Karnataka Breaking Kannada News HighLights: ಡಿಸೆಂಬರ್ 4ರೊಳಗೆ ಪರಿಷತ್ ಪ್ರತಿಪಕ್ಷ ನಾಯಕನ ಹೆಸರು ಘೋಷಣೆ

| Edited By: Kiran Hanumant Madar

Updated on:Nov 17, 2023 | 10:32 PM

Karnataka Breaking News HighLights: ಕರ್ನಾಟಕದಲ್ಲಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿಡಿಯೋ, ಮಾಜಿ ಮುಖ್ಯಮಂತ್ರಿಗಳ ವಿದ್ಯುತ್​ ಕಳ್ಳತ ಪ್ರಕರಣ, ರಾಜ್ಯಾಧ್ಯಕ್ಷರ ನೇಮಕ ಮತ್ತು ವಿಪಕ್ಷ ನಾಯಕನ ಆಯ್ಕೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಇದರೊಂದಿಗೆ ರಾಜ್ಯದ ಹವಾಮಾನ, ರಾಜಕೀಯ ಸೇರಿದಂತೆ ಅನೇಕ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿ ಟಿವಿ9 ಡಿಜಿಟಲ್​ನಲ್ಲಿ.....

Karnataka Breaking Kannada News HighLights: ಡಿಸೆಂಬರ್ 4ರೊಳಗೆ ಪರಿಷತ್ ಪ್ರತಿಪಕ್ಷ ನಾಯಕನ ಹೆಸರು ಘೋಷಣೆ
ಬಿಜೆಪಿ

Karnataka Breaking News Updates: ಕರ್ನಾಟಕ ಮುಖ್ಯಮಂತ್ರಿ ಪುತ್ರರ ವಿಡಿಯೋ, ಮಾಜಿ ಮುಖ್ಯಮಂತ್ರಿಗಳ ವಿದ್ಯುತ್​ ಕಳ್ಳತ, ರಾಜ್ಯಾಧ್ಯಕ್ಷರ ನೇಮಕ ಮತ್ತು ವಿಪಕ್ಷ ನಾಯಕನ ಆಯ್ಕೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಇದರೊಂದಿಗೆ ಮಳೆಯಿಲ್ಲದೆ ಬರಗಾಲ ಆವರಿಸಿದ್ದು, ಬರ ಪರಿಹಾರದ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಗುದ್ದಾಟ ನಡೆಯುತ್ತಿದೆ. ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಗುರುವಾರ ತಂದೆ (ಸಿದ್ದರಾಮಯ್ಯ) ಮೊಬೈಲ್​​ನಲ್ಲಿ ನಡೆಸಿದ ಸಂಭಾಷಣೆ ವಿವಾದಕ್ಕೆ ಕಾರಣವಾಗಿದೆ. 48 ಸೆಕೆಂಡ್​​ನ ಈ ವಿಡಿಯೋ ಸಾಕಷ್ಟು ವೈರಲ್​​ ಆಗುತ್ತಿದ್ದು, ಸರ್ಕಾರವನ್ನು ಹಣಿಯಲು ವಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಿದೆ. ಈ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಗುದ್ದಾಟ ನಡೆಯುತ್ತಿದೆ. ಇನ್ನು ಇಂದು (ನ.17) ಬಿಜೆಪಿ ಶಾಸಕಾಂಗ ಪಕ್ಷ ಸಭೆ ನಡೆಯಲಿದ್ದು, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕದಿಂದ ಸ್ವಪಕ್ಷದಲ್ಲೇ ಅಸಮಾಧಾನ ಹುಟ್ಟು ಹಾಕಿದೆ. ಇನ್ನು ಮನೆಗೆ ಅಕ್ರಮವಾಗಿ ವಿದ್ಯುತ್​​ ಪಡೆದಿರುವ ವಿಚಾರ ಹೆಚ್​ಡಿ ಕುಮಾರಸ್ವಾಮಿ ಅವರು ಮುಚುಗರ ಪಡುವಂತೆ ಮಾಡಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್​ ಅಪ್ಡೇಟ್ಸ್​​ ಇಲ್ಲಿದೆ…..

LIVE NEWS & UPDATES

The liveblog has ended.
 • 17 Nov 2023 10:31 PM (IST)

  Karnataka News Live: 71 ಸಿವಿಲ್ ಪೊಲೀಸ್ ಇನ್ಸ್​ಪೆಕ್ಟರ್​​ಗಳ ವರ್ಗಾವಣೆ

  ಬೆಂಗಳೂರು: 71 ಸಿವಿಲ್ ಪೊಲೀಸ್ ಇನ್ಸ್​ಪೆಕ್ಟರ್​​ಗಳ ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ.

 • 17 Nov 2023 09:55 PM (IST)

  Karnataka News Live: 66 ಶಾಸಕರ ಪೈಕಿ 5 ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಗೈರು

  ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ 66 ಶಾಸಕರ ಪೈಕ ಐವರು ಶಾಸಕರು ಗೈರಾಗಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಎಸ್.ಟಿ.ಸೋಮಶೇಖರ್ ಹಾಗೂ ಅರೆಬೈಲ್ ಶಿವರಾಮ್ ಹೆಬ್ಬಾರ್ ಸೇರಿ 5 ಶಾಸಕರು ಶಾಸಕಾಂಗ ಪಕ್ಷದ ಸಭೆ​ ಗೈರಾಗಿದ್ದಾರೆ.

 • 17 Nov 2023 09:04 PM (IST)

  Karnataka News Live: ‘ನನ್ನನ್ನು ವಿಪಕ್ಷ ನಾಯಕನಾಗಿ ಆಯ್ಕೆ ಮಾಡಿದ ವರಿಷ್ಠರಿಗೆ ಧನ್ಯವಾದಗಳು;ಆರ್ ಅಶೋಕ

  ಬೆಂಗಳೂರು: ‘ನನ್ನನ್ನು ವಿಪಕ್ಷ ನಾಯಕನಾಗಿ ಆಯ್ಕೆ ಮಾಡಿದ ವರಿಷ್ಠರಿಗೆ ಧನ್ಯವಾದ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ, ನಮ್ಮ ಶಾಸಕರಿಗೂ ಧನ್ಯವಾದ ಹೇಳುತ್ತೇನೆ. ತುರ್ತುಪರಿಸ್ಥಿತಿ ವೇಳೆ ಹೋರಾಟ ಮಾಡಿ 1 ತಿಂಗಳು ಜೈಲಿಗೆ ಹೋಗಿದ್ದೆ. 20 ವರ್ಷಗಳ ಕಾಲ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ಎಲ್ಲವನ್ನೂ ಪರಿಗಣನೆ ಮಾಡಿ ನನಗೆ ವಿಪಕ್ಷ ನಾಯಕ ಸ್ಥಾನ ನೀಡಿದ್ದಾರೆ. ಉತ್ತರಹಳ್ಳಿ, ಪದ್ಮನಾಭನಗರ ಕ್ಷೇತ್ರದ ಜನ 7 ಬಾರಿ ಆಯ್ಕೆ ಮಾಡಿದ್ದಾರೆ. ಒಂದೇ ಪಕ್ಷ, ಒಂದೇ ಚಿಹ್ನೆ, ಒಂದೇ ಸಿದ್ಧಾಂತದಡಿ 7 ಬಾರಿ ಗೆದ್ದಿದ್ದೇನೆ. ಆರಂಭದಿಂದಲೂ ಸಂಘ ಪರಿವಾರದಲ್ಲಿ ಕೆಲಸ ಮಾಡಿದ್ದೇವೆ ಎಂದರು.

 • 17 Nov 2023 08:01 PM (IST)

  Karnataka News Live: ಆರ್​ ಅಶೋಕ್​ಗೆ ಒಲಿದ ವಿಪಕ್ಷ ನಾಯಕನ ಪಟ್ಟ

  ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಆರ್​.ಅಶೋಕ್​ ಆಯ್ಕೆ ಆಗಿದ್ದಾರೆ. ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕರಾಗಿರುವ ಅವರನ್ನು ಆಯ್ಕೆ ಮಾಡಲಾಗಿದೆ.

 • 17 Nov 2023 07:47 PM (IST)

  Karnataka News Live: ಹೋಟೆಲ್ ಮುಂದೆ ಸಂಭ್ರಮಾಚರಣೆಗೆ ಅಶೋಕ್ ಬೆಂಬಲಿಗರ ಸಿದ್ಧತೆ

  ಬೆಂಗಳೂರು: ಐಟಿಸಿ ಗಾರ್ಡೇನಿಯಾ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಯುತ್ತಿದ್ದು, ವಿಧಾನಸಭೆ ವಿಪಕ್ಷ ನಾಯಕನಾಗಿ ಅಶೋಕ್ ಆಯ್ಕೆಯಾದರೆ, ಹೋಟೆಲ್ ಮುಂದೆ ಸಂಭ್ರಮಾಚರಣೆಗೆ ಅಶೋಕ್ ಬೆಂಬಲಿಗರ ಸಿದ್ಧತೆ ಮಾಡಿಕೊಂಡಿದ್ದಾರೆ. ಪದ್ಮನಾಭನಗರ ಕ್ಷೇತ್ರದ ಬಹುತೇಕ ಬಿಜೆಪಿ ಕಾರ್ಯಕರ್ತರು ಜಮಾವಣೆವಾಗಿದ್ದಾರೆ.

 • 17 Nov 2023 07:43 PM (IST)

  Karnataka News Live: ಬಿಜೆಪಿ ಶಾಸಕಾಂಗ ಪಕ್ಷದ ಗೈರು ಬೆನ್ನಲ್ಲೇ ಶಾಸಕ ಯತ್ನಾಳ್​ ಟ್ವೀಟ್​

  ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಗೈರು ಬೆನ್ನಲ್ಲೇ ಶಾಸಕ ಯತ್ನಾಳ್​ ಟ್ವೀಟ್​ ಮಾಡಿದ್ದು, ಒಬ್ಬ ಯೋಧ ಯಾವುದನ್ನೂ ದೂರಲು ಅಥವಾ ವಿಷಾದಿಸಲು ಸಾಧ್ಯವಿಲ್ಲ. ಅವನ ಜೀವನ ಅಂತ್ಯವಿಲ್ಲದ ಸವಾಲು ಎಂದು ಟ್ವೀಟ್​ ಮಾಡಿದ್ದಾರೆ.

 • 17 Nov 2023 07:20 PM (IST)

  Karnataka News Live: ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಗೈರಾದ ಹಲವು ಶಾಸಕರು

  ಬೆಂಗಳೂರು: ಇಂದು ಬಿಜೆಪಿ ಶಾಸಕ ಪಕ್ಷದ ಸಭೆಯನ್ನು ಬೆಂಗಳೂರಿನ ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್​ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದೀಗ ಕೆಲ ಶಾಸಕರುಗಳು ಸಭೆಗೆ ಗೈರಾಗಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ. ಸೋಮಶೇಖರ್ ಸಭೆಗೆ ಗೈರಾಗಿದ್ದಾರೆ.

 • 17 Nov 2023 07:07 PM (IST)

  Karnataka News Live: ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿರುವ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್

  ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಗೈರಾಗಿದ್ದಾರೆ. ಸಭೆಯ ಬಗ್ಗೆ ತಿಳಿದಿದ್ದರೂ ಸೋಮಶೇಖರ್ ದೆಹಲಿಗೆ ತೆರಳಲಿದ್ದಾರೆ.

 • 17 Nov 2023 06:42 PM (IST)

  Karnataka News Live: ವಿಪಕ್ಷ ನಾಯಕರಾಗಿ ಶಾಸಕ ಆರ್ ಅಶೋಕ್ ಘೋಷಣೆ ಬಹುತೇಕ ಪಕ್ಕಾ

  ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕರಾಗಿ ಶಾಸಕ ಆರ್. ಅಶೋಕ್ ಘೋಷಣೆ ಬಹುತೇಕ ಪಕ್ಕಾ ಆಗಿದೆ. ಅಧಿಕೃತ ಘೋಷಣೆ ಒಂದೇ ಬಾಕಿ ಇದ್ದು, ಕೆಲವೇ ನಿಮಿಷಗಳಲ್ಲಿ ಅಧಿಕೃತ ಘೋಷಣೆ ನಿರೀಕ್ಷೆಯಿದೆ.

 • 17 Nov 2023 06:37 PM (IST)

  Karnataka News Live: ಬಿಜೆಪಿ ಶಾಸಕಾಂಗ ಪಕ್ಷದ ಸಭೆ; ವೀಕ್ಷಕರರಾಗಿ ನಿರ್ಮಲಾ, ದುಷ್ಯಂತ್ ಕುಮಾರ್ ಉಪಸ್ಥಿತಿ

  ಬೆಂಗಳೂರು: ಬೆಂಗಳೂರಿನ ಐಟಿಸಿ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಆರಂಭವಾಗಿದ್ದು,  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ವಿಧಾನಸಭೆ, ಪರಿಷತ್​ ವಿಪಕ್ಷ ನಾಯಕರ ಆಯ್ಕೆ ಬಗ್ಗೆ ಚರ್ಚೆ ಶುರುವಾಗಿದ್ದು, ವೀಕ್ಷಕರರಾಗಿ ನಿರ್ಮಲಾ, ದುಷ್ಯಂತ್ ಕುಮಾರ್ ಉಪಸ್ಥಿತರಿದ್ದಾರೆ.

 • 17 Nov 2023 06:29 PM (IST)

  Karnataka News Live: ನಾನು ಕೂಡ ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿ; ಆರಗ ಜ್ಞಾನೇಂದ್ರ

  ಬೆಂಗಳೂರು: ನಾನು ಕೂಡ ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿ ಎಂದು ಬೆಂಗಳೂರಿನ ಐಟಿಸಿ ಹೋಟೆಲ್​ನಲ್ಲಿ ಆರಗ ಜ್ಞಾನೇಂದ್ರ ಹೇಳಿದರು. ‘ವಿಧಾನಸಭೆ ವಿಪಕ್ಷ ನಾಯಕ ಸ್ಥಾನ ನೀಡಿದರೆ ನಿಭಾಯಿಸುವೆ ಎಂದರು.

 • 17 Nov 2023 06:27 PM (IST)

  Karnataka News Live: ಬಿಎಲ್​ಪಿ ಸಭೆಗೂ ಮುನ್ನ 2 ತಂಡಗಳಾಗಿ ತೆರಳಿದ ಬಿಜೆಪಿ ಶಾಸಕರು

  ಬೆಂಗಳೂರು: ಬಿಎಲ್​ಪಿ ಸಭೆಗೂ ಮುನ್ನ ಬಿಜೆಪಿ ಶಾಸಕರು 2 ತಂಡಗಳಾಗಿ ತೆರಳಿದ್ದಾರೆ. ಶಾಸಕ ಡಾ.ಅಶ್ವತ್ಥ್​ ನಾರಾಯಣ ಜೊತೆ ಭೈರತಿ ಬಸವರಾಜ್​, ಮುನಿರತ್ನ, ಎಸ್.ಆರ್.ವಿಶ್ವನಾಥ್ ಸೇರಿದಂತೆ ಕೆಲವು ಶಾಸಕರು ಆಗಮಿಸಿದರೆ, ಅಶೋಕ್ ಜತೆ ಸುನೀಲ್ ಕುಮಾರ್, ಆರಗ ಸೇರಿ ಕೆಲವರು ಬಂದಿದ್ದಾರೆ.

 • 17 Nov 2023 06:23 PM (IST)

  Karnataka News Live: ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಹೈಕಮಾಂಡ್​ ವೀಕ್ಷಕರ ಸಭೆ; ಯಾರಿಗೂ ಬೇಸರ ಆಗಿಲ್ಲ; ಬೆಲ್ಲದ್

  ಬೆಂಗಳೂರು: ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಹೈಕಮಾಂಡ್​ ವೀಕ್ಷಕರ ಸಭೆ ನಡೆಸಿದ್ದು, ಈ ವೇಳೆ ಯತ್ನಾಳ್​ ಸೇರಿದಂತೆ ಬೆಲ್ಲದ್ ಅವರು ಹೊರ ಬಂದಿದ್ದಾರೆ. ಈ ವೇಳೆ ಮಾತನಾಡಿದ ಅವರು ‘ವೀಕ್ಷಕರು ಒನ್ ಟು ಒನ್ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಯಾರಿಗೂ ಬೇಸರ ಆಗಿಲ್ಲ, ಬಹಿಷ್ಕಾರ ಮಾಡಿಲ್ಲ. ಉತ್ತರ ಕರ್ನಾಟಕ ಭಾಗದ ಕಡೆ ಹೆಚ್ಚು ಶಾಸಕರಿದ್ದಾರೆ. ಇನ್ನು ಏನೂ ನಿರ್ಧಾರ ಆಗಿಲ್ಲವಲ್ಲ ಎಂದರು.

 • 17 Nov 2023 06:15 PM (IST)

  Karnataka News Live: ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಹೈಕಮಾಂಡ್​ ವೀಕ್ಷಕರ ಸಭೆ

  ಬೆಂಗಳೂರು: ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಪಕ್ಷದ ಪ್ರಮುಖರ ಜೊತೆ ಹೈಕಮಾಂಡ್​ ವೀಕ್ಷಕರ ಸಭೆ ನಡೆಸಿದೆ. ಈ ವೇಳೆ ವರಿಷ್ಠರ ನಿರ್ಧಾರದ ಬಗ್ಗೆ ಆಕಾಂಕ್ಷಿಗಳ ಗಮನಕ್ಕೆ ವೀಕ್ಷಕರು ತಂದಿದ್ದಾರೆ. ಆರ್​.ಅಶೋಕ್ ನೇಮಕ ಕುರಿತು ಸಭೆಯಲ್ಲಿ ವೀಕ್ಷಕರು ತಿಳಿಸಿದ್ದು, ಇದಕ್ಕೆ ಒಪ್ಪದೇ ಶಾಸಕರಾದ  ಯತ್ನಾಳ್, ಬೆಲ್ಲದ್ ಹಾಗೂ ರಮೇಶ್​ ಜಾರಕಿಹೊಳಿ ‌ತೆರಳಿದ್ದಾರೆ.

 • 17 Nov 2023 06:06 PM (IST)

  Karnataka News Live: ಬಿಜೆಪಿ ಶಾಸಕಾಂಗ ಪಕ್ಷದ ಸಭೆ, ಹೊರನಡೆದ ಯತ್ನಾಳ್

  ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನವೇ ಅಸಮಾಧಾನ ಸ್ಫೋಟಗೊಂಡಿದೆ. ಐಟಿಸಿ ಹೋಟೆಲ್​ನಿಂದ ಹೊರನಡೆದ ಬಸನಗೌಡ ಪಾಟೀಲ್ ಯತ್ನಾಳ್, ಇದು ಬಡವರು ಚಹಾ ಕುಡಿಯುವ ಜಾಗ ಅಲ್ಲವೆಂದಿದ್ದಾರೆ. ಚಹಾ ಕುಡಿಯಲು ಹೊರಗಡೆ ಹೋಗುತ್ತಿದ್ದೇನೆ ಎಂದ ಯತ್ನಾಳ್ ಜೊತೆ ಕಾರಿನಲ್ಲಿ ರಮೇಶ್ ಜಾರಕಿಹೊಳಿ, ಬೆಲ್ಲದ್ ತೆರಳಿದ್ದಾರೆ.

 • 17 Nov 2023 05:42 PM (IST)

  Karnataka News Live: ಕೆಇಎ ಪರೀಕ್ಷೆ ಅಕ್ರಮ; ಆರೋಪಿಗಳನ್ನ ಕಸ್ಟಡಿಗೆ ಕೇಳಲು ಮುಂದಾದ ಸಿಐಡಿ ತನಿಖಾಧಿಕಾರಿಗಳ ತಂಡ.

  ಯಾದಗಿರಿ: ಕೆಇಎ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕಸ್ಟಡಿಗೆ ಕೇಳಲು ಸಿಐಡಿ ತನಿಖಾಧಿಕಾರಿಗಳ ತಂಡ ಮುಂದಾಗಿದೆ. ಈಗಾಗಲೇ ಯಾದಗಿರಿಯ ಜಿಲ್ಲಾ ನ್ಯಾಯಾಲಯದಲ್ಲಿ ಸಿಐಡಿ ತಂಡ ಅರ್ಜಿ ಸಲ್ಲಿಸಲಿದೆ. ಬಂಧಿತ 16 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಈ ಮೂಲಕ ಪ್ಲಾನ್ ಮಾಡಿದೆ.

 • 17 Nov 2023 04:58 PM (IST)

  Karnataka News Live: ‘ಹೀರೋ ಆಗಬೇಕಿದ್ದ ಬಿ ಶ್ರೀರಾಮುಲು ಇವತ್ತು ವಿಲನ್​; ಮಾಜಿ ಸಚಿವ ಶ್ರೀರಾಮುಲು ನೋವಿನ ನುಡಿ

  ಬಾಗಲಕೋಟೆ: ‘ಹೀರೋ ಆಗಬೇಕಿದ್ದ ಬಿ.ಶ್ರೀರಾಮುಲು ಇವತ್ತು ವಿಲನ್ ಆಗಿದ್ದಾನೆ ಎಂದು ಮಾಜಿ ಸಚಿವ ಶ್ರೀರಾಮುಲು ನೋವಿನ ನುಡಿ ಹೊರಹಾಕಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು ‘ ಕೊಟ್ಟ ಮಾತಿನಂತೆ ST ಸಮುದಾಯಕ್ಕೆ ಶೇ. 7.5ರಷ್ಟು ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಶ್ರೀರಾಮುಲು ತುಂಬಾ ಶ್ರಮಿಸಿದ್ದರು. ಇತಿಹಾಸ ನೋಡಿದರೆ ಗೊತ್ತಾಗುತ್ತೆ, ಒಳ್ಳೆಯವರೆಲ್ಲ ವಿಲನ್ ಆಗ್ತಾರೆ. ಕೆಟ್ಟವರೆಲ್ಲ ಹೀರೋಗಳಾಗುತ್ತಾರೆ ಎಂದು ರಾಮುಲು ಮಾರ್ಮಿಕವಾಗಿ ಮಾತನಾಡಿದ್ದಾರೆ.

 • 17 Nov 2023 04:13 PM (IST)

  Karnataka News Live: ಹಾಸನ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಶಿಲ್ದಾರ್‌ಗಳ ವಿರುದ್ಧ ಸಚಿವ ಕೃಷ್ಣಭೈರೇಗೌಡ ಗರಂ

  ಹಾಸನ ಜಿಲ್ಲಾ ಪಂಚಾಯತ್​ ಹೊಯ್ಸಳ ಸಭಾಂಗಣದಲ್ಲಿಇಂದು(ನ.17) ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿದ್ದು, ಕಂದಾಯ ಸಚಿವ ಕಷ್ಣ ಭೈರೇಗೌಡ ನೇತೃತ್ವದಲ್ಲಿ ನಡೆಯುತ್ತಿದೆ. ಫಾರಂ ನಂ.53 ಅರ್ಜಿಗಳು ವಿಲೇವಾರಿ ಮಾಡದ ಅರಕಲಗೂಡು ತಹಶೀಲ್ದಾರ್ ಬಸವರಾಜು ಹಾಗೂ ಬೇಲೂರು ತಹಶಿಲ್ದಾರ್ ಮಮತಾ ವಿರುದ್ದ ಸಚಿವ ಕೃಷ್ಣಭೈರೇಗೌಡ ಗರಂ ಆಗಿದ್ದಾರೆ. ಇಷ್ಟೊಂದು ಅರ್ಜಿಗಳು ಪೆಂಡಿಂಗ್ ಇರಲು ಕಾರಣ ಏನು ಎಂದು ಸಭೆಯಲ್ಲಿ ತಹಶಿಲ್ದಾರ್​ಗೆ ಪ್ರಶ್ನಿಸಿದ್ದಾರೆ.

 • 17 Nov 2023 03:34 PM (IST)

  Karnataka News Live: ಕಾಂಗ್ರೆಸ್​ಗೆ ಮಾಜಿ ಜೆಡಿಎಸ್ ಶಾಸಕರ ಸೇರ್ಪಡೆ; ಸಚಿವ ಕೆ.ಎನ್ ರಾಜಣ್ಣ ಅಸಮಧಾನ

  ಮಂಗಳೂರು: ಮಾಜಿ ಜೆಡಿಎಸ್ ಶಾಸಕರ ಸೇರ್ಪಡೆಗೆ ಸಚಿವ ಕೆ.ಎನ್ ರಾಜಣ್ಣ ಅಸಮಧಾನ ವಿಚಾರ ‘ವಿರೋಧ ಅಂತಾ ನಾನು ಹೇಳಿಲ್ಲ. ಅಸಮಾಧಾನ ಇದ್ದೆ ಇರುತ್ತೆ ಎಂದು ಮಂಗಳೂರಿನಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದರು. ಒಂದು ಮನೆಯಲ್ಲಿ ಅಸಮಾಧಾನ ಇರಲ್ವಾ?, ಆದ್ರೆ, ಪಕ್ಷಕ್ಕೆ ಮಾರಕವಾಗುವ ರೀತಿಯ ಅಸಮಾಧಾನ ಅಲ್ಲ. ಸಾತ್ವಿಕ ವಿರೋಧ ಅಷ್ಟೇ ಎಂದರು.

 • 17 Nov 2023 02:59 PM (IST)

  Karnataka News Live: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ; ಸಿಎಂ ಸಿದ್ದರಾಮಯ್ಯ

  ಬೆಂಗಳೂರು: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇನ್ನು ಇದೇ ವೇಳೆ ರಾಮ ಮಂದಿರ ಕಟ್ಟಲು ಯಾವುದೇ ವಿರೋಧ ಇಲ್ಲ, ಭಾರತ ವಿವಿಧೆತೆಯಲ್ಲಿ ಏಕತೆ ಹೊಂದಿರುವ ದೇಶ ಎಂದರು.

 • 17 Nov 2023 02:29 PM (IST)

  Karnataka News Live: ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ; ನನಗೆ ಆ ಜವಾಬ್ದಾರಿ ಕೊಟ್ಟರೆ ಸಂತೋಷ-ಆರಗ ಜ್ಞಾನೇಂದ್ರ

  ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ವಿಚಾರ ‘ನನಗೆ ಆ ಜವಾಬ್ದಾರಿ ಕೊಟ್ಟರೆ ಸಂತೋಷ ಎಂದು ಬೆಂಗಳೂರಿನಲ್ಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ‘ಕೊಡುವ ಸ್ಥಾನಕ್ಕೆ ಗೌರವ ಸಲ್ಲಿಸುವೆ, ಬೇರೆ ಯಾರಿಗೆ ಕೊಟ್ಟರೂ ಅವರೊಂದಿಗೆ ಸಹಕರಿಸಿಕೊಂಡು ಹೋಗುತ್ತೇವೆ. ನಮಗೆ ಪಕ್ಷ, ಸಿದ್ದಾಂತ ಮುಖ್ಯ. ಇಂದು ಸಂಜೆಯೇ ವಿಪಕ್ಷ ನಾಯಕರ ಆಯ್ಕೆ ಆಗಬಹುದು. ಅದಕ್ಕೂ ಮೊದಲು ಅವರು ಪ್ರಮುಖ ನಾಯಕರನ್ನು ಭೇಟಿಯಾಗಿ ವೈಯುಕ್ತಿಕ ಅಭಿಪ್ರಾಯ ಪಡೆಯುತ್ತಿದ್ದಾರೆ ಎಂದರು.

 • 17 Nov 2023 01:49 PM (IST)

  Karnataka News Live: ಸಚಿವ ಜಮೀರ್ ಅಹ್ಮದ್​ಗೆ ಹೆಚ್​ಡಿ ಕುಮಾರಸ್ವಾಮಿ ತಿರುಗೇಟು

  ಬೆಂಗಳೂರು: ತೆಲೆಂಗಾಣ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್​ ಹೇಳಿಕೆ ಸಾಕಷ್ಟು ವೈರಲ್​ ಆಗಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸದನದ ಗೌರವ, ಸಭಾಧ್ಯಕ್ಷರ ಗೌರವ ಉಳಿಯಬೇಕಾದರೇ ಜಮೀರ್ ಕ್ಷಮೆ ಕೇಳಲಿ. ಯುಟಿ ಖಾದರ್​ ಅವರು ಕಾಂಗ್ರೆಸ್ ಸ್ಪೀಕರ್ ಅಲ್ಲ, 224 ಶಾಸಕರಿಗೆ ರಕ್ಷಣೆ ಕೊಡುವವರು. ಅವರನ್ನು ಒಂದು ಧರ್ಮದ ಸೋಂಕಿಗೆ ಒಳಪಡಿಸುವುದು ಸರಿಯಲ್ಲ. ಚೈಲ್ಡಿಷ್​ಗಳನ್ನು ಇಟ್ಟುಕೊಂಡು ಸದನದ ಗೌರವ ಉಳಿಸಲು ಆಗುತ್ತಾ? ಎಂದು ತಿರುಗೇಟು ನೀಡಿದರು.

 • 17 Nov 2023 01:18 PM (IST)

  Karnataka News Live: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿವಿ: ಸಿದ್ದರಾಮಯ್ಯ

  ಬೆಂಗಳೂರು: ಕೃಷಿ ಮೇಳದಲ್ಲಿ ಅತ್ಯಂತ ಸಂತೋಷದಿಂದ ಭಾಗಿಯಾಗಿದ್ದೇನೆ. ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಕೃಷಿ ಮೇಳಕ್ಕೆ ಬರಲುದಕ್ಕೆ ಆಗಲ್ಲ ಅಂತ ಗುರವಾರ ಸಂಜೆ ಹೇಳಿದ್ದೆ. ಮೈಸೂರಿನ ಕಾರ್ಯಕ್ರಮಕ್ಕೆ ಮುಂದಕ್ಕೆ ಹಾಕಿಸಿ ಕೃಷಿಮೇಳಕ್ಕೆ ಬರುವಂತೆ ಕೃಷಿ ಸಚಿವರು ಒತ್ತಾಯಿಸಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವ ವಿದ್ಯಾಲಯ. ವಿಶ್ವವಿದ್ಯಾಲಯದಲ್ಲಿ ಏನೆಲ್ಲ ತಂತ್ರಜ್ಞಾನ ಇರುತ್ತೆ? ನೀರಿನ ಸಂರಕ್ಷಣೆ ಹೇಗೆ ? ಭೂಮಿ ಫಲವತತ್ತೆ ಕಾಪಾಡುವುದು ಹೇಗೆ ? ಎಂಬ ವಿಷಯವನ್ನ ತಿಳಿಸುವ ಕೆಲಸ ವಿಶ್ವವಿದ್ಯಾನಿಲಯ ಮಾಡುತ್ತೆ. ರಾಜ್ಯದ  ಹೆಚ್ಚಿನ ಜನರು ಕೃಷಿ ಮೇಲೆ ಅವಲಂಬಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

 • 17 Nov 2023 12:52 PM (IST)

  Karnataka News Live: ಬೆಂಗಳೂರು ಕೃಷಿ ಮೇಳಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ

  ಬೆಂಗಳೂರು: ನಗರದ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಚಾಲನೆ ಬಳಿಕ ಸಿಎಂ ಸಿದ್ದರಾಮಯ್ಯ ಹೊಸ ತಳಿಗಳ ಬಗ್ಗೆ ಮಾಹಿತಿ ಪಡೆದರು.  ಸಿಎಂ ಸಿದ್ದರಾಮಯ್ಯ ಅವರಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸಾಥ್ ನೀಡಿದರು.

 • 17 Nov 2023 12:35 PM (IST)

  Karnataka News Live: ಲುಲು ಮಾಲ್​ಗೆ 24 ಎಕರೆ ಖರಾಬು ಭೂಮಿಯನ್ನ ಕಬಳಿಸಲಾಗಿದೆ; ಕುಮಾರಸ್ವಾಮಿ ಆರೋಪ

  ಬೆಂಗಳೂರು: ಲುಲು ಮಾಲ್​ಗೆ 24 ಎಕರೆ ಖರಾಬು ಭೂಮಿಯನ್ನ ಕಬಳಿಸಲಾಗಿದೆ. 1934ರ ಭೂಮಿಯ ದಾಖಲೆಗಳನ್ನು ಸುಟ್ಟು ಹಾಕಿ ನಾಶ ಮಾಡಿದ್ದಾರೆ. ಇವರೆಲ್ಲ ಹೇಗೆಲ್ಲಾ ದಾಖಲೆ ಬದಲಾಯಿಸಿದ್ದಾರೆಂದು ಗೊತ್ತಿದೆ. ಭೂದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ ಭೂಮಿ ಕಬಳಿಸಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಮಿ ಆರೋಪ ಮಾಡಿದರು.

 • 17 Nov 2023 11:46 AM (IST)

  Karnataka News Live: ನನಗೆ 3 ಪಟ್ಟು ಜಾಸ್ತಿ ದಂಡ ಹಾಕಿದ್ದಾರೆ: ಬೆಸ್ಕಾಂ ವಿರುದ್ಧ ಕುಮಾರಸ್ವಾಮಿ ಆರೋಪ

  ಬೆಂಗಳೂರು: ವಿದ್ಯುತ್ ಕಳವು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 2,526 ರೂ. ಬಿಲ್ ಬದಲು 68,526 ರೂಪಾಯಿ ಬಿಲ್ ನೀಡಿದ್ದಾರೆ. ಬೆಸ್ಕಾಂ ಇಲಾಖೆ ಅಧಿಕಾರಿಗಳು 68,526 ರೂಪಾಯಿ ದಂಡ ವಿಧಿಸಿದ್ದಾರೆ. ಹಣ ಕಟ್ಟಲು ನಾನು ಸಿದ್ಧನಿದ್ದೇನೆ. ಆದರೆ ಬೆಸ್ಕಾಂ 2.5 ಕಿಲೋ ವ್ಯಾಟ್​​​ಗೆ ಲೆಕ್ಕ ತೆಗೆದುಕೊಂಡಿದೆ. 7 ದಿನಕ್ಕೆ 71 ಯೂನಿಟ್ ಆಗಲಿದೆ ಅಂತ ಕೊಟ್ಟಿದ್ದಾರೆ. 71 ಯೂನಿಟ್​ಗೆ ಮೂರು ಪಟ್ಟು ದಂಡ ಹಾಕಿದ್ದಾರೆ. ಆದರೆ ಕರೆಂಟ್​ ಬಿಲ್​ ಬಗ್ಗೆ ಪುನರ್​ ಪರಿಶೀಲನೆ ಮಾಡಲು ಹೇಳಿದ್ದೇನೆ. ನೀವು ನೀಡಿದ ಬಿಲ್ ಕೂಡ ಸರಿ ಇಲ್ಲ ಅಂತ ಪ್ರತಿಭಟನೆ ಮಾಡಿದ್ದೇನೆ. ಬೆಸ್ಕಾಂ ಇಲಾಖೆ ಪ್ರಕಾರ 2,526 ರೂಪಾಯಿ ಬಿಲ್​​ ನೀಡಬೇಕಿತ್ತು. ಆದರೆ ಬೆಸ್ಕಾಂ ಇಲಾಖೆ 68,526 ರೂ. ಕರೆಂಟ್​ ಬಿಲ್ ನೀಡಿದೆ ಎಂದು ಬೆಸ್ಕಾಂ ವಿರುದ್ಧ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಆರೋಪ ಮಾಡಿದರು.

 • 17 Nov 2023 11:26 AM (IST)

  Karnataka News Live: ಕಾಮಗಾರಿ ವೇಳೆಯೂ ಲುಲು ಮಾಲ್ ಕೂಡ ಕರೆಂಟ್​ ಬಿಲ್ ನೀಡಿಲ್ಲ; ಅದಕ್ಕೂ ದಂಡ ಹಾಕ್ತೀರಾ? ಕುಮಾರಸ್ವಾಮಿ

  ಬೆಂಗಳೂರು: ಹಿಂದೆ ಲುಲು ಮಾಲ್​​​ ಕಾಮಗಾರಿ ವೇಳೆ ಕರೆಂಟ್​ ಬಿಲ್ ನೀಡಿಲ್ಲ. ಲುಲು ಮಾಲ್ ಆರಂಭಕ್ಕೂ ಮುನ್ನ 6 ತಿಂಗಳು ಕರೆಂಟ್ ನೀಡಿಲ್ಲ. ಲುಲು ಮಾಲ್​ ಬಳಕೆ ಮಾಡಿದ ವಿದ್ಯುತ್​​​​​ ಬಿಲ್​ಗೆ ದಂಡ ಹಾಕುತ್ತೀರಾ? ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್​​ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಹರಿಹಾಯ್ದರು.

 • 17 Nov 2023 11:23 AM (IST)

  Karnataka News Live: ಒಬ್ಬ ಮಾಜಿ ಸಿಎಂಗೆ ಹೀಗೆ ಆದರೆ ಸಾಮಾನ್ಯ ಜನರಿಗೆ ಕಥೆ ಏನು; ಕುಮಾರಸ್ವಾಮಿ

  ಬೆಂಗಳೂರು: ಬೆಸ್ಕಾಂ ಇಲಾಖೆ ಅಧಿಕಾರಿಗಳು 68,526 ರೂಪಾಯಿ ದಂಡ ವಿಧಿಸಿದ್ದಾರೆ. ಬೆಸ್ಕಾಂ ಲೆಕ್ಕಾಚಾರ ಪ್ರಕಾರ 2.5 ಕಿ.ವ್ಯಾ ಬಳಕೆ ಆಗಿದೆ ಅಂತ ಇದೆ. ಬೆಸ್ಕಾಂ ಇಲಾಖೆ 2,526 ರೂಪಾಯಿ ಫೈನ್ ಹಾಕಬೇಕಿತ್ತು. ಆದರೆ 68,526 ರೂಪಾಯಿ ದಂಡ ವಿಧಿಸಿದ್ದಾರೆ. ನಮ್ಮ ಮನೆಗೆ 33 ಕಿಲೋ ವ್ಯಾಟ್ ವಿದ್ಯುತ್​​ ಬಳಕೆಗೆ ಅನುಮತಿ ಇದೆ ನಾನು ನಿತ್ಯ ಉಪಯೋಗ ಮಾಡುವ ಕರೆಂಟ್ ಇದು. ಮನೆಗೆ ತೆಗೆದುಕೊಂಡಿರುವ 33 ಕೆವಿ ಸೇರಿ 68 ಸಾವಿರ ರೂ. ಹಾಕಿದ್ದಾರೆ. ಒಬ್ಬ ಮಾಜಿ ಸಿಎಂಗೆ ಹೀಗೆ ಆದರೆ ಸಾಮಾನ್ಯ ಜನರಿಗೆ ಕಥೆ ಏನು?. ನಾನು ವಿದ್ಯುತ್​​​​ ಮಹಜರು ಕಾಪಿ ನೀಡುವಂತೆ ಕೇಳಿದ್ದೇನೆ. ನನಗೆ ಕರೆಂಟ್ ಕಳ್ಳ ಅಂತ ಲೇಬಲ್ ಬೇರೆ ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೇಳಿದರು.

 • 17 Nov 2023 11:11 AM (IST)

  Karnataka Breaking News Live: ಬೆಸ್ಕಾಂ ಲೆಕ್ಕಾಚಾರದಲ್ಲಿ ತಪ್ಪು, ಮಹಜರ್ ಕಾಪಿ ಕೇಳಿದ ಕುಮಾರಸ್ವಾಮಿ

  ಬೆಂಗಳೂರು: ವಿದ್ಯುತ್ ಕಳ್ಳತನ ಆರೋಪ ಸಂಬಂಧ ಬೆಸ್ಕಾಂ ಕುಮಾರಸ್ವಾಮಿ ಅವರಿಗೆ ದಂಡ ವಿಧಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕುಮಾರಸ್ವಾಮಿ, ಬೆಸ್ಕಾಂ ಇಲಾಖೆ ಅಧಿಕಾರಿಗಳು 68,526 ರೂಪಾಯಿ ದಂಡ ವಿಧಿಸಿದ್ದಾರೆ. ದೀಪಾವಳಿ ಸಂಧರ್ಭದಲ್ಲಿ ನಮ್ಮ ಮನೇಲಿ ಆದ ಅಚಾತುರ್ಯದ ಬಗ್ಗೆ ನಾನು ವಿಷಾದ ವ್ಯಕ್ತಪಡಿಸಿದ್ದೇನೆ. ಕರೆಂಟ್ ಕಳ್ಳ ಅಂತ ನನಗೆ ಲೇಬಲ್ ಬೇರೆ ಕೊಟ್ಟಿದ್ದಾರೆ. ಸಿಎಂ ಡಿಸಿಎಂ ಸೇರಿ ಪಟಾಲಾಂ ಎಲ್ಲರೂ ಹೀಗೆ ಹೇಳುತ್ತಿದ್ದಾರೆ. ಬೆಸ್ಕಾಂ ಬಿಲ್​ನಲ್ಲಿ ಅವರ ಲೆಕ್ಕಾಚಾರದಲ್ಲಿ 2.5 ಕಿಲೋ ವ್ಯಾಟ್ ಉಪಯೋಗ ಅಂತ ಇದೆ. 2526 ರೂಪಾಯಿ ಹಾಕಿದ್ದಾರೆ. ನಮ್ಮ ಮನೆಯಲ್ಲಿ ಇರುವುದು 33 ಕಿಲೋ ವ್ಯಾಟ್ ಪರ್ಮಿಷನ್ ತಗೊಂಡಿದ್ದೇನೆ. ನಾನು ನಿತ್ಯ ಉಪಯೋಗ ಮಾಡುವ ಕರೆಂಟ್ ಇದು. ಹೀಗಾಗಿ ಮಹಜರ್ ಕಾಪಿ ಕೇಳಿದ್ದೇನೆ ಎಂದರು.

 • 17 Nov 2023 10:56 AM (IST)

  Karnataka News Live: ನಿರ್ಮಲಾ ಸೀತಾರಾಮನ್​ರನ್ನ ಸ್ವಾಗತಿಸಿದ ವಿಜಯೇಂದ್ರ

  ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ವಾಗತಿಸಿದರು. ವಿಧಾನಸಭೆ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕರ ಆಯ್ಕೆ ವಿಚಾರ ಸಂಬಂಧ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ವೀಕ್ಷಕರು ಬೆಂಗಳೂರಿಗೆ ಆಗಮಿಸಿದ್ದಾರೆ.

 • 17 Nov 2023 10:31 AM (IST)

  Karnataka News Live: ವಿಪಕ್ಷ ನಾಯಕರ ಆಯ್ಕೆ: ಬೆಂಗಳೂರಿಗೆ ಆಗಮಿದ ಬಿಜೆಪಿ ಹೈಕಮಾಂಡ್ ವೀಕ್ಷಕರ ತಂಡ

  ಬೆಂಗಳೂರು: ವಿಧಾನಸಭೆ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕರ ಆಯ್ಕೆ ವಿಚಾರ ಸಂಬಂಧ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ವೀಕ್ಷಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಆಗಮಿಸಿದ್ದಾರೆ. ವೀಕ್ಷಕರು ಸಂಜೆ ನಡೆಯುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

 • 17 Nov 2023 10:16 AM (IST)

  Karnataka News Live: ಮೈಸೂರಿಗೆ ಸಿಎಂ; ರೈತರನ್ನು ವಶಕ್ಕೆ ಪಡೆದ ಪೊಲೀಸರು

  ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರಿಗೆ ತೆರಳುವ ಹಿನ್ನೆಲೆಯಲ್ಲಿ ರೈತರಿಂದ ಸಿಎಂ ಘೇರಾವ್ ಹಾಕುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿದ್ದ ಟಿ.ನರಸೀಪುರದ ಅನೇಕ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈತರು ಪೊಲೀಸರ ನಡೆಯನ್ನ ಖಂಡಿಸಿದ್ದಾರೆ. ಇದು ಹಿಟ್ಲರ್ ಸರ್ಕಾರವೋ ಇಲ್ಲ ಜನ ಸಾಮಾನ್ಯರ ಸರ್ಕಾರವೋ ? ವಿವಿಧ ಬೇಡಿಕೆ ಈಡೇರಿಸುವಂತೆ ನಾವು ಹಲವು ತಿಂಗಳಿಂದ  ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇವೆ. ಕಳೆದ ವಾರ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಲಿಕ್ಕೆ ಮುಂದಾಗಿದ್ದಾಗಲೂ ಏಕಾಏಕಿ ವಶಕ್ಕೆ ಪಡೆದಿದ್ದರು. ಈಗ ಸಿಎಂ ಬರುತ್ತಾರೆ ನಮ್ಮನ್ನು ವಶಕ್ಕೆ ಪಡೆದಿದ್ದಾರೆ. ಸಿದ್ದರಾಮಯ್ಯನವರು ರೈತರನ್ನ ಕರೆಸಿ ಮಾತನಾಡಬಹುದಿತ್ತು. ಅದನ್ನ ಬಿಟ್ಟು ರೈತರನ್ನು ಬಂಧಿಸಿರುವುದು ನಾಚಿಕೆಗೇಡು. ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

 • 17 Nov 2023 09:59 AM (IST)

  Karnataka News Live: ಸಿಲಿಕಾನ್ ಸಿಟಿಯಲ್ಲಿ ರೈತರ ಜಾತ್ರೆ, 4 ದಿನ ಕೃಷಿ ಮೇಳ

  ಬೆಂಗಳೂರು: ಇಂದಿನಿಂದ 4 ದಿನಗಳ ಕಾಲ ಬೆಂಗಳೂರಿನಲ್ಲಿ ಕೃಷಿ ಮೇಳ ನಡೆಯಲಿದೆ. ಕೃಷಿ ವಿಶ್ವವಿದ್ಯಾಲಯ - ಜಿಕೆವಿಕೆಯಲ್ಲಿ ಕೃಷಿಮೇಳ ನಡೆಯತ್ತಿದೆ. ಕೃಷಿಮೇಳಕ್ಕೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ನವೆಂಬರ್ 20ರವರೆಗೆ ಕೃಷಿ ಮೇಳ ನಡೆಯಲಿದೆ. ಕೃಷಿ ಮೇಳ ಆಹಾರ, ಆರೋಗ್ಯ, ಆದಾಯಕ್ಕಾಗಿ ಸಿರಿಧಾನ್ಯಗಳು ಎಂಬ ಘೋಷವಾಕ್ಯದಡಿ ನಡೆಯಲಿದೆ.  ಈ ಬಾರಿ ಕೃಷಿ ಮೇಳದಲ್ಲಿ ಬಿತ್ತನೆ ಬೀಜಗಳ ಪ್ರದರ್ಶನದ ಜೊತೆಗೆ ಮಾರಾಟಕ್ಕೂ ಅವಕಾಶ ನೀಡಲಾಗಿದೆ. ಈ ಬಾರಿ ಕೃಷಿ ಮೇಳದಲ್ಲಿ ಬರ ಸ್ನೇಹಿ ಕೃಷಿ ತಂತ್ರಜ್ಞಾನಗಳು ಮತ್ತು ಸಿರಿಧಾನ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

 • 17 Nov 2023 09:30 AM (IST)

  Karnataka News Live: SC, ST ವಿದ್ಯಾರ್ಥಿನಿಲಯದಲ್ಲಿ ಊಟ ಮಾಡಿ ಸರಳತೆ ಮೆರೆದ ತುಮಕೂರು ಡಿಸಿ

  ತುಮಕೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿನಿಲಯದಲ್ಲಿ ಊಟ ಮಾಡುವ ಮೂಲಕ  ತುಮಕೂರು ಜಿಲ್ಲಾಧಿಕಾರಿ.ಕೆ .ಶ್ರೀನಿವಾಸ್ ಸರಳತೆ ಮೆರದಿದ್ದಾರೆ. ಕಳೆದ ರಾತ್ರಿ ಗೆದ್ದಲಹಳ್ಳಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಮಕ್ಕಳ ದಿನಚರಣೆ ಮತ್ತು ದೀಪಾವಳಿ ಆಚರಿಸಲಾಯಿತು. ಈ ಹಬ್ಬದಲ್ಲಿ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್​ ಭಾಗಿಯಾಗಿದರು. ವಿದ್ಯಾರ್ಥಿನಿಯರೊಂದಿಗೆ  ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಲಾಧಿಕಾರಿಗಳು ತಮ್ಮೊಂದಿಗೆ ಹಬ್ಬ ಆಚರಿಸಿದ್ದಕ್ಕೆ ವಿದ್ಯಾರ್ಥಿನಿಯರಿಗೆ ಖುಷಿಯಾಗಿದೆ. ಡಿಸಿ‌.ಕೆ.ಶ್ರಿನಿವಾಸ್ ಅವರಿಗೆ ಸಮಾಜ‌ಕಲ್ಯಾಣ ಇಲಾಖೆ‌ ಜೆಡಿ. ಕೃಷ್ಣಪ್ಪ, ತಹಶಿಲ್ದಾರ್ ಸಿದ್ದೇಶ್ ಸಾಥ್​ ನೀಡಿದರು.

 • 17 Nov 2023 08:53 AM (IST)

  Karnataka News Live: ಬಳ್ಳಾರಿ ಆರ್​ಟಿಒ ಕಚೇರಿ ಮೇಲೆ ಲೋಕಾಯುಕ್ತ ದಾಳಿ

  ಬಳ್ಳಾರಿ: ಬಳ್ಳಾರಿ ಆರ್​ಟಿಒ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಲಂಚ ಪಡೆಯುತ್ತಿದ್ದ ಆರ್​ಟಿಒ ಸಿಬ್ಬಂದಿ ಚಂದ್ರಕಾಂತ್ ಗುಡಿಮನಿ, ಏಜೆಂಟ್ ಮೊಹಮ್ಮದ್​​​ನನ್ನು​ ವಶಕ್ಕೆ ಪಡೆದಿದ್ದಾರೆ. ಕ್ಲಿಯರೆನ್ಸ್​​ ಸರ್ಟಿಫಿಕೆಟ್​​ ನೀಡಲು ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಖಚಿತ‌ ಮಾಹಿತಿ‌ ಮೇರೆಗೆ ಲೋಕಯುಕ್ತ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದರು. ಲೋಕಾಯುಕ್ತ ಎಸ್​​​ಪಿ ಶಶಿಧರ್​ ನೇತೃತ್ವದಲ್ಲಿ ದಾಳಿ ನಡೆದಿದೆ.

 • 17 Nov 2023 08:38 AM (IST)

  Karnataka News Live: ಸಿಎಂ ಸಿದ್ದರಾಮಯ್ಯ 2 ದಿನ ಮೈಸೂರು ಜಿಲ್ಲೆ ಪ್ರವಾಸ

  ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ನ.17) ಮೈಸೂರು ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಕನಕ ವಿದ್ಯಾರ್ಥಿ ನಿಲಯ, ಕಡಲೆ ಮಾರಮ್ಮ ದೇವಸ್ಥಾನ ಉದ್ಘಾಟನೆ ಸೇರಿದಂತೆ ಹಲವು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

 • 17 Nov 2023 08:16 AM (IST)

  Karnataka News Live: ವಿಪಕ್ಷ ನಾಯಕನ ಆಯ್ಕೆ, ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ

  ಬೆಂಗಳೂರು: ವಿಧಾನಸಭೆ ಮತ್ತು ವಿಧಾನ ಪರಿಷತ್​ ವಿಪಕ್ಷ ನಾಯಕರ ನೇಮಕಾತಿ ವಿಚಾರವಾಗಿ ಬೆಂಗಳೂರಿನಲ್ಲಿ ಇಂದು (ನ.17) ಸಂಜೆ 6 ಗಂಟೆಗೆ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಹೈಕಮಾಂಡ್ ವೀಕ್ಷಕರು ವಿಪಕ್ಷ ನಾಯಕರ ಹೆಸರು ಘೋಷಣೆ ಮಾಡಲಿದ್ದಾರೆ. ವಿಧಾನಸಭೆಗೆ ಒಕ್ಕಲಿಗ ಮತ್ತು ವಿಧಾನ ಪರಿಷತ್​ಗೆ ಹಿಂದುಳಿದ ವರ್ಗಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ. ವಿಧಾನಸಭೆಗೆ ರೇಸ್​ನಲ್ಲಿ ಶಾಸಕರಾದ ಆರ್. ಅಶೋಕ್, ಡಾ. ಅಶ್ವಥ್ ನಾರಾಯಣ ಮತ್ತು ಅರಗ ಜ್ಞಾನೇಂದ್ರ ಹೆಸರು ಇದೆ. ವಿಧಾನ ಪರಿಷರ್​ಗೆ ಕೋಟ ಶ್ರೀನಿವಾಸ ಪೂಜಾರಿ, ತೇಜಸ್ವಿನಿ ಗೌಡ, ಛಲವಾದಿ ನಾರಾಯಣಸ್ವಾಮಿ ಮತ್ತು ಭಾರತಿ ಶೆಟ್ಟಿ ಹೆಸರು ಒಬಿಸಿ ಕೋಟದಲ್ಲಿ ಸುನಿಲ್ ಕುಮಾರ್ ರೇಸ್​ನಲ್ಲಿದ್ದಾರೆ. ಬಹುತೇಕ ಆರ್. ಅಶೋಕ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ವಿಪಕ್ಷ ನಾಯಕರಾಗಿ ಆಯ್ಕೆ ಸಾಧ್ಯತೆ ಇದೆ. ಬಿಜೆಪಿ ಶಾಸಕಾಂಗ ಸಭೆಗೆ ಹೈಕಮಾಂಡ್ ವೀಕ್ಷಕರಾಗಿ ಕೇಂದ್ರ ಸಚಿವೆ ನಿರ್ಮಲಾ‌ ಸೀತಾರಾಮನ್ ಆಗಮಿಸುತ್ತಿದ್ದಾರೆ.

Published On - Nov 17,2023 8:12 AM

Follow us
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ