ಬೆಂಗಳೂರು, ಡಿಸೆಂಬರ್ 06: ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಮಾಡಲಾಗಿದೆ. ಶಾಸಕರು, ಸಚಿವರು ಭಾಗಿಯಾಗಿದ್ದರು. 20 ವಿಷಯಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಕಟ್ಟಡ ಕಲ್ಲು, ಮೈನಿಂಗ್ ಸ್ಟೋನ್ ರಾಯಲ್ಟಿ ಹೆಚ್ಚಿಸಲಾಗಿದೆ. ಆ ಮೂಲಕ ಕಟ್ಟಡ ನಿರ್ಮಾಣದ ಕನಸಿಗೆ ಬೆಲೆ ಏರಿಕೆಯ ಹೊರೆ ತಟ್ಟಿದೆ.
ಸಚಿವ ಸಂಪುಟ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಉಪ ಖನಿಜ ರಿಯಾಯಿತಿ ನಿಯಮ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ವಿಚಾರದ ಬಗ್ಗೆ ಚರ್ಚೆಯಾಗಿದೆ. ರಾಯಲ್ಟಿ ಪರಿಷ್ಕರಣೆ ಮಾಡಲು ಸಂಪುಟ ಸಭೆ ಸಮ್ಮತಿಸಿದೆ. ಸರ್ಕಾರದ ಆದಾಯ ಹೆಚ್ಚಳಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಗ್ಯಾರೆಂಟಿಗಳಿಗೇನು ಹಣದ ಕೊರತೆಯಿಲ್ಲ ಆದರೆ ಅಭಿವೃದ್ಧಿ ಕೆಲಸಗಳು ಆಗಬೇಕಲ್ಲ ಹಾಗಾಗಿ ರಾಯಲ್ಟಿ, ತೆರಿಗೆ ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಯತ್ನಾಳ್ ಆಯ್ತು ಈಗ ದಿಲ್ಲಿಯಿಂದ ಬರುತ್ತಲ್ಲೇ ವಿಜಯೇಂದ್ರ ವಿರುದ್ಧ ಜಾರಕಿಹೊಳಿ ವಾಗ್ದಾಳಿ
ಕಟ್ಟಡ ಕಲ್ಲು, ಮೈನಿಂಗ್ ಕಲ್ಲು ಪ್ರತಿ ಟನ್ಗೆ 80 ರೂ. ರಾಯಲ್ಟಿ ನಿಗದಿಯಿಂದ 311.55 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಿದೆ. ಮೊದಲು ಮೆಟ್ರಿಕ್ ಟನ್ಗೆ 20 ರೂ. ರಾಯಲ್ಟಿ ನಿಗದಿಯಾಗಿತ್ತು. ಈಗ ಪ್ರತಿ ಮೆಟ್ರಿಕ್ ಕಲ್ಲಿಗೆ 10 ರೂ. ರಾಯಲ್ಟಿ ಹೆಚ್ಚಿಸಲಾಗಿದೆ. ರಾಯಲ್ಟಿ ಪಾವತಿಸದೆ ಖನಿಜ ಸಾಗಣೆ ಮಾಡಿದರೆ ದಂಡ ವಸೂಲಿಗೆ ನಿರ್ಧರಿಸಲಾಗಿದೆ. 6,105 ರೂಪಾಯಿ ದಂಡ ವಿಧಿಸಲಾಗಿತ್ತು. ಕಳೆದ 6-7 ವರ್ಷಗಳಿಂದ ದಂಡ ವಸೂಲಿಯಾಗಿಲ್ಲ, ಬಾಕಿಯಿದೆ. ಹಾಗಾಗಿ ಒನ್ಟೈಮ್ ಸೆಟ್ಲ್ಮೆಂಟ್ಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.
ಗಣಿಗಾರಿಕೆ ನಡೆಸುವವರು ಕಳೆದ ಐದು ವರ್ಷಗಳಿಂದ ದಂಡ ಕಟ್ಟಿಲ್ಲ. ಅದನ್ನ ವಸೂಲಿ ಮಾಡಲು ಈ ತೀರ್ಮಾನ ಮಾಡಲಾಗಿದೆ. ಡಿಜಿಟಲ್ ಮಾಡಿದ ಮೇಲೆ ಎನ್ ಕ್ರೋಚ್ ಸಾಧ್ಯವಾಗುತ್ತಿಲ್ಲ. ಒಟಿಎಸ್ ಮೂಲಕ ದಂಡ ವಸೂಲಿಗೆ ಕ್ರಮಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: ದೇವೇಗೌಡರ ಬಗ್ಗೆ ಕೃಷ್ಣಪ್ಪ ನುಡಿದಿದ್ದ ಭವಿಷ್ಯ ವಾಣಿಯನ್ನು ಹಾಸನ ಸಮಾವೇಶದಲ್ಲಿ ಪ್ರಸ್ತಾಪಿಸಿದ ಸಿಎಂ
1221 ಕೋಟಿ ರೂ. ರಾಯಲ್ಟಿ ಅಂತ ಪರಿಗಣಿಸಿದ್ದೇವೆ. 6105 ಕೋಟಿ ರೂ. ದಂಡ ಬಾಕಿ ಉಳಿದಿದೆ. ಒಟಿಎಸ್ ನಿಂದ ಇದರಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು. ಸರ್ಕಾರಕ್ಕೆ ಆದಾಯಬೇಕು. ಅದನ್ನ ವಸೂಲಿ ಮಾಡಲು ಹೊರಟಿದ್ದೇವೆ ಎಂದಿದ್ದಾರೆ.
ಖನಿಜಗಳನ್ನ ಹೊಂದಿರುವ ಭೂಮಿಗೆ ತೆರಿಗೆ ಹಾಕಲು ಸರ್ಕಾರ ನಿರ್ಧರಿಸಿದೆ. ಯಾವುದೇ ಖನಿಜಗಳನ್ನ ಹೊಂದಿರಬಹುದು, ಅಂತಹ ಭೂಮಾಲಿಕರು ತೆರಿಗೆ ಪಾವತಿಸಬೇಕಾಗುತ್ತದೆ. ಬಾಕ್ಸೈಟ್, ಕ್ರೋಮ್ ಇನ್ನಿತರ ಖನಿಜ ಇರುವ ಭೂಮಿ ಒಂದು ಟನ್ಗೆ 100 ರೂ. ರಾಯಲ್ಟಿ ಹಾಕಲಾಗುವುದು. ಈ ತೆರಿಗೆಯನ್ನು ಭೂಮಾಲಿಕರು ಕಟ್ಟಬೇಕಿದೆ. ಆ ಖನಿಜದ ಹಕ್ಕುಗಳು ಭೂಮಾಲಿಕರಿಗೆ ಸೇರುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:51 pm, Fri, 6 December 24