮುಂಬಡ್ತಿ ನೀಡಲಾಗಿದೆ.
Karnataka Breaking News Live: ಗೃಹ ಜ್ಯೋತಿ ವೆಬ್ ಸೈಟ್ ತಾಂತ್ರಿಕ ಸಮಸ್ಯೆ ಸರಿ ಮಾಡಿದ್ದೇವೆ: ಕೆಜೆ ಜಾರ್ಜ್
ಬೆಂಗಳೂರು: ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ, ಕೆಪಿಸಿಸಿ ಕಚೇರಿ ನಮಗೆ ದೇವಸ್ಥಾನ, ಹಾಗಾಗಿ ಬರುತ್ತೇವೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ಗೃಹ ಜ್ಯೋತಿ ವೆಬ್ ಸೈಟ್ ತಾಂತ್ರಿಕ ಸಮಸ್ಯೆ ಸರಿ ಮಾಡಿದ್ದೇವೆ. ವೆಬ್ ಸೈಟ್ ಕ್ರ್ಯಾಶ್ ಬಗ್ಗೆ ಗೊತ್ತಾಗಿದೆ. ಸರ್ವರ್ ಸಾಮರ್ಥ್ಯ ಜಾಸ್ತಿ ಮಾಡಿದ್ದೇವೆ. 10 ಲಕ್ಷ ಅರ್ಜಿ ಸ್ವೀಕಾರ ಸಾಮರ್ಥ್ಯ ಸರ್ವರ್ ಇದೆ ಎಂದರು. ಬಿಜೆಪಿ ಕಾಲದ ಹಗರಣಗಳ ತನಿಖೆ ವಿಚಾರವಾಗಿ ಮಾತನಾಡಿದ ಅವರು, ದೂರು ಇನ್ನೂ ಬಂದಿಲ್ಲ, ಬಂದರೆ ತನಿಖೆ ಮಾಡುತ್ತೇವೆ. ಇಲಾಖೆಯ ಪರಿಶೀಲನೆ ಸಭೆಯಲ್ಲಿ ಒಂದು ಹಗರಣದ ಬಗ್ಗೆ ಗೊತ್ತಾಗಿದೆ. ಅದನ್ನು ತನಿಖೆ ಮಾಡಲು ಎಸಿಎಸ್ಗೆ ನೀಡಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಸತ್ಯಾಂಶವ ಗೊತ್ತಾಗಲಿದೆ ಎಂದರು.
Karnataka Breaking News Live: ಕೆಪಿಸಿಸಿ ಕಚೇರಿಗೆ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಭೇಟಿ
ಬೆಂಗಳೂರು: ಕೆಪಿಸಿಸಿ ಕಚೇರಿಗೆ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿದ್ದಾರೆ. ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಸಮಸ್ಯೆ ಆಲಿಸುವಂತೆ ಕಾಂಗ್ರೆಸ್ ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆ ಸಚಿವರು ಕಚೇರಿಗೆ ಆಗಮಿಸಿ ಕಾರ್ಯಕರ್ತರ ಅಹವಾಲು ಆಲಿಸುತ್ತಿದ್ದಾರೆ.
Karnataka Breaking News Live: ನಿಷೇಧಿತ ಪಿಎಫ್ಐ ಕಾರ್ಯಕರ್ತರ ಮನೆ ಮೇಲೆ ಎನ್ಐಎ ದಾಳಿ
ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಯಲ್ಲಿರುವ ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕರ್ತರ ಮನೆಗಳ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ ಏಕಕಾಲಕ್ಕೆ 6 ಕಡೆಗಳಲ್ಲಿ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು, ಎಲೆಕ್ಟ್ರಾನಿಕ್ ಡಿವೈಸ್ಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
Karnataka Breaking News Live: ವಾರದಲ್ಲಿ 1 ದಿನ ಒಬ್ಬ ಸಚಿವರು ಪಕ್ಷದ ಕಚೇರಿಗೆ ಭೇಟಿ ನೀಡಿ: ಕಾಂಗ್ರೆಸ್ ಹೈಕಮಾಂಡ್ ಸೂಚನೆ
ಪಕ್ಷದ ಚಟುವಟಿಕೆಯಿಂದ ಯಾರೂ ಅಂತರ ಕಾಯ್ದುಕೊಳ್ಳಬೇಡಿ ಎಂದು ಕರ್ನಾಟಕದ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ವಾರದಲ್ಲಿ 1 ದಿನ ಒಬ್ಬ ಸಚಿವರು ಪಕ್ಷದ ಕಚೇರಿಗೆ ಭೇಟಿ ನೀಡಿ. ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಸಮಸ್ಯೆ ಆಲಿಸಿ. ಪಕ್ಷ ಸಂಘಟನೆ ದೃಷ್ಟಿಯಿಂದ ಸಚಿವರು ಪಕ್ಷದ ಕಚೇರಿಗೆ ಭೇಟಿ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಇಂದು ಸಂಜೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡಲಿದ್ದಾರೆ.
Karnataka Breaking News Live: ಮೇಕೆದಾಟು ಮೂಲಕ ಕಾವೇರಿ ನೀರನ್ನು ಬೆಂಗಳೂರಿಗೆ ತರುತ್ತೇವೆ
ಬೆಂಗಳೂರಿಗೆ ನೀರಿನ ಅವಶ್ಯಕತೆ ತುಂಬಾ ಇದೆ. ಹೀಗಾಗಿಯೇ ನಾವು ಮೇಕೆದಾಟು ಪಾದಯಾತ್ರೆ ಮಾಡಿದ್ದೆವು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವೇರಿ ನೀರು ತಮಿಳುನಾಡು ಮೂಲಕ ಸಮುದ್ರಕ್ಕೆ ಸೇರುತ್ತಿದೆ. ವ್ಯರ್ಥವಾಗಿ ಹೋಗುವ ಕಾವೇರಿ ನೀರನ್ನು ಬೆಂಗಳೂರಿಗೆ ತರಬೇಕಿದೆ. ಈ ಹಿಂದೆ ಇದ್ದ ಬೊಮ್ಮಾಯಿ ಸರ್ಕಾರ ಈ ಕೆಲಸವನ್ನು ಮಾಡಿಲ್ಲ. ನಾವು ಮೇಕೆದಾಟುನಿಂದ ಕಾವೇರಿ ನೀರನ್ನು ಬೆಂಗಳೂರಿಗೆ ತರುತ್ತೇವೆ ಎಂದರು.
Karnataka Breaking News Live: ಹಂತ ಹಂತವಾಗಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ: ಸಿದ್ದರಾಮಯ್ಯ
ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಐದೂವರೆ ಲಕ್ಷ ಹುದ್ದೆಗಳನ್ನು ಒಂದೇ ಬಾರಿ ಭರ್ತಿ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. 5 ಗ್ಯಾರಂಟಿ ಅನುಷ್ಠಾನಕ್ಕೆ ವರ್ಷಕ್ಕೆ 59 ಸಾವಿರ ಕೋಟಿ ಹಣ ಬೇಕು. ಆದ್ದರಿಂದ ಈ ವರ್ಷ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ವಿಪಕ್ಷದವರು ಏನೇ ಹೇಳಿದರೂ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದರು.
Karnataka Breaking News Live: ಸಿದ್ದರಾಮಯ್ಯರನ್ನು ಕೊಂಡಾಡಿದ ಆದಿಚುಂಚನಗಿರಿ ಶ್ರೀ
ಹಾಸನ: ಒಂದು ಸಮುದಾಯಕ್ಕೆ ಸೀಮಿತವಾಗಿದ್ದ ಕೆಂಪೇಗೌಡರ ಜಯಂತಿಯನ್ನು ಎಲ್ಲರ ಜಯಂತಿಯಾಗಿ ಮಾಡಿದ ಕೀರ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಆದಿಚುಂಚನಗಿರಿ ಶ್ರೀ ಹೇಳಿದರು. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂದು ಸಿದ್ದರಾಮಯ್ಯ ಅವರು ಸಿಎಂ ಆಗಿ ಜಯಂತಿ ಮಾಡಿದ್ದರು. ಇಂದು ಈ ಕಾರ್ಯಕ್ರಮ ರಾಜ್ಯದ ಬೇರೆ ಕಡೆ ಕೂಡ ದೊಡ್ಡ ರೀತಿಯಲ್ಲಿ ಆಗುವಂತೆ ಮಾಡಿದ್ದು ಕೂಡ ಸಿದ್ದರಾಮಯ್ಯನವರೇ ಎಂದರು.
Karnataka Breaking News Live: ಹಾಸನ ವಿಮಾನ ನಿಲ್ದಾಣಕ್ಕೆ ದೇವೇಗೌಡರ ಹೆಸರಿಡುವ ಬಗ್ಗೆ ನಿರ್ಧಾರ: ರಾಜಣ್ಣ
ಹಾಸನ ದೇಶಕ್ಕೆ ಪ್ರಧಾನಮಂತ್ರಿಯನ್ನು ಕೊಟ್ಟಿರುವ ಜಿಲ್ಲೆ. ಹಾಸನ ವಿಮಾನ ನಿಲ್ದಾಣಕ್ಕೆ ದೇವೇಗೌಡರ ಹೆಸರಿಡುವ ಬೇಡಿಕೆ ಇದೆ. ಖಂಡಿತಾ ಈ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.
Karnataka Breaking Kannada News Live: ಮೂವರು ಸಾಧಕರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದ ಡಿಸಿಎಂ
ಬೆಂಗಳೂರು: ಇಂದು ಕೆಂಪೇಗೌಡ ಜಯಂತಿ ಹಿನ್ನಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮೂವರು ಸಾಧಕರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಿದರು. ದೇಶದ ಪ್ರತಿಷ್ಠಿತ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಜರೋಧ ಸಂಸ್ಥೆಯ ಸಂಸ್ಥಾಪಕ ನಿತಿನ್ ಕಾಮತ್, ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Karnataka Breaking Kannada News Live: ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆಯಾಗುತ್ತೆ ಎಂದ ಸಿಎಂ
ಹಾಸನ: ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನಲೆ ಹಾಸನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆ ನಡೆಸುವ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಕೊರೊನಾ ವೇಳೆ ಮೆಡಿಕಲ್ ವಸ್ತುಗಳ ಖರೀದಿಯಲ್ಲಿ ಅವ್ಯವಹಾರ, 40% ಕಮಿಷನ್ ಆರೋಪ ಸೇರಿ ಎಲ್ಲದರ ಬಗ್ಗೆಯೂ ತನಿಖೆ ಆಗುತ್ತೆ. ಜೊತೆಗೆ ಬಿಟ್ ಕಾಯಿನ್ ಅವ್ಯವಹಾರ, ಚಾಮರಾಜನಗರದ ಆಕ್ಸಿಜನ್ ದುರಂತದ ಬಗ್ಗೆ ಕೂಡ ಮರು ತನಿಖೆಯಾಗುತ್ತದೆ ಎಂದರು.
Karnataka Breaking Kannada News Live: ಹಣ ಕೊಡ್ತೀವಿ ಅಂದ್ರೂ ಕೇಂದ್ರ ಸರ್ಕಾರ ಅಕ್ಕಿ ಪೂರೈಸುತ್ತಿಲ್ಲ; ಸಿಎಂ
ಹಾಸನ: ಹಣ ಕೊಡ್ತೀವಿ ಅಂದ್ರೂ ಕೇಂದ್ರ ಸರ್ಕಾರ ಅಕ್ಕಿ ಪೂರೈಸುತ್ತಿಲ್ಲವೆಂದು ಹಾಸನದಲ್ಲಿ ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರವೇನು ಪುಕ್ಕಟೆಯಾಗಿ ರಾಜ್ಯಕ್ಕೆ ಅಕ್ಕಿ ಪೂರೈಸಲ್ಲ. ಬಡವರ ಮೇಲೂ ಗದಾಪ್ರಹಾರ ಮಾಡಲು ಹೊರಟಿದ್ದಾರೆ. ನಾವು ಇಘ ಬೇರೆ ಕಡೆಯಿಂದ ಅಕ್ಕಿ ಖರೀದಿಸಲು ಪ್ರಯತ್ನ ಮಾಡ್ತಿದ್ದೇವೆ. ಈ ಕುರಿತು ನಾಳೆ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
Karnataka Breaking Kannada News Live: ಕೆಂಪೇಗೌಡರು ದೂರ ದೃಷ್ಟಿಯುಳ್ಳ ನಾಡಪ್ರಭು, ಸಿಎಂ ಸಿದ್ದರಾಮಯ್ಯ ಸ್ಮರಣೆ
ಹಾಸನ: ಕೆಂಪೇಗೌಡ ಜಯಂತಿಯನ್ನು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಸರ್ಕಾರ ಆಚರಣೆ ಮಾಡುತ್ತಿದೆ. ಹಾಸನದಲ್ಲಿ ಈ ವರ್ಷ ರಾಜ್ಯಮಟ್ಟದ ಕೆಂಪೇಗೌಡ ಜಯಂತಿ ನಡೆಯುತ್ತಿದ್ದು, ಇದು 514 ನೇ ಜಯಂತಿಯಾಗಿದೆ. ಕೆಂಪೇಗೌಡರು 1510 ರಲ್ಲಿ ಜನಿಸಿದ್ದು, ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದ ನಗರ ಆಗಬೇಕಾದರೆ ಕೆಂಪೇಗೌಡರು ಕಾರಣ. ಕೆಂಪೇಗೌಡರು ದೂರ ದೃಷ್ಟಿಯುಳ್ಳ ನಾಡ ಪ್ರಭು ಆಗಿದ್ದರು ಎಂದರು.
Karnataka Breaking Kannada News Live: ಹಾಸನಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾಸನ: ಇಂದು ಕೆಂಪೇಗೌಡ ಜಯಂತಿ ದಿನಾಚರಣೆ ಹಿನ್ನಲೆ ಮೊದಲ ಬಾರಿಗೆ ಹಾಸನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಲಿಕಾಪ್ಟರ್ ಮೂಲಕ ಹಾಸನದ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ.
Karnataka Breaking Kannada News Live: ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನಲೆ ಮೈ ಚಳಿ ಬಿಟ್ಟು ಕುಣಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು
ಮಂಡ್ಯ: ಇಂದು ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನಲೆಯಲ್ಲಿ ತಮಟೆ ಸದ್ದಿಗೆ ಮೈ ಚಳಿ ಬಿಟ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಕುಣಿದಿದ್ದಾರೆ. ಹೌದು ಮಂಡ್ಯದ ಕಲಾ ಮಂದಿರದಲ್ಲಿ ಯುವಕ ಯುವತಿಯರು ತಮಟೆ, ಡೊಳ್ಳು ಶಬ್ಧಕ್ಕೆ ಹುಚ್ಚೆದ್ದು ಕುಣಿದಿದ್ದು, ಕೆಂಪೇಗೌಡ ಮೆರವಣಿಗೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.
Karnataka Breaking Kannada News Live: ಹಾಸನದಲ್ಲಿ ರಾಜ್ಯ ಸರ್ಕಾರದಿಂದ ಕೆಂಪೇಗೌಡರ ಜಯಂತಿ ಆಚರಣೆ; ಮೆರವಣಿಗೆ ಆರಂಭ
ಹಾಸನ: ಇದೇ ಮೊದಲ ಬಾರಿಗೆ ಹಾಸನದಲ್ಲಿ ರಾಜ್ಯ ಸರ್ಕಾರದಿಂದ ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಗಿದ್ದು, ಜಯಂತಿ ಹಿನ್ನೆಲೆಯಲ್ಲಿ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ ಜೊತೆಗೆ ವಿವಿಧ ಕಲಾ ತಂಡಗಳ ಜೊತೆ ಆಕರ್ಷಕ ಮೆರವಣಿಗೆ ಆರಂಭವಾಗಿದೆ. ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರಿಂದ ಮೆರವಣಿಗೆಗೆ ಚಾಲನೆ ಸಿಕ್ಕಿದ್ದು, ಇದು ಹಾಸನದ ಕಲಾಭವನದಿಂದ ಹೇಮಾವತಿ ಪ್ರತಿಮೆ, ಎನ್.ಆರ್.ವೃತ್ತದ ಮೂಲಕ ಬಹಿರಂಗ ಸಭೆ ನಡೆಯುವ ಸ್ಥಳಕ್ಕೆ ಆಗಮಿಸಲಿದೆ. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ.
Karnataka Breaking Kannada News Live: ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಡಿಸಿಎಂ ಡಿಕೆಶಿವಕುಮಾರ್ ಮಾಲಾರ್ಪಣೆ ಮಾಡಿದ್ದಾರೆ. ಈ ವೇಳೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ಸಚಿವ ಕೃಷ್ಣ ಭೈರೇಗೌಡ ಸಾಥ್ ನೀಡಿದರು.
Karnataka Breaking Kannada News Live: 31 ಜಿಲ್ಲೆಗಳಲ್ಲೂ ಕೆಂಪೇಗೌಡ ಜಯಂತಿ ಆಚರಿಸುತ್ತಿದ್ದೇವೆ; ಸಿಎಂ
ಬೆಂಗಳೂರು: ರಾಜ್ಯದ31 ಜಿಲ್ಲೆಗಳಲ್ಲೂ ಕೆಂಪೇಗೌಡ ಜಯಂತಿ ಆಚರಿಸುತ್ತಿದ್ದೇವೆ ಎಂದು ವಿಧಾನಸೌಧ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೆಂಪೇಗೌಡ ಜಯಂತಿ ಕುರಿತು ಮಾತನಾಡಿದ ಅವರು ‘ಈ ಹಿಂದೆ ನಮ್ಮ ಸರ್ಕಾರ ಕೆಂಪೇಗೌಡ ಜಯಂತಿ ಆರಂಭಿಸಿದ್ದು. ಸರ್ಕಾರದಿಂದ ಕೆಂಪೇಗೌಡ ಜಯಂತಿ ಆಚರಿಸಲು ಆದೇಶ ನೀಡಿದ್ದೆವು. ಕೆಂಪೇಗೌಡ ಪ್ರಾಧಿಕಾರವನ್ನು ರಚನೆ ಮಾಡಿದ್ದು ನಾವೇ ಎಂದರು.
Karnataka Breaking Kannada News Live: ರಾಜ್ಯದೊಳಗೆ ಸಂಚರಿಸಲಿರುವ ಮೊದಲ ವಂದೇ ಭಾರತ್ ರೈಲು
ಧಾರವಾಡ: ಈಗಾಗಲೇ ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ರಾಜ್ಯದೊಳಗೆ ಸಂಚರಿಸಲಿರುವ ಮೊದಲ ವಂದೇ ಭಾರತ್ ರೈಲು ಇದಾಗಿದೆ. ಇನ್ನು ಧಾರವಾಡದಲ್ಲಿ ರಾಜ್ಯಪಾಲ ಗೆಹ್ಲೋಟ್, ಕೇಂದ್ರ ಸಚಿವ ಜೋಶಿ ಹಸಿರು ನಿಶಾನೆ ತೋರಿಸಿದ್ದಾರೆ. ವಾರದಲ್ಲಿ 6 ದಿನ ಧಾರವಾಡ-ಬೆಂಗಳೂರು ಮಾರ್ಗದಲ್ಲಿ ಸಂಚಾರ ಮಾಡಲಿದೆ.
Karnataka Breaking Kannada News Live: ಧಾರವಾಡ-ಬೆಂಗಳೂರು ಸೇರಿದಂತೆ ಒಟ್ಟು 5 ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಮೋದಿ
ಮಧ್ಯಪ್ರದೇಶ: ಧಾರವಾಡ-ಬೆಂಗಳೂರು ಸೇರಿದಂತೆ ಒಟ್ಟು 5 ವಂದೇ ಭಾರತ್ ರೈಲುಗಳಿಗೆ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಿಂದ 1) ರಾಣಿ ಕಮಲಾಪತಿ-ಜಬಲ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, 2) ಖಜುರಾಹೊ-ಭೋಪಾಲ್-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್,3) ಮಡಗಾಂವ್(ಗೋವಾ)-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್,4) ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು,5) ಹತಿಯಾ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಏಕಕಾಲದಲ್ಲಿ ಚಾಲನೆ ನೀಡಿದ್ದಾರೆ. ಈ ವೇಳೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಉಪಸ್ಥಿತರಿದ್ದರು.
#WATCH | Madhya Pradesh | PM Narendra Modi flags off five Vande Bharat trains from Rani Kamlapati Railway Station in Bhopal.
Vande Bharat trains that have been flagged off today are-Bhopal (Rani Kamalapati)-Indore Vande Bharat Express; Bhopal (Rani Kamalapati)-Jabalpur Vande… pic.twitter.com/N4a72zwR0m
— ANI (@ANI) June 27, 2023
Karnataka Breaking Kannada News Live: ರಾಣಿ ಕಮಲಾಪತಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶ: ಭೋಪಾಲ್ನ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಕೆಲವೇ ಹೊತ್ತಿನಲ್ಲಿ ದೇಶದ 5 ವಂದೇ ಭಾರತ್ ರೈಲುಗಳಿಗೆ ಏಕಕಾಲದಲ್ಲಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಸಿಎಂ ಶಿವರಾಜ್ ಸಿಂಗ್ ಉಪಸ್ಥಿತರಿದ್ದಾರೆ.
Karnataka Breaking Kannada News Live: ಬೆಳಗಾವಿಯಿಂದಲೂ ವಂದೇ ಭಾರತ್ ಸಂಚಾರ ಶುರು ಮಾಡ್ತೇವೆ ಎಂದ ಕೇಂದ್ರ ಸಚಿವ ಜೋಶಿ
ಧಾರವಾಡ: ಬೆಳಗಾವಿಯಿಂದ ವಂದೇ ಭಾರತ್ ರೈಲು ಸೇವೆ ಬೇಕು ಎನ್ನುವ ಬೇಡಿಕೆ ಇದೆ. ಸಧ್ಯದಲ್ಲೇ ಬೆಳಗಾವಿಯಿಂದಲೂ ವಂದೇ ಭಾರತ್ ಸಂಚಾರ ಶುರು ಮಾಡ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಮಾತನಾಡಿದ ಅವರು ‘ ವಂದೇ ಭಾರತ್ ಸ್ವದೇಶಿ ನಿರ್ಮಿತ ರೈಲು, ಈ ಹಿಂದೆ ದೇಶದಲ್ಲಿ ವಿದ್ಯುತ್ ಸಮಸ್ಯೆ ಇತ್ತು. ಆದರೆ, ಇವತ್ತು ವಿದ್ಯುತ್ ರಫ್ತು ಮಾಡೋ ಹಂತಕ್ಕೆ ಬಂದಿದ್ದೇವೆ ಎಂದಿದ್ದಾರೆ.
Karnataka Breaking Kannada News Live: ವಂದೇ ಭಾರತ್ ರೈಲು 180 ಕಿಮೀ ವೇಗದಲ್ಲಿ ಓದರೂ ಗ್ಲಾಸ್ನಲ್ಲಿನ ನೀರು ಅಲುಗಾಡಿಲ್ಲ; ಜೋಶಿ
ಧಾರವಾಡ: ಇಂದು ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ‘ ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿನ ವೇಳೆ ಕಡಿಮೆ ಆಗಬೇಕಿದ್ದು, ಅದರ ಬಗ್ಗೆಯೂ ಕೆಲಸ ನಡೆದಿದೆ. ವಂದೇ ಭಾರತ್ ಸ್ವದೇಶಿ ನಿರ್ಮಿತ ರೈಲು, ಮೋದಿಯವರ ಆತ್ಮನಿರ್ಭರ ಅಂದರೆ ಇದು. ಈ ಮುಂಚೆ ದೇಶದಲ್ಲಿ ವಿದ್ಯುತ್ ಸಮಸ್ಯೆ ಇತ್ತು. ಆದರೆ, ಇವತ್ತು ವಿದ್ಯುತ್ ರಫ್ತು ಮಾಡೋ ಹಂತಕ್ಕೆ ನಾವು ಬಂದಿದ್ದೇವೆ. ಇವತ್ತು ವಂದೇ ಭಾರತ್ 180 ಕಿಮೀ ವೇಗದಲ್ಲಿ ಹೋದರೂ ಗ್ಲಾಸ್ನಲ್ಲಿನ ನೀರು ಅಲುಗಾಡಿಲ್ಲ ಎಂದರು.
Karnataka Breaking Kannada News Live: ಸಚಿವರಾದ ಬಳಿಕ ಮೊದಲ ಭಾರಿಗೆ ತಲಕಾವೇರಿ ಭೇಟಿ ನೀಡಿದ ಸಚಿವ ಬೊಸರಾಜು
ಕೊಡಗು: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಸಚಿವ ಬೊಸರಾಜು ಅವರು ತಲಕಾವೇರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಜೀವನದಿಗೆ ಪೂಜೆ ಸಲ್ಲಿಸಿ, ಭಾಗಮಂಡಲ ಭಗಂಡೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆಯಲ್ಲಿ ಪಾಲ್ಗೋಂಡಿದ್ದು, ಸಚಿವರಿಗೆ ಮಡಿಕೇರಿ ಶಾಸಕ ಡಾ ಮಂಥರ್ ಗೌಡ ಸಾತ್ ನೀಡಿದ್ದಾರೆ.
Karnataka Breaking Kannada News Live: ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ; ಕಾರ್ಯಕ್ರಮಕ್ಕೆ ಆಗಮಿಸಲಿರುವ ರಾಜ್ಯಪಾಲರು
ಧಾರವಾಡ: ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ ಹಿನ್ನಲೆ, ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗಮಿಸಲಿದ್ದಾರೆ. ಒಟ್ಟು 8 ಬೋಗಿವುಳ್ಳ, 530 ಆಸನಗಳಿರುವ ರೈಲು ಇದಾಗಿದ್ದು, ಇದರಲ್ಲಿ ಎಕ್ಸಿಕ್ಯೂಟಿವ್ ಬೋಗಿಯಲ್ಲಿ 52, ಸಾಮಾನ್ಯ ಬೋಗಿಯಲ್ಲಿ 78, 2 ಮೋಟಾರ್ ಕಾರ್ ಬೋಗಿಯಲ್ಲಿ ತಲಾ 44 ಆಸನಗಳಿವೆ.
Karnataka Breaking Kannada News Live: ಕೆಂಪೇಗೌಡರ ಜಯಂತಿಯ ಶುಭಾಶಯ ಕೋರಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ
ಬೆಂಗಳೂರು: ಇಂದು(ಜೂ.27) ಕೆಂಪೇಗೌಡರ ಜಯಂತಿ ಹಿನ್ನಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ‘ನಾಡಿನ ಸಮಸ್ತ ಜನತೆಗೆ, ಜಗತ್ತಿನೆಲ್ಲೆಡೆ ನೆಲೆಸಿರುವ ಕನ್ನಡಿಗರೆಲ್ಲರಿಗೂ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಶುಭಾಶಯಗಳು ಎಂದು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ನಾಡಪ್ರಭುಗಳು ಬೆಂಗಳೂರಿನ ನಿರ್ಮಾತೃ, ಅಪ್ರತಿಮ ಆಡಳಿತಗಾರರಷ್ಟೇ ಆಗಿರಲಿಲ್ಲ. ಅವರೊಬ್ಬರು ಅನನ್ಯ ದಾರ್ಶನಿಕರು, ಶಾಂತಿಪ್ರಿಯರು, ಸರ್ವಜನರ ಶ್ರೇಯಸ್ಸಿಗಾಗಿ ದುಡಿದ ಮಹಾನ್ ಮಾನವತಾವಾದಿ. ಅಭಿವೃದ್ಧಿ, ಶಾಂತಿ, ಸೌಹಾರ್ದತೆ, ನಗರಾಭಿವೃದ್ಧಿ, ನೀರಾವರಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾಡಪ್ರಭುಗಳು ಹಾಕಿಕೊಟ್ಟ ಹಾದಿಯಲ್ಲಿ ಸಾಗೋಣ. ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಬದ್ಧತೆಯಿಂದ ಶ್ರಮಿಸೋಣ. ಎಂದಿದ್ದಾರೆ.
ನಾಡಿನ ಸಮಸ್ತ ಜನತೆಗೆ, ಜಗತ್ತಿನೆಲ್ಲೆಡೆ ನೆಲೆಸಿರುವ ಕನ್ನಡಿಗರೆಲ್ಲರಿಗೂ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಶುಭಾಶಯಗಳು.
ನಾಡಪ್ರಭುಗಳು ಬೆಂಗಳೂರಿನ ನಿರ್ಮಾತೃ, ಅಪ್ರತಿಮ ಆಡಳಿತಗಾರರಷ್ಟೇ ಆಗಿರಲಿಲ್ಲ, ಅವರೊಬ್ಬರು ಅನನ್ಯ ದಾರ್ಶನಿಕರು, ಶಾಂತಿಪ್ರಿಯರು, ಸರ್ವಜನರ ಶ್ರೇಯಸ್ಸಿಗಾಗಿ ದುಡಿದ ಮಹಾನ್ ಮಾನವತಾವಾದಿ. 1/2#ಕೆಂಪೇಗೌಡರ_ಜಯಂತಿ pic.twitter.com/Hq38tbNHUf
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 27, 2023
Karnataka Breaking Kannada News Live: ಏಕಕಾಲಕ್ಕೆ 5 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿರುವ ಪ್ರಧಾನಿ
ಧಾರವಾಡ: ಇಂದು(ಜೂ.27) ಒಂದೇ ದಿನ ದೇಶದ ಐದು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚ್ಯುವಲ್ ಮೂಲಕ ಹಸಿರು ನಿಶಾನೆ ತೋರಿಸಲಿದ್ದಾರೆ. ಬೆಳಗ್ಗೆ 10:30 ರ ಸುಮಾರಿಗೆ ಐದು ರೈಲುಗಳುಗೆ ಚಾಲನೆ ಸಿಗಲಿದೆ. ರಾಣಿ ಕಮಲಾಪತಿ-ಜಬಲ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್, ಖಜುರಾಹೊ-ಭೋಪಾಲ್-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್, ಮಡಗಾಂವ್ (ಗೋವಾ)-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್, ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್, ಹತಿಯಾ-ಪಾಟ್ನಾ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.
Karnataka Breaking Kannada News Live: ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ವರ್ಚ್ಯುವಲ್ ಮೂಲಕ ಚಾಲನೆ ನೀಡಲಿರುವ ಪ್ರಧಾನಿ
ಧಾರವಾಡ: ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ವರ್ಚ್ಯುವಲ್ ಮೂಲಕ ಇಂದು(ಜೂ.27) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಭೋಪಾಲದಿಂದ ವರ್ಚ್ಯುವಲ್ನಲ್ಲಿ ಪ್ರಧಾನಿ ಮೋದಿ ಅವರು ಧಾರವಾಡ-ಬೆಂಗಳೂರು ಸೇರಿ ದೇಶದ 5 ವಂದೇ ಭಾರತ ರೈಲುಗಳಿಗೆ ಏಕಕಾಲಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಪ್ರಧಾನಿ ಮೋದಿ ಕಾರ್ಯಕ್ರಮ ಆರಂಭವಾಗಲಿದ್ದು, ಮೋದಿಯವರ ಸಾಂಕೇತಿಕ ಉದ್ಘಾಟನೆ ಬಳಿಕ ಬೆಳಗ್ಗೆ 10.30ಕ್ಕೆ ಧಾರವಾಡದಿಂದ ರೈಲು ಹೊರಡಲಿದ್ದು, ಸಂಜೆ 6.40ಕ್ಕೆ ಬೆಂಗಳೂರು ತಲುಪಲಿದೆ.
Karnataka Breaking Kannada News Live: ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಹಾಸನಕ್ಕೆ ತೆರಳಲಿರುವ ಸಿಎಂ, ಡಿಸಿಎಂ
ಬೆಂಗಳೂರು: ಇಂದು ಹಾಸನದಲ್ಲಿ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಸನಕ್ಕೆ ತೆರಳಲಿದ್ದು, ಮಧ್ಯಾಹ್ನ 12.30ಕ್ಕೆ ಹಾಸನದ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಿಲಿದ್ದಾರೆ. ಜೊತೆಗೆ ಕಾರ್ಯಕ್ರಮದಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಇತ್ಯಾದಿ ಗಣ್ಯರು ಭಾಗಿಯಾಗಲಿದ್ದಾರೆ.
Karnataka Breaking Kannada News Live: ಮೊದಲ ಬಾರಿಗೆ ಬೆಂಗಳೂರಿನ ಹೊರಗೆ ಕೆಂಪೇಗೌಡರ ಜಯಂತಿ ಕಾರ್ಯಕ್ರಮ
ಬೆಂಗಳೂರು: ಮೊದಲ ಬಾರಿಗೆ ಬೆಂಗಳೂರಿನ ಹೊರಗೆ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಸರ್ಕಾರದ ಅಧಿಕೃತ ಕಾರ್ಯಕ್ರಮವಾದ ಹಿನ್ನೆಲೆ ಇಂದು(ಜೂ.27) ಹಾಸನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಲಿದ್ದಾರೆ. ಇನ್ನು ಹಾಸನದ ಹಳೇ ತಾಲೂಕು ಕಚೇರಿ ಪಕ್ಕದ ರಸ್ತೆಯಲ್ಲಿ ಕಾರ್ಯಕ್ರಮಕ್ಕೆ ಆಯೋಜನೆ ಮಾಡಲಾಗಿದೆ.
Karnataka Breaking Kannada News Live: ಕರಾವಳಿಯಲ್ಲಿ 5 ದಿನ ಮಳೆರಾಯನ ಆರ್ಭಟ
ಬೆಂಗಳೂರು: ರಾಜ್ಯದ ಕೆಲವೆಡೆ ಮಳೆಗಾಗಿ ಪ್ರಾರ್ಥನೆ, ಪೂಜೆ ನಡೆಯುತ್ತಿದ್ದರೆ, ಇತ್ತ ಕರಾವಳಿಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಅದರಂತೆ ಜುಲೈ 1ರವೆರೆಗೂ ಕರಾವಳಿಯಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Published On - Jun 27,2023 7:02 AM