KSRTC BMTC Strike: ಮುಷ್ಕರದ ನಡುವೆ ಕೆಲಸ ಮಾಡುತ್ತಿದ್ದ ನೌಕರರಿಗೆ ಜೀವ ಬೆದರಿಕೆ

ಮುಷ್ಕರದ ವೇಳೆ ಕೆಲಸ ಮಾಡಿದರೆ ಗ್ರಹಚಾರ ಸರಿಯಿರಲ್ಲ ಎಂದು 8 ನೇ ಡಿಪೋ ಚಾಲಕ ನಾಯಕ್ ಎನ್ನುವವರಿಂದ ಚಾಲಕ ತ್ಯಾಗರಾಜ್‌ ಎಂಬುವವರಿಗೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

KSRTC BMTC Strike: ಮುಷ್ಕರದ ನಡುವೆ ಕೆಲಸ ಮಾಡುತ್ತಿದ್ದ ನೌಕರರಿಗೆ ಜೀವ ಬೆದರಿಕೆ
ಕೆಎಸ್​ಆರ್​ಟಿಸಿ ಬಸ್​
Follow us
|

Updated on:Apr 07, 2021 | 10:23 AM

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ನಡುವೆ ಕೆಲಸ ಮಾಡುತ್ತಿದ್ದ ಚಾಲಕ ತ್ಯಾಗರಾಜ್‌ ಎಂಬುವವರಿಗೆ ಸಾರಿಗೆ ನೌಕರರ ಕೂಟ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮುಷ್ಕರದ ವೇಳೆ ಕೆಲಸ ಮಾಡಿದರೆ ಗ್ರಹಚಾರ ಸರಿಯಿರಲ್ಲ ಎಂದು 8 ನೇ ಡಿಪೋ ಚಾಲಕ ನಾಯಕ್ ಎನ್ನುವವರಿಂದ ಚಾಲಕ ತ್ಯಾಗರಾಜ್‌ ಎಂಬುವವರಿಗೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಸಾರ್ವಜನಿಕರ ಸೇವೆ ಮಾಡದೆ ಮುಷ್ಕರಕ್ಕೆ ಇಳಿದರೆ ಏನು ಪ್ರಯೋಜನವಿಲ್ಲ ಎಂದ ಲೇಡಿ ಕಂಡಕ್ಟರ್ ಸ್ಯಾಟಲೈಟ್​ನಿಂದ ಏರ್ ಪೋರ್ಟ್ ಕಡೆಗೆ ಹೊರಟ ಎಸಿ ಬಸ್ ನಿರ್ವಾಹಕಿ ಮುಷ್ಕರಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಎಸಿ ಬಸ್ ನಿರ್ವಾಹಕಿ ಸಾರ್ವಜನಿಕರ ಸೇವೆ ಮಾಡದೆ ಮುಷ್ಕರಕ್ಕೆ ಇಳಿದರೆ ಏನು ಪ್ರಯೋಜನ ಆಗುವುದಿಲ್ಲ. ಪ್ರತಿಭಟನೆ, ಮುಷ್ಕರದಿಂದ ಅನ್ಯ ರಾಜ್ಯಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಭಟನೆ, ಮುಷ್ಕರದಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಸಾರಿಗೆ ಸಚಿವರು, ಮಾನ್ಯ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸುವ ಭರವಸೆ ಇದೆ. 6ನೇ ವೇತನ ಆಯೋಗ ಜಾರಿ ಆಗಲೇಬೇಕು. ಸರ್ಕಾರ ವೇತನ ತಾರತಮ್ಯ ಮಾಡಬಾರದು. ಬರುವ ಸಂಬಳ ಯಾವುದಕ್ಕೂ ಸಾಲುತ್ತಿಲ್ಲ. ಪೊಲೀಸ್ ಭದ್ರತೆಯೊಂದಿಗೆ ಬಸ್ ಓಡಿಸುತ್ತಿದ್ದೇವೆ. ಬಸ್​ಗೆ ಹಾನಿ ಮಾಡಿದರೆ ಸೈಡಿಗೆ ಹಾಕಿ ಅಲ್ಲೇ ನಿಲ್ಲಿಸುತ್ತೇವೆ. ಸಾರಿಗೆ ಇಲಾಖೆ ನಮ್ಮ ಜೊತೆಗಿದೆ ಎಂದು ಮಹಿಳಾ ಕಂಡಕ್ಟರ್ ಮುಖ್ಯಮಂತ್ರಿಗಳು 6ನೇ ವೇತನ ಆಯೋಗ ಜಾರಿಗೊಳಿಸಬೇಕೆಂದು ಕೈ ಮುಗಿದು ಕೇಳಿಕೊಂಡರು.

ಇದನ್ನೂ ಓದಿ

KSRTC BMTC Strike: ಸಾರಿಗೆ ನೌಕರರ ನೋವು, ವೇದನೆ ಬಹಳ ದಿನಗಳಿಂದ ಮಡುಗಟ್ಟಿದೆ – ಕೋಡಿಹಳ್ಳಿ ಚಂದ್ರಶೇಖರ್​

World Health Day 2021: ಉತ್ತಮ ಆರೋಗ್ಯದ ನಿರೀಕ್ಷೆಯಲ್ಲಿದ್ದವರಿಗೆ ಈ ಬಾರಿಯ ವಿಶ್ವ ಆರೋಗ್ಯ ದಿನ ಹೊಸ ಮೈಲಿಗಲ್ಲಾಗಲಿ

(Karnataka Bus strike Employees got life threat amidst strike in Bengaluru)

Published On - 10:09 am, Wed, 7 April 21