ಮಾನವ ಹಕ್ಕುಗಳ ಆಯೋಗದ ರಚನೆಗೆ ಸಚಿವ ಸಂಪುಟ ನಿರ್ಣಯ: ಇನ್ನಿತರ ತೀರ್ಮಾನಗಳ ವಿವರ ಇಲ್ಲಿದೆ
ಕರ್ನಾಟಕ ನಾಗರೀಕ ಸೇವಾ ನಿಯಮಕ್ಕೆ ತಿದ್ದುಪಡಿ ವಿಚಾರದ ಬಗ್ಗೆಯೂ ಸಂಪುಟದಲ್ಲಿ ಚರ್ಚೆಯಾಯಿತು. ಗ್ರೂಪ್ ಸಿ, ಗ್ರೂಪ್ ಡಿ ಜಿಲ್ಲಾವಾರು ನೇಮಕ ಆಗಿರುತ್ತದೆ. ಅಂತರ್ ಜಿಲ್ಲಾ ವರ್ಗಾವಣೆಗೆ ಒಳಪಟ್ಟರೆ ಸೀನಿಯಾರಿಟಿಯ ಕೊನೆಗೆ ಹೋಗ್ತಾರೆ. ಸೀನಿಯಾರಿಟಿಯವರಿಗೂ ಸಾಮಾನ್ಯವಾಗಿ ನೀಡಬೇಕು ಎಂಬ ಪ್ರಸ್ತಾವನೆ ಇತ್ತು. ಈ ಬಗ್ಗೆ ಚರ್ಚೆ ನಡೆಯಿತು. ಆದರೆ, ಕೆಲವು ಇಲಾಖೆಗಳಲ್ಲಿ ಬಹಳ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಅಂತಿಮ ನಿರ್ಣಯ ಕೈಗೊಂಡಿಲ್ಲ.
ಬೆಂಗಳೂರು, ನವೆಂಬರ್ 16: ಮಾನವ ಹಕ್ಕುಗಳ ಆಯೋಗದ (Human Rights Commission) ರಚನೆಗೆ ರಾಜ್ಯ ಸಚಿವ ಸಂಪುಟ (Karnataka Cabinet) ನಿರ್ಣಯ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ, ಈ ನಿರ್ಧಾರ ಕೈಗೊಳ್ಳಲಾಗಿದೆ. ಇಷ್ಟೇ ಅಲ್ಲದೆ, ಆಹಾರ ಇಲಾಖೆಯ ಸಗಟು ಗೋದಾಮುಗಳಿಗೆ ಸಿಸಿಟಿವಿ ಅಳವಡಿಕೆಗೆ ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಆಹಾರ ಇಲಾಖೆಯ ಗೋದಾಮುಗಳಿಂದ ವಸ್ತುಗಳು ಹೊರಗೆ ಹೋಗುವುದು ದಾಖಲಾಗಬೇಕು. ಇದಕ್ಕಾಗಿ ಸಿಸಿಟಿವಿ ಅಳವಡಿಸಲು 12.24 ಕೋಟಿ ರೂ. ಮಂಜೂರು ಮಾಡಲು ಸಂಪುಟ ಸಭೆ ನಿರ್ಣಯ ಕೈಗೊಂಡಿದೆ.
ಇಷ್ಟೇ ಅಲ್ಲದೆ, ಚೀಲಗಳ ಖರೀದಿಗೆ 76 ಕೋಟಿ ರೂಪಾಯಿ ಅನುದಾನ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ಬಿಳಿ ಜೋಳ, ರಾಗಿ ಖರೀದಿ ಸಂಗ್ರಹಕ್ಕೆ 80 ಲಕ್ಷ ಗೋಣಿ ಚೀಲಗಳ ಖರೀದಿ ಮಾಡಬೇಕಿದೆ. ಇದಕ್ಕೆ ಹಂತ ಹಂತವಾಗಿ ಗೋಣಿ ಚೀಲಗಳ ಖರೀದಿಗೆ ಅನುಮೋದನೆ ನೀಡಲಾಗಿದೆ.
ಅಕ್ರಮ ಗಣಿಗಾರಿಕೆ ತನಿಖೆ ಹಾಗೂ ಪ್ರಕರಣ ವಿಚಾರಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡದ ಕಾರ್ಯವೈಖರಿ ಬಗ್ಗೆ ಕ್ಯಾಬಿನೆಟ್ ಅಸಮಧಾನ ವ್ಯಕ್ತಪಡಿಸಿದೆ. ಕಳೆದ ಐದು ವರ್ಷಗಳಲ್ಲಿ ದಾಖಲಾಗಿರುವ 172 ಪ್ರಕರಣಗಳಲ್ಲಿ ಇದುವರೆಗೆ ಪ್ರಾಥಮಿಕ ತನಿಖೆ ಆಗಿಲ್ಲ. ಅದಿರು ಮೌಲ್ಯ ಮಾಪನ ವರದಿ ಕೂಡ ಇದುವರೆಗೆ ಸರಿಯಾಗಿ ಸಲ್ಲಿಕೆ ಆಗಿಲ್ಲ ಎಂದು ಸಚಿವ ಸಂಪುಟ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ವಿಶೇಷ ತನಿಖಾ ತಂಡದ ಅವಧಿಯನ್ನು ಇನ್ನೂ 8 ತಿಂಗಳಿಗೆ ವಿಸ್ತರಣೆ ಮಾಡಿದ್ದು, ತ್ವರಿತಗತಿಯಲ್ಲಿ ತನಿಖಾ ವರದಿ ನೀಡುವಂತೆ ಸೂಚನೆ ನೀಡಲು ತೀರ್ಮಾನಿಸಲಾಗಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮಕ್ಕೆ ತಿದ್ದುಪಡಿ ಬಗ್ಗೆ ಚರ್ಚೆ
ಕರ್ನಾಟಕ ನಾಗರೀಕ ಸೇವಾ ನಿಯಮಕ್ಕೆ ತಿದ್ದುಪಡಿ ವಿಚಾರದ ಬಗ್ಗೆಯೂ ಸಂಪುಟದಲ್ಲಿ ಚರ್ಚೆಯಾಯಿತು. ಗ್ರೂಪ್ ಸಿ, ಗ್ರೂಪ್ ಡಿ ಜಿಲ್ಲಾವಾರು ನೇಮಕ ಆಗಿರುತ್ತದೆ. ಅಂತರ್ ಜಿಲ್ಲಾ ವರ್ಗಾವಣೆಗೆ ಒಳಪಟ್ಟರೆ ಸೀನಿಯಾರಿಟಿಯ ಕೊನೆಗೆ ಹೋಗ್ತಾರೆ. ಸೀನಿಯಾರಿಟಿಯವರಿಗೂ ಸಾಮಾನ್ಯವಾಗಿ ನೀಡಬೇಕು ಎಂಬ ಪ್ರಸ್ತಾವನೆ ಇತ್ತು. ಈ ಬಗ್ಗೆ ಚರ್ಚೆ ನಡೆಯಿತು. ಆದರೆ, ಕೆಲವು ಇಲಾಖೆಗಳಲ್ಲಿ ಬಹಳ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಅಂತಿಮ ನಿರ್ಣಯ ಕೈಗೊಂಡಿಲ್ಲ.
ಇದನ್ನೂ ಓದಿ: ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಭಾಗ್ಯ ಘೋಷಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ
ಇಂದಿರಾ ಕ್ಯಾಂಟೀನ್ಗೆ 154 ಕೋಟಿ ರೂಪಾಯಿಗೆ ಸಮ್ಮತಿ
ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆಯಿಂದ ಬಿಬಿಎಂಪಿ ಹೊರತುಪಡಿಸಿ ಸ್ಥಳೀಯ ಸಂಸ್ಥೆಗಳಲ್ಲಿ 4ಜಿ ಎಕ್ಸೆಂಪ್ಶನ್ಗೆ ಸಂಪುಟ ಅನುಮೋದನೆ ನೀಡಿದೆ. 188 ನಗರಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ 154 ಕೋಟಿ ರೂಪಾಯಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:40 pm, Thu, 16 November 23