ರಾಜಕಾರಣಿಗಳಿಗಿಲ್ಲ ಬರ: ಮನೆಗೆ ಬಂದವು ಹೊಸ-ಹೊಸ ಕಾರ್, ಶಾಸಕ, ಸಚಿವರಿಗೆ ಸಿಕ್ತು ದಸರಾ ಬಂಪರ್​ ಗಿಫ್ಟ್​

ಕರ್ನಾಟಕದಲ್ಲಿ ಮಳೆ ಇಲ್ಲದೇ ರೈತರು ಬೆಳೆ ಬೆಳೆಯಕ್ಕಾಗದೇ ಸಂಕಷ್ಟಕ್ಕೀಡಾಗಿದ್ದಾರೆ. ಮಳೆ-ಬೆಳೆ ಇಲ್ಲದೇ ರಾಜ್ಯದಲ್ಲಿ ಬರಗಾಲ ಆವರಿಸಿದೆ. ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಹರಸಾಹಸ ಮಾಡುತ್ತಿದೆ. ಆದ್ರೆ, ರಾಜಕಾರಣಿಗಳ ಮೋಜು ಮಸ್ತಿಗೇನು ಬರ ಇಲ್ಲ. ಬರಗಾಲದ ಕಾರಣಕ್ಕೆ ಅನುತ್ಪಾದಕ ವೆಚ್ಚ ಕಡಿತ ಮಾಡಬೇಕು ಎನ್ನುತ್ತಿರುವ ಸರ್ಕಾರವೇ ಶಾಸಕರು, ಸಚಿವರುಗಳಿಗೆ ದಸರಾ ಉಡುಗೊರೆ ನೀಡಿದೆ.

ರಾಜಕಾರಣಿಗಳಿಗಿಲ್ಲ ಬರ:  ಮನೆಗೆ ಬಂದವು ಹೊಸ-ಹೊಸ ಕಾರ್, ಶಾಸಕ, ಸಚಿವರಿಗೆ ಸಿಕ್ತು ದಸರಾ ಬಂಪರ್​ ಗಿಫ್ಟ್​
ವಿಧಾನಸೌಧ
Follow us
|

Updated on:Oct 20, 2023 | 11:33 AM

ಬೆಂಗಳೂರು, (ಅಕ್ಟೋಬರ್ 20): ಕರ್ನಾಟಕದಲ್ಲಿ (Karnataka) ಮಳೆ (Rain) ಇಲ್ಲದೇ ರೈತರು ಬೆಳೆ ಬೆಳೆಯಕ್ಕಾಗದೇ ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದಲ್ಲಿ ಬರಗಾಲ(draught) ಆವರಿಸಿದೆ. ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹರಸಾಹಸ ಮಾಡುತ್ತಿದೆ. ಆದ್ರೆ, ರಾಜಕಾರಣಿಗಳ ಮೋಜು ಮಸ್ತಿಗೇನು ಬರ ಇಲ್ಲ. ರಾಜ್ಯ ಸರ್ಕಾರ ಹೊಸ ಇನೋವಾ ಕಾರುಗಳನ್ನು ಖರೀದಿಸಿ ಸಚಿವರಿಗೆ ದಸರಾ ಉಡುಗೊರೆಯಾಗಿ ನೀಡಿದೆ. ಹೌದು… ಬರಗಾಲದ ಕಾರಣಕ್ಕೆ ಅನುತ್ಪಾದಕ ವೆಚ್ಚ ಕಡಿತ ಮಾಡಬೇಕು ಎನ್ನುತ್ತಿರುವ ಸರ್ಕಾರವೇ, 33 ಸಚಿವರಿಗೆ ಇನೋವಾ ಹೈಬ್ರೀಡ್ ಕಾರುಗಳನ್ನು ಖರೀದಿಸಿದೆ.

ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ 33 ಇನೋವಾ ಹೈಬ್ರೀಡ್‌ ಕಾರುಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ. ಅಗಸ್ಟ್ 17 ರಂದೇ 33 ಕಾರು ಇನ್ನೋವಾ ಕಾರು ಖರೀದಿಗಾಗಿ ಸರ್ಕಾರ ತನ್ನ ಖಜಾನೆಯಿಂದ ಹಣ ಬಿಡುಗಡೆ ಮಾಡಿತ್ತು. ಇದೀಗ ದಸರಾ ಆರಂಭವಾಗುತ್ತಿದ್ದಂತೆಯೇ ಸಚಿವರ ನಿವಾಸಕ್ಕೆ ಹೊಸ ಕಾರುಗಳು ಬಂದು ನಿಂತಿದ್ದು, ಪೂಜೆ ಪುನಸ್ಕಾರದ ಬಳಿಕ ಹೊಸ ಕಾರಿನಲ್ಲಿ ಸಚಿವರುಗಳು ಓಡಾಟ ಶುರು ಮಾಡಿದ್ದಾರೆ.

ಶಾಸಕರು, ಸಚಿವರ ವೇತನ ಏರಿಕೆಗೆ ಸಂಪುಟ ಒಪ್ಪಿಗೆ!

ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು 2022ರಲ್ಲಿ ಶಾಸಕರು, ಸಚಿವರ ವೇತನ ಹಾಗೂ ಭತ್ಯೆಯನ್ನು ಹೆಚ್ಚಳ ಮಾಡಿದ್ದ ನಿರ್ಣಯಕ್ಕೆ ಘಟನೋತ್ತರ ಒಪ್ಪಿಗೆ ನೀಡಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. 2022ರ ಫೆಬ್ರುವರಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ವೇತನ, ಭತ್ಯೆ ಪರಿಷ್ಕರಣೆ ಮಾಡಲಾಗಿತ್ತು. ಈವರೆಗೆ ಪರಿಷ್ಕೃತ ವೇತನವನ್ನು ಶಾಸಕರು, ಸಚಿವರು ಪಡೆಯುತ್ತಿದ್ದರು. ಆದರೆ ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ಪಡೆಯದ ಹಿನ್ನೆಲೆಯಲ್ಲಿ ಘಟನೋತ್ತರ ಒಪ್ಪಿಗೆ ನೀಡಿರುವುದಾಗಿ ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದ್ದಾರೆ.

ಈ ಅನುತ್ಪಾದಕ ವೆಚ್ಚ ಕಡಿತ ಅನ್ನೋದು ಜನಸಾಮಾನ್ಯರ ವಿಚಾರಗಳಿಗೆ ಮಾತ್ರವೇ ಎನ್ನುವಂತಾಗಿದ್ದು, ಬರಗಾಲ ಇದ್ದರೂ, ಸಚಿವರ ಕಾರುಬಾರಿಗೇನು ಕೊರತೆಯಿಲ್ಲ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:29 am, Fri, 20 October 23