ಪಂಚಮಸಾಲಿ ಸ್ವಾಮೀಜಿ ಗುಡುಗು: ಒಂದು ವರ್ಷದ ನಂತರ ನಿರಾಣಿಗೆ ಸಚಿವ ಸ್ಥಾನದ ಗದ್ದುಗೆ

ಮುರುಗೇಶ ನಿರಾಣಿ ನಮ್ಮ ಸಮುದಾಯದವರು, ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಬಹಿರಂಗವಾಗಿ ಒತ್ತಾಯಿಸಿದ್ದ ಪಂಚಮಸಾಲಿ ಸಮಾಜದ ವಚನಾನಂದ ಸ್ವಾಮೀಜಿ ಕಳೆದ ವರ್ಷ ಭಾರೀ ಸದ್ದು ಮಾಡಿದ್ದರು.

  • TV9 Web Team
  • Published On - 11:09 AM, 13 Jan 2021
ಪಂಚಮಸಾಲಿ ಸ್ವಾಮೀಜಿ ಗುಡುಗು: ಒಂದು ವರ್ಷದ ನಂತರ ನಿರಾಣಿಗೆ ಸಚಿವ ಸ್ಥಾನದ ಗದ್ದುಗೆ
ಪಂಚಮಸಾಲಿ ಸಮಾಜದ ವಚನಾನಂದ ಸ್ವಾಮೀಜಿ

ಬೆಂಗಳೂರು: ಶಾಸಕ ಮುರುಗೇಶ ನಿರಾಣಿಗೆ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಈ ಕುರಿತು ತೀರ್ಮಾನವಾಗಿದ್ದು ನಿರಾಣಿಗೆ ಸಚಿವ ಸ್ಥಾನ ಸಿಗುವುದು ಖಚಿತವಾಗಿದೆ. ಇದೇ ವಿಚಾರವಾಗಿ ಕಳೆದ ವರ್ಷ ಪಂಚಮಸಾಲಿ ಸ್ವಾಮೀಜಿ ಮತ್ತು ಮುಖ್ಯಮಂತ್ರಿಗಳ ನಡುವೆ ವಾಗ್ವಾದ ನಡೆದಿತ್ತು.

ಮುರುಗೇಶ ನಿರಾಣಿ ನಮ್ಮ ಸಮುದಾಯದವರು, ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಬಹಿರಂಗವಾಗಿ ಒತ್ತಾಯಿಸಿದ್ದ ಪಂಚಮಸಾಲಿ ಸಮಾಜದ ವಚನಾನಂದ ಸ್ವಾಮೀಜಿ ಕಳೆದ ವರ್ಷ ಭಾರೀ ಸದ್ದು ಮಾಡಿದ್ದರು. ಇಡೀ ಸಮುದಾಯವೇ ತಿರುಗಿಬೀಳುವ ಧಾಟಿಯಲ್ಲಿ ಹೇಳಿಕೆ ನೀಡಿದ್ದಕ್ಕೆ ಮುಖ್ಯಮಂತ್ರಿಗಳು ಅದೇ ವೇದಿಕೆಯಲ್ಲಿ ಗುಡುಗಿದ್ದರು.

ಇಂದು ಮುರುಗೇಶ ನಿರಾಣಿಗೆ ಸಚಿವ ಸ್ಥಾನ ನೀಡಲು ಸಿಎಂ ನಿರ್ಧರಿಸಿದ್ದು, ಹೆಚ್ಚೂ ಕಡಿಮೆ ಒಂದು ವರ್ಷದ ನಂತರ ಪಂಚಮಸಾಲಿ ಸ್ವಾಮೀಜಿಯ‌ ಆಗ್ರಹಕ್ಕೆ ಫಲ ಸಿಕ್ಕಂತಾಗಿದೆ.