TV9 Kannada Breaking News Highlights: ಅಲ್ಪಸಂಖ್ಯಾತರಿಗೆ ರೂಪಿಸಿದ್ದ ಕಾರ್ಯಕ್ರಮಗಳು ಮತ್ತೆ ಪುನರಾರಂಭ: ಸಿಎಂ ಸಿದ್ಧರಾಮಯ್ಯ ಭರವಸೆ
Breaking News Today Highlights: ಕರ್ನಾಟಕದ ರಾಜಕೀಯ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ ಮೂಲಕ ಪಡೆಯಿರಿ.
Karnataka Latest News Highlights: ರಾಜ್ಯದಲ್ಲಿ ತರಕಾರಿ, ಹೋಟೆಲ್ ಊಟ, ಮದ್ಯ ಹೀಗೆ ಎಲ್ಲವೂ ಬೆಲೆ ಏರಿಕೆಯಾಗಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಿದೆ. ಜುಲೈ 1ಕ್ಕೆ ಜಾರಿಯಾಗಬೇಕಿದ್ದ ಅನ್ನ ಭಾಗ್ಯ ಯೋಜನೆ ಜಾರಿಗೆ ಅಕ್ಕಿ ಸಮಸ್ಯೆ ಎದುರಾಗಿದ್ದು, ಫಲಾನುಭವಿಗಳಿಗೆ ಅಕ್ಕಿಯ ಹಣ ನೀಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ. ಇದಕ್ಕೆ ರಾಜ್ಯದಲ್ಲಿ ಪರ ವಿರೋಧಗಳು ಶುರುವಾಗಿದೆ. ಜೊತೆಗೆ ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ಮತ್ತು ವಿಪಕ್ಷ ಬಿಜೆಪಿ (BJP) ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಆಡಳಿತಾರೂಢ ಮತ್ತು ವಿಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಕೌಂಟರ್ ನೀಡಲು ಬಿಜೆಪಿ ಮನೆ ಮನೆ ಅಭಿಯಾನವನ್ನು ಈಗಾಗಲೇ ಆರಂಭಿಸಿದೆ. ಮತ್ತೊಂದೆಡೆ ಜುಲೈ ಒಂದರಂದು ಗೃಹಜ್ಯೋತಿ ಯೋಜನೆ ಜಾರಿಯಾಗಲಿದೆ. ಆಗಸ್ಟ್ 15ರ ಬಳಿಕ, ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ನಿರ್ಧರಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 2ರವರೆಗೂ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
LIVE NEWS & UPDATES
-
TV9 Kannada Breaking News Live: ಕಳೆದ ವರ್ಷ ಹೆಚ್ಚು ಮಳೆಯಾದ್ರೂ ನೀರಿನ ಮಟ್ಟ ಕಡಿಮೆಯಿದೆ
ಈ ಬಗ್ಗೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದ ಬಗ್ಗೆ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಬೆಳಗಾವಿಯಲ್ಲಿ ಕಂದಾಯ ಇಲಾಖೆಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ಕಳೆದ ವರ್ಷ ಹೆಚ್ಚು ಮಳೆಯಾದ್ರೂ ನೀರಿನ ಮಟ್ಟ ಕಡಿಮೆಯಿದೆ ಎಂದು ಹೇಳಿದರು.
-
TV9 Kannada Breaking News Live: 6-9 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ಬದ್ಧ
ಗದಗ: ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ಕಾಮಗಾರಿ 6-9 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ್ ಹೇಳಿದ್ದಾರೆ.
-
TV9 Kannada Breaking News Live: ಕ್ರೈಸ್ತ ಸಮುದಾಯಕ್ಕೆ 1 ಸಾವಿರ ಕೋಟಿ ಮೀಸಲು
ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ರದ್ದು ಮಾಡುವಂತೆ ಮತ್ತು ಹಲವರ ಮೇಲೆ ದಾಖಲಾಗಿರುವ ಸುಳ್ಳು ಕೇಸ್ ಹಿಂಪಡೆಯಲು ಮನವಿ ಮಾಡಲಾಗಿದೆ. ಮುಸ್ಲಿಂ ಭವನದಂತೆ ಕ್ರೈಸ್ತ ಭವನ ನಿರ್ಮಾಣ ಮಾಡುವಂತೆ ಒತ್ತಾಯಿಸಲಾಗಿದೆ. ಬಜೆಟ್ನಲ್ಲಿ ಕ್ರೈಸ್ತ ಸಮುದಾಯಕ್ಕೆ 1 ಸಾವಿರ ಕೋಟಿ ಮೀಸಲಿಡಬೇಕು. ಕ್ರಿಶ್ಚಿಯನ್ ಡೆವಲಪ್ಮೆಂಟ್ ಕೌನ್ಸಿಲ್ ಬದಲಾಗಿ ಕಾರ್ಪೊರೇಷನ್ ಮಾಡುವಂತೆ ಮನವಿ ಮಾಡಲಾಗಿದೆ.
TV9 Kannada Breaking News Live: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕ್ರೈಸ್ತ ಸಮುದಾಯ ಕಾರಣ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕ್ರೈಸ್ತ ಸಮುದಾಯ ಕಾರಣ. ಹೀಗಾಗಿ ಕ್ರೈಸ್ತ ಸಮುದಾಯಕ್ಕೆ ಸರ್ಕಾರ ಸಹಕಾರ ನೀಡಬೇಕೆಂದು ಸಿಎಂ ಸಿದ್ದರಾಮಯ್ಯರಲ್ಲಿ ಮನವಿ ಮಾಡಲಾಗಿದೆ. ಸಿಎಂ ಭೇಟಿ ನಂತರ ಕ್ರೈಸ್ತ ಸಂಘಟನೆ, ಪಾದ್ರಿಗಳ ನಿಯೋಗದ ಸದಸ್ಯ ವಿಕ್ರಮ್ ಆಂಥೋಣಿ ಮಾತನಾಡಿ, ಸಿಎಂ ಸಿದ್ದರಾಮಯ್ಯಗೆ ಕ್ರೈಸ್ತ ಸಮುದಾಯದ 16 ಬೇಡಿಕೆ ಸಲ್ಲಿಸಿದ್ದೇವೆ ಎಂದರು.
TV9 Kannada Breaking News Live: ಎರಡು ದಿನಗಳ ಕಾಲ ನಂದಿಬೆಟ್ಟ ಹಾಗೂ ಸ್ಕಂದಗಿರಿ ಬೆಟ್ಟಗಳು ಬಂದ್
ಮುದ್ದೇನಹಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನಲೆ ಎರಡು ದಿನಗಳ ಕಾಲ ನಂದಿಬೆಟ್ಟ ಹಾಗೂ ಸ್ಕಂದಗಿರಿ ಬೆಟ್ಟಗಳು ಬಂದ್ ಮಾಡಲಾಗುತ್ತಿದೆ. ಜುಲೈ 2 ಬೆಳಿಗ್ಗೆ 6 ಗಂಟೆಯಿಂದ ಜುಲೈ 3 ಸಂಜೆ 6 ಗಂಟೆವರೆಗೂ ಬಂದ್ ಮಾಡಲಾಗುತ್ತಿದ್ದು, ಬಂದ್ ವೇಳೆ ಎರಡು ಬೆಟ್ಟಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
TV9 Kannada Breaking News Live: ಕೆಲವರಿಗೆ ಮಾತನಾಡುವ ಚಟ
ಕಾರವಾರ: ಕೆಲವರಿಗೆ ಮಾತನಾಡುವ ಚಟ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಮತ್ತೊಬ್ಬರ ಮೇಲೆ ಆರೋಪ ಮಾಡುತ್ತಾರೆ ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಲಸಿಗರಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಎಂಬ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಅವರಿಗೆ ಟಿಕೆಟ್ ನೀಡದಿರುವುದಕ್ಕೆ ನಾವು ಕಾರಣವಲ್ಲ. ಅವರು ಯಾರಿಂದ ಸಚಿವರಾಗಿದ್ದರು ಎಂಬುದು ಗೊತ್ತಿದೆ. ಯಾರ ಕಾರಣಕ್ಕೆ ಮಂತ್ರಿಗಿರಿ ಕಳೆದುಕೊಂಡರು ಎಂಬುದೂ ಗೊತ್ತಿದೆ ಎಂದು ಹೇಳಿದ್ದಾರೆ.
TV9 Kannada Breaking News Live: ಸಿಎಂ ಸಿದ್ದರಾಮಯ್ಯ ಭೇಟಿಯಾದ ಲೇಖಕಿಯರ ಸಂಘದ ನಿಯೋಗ
ಜುಲೈ 7ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆ ಇಂದು ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಲೇಖಕಿಯರ ಸಂಘದ ನಿಯೋಗ ಭೇಟಿ ಮಾಡಿದೆ. ಮಹಿಳಾ ಲೇಖಕಿಯರ ಸಂಘದ ಅಧ್ಯಕ್ಷೆ ಹೆಚ್.ಎಲ್.ಪುಷ್ಪಾ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ನೇತೃತ್ವದ ನಿಯೋಗದಿಂದ ಭೇಟಿ ಮಾಡಿದ್ದು, ಸಿಎಂಗೆ ಹಲವು ಬೇಡಿಕೆಗಳ ಮನವಿ ಸಲ್ಲಿಸಿದ.
TV9 Kannada Breaking News Live: ಬಿಜಿಪಿ ವಿರುದ್ಧ ಕಾಂಗ್ರೆಸ್ ಕಿಡಿ
ಬಿಜೆಪಿಯ ಅಂತರಂಗದ ಸತ್ಯಗಳನ್ನು ನಾವು ಮೊದಲೇ ಹೇಳಿದ್ದೆವು, ಈಗ ಅವರ ಬಾಯಲ್ಲೇ ಹೊರಬರುತ್ತಿದೆ ಎಂದು ಹೇಳುವ ಮೂಲಕ ಬಿಜಿಪಿ ವಿರುದ್ಧ ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿಯ ಅಂತರಂಗದ ಸತ್ಯಗಳನ್ನು ನಾವು ಮೊದಲೇ ಹೇಳಿದ್ದೆವು, ಈಗ ಅವರ ಬಾಯಲ್ಲೇ ಹೊರಬರುತ್ತಿದೆ.
?@BSBommai ಅವರು #PuppetCM ಆಗಿದ್ದರು ಎಂದಿದ್ದೆವು. ☑️ಬೊಮ್ಮಾಯಿಯವರ ಕೈ ಕಟ್ಟಿ ಹಾಕಿದ್ದರು ಎಂದು ರೇಣುಕಾಚಾರ್ಯ ಹೇಳಿದ್ದಾರೆ.
?@nalinkateel ನಾಮಕವಸ್ಥೆಯ ಅಸಮರ್ಥ ಅಧ್ಯಕ್ಷರು ಎಂದಿದ್ದೆವು. ☑️ ಕಟೀಲ್ ಸಂತೋಷ ಕೂಟದ ಕೈಗೊಂಬೆ…
— Karnataka Congress (@INCKarnataka) June 30, 2023
TV9 Kannada Breaking News Live: ಕೇಂದ್ರದ ಮೇಲೆ ಸಂಸದರು ಒತ್ತಡ ಹೇರಬಹುದಿತ್ತು
ನಮ್ಮ ಸರ್ಕಾರ ತಾತ್ಕಾಲಿಕವಾಗಿ ಹಣ ನೀಡಲು ತೀರ್ಮಾನಿಸಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಬಹುತೇಕರು ಒಪ್ಪಿದ್ದಾರೆ. ಕೇಂದ್ರದ ಮೇಲೆ ಸಂಸದರು ಒತ್ತಡ ಹೇರಬಹುದಿತ್ತು. ಈಗ ಅದೇ ಪ್ರಶ್ನೆಯನ್ನು ಬಿಜೆಪಿಗೆ ನಿರಂತರವಾಗಿ ಕೇಳುತ್ತಿದ್ದೇವೆ ಎಂದರು.
TV9 Kannada Breaking News Live: ಕೇಂದ್ರ ನಮ್ಮ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಿದೆ
5 ಕೆಜಿ ಅಕ್ಕಿ ಬದಲು ಹಣ ನೀಡಲು ಸರ್ಕಾರ ನಿರ್ಧಾರ ವಿಚಾರವಾಗಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಕೇಂದ್ರ ನಮ್ಮ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಿದೆ. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ಜನರಿಗೆ ಮುಟ್ಟಿಸಬೇಕಿದೆ. ಆ ಉದ್ದೇಶದಿಂದ ನೇರವಾಗಿ ಹಣ ಕೊಡುತ್ತೇವೆ ಎಂದು ಹೇಳಿದರು.
TV9 Kannada Breaking News Live: ಒಂದು ಶಿಕ್ಷಣ ನೀತಿಯಲ್ಲಿ ಬೇರೆ ಬೇರೆ ಅವಿಷ್ಕಾರ
ನ್ಯೂನತೆಗಳು ಏನೇನಿವೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಶಿಕ್ಷಣ ನೀತಿಯಲ್ಲಿ ಬೇರೆ ಬೇರೆ ಅವಿಷ್ಕಾರಗಳು ಇದರಲ್ಲಿವೆ. ಎರಡು ಮುಖ್ಯ ವಿಷಯಗಳು ತೆಗೆದುಕೊಳ್ಳುವುದು, ಮತ್ತೊಂದು ಎಲೆಕ್ಟಿವ್ ವಿಷಯ ತೆಗೆದುಕೊಳ್ಳುವುದು. ಯಾವುದೇ ನೀತಿ ಜಾರಿಗೆ ತರಬೇಕಾದರೆ ಮೂಲಭೂತ ಸೌಲಭ್ಯಗಳು ಇರಬೇಕು. ಅದಕ್ಕೆ ಬೇಕಾದ ಬೋಧಕ, ಬೋಧಕೇತರ ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಅನುದಾನ ಒದಗಿಸುವ ಬಗ್ಗೆ ತಯಾರಿ ಮಾಡಬೇಕಾಗುತ್ತದೆ. ಇನ್ನು ಖಾಸಗಿ ಸಂಸ್ಥೆಗಳಲ್ಲಿ ಒಂದು ರೀತಿ ಆದರೆ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತೊಂದು ರೀತಿ ಆಗುತ್ತದೆ. ಈ ಎಲ್ಲಾ ವಿಚಾರಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಹಂತ ಹಂತವಾಗಿ ಒಂದು ನೀತಿಗೆ ಬದಲಾವಣೆ ತರಬೇಕು ಎಂದರು.
TV9 Kannada Breaking News Live: ವಿದ್ಯಾರ್ಥಿಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ತರುತ್ತೇವೆ
ಯಾವುದೇ ರೀತಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದ ರೀತಿ ಬದಲಾವಣೆಗೆ ಗಮನಹರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸ್ಪಷ್ಟವಾದ ರೂಪ ಕೊಟ್ಟು ಬದಲಾವಣೆ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ. ವಿದ್ಯಾರ್ಥಿಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ತರುತ್ತೇವೆ ಎಂದರು.
TV9 Kannada Breaking News Live: ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ
ರಾಷ್ಟ್ರೀಯ ಶಿಕ್ಷಣ ನೀತಿ ಬದಲಿಗೆ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ ಎಂದು ಬೆಳಗಾವಿಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು. ಎರಡು ವರ್ಷಗಳ ಹಿಂದೆ ಹಿಂದಿನ ಸರ್ಕಾರದಲ್ಲಿ ನಮ್ಮ ರಾಜ್ಯದಲ್ಲಿ ಮಾತ್ರ ಅನುಷ್ಠಾನ ಮಾಡಿದೆ. ಅದಕ್ಕೆ ಬಹಳಷ್ಟು ಪೂರ್ವ ತಯಾರಿ ಆಗಬೇಕಿತ್ತು, ಅದರಲ್ಲಿ ಕೆಲ ನ್ಯೂನತೆಗಳು ಇವೆ. ಈ ಎಲ್ಲವನ್ನೂ ಶಿಕ್ಷಣ ತಜ್ಞರ ಜೊತೆಗೆ ಚರ್ಚಿಸುತ್ತಿದ್ದೇವೆ ಎಂದರು.
TV9 Kannada Breaking News Live: ಒಬ್ಬರಿಗೆ ಮಾತ್ರ ನೋಟಿಸ್ ನೀಡಿದ್ದೇವೆ
ರಾಜ್ಯ ಶಿಸ್ತು ಸಮಿತಿಯಿಂದ ಒಬ್ಬರಿಗೆ ಮಾತ್ರ ನೋಟಿಸ್ ನೀಡಿದ್ದೇವೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಹೇಳಿದರು. ಹಾಲಿ ಶಾಸಕ, ಸಂಸದರಿಗೆ ನೋಟಿಸ್ ಕೊಡುವ ಅಧಿಕಾರ ನಮಗಿಲ್ಲ. ಅದು ಕೇಂದ್ರಿಯ ಶಿಸ್ತು ಸಮಿತಿ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು.
TV9 Kannada Breaking News Live: ಸಿದ್ದರಾಮಯ್ಯ ಏನು ಚಪ್ರಾಸಿ ಅಲ್ವಲ್ಲಾ?
ಸಿಎಂ ಸಿದ್ದರಾಮಯ್ಯಗೆ ಹೇಳಿ, ನಾನು ಏನು ಚಪ್ರಾಸಿ ತರ ಕೂತಿದ್ದೇನೆ ಅಂದುಕೊಳ್ಳುತ್ತಾರಾ ಅವರು? ಸಿದ್ದರಾಮಯ್ಯ ಏನು ಚಪ್ರಾಸಿ ಅಲ್ವಲ್ಲಾ? ಅವರು ಮೋಸ್ಟ್ ಎಕ್ಸ್ ಪೀರಿಯನ್ಸ್ ಚೀಫ್ ಮಿನಿಸ್ಟರ್ ತಾನೇ? ಎಲ್ಲಾ ದರವನ್ನು ಇಳಿಸುವ ತಾಕತ್ತು ಅವರಿಗೆ ಇದೆ ಅಲ್ವಾ? ಇವರುಒಂದು ಮಾದರಿ ಆಗಬೇಕು ಅಂದರೆ ಎಲ್ಲಾ ದರವನ್ನು ಇಳಿಕೆ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದಾರೆ.
TV9 Kannada Breaking News Live: ಸಿದ್ದರಾಮಯ್ಯನವರಿಗೆ ಲೆಕ್ಕ ಹೇಳಿಕೊಡಬೇಕಾ?
ಸಿಎಂ ಸಿದ್ದರಾಮಯ್ಯನವರಿಗೆ ಲೆಕ್ಕ ಹೇಳಿಕೊಡಬೇಕಾ? 10*35 ಎಷ್ಟು ರೂಪಾಯಿ ಆಗುತ್ತದೆ? ಸದನದಲ್ಲಿ ಲೆಕ್ಕದ ಬಗ್ಗೆ ಪಾಠ ಮಾಡುವವರಿಗೆ ಲೆಕ್ಕ ಗೊತ್ತಿಲ್ವೇ? ಸುಮ್ಮನೆ ಇವರು ಏನೂ ಕೊಡಲ್ಲ, ಈಗಾಗಲೇ ಏರಿಸಿದ್ದೆಲ್ಲಾ ಏರಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
TV9 Kannada Breaking News Live: ಯಡಿಯೂರಪ್ಪ ಪಕ್ಷದಿಂದ ಹೊರಗೆ ಕಳಿಸಿದರು
ಯಡಿಯೂರಪ್ಪ ಅವರನ್ನು 2013 ರಲ್ಲಿ ಪಕ್ಷದಿಂದ ಹೊರಗೆ ಕಳಿಸಿದರು. ಆಗ ಪಕ್ಷ ಹೀನಾಯ ಸೋಲು ಕಂಡಿತು ಎಂದು ಬೆಂಗಳೂರಿನಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ ಹೇಳಿದರು. ಪ್ರಧಾನಿ ಮೋದಿ, ಅಮಿತ್ ಶಾ ಅವರು ಕರೆದು ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷ ಮಾಡಿದರು. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಪ್ರವಾಸ ಮಾಡಿದರು ಎಂದರು.
Karnataka Breaking News Live: ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರಬೇಕು; ಬಿಎಸ್ವೈ
ಬೆಂಗಳೂರು: ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರಬೇಕೆಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಆಗ್ರಹಿಸಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ‘ ಭರವಸೆ ನೀಡಿದಂತೆ ಬಡವರಿಗೆ 10 ಕೆಜಿ ಅಕ್ಕಿಯನ್ನು ನೀಡಬೇಕು ಎಂದರು.
Karnataka Breaking News Live: ಆನೇಕಲ್ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಕಾವೇರಿ ನೀರು ಕೊಡಿಸುವ ಜಾವಾಬ್ದಾರಿ ನಮ್ಮದು; ಡಿಕೆ ಸುರೇಶ್
ಬೆಂಗಳೂರು ನಗರ: ತಾಲೂಕಿನ ಅಭಿವೃದ್ಧಿ ಬಗ್ಗೆ ಇಲ್ಲಿನ ಶಾಸಕರು ನಾವು ಚಿಂತನೆ ಮಾಡುತ್ತಿದ್ದೇವೆ. ಆನೇಕಲ್ ಕೆರೆಗಳ ತುಂಬಿಸುವ ಕಾರ್ಯ ನಡೆದಿದೆ. ಹಿಂದಿನ ಸರ್ಕಾರ ಆನೇಕಲ್ಗೆ ಕಾವೇರಿ ನೀರು ಬರದಂತೆ ಮಾಡಿದ್ರು, ನಾವು ನೀರು ತರುವ ಪ್ರಯತ್ನ ಮಾಡುತ್ತಿದ್ದೇವೆ. ಆನೇಕಲ್ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಕಾವೇರಿ ನೀರು ಕೊಡಿಸುವ ಜಾವಾಬ್ದಾರಿ ನಮ್ಮದು ಎಂದರು.
Karnataka Breaking News Live: ಒಂದೇ ಹುದ್ದೆಗೆ ನಾಲ್ವರು ಅಧಿಕಾರಿಗಳ ಹೆಸರು ಶಿಫಾರಸು ಆರೋಪ; ಪ್ರತಿಕ್ರಿಯಿಸಿದ ಡಿಕೆಶಿ
ದೆಹಲಿ: ಒಂದೇ ಹುದ್ದೆಗೆ ನಾಲ್ವರು ಅಧಿಕಾರಿಗಳ ಹೆಸರು ಶಿಫಾರಸು ಕುರಿತು ಹೆಚ್ಡಿ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕೆಲಸದ ಒತ್ತಡದಲ್ಲಿ ಸಿಎಂ ಕಚೇರಿಯಿಂದ ಆದೇಶವಾಗಿರಹುದು ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಹಲವಾರು ಜನರು ಮನವಿ ಮಾಡಿರುತ್ತಾರೆ. ಮನವಿ ಮೇರೆಗೆ ಪತ್ರ ನೀಡಿರುತ್ತಾರೆ, ಅವು ಡಬಲ್ ಆಗಿರುವ ಸಾಧ್ಯತೆ ಇರುತ್ತೆ. ಕೆಲವೊಮ್ಮೆ ನನ್ನ ಕಚೇರಿಯಲ್ಲಿಯು ಆಗಿರುತ್ತೆ. ನಾನು ಈವರೆಗೂ ಒಂದು ವರ್ಗಾವಣೆ ಮಾಡಿಲ್ಲ. ಯಾರ್ಯಾರಿಗೆ ಪತ್ರ ಹೋಗಿದೆ ಪರಿಶೀಲನೆ ಮಾಡಲು ಹೇಳಿದ್ದೇನೆ ಎಂದರು.
Karnataka Breaking News Live: ಕುರ್ಚಿ ಸರಿಯಿಲ್ಲದಿದ್ದಕ್ಕೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್
ಬೆಂಗಳೂರು: ಜುಲೈ 7ರಂದು ರಾಜ್ಯ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬೆಂಗಳೂರಿನ ವಸಂತನಗರದ ಹಣಕಾಸು ಇಲಾಖೆ ಕಚೇರಿಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಕುರ್ಚಿ ಸರಿಯಿಲ್ಲದಿದ್ದಕ್ಕೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್ ತಗೆದುಕೊಂಡ ಘಟನೆ ನಡೆದಿದೆ. ಇದರ ಬೆನ್ನಲ್ಲೇ ಕೂಡಲೇ ಕಚೇರಿ ಸಿಬ್ಬಂದಿ ಬೇರೆ ಕುರ್ಚಿ ತಂದುಕೊಟ್ಟಿದ್ದಾರೆ.
Karnataka Breaking News Live: ಕೃಷ್ಣ ಮೇಲ್ದಂಡೆ ಯೋಜನೆ; ಎಐಬಿಪಿಯಿಂದ ಅನುದಾನ ಪಡೆಯಲು ಕೇಂದ್ರ ಸರ್ಕಾರ ಹೇಳಿದೆ; ಡಿಕೆಶಿ
ದೆಹಲಿ: ಕೃಷ್ಣ ಮೇಲ್ದಂಡೆ ಯೋಜನೆ ವಿಚಾರವಾಗಿ ಐದು ಸಾವಿರ ಕೋಟಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಎಐಬಿಪಿಯಿಂದ ಅನುದಾನ ಪಡೆಯಲು ಕೇಂದ್ರ ಸರ್ಕಾರ ಹೇಳಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಇದು ರಾಷ್ಟ್ರೀಯ ಯೋಜನೆಯೆಂದು ಘೋಷಿಸಲು ಮನವಿ ಮಾಡಿದೆ. ಎಐಬಿಪಿಯಲ್ಲಿ 60:40 ಹಣ ನೀಡಲಾಗುತ್ತೆ. ಹೀಗಾಗಿ ಹಣಕಾಸು ಇಲಾಖೆ ಜೊತೆಗೆ ಚರ್ಚಿಸಲು ನಿರ್ಧರಿಸಿದೆ. ಇನ್ನು ಕೆಲವು ಯೋಜನೆಗಳಿಗೆ ಹೆಚ್ಚಿನ ಹಣಕ್ಕೆ ಮನವಿ ಮಾಡಿದ್ದೇನೆ ಎಂದಿದ್ದಾರೆ.
Karnataka Breaking News Live: ಜುಲೈ 7 ರಂದು ರಾಜ್ಯ ಬಜೆಟ್ ಮಂಡನೆ; ಮುಂದುವರೆದ ಸಿಎಂ ಬಜೆಟ್ ಪೂರ್ವಭಾವಿ ಸಭೆ
ಬೆಂಗಳೂರು: ನೂತನ ರಾಜ್ಯ ಸರ್ಕಾರದ ಮೊದಲ ಬಜೆಟ್ನ್ನು ಜುಲೈ 7 ರಂದು ಮಂಡನೆ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನಲೆ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಸಿಎಂ ಬಜೆಟ್ ಪೂರ್ವಭಾವಿ ಸಭೆ ಮುಂದುವರೆದಿದೆ. ವಸಂತನಗರದ ಹಣಕಾಸು ಇಲಾಖೆಯ ಕಚೇರಿಯಲ್ಲಿ ಸಭೆ ನಡೆಯುತ್ತಿದೆ.
Karnataka Breaking News Live: ಬಿಜೆಪಿಯಲ್ಲಿ ನಾಯಕರ ಬಹಿರಂಗ ಹೇಳಿಕೆ; ಪ್ರಮುಖ ನಾಯಕರ ಸಭೆ
ಬೆಂಗಳೂರು: ಬಿಜೆಪಿಯಲ್ಲಿ ನಾಯಕರ ಬಹಿರಂಗ ಹೇಳಿಕೆಗೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪ್ರಮುಖ ನಾಯಕರ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕರಾದ ಗೋವಿಂದ ಕಾರಜೋಳ, ಎ.ಎಸ್. ಪಾಟೀಲ್ ನಡಹಳ್ಳಿ, ವೀರಣ್ಣ ಚರಂತಿಮಠ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದಾರೆ.
Karnataka Breaking News Live: ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ 2023 ರ SSLC ಪೂರಕ ಫಲಿತಾಂಶಗಳನ್ನು (SSLC Supplementary Result 2023) ಪ್ರಕಟಿಸಿದೆ. ವಿದ್ಯಾರ್ಥಿಗಳು 10 ನೇ ತರಗತಿಯ ಪೂರಕ ಪರೀಕ್ಷೆಯ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್- karresults.nic.in ನಲ್ಲಿ ಪರಿಶೀಲಿಸಬಹುದು.
Karnataka Breaking News Live: ಮೈಸೂರಿನಲ್ಲಿ ಮಾಜಿ ಸೇನಾಧಿಕಾರಿ ವಿಧಿವಶ
ಮೈಸೂರು: ಮಾಜಿ ಸೇನಾಧಿಕಾರಿ ಕೃಷ್ಣಮೂರ್ತಿ ವಿಧಿವಶರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೃಷ್ಣಮೂರ್ತಿಯವರು ಮೈಸೂರು ನಗರದ ಲಕ್ಷ್ಮೀಪುರಂ ನಿವಾಸದಲ್ಲಿ ಕೊನೆಯುಸಿರೆಳದಿದ್ದಾರೆ. ಇವರು ರಜಪೂತ್ ರೆಜಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, 1971ರ ಯುದ್ದದಲ್ಲಿ ಭಾಗವಹಿಸಿದ್ದರು. ಇದೀಗ ವಿಧಿವಶರಾಗಿದ್ದು, ಲಕ್ಷ್ಮೀಪುರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
Karnataka Breaking News Live: ಆಧಾರ್ ಕಾರ್ಡ್, ಪಾನ್ಕಾರ್ಡ್ ಲಿಂಕ್ಗೆ ಇಂದು ಕೊನೆಯ ದಿನ
ಬೆಂಗಳೂರು: ಆಧಾರ್ ಹಾಗೂ ಪಾನ್ಕಾರ್ಡ್ ಲಿಂಕ್ಗೆ ಎಕ್ಸೆಟೆಂಡ್ ಮಾಡಿದ್ದ ಸಮಯ ಇಂದಿಗೆ ಮುಕ್ತಾಯವಾಗುತ್ತದೆ. ಆಧಾರ್ ಮತ್ತು ಪಾನ್ ಲಿಂಕ್ಗೆ ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು. ಆದ್ರೆ, ಸಾಕಷ್ಟು ಜನರು ಲಿಂಕ್ ಮಾಡಿಸಿಕೊಳ್ಳದ ಹಿನ್ನೆಲೆ ಸರ್ಕಾರದ ನಿರ್ಧಾರದ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಮಾರ್ಚ್ 30 ರಿಂದ ಜೂನ್ 30 ರವರೆಗೆ ಹೆಚ್ಚಿನ ಅವಧಿ ನೀಡಲಾಗಿತ್ತು. ಈ ಅವಧಿ ಇಂದಿಗೆ ಮುಗಿಯಲಿದ್ದು, ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಅಂದ್ರೆ, 10 ಸಾವಿರ ದಂಡ ಬೀಳುವುದರ ಜೊತೆಗೆ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗುವ ಸಾಧ್ಯತೆಯಿದೆ.
Karnataka Breaking News Live: ಅನ್ನಭಾಗ್ಯ ಬಗ್ಗೆ ಸರ್ಕಾರಕ್ಕೆ ಚೀಮಾರಿ ಹಾಕ್ತಿರುವ ಪುರುಷರು
ಬೆಂಗಳೂರು: ಸರ್ಕಾರ ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯ ಬದಲು ಹಣ ನೀಡುವ ನಿರ್ಧಾರದ ಬಗ್ಗೆ ಪುರುಷರು ಸರ್ಕಾರಕ್ಕೆ ಚೀಮಾರಿ ಹಾಕುತ್ತಿದ್ದಾರೆ. ಕಾಂಗ್ರೆಸ್ಗೆ ವೋಟ್ ಹಾಕಿ ನಮ್ಮ ತಲೆ ಮೇಲೆ ನಾವೇ ಮಣ್ಣು ಸುರಿದುಕೊಂಡ್ವಿ. ದುಡ್ಡು ಯಾರಿಗೆ ಬೇಕು, ಅಕ್ಕಿ ಕೊಡಿ. 15 ಕೆಜಿ ಅಕ್ಕಿ ಕೊಡಬೇಕು, 5 ಕೆಜಿ ಬರ್ತಿದೆ, 10 ಕೆಜಿ ದುಡ್ಡು ಕೊಡಿ, ಯಾಕೆ 5 ಕೆಜಿ ಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
Karnataka Breaking News Live: ನಮಗೆ ದುಡ್ಡು ಬೇಡ, ಅಕ್ಕಿ ಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಮಹಿಳೆಯರು
ಹುಬ್ಬಳ್ಳಿ: ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ 5 ಕೆ.ಜಿ ಅಕ್ಕಿ ಬದಲಿಗೆ ಹಣ ನೀಡಲು ನಿರ್ಧಾರದ ವಿಚಾರ ಕುರಿತು ‘ನಮಗೆ ದುಡ್ಡು ಬೇಡ, ಅಕ್ಕಿ ಬೇಕೆಂದು ಹುಬ್ಬಳ್ಳಿಯಲ್ಲಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಡ್ಡು ಕೊಟ್ರೆ ತಿನ್ನೋಕೆ ಆಗಲ್ಲ. ಅಕ್ಕಿ ಇದ್ರೆ, ಒಂದೊತ್ತಿನ ಊಟ ಮಾಡಬಹುದು ಎಂದಿದ್ದಾರೆ.
Karnataka Breaking News Live: ನಾಳೆಯಿಂದಲೇ ಗೃಹಜ್ಯೋತಿ ಅನ್ವಯ ವಿಚಾರ; ಬೆಳಗಾವಿ ಜನರಲ್ಲಿ ಹಲವಾರು ಗೊಂದಲ
ಬೆಳಗಾವಿ: ನಾಳೆಯಿಂದಲೇ ಗೃಹಜ್ಯೋತಿ ಅನ್ವಯ ವಿಚಾರವಾಗಿ ಕುಂದಾನಗರಿ ಬೆಳಗಾವಿಯ ಜನರಲ್ಲಿ ಹಲವಾರು ಗೊಂದಲ ಏರ್ಪಟ್ಟಿದೆ. ಹೌದು ಬಹುತೇಕ ಮನೆ ಮಾಲೀಕರು ಮಾತ್ರ ಅರ್ಜಿ ತುಂಬಿದ್ದು, ಬಾಡಿಗೆದಾರರು ಅರ್ಜಿ ತುಂಬಲು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲು ಬಾಡಿಗೆದಾರರು ರೆಂಟ್ ಅಗ್ರಿಮೆಂಟ್ ಕೊಡಬೇಕು ಅಂದಿದ್ರು. ಆದ್ರೆ, ರೆಂಟ್ ಅಗ್ರಿಮೆಂಟ್ ಆಪ್ಷನ್ ಅದರಲ್ಲಿಲ್ಲ, ಜೊತೆಗೆ ಆಧಾರ್ ನಂಬರ್ ಲಿಂಕ್ ಆಗುತ್ತಿಲ್ಲ. ಹೀಗೆ ಹತ್ತು ಹಲವು ಗೊಂದಲಗಳು ಏರ್ಪಟ್ಟಿದೆ.
Karnataka Breaking News Live: ಅಕ್ಕಿ ಬದಲು ಹಣ ಕೊಡುವ ಸರ್ಕಾರದ ವಿಚಾರ; ಪರ ವಿರೋದ ವ್ಯಕ್ತಪಡಿಸಿದ ಜನ
ಹಾಸನ: ಸರ್ಕಾರಕ್ಕೆ ಅಕ್ಕಿ ಹೆಚ್ಚಿನ ಮಟ್ಟದಲ್ಲಿ ಸಿಗದ ಕಾರಣ ಅಕ್ಕಿ ಬದಲು ಹಣ ಕೊಡುವ ನಿರ್ಧಾರ ವಿಚಾರವಾಗಿ ರಾಜ್ಯದಲ್ಲಿ ಪರ ವಿರೋಧ ಚರ್ಚೆಗಳು ಆಗುತ್ತಿದ್ದು. ಹಾಸನ ಜಿಲ್ಲೆಯಲ್ಲಿ ಕೆಲವರು ಹಣ ಕೊಟ್ಟರೆ ಉಪಯೋಗವಿದ್ದು, ಸಧ್ಯ ಯಾವುದಾದ್ರು ಒಂದು ಅಧಿಕೃತಗೊಳಿಸಿ ಎನ್ನುತ್ತಿದ್ದರೆ, ಇತ್ತ 5 ಕೆ.ಜಿ ಅಕ್ಕಿ ಕೊಟ್ಟು, ಇನ್ನುಳಿದಂತೆ ಹಣ ಬದಲು ಬೇರೆ ದಾವಸ ಧಾನ್ಯಗಳು ಕೊಟ್ಟರೆ ಉಪಯೋಗವೆಂದರೆ, ಮತ್ತೊಂದೆಡೆ ದುಡ್ಡು ಕೊಟ್ಟರೆ ಬೇಗ ಖರ್ಚಾಗುತ್ತೆ. ಇದರಿಂದ ಅನಾನುಕೂಲವೇ ಹೆಚ್ಚಾಗಲಿದೆ. ಈ ಹಣವನ್ನ ಮನೆಯಲ್ಲಿ ಗಂಡು ಮಕ್ಕಳು ಕುಡಿಯಲು ಬಳಸುತ್ತಾರೆ. ಅದರ ಬದಲು ಸಿರಿಧಾನ್ಯ ಕೊಟ್ಟರೆ ಉಪಯೋಗವಾಗಲಿದೆ ಎನ್ನುತ್ತಿದ್ದಾರೆ.
Karnataka Breaking News Live: ಇಂದಿನಿಂದಲೇ ಆರಂಭವಾಗಲಿದೆ ಗೃಹಜ್ಯೋತಿ ಯೋಜನೆ
ಬೆಂಗಳೂರು: ಇಂದು(ಜೂ.30) ಮಧ್ಯರಾತ್ರಿಯಿಂದ ಗೃಹಜ್ಯೋತಿ ಯೋಜನೆ ಅಧಿಕೃತವಾಗಿ ಆರಂಭವಾಗಲಿದೆ. ರಾತ್ರಿ ಒಂದು ಗಂಟೆಯಿಂದ ಪ್ರತಿ ಯುನಿಟ್ ಕೌಂಟ್ ಆಗಲಿದ್ದು, 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತ. 12 ತಿಂಗಳ ಸರಾಸರಿ ಬಳಕೆ 200 ಯುನಿಟ್ ಇದ್ದರು ಫ್ರಿ ವಿಧ್ಯುತ್ ಸಿಗಲಿದ್ದು, 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ರೆ ಮಾತ್ರ ಬಿಲ್ ಬರಲಿದೆ.
Published On - Jun 30,2023 7:22 AM