AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pegasus: ದೂರವಾಣಿ ಕದ್ದಾಲಿಕೆ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ, ವೈಎಸ್​ವಿ ದತ್ತಾ ಸಾಥ್, ಕೈ ನಾಯಕರು ಪೊಲೀಸ್ ವಶಕ್ಕೆ

ಕಾಂಗ್ರೆಸ್ ನಾಯಕರ ದೂರವಾಣಿ ಕದ್ದಾಲಿಕೆ ಆರೋಪವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

Pegasus: ದೂರವಾಣಿ ಕದ್ದಾಲಿಕೆ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ, ವೈಎಸ್​ವಿ ದತ್ತಾ ಸಾಥ್, ಕೈ ನಾಯಕರು ಪೊಲೀಸ್ ವಶಕ್ಕೆ
ದೂರವಾಣಿ ಕದ್ದಾಲಿಕೆ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ, ವೈಎಸ್​ವಿ ದತ್ತಾ ಸಾಥ್: ಡಿಕೆಶಿ, ಸಿದ್ದರಾಮಯ್ಯ ಮುಂತಾದ ಕೈ ನಾಯಕರು ಪೊಲೀಸ್ ವಶಕ್ಕೆ
TV9 Web
| Updated By: ಸಾಧು ಶ್ರೀನಾಥ್​|

Updated on:Jul 22, 2021 | 1:06 PM

Share

ಬೆಂಗಳೂರು: ಕಾಂಗ್ರೆಸ್ ನಾಯಕರ ದೂರವಾಣಿ ಕದ್ದಾಲಿಕೆ ಆರೋಪವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇತ್ತ ಬಿ ಎಸ್​ ಯಡಿಯೂರಪ್ಪ ಕರ್ನಾಟಕ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವುದು ಬಹುತೇಕ ಖಚಿತವಾಗುತ್ತಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಸ್ವತಃ ಯಡಿಯೂರಪ್ಪ ಅವರೇ ತಮ್ಮ ನಿರ್ಗಮನದ ಬಗ್ಗೆ ಸುಳಿವು ನೀಡಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು ಅಲ್ಲೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆಯೇ ಚರ್ಚೆ ಕೇಂದ್ರೀಕೃತವಾಗಿದೆ. ಸಿಎಂ ಯಡಿಯೂರಪ್ಪ ಬದಲಾದರೆ ಅದನ್ನು ಕಾಂಗ್ರೆಸ್​ ಪಕ್ಷದ ಸಂಘಟನೆಗೆ ಪೂರಕವಾಗಿ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿರುವುದು ಗಮನಾರ್ಹ.

ಕಾಂಗ್ರೆಸ್ ನಾಯಕರು ‘ಸಂವಿಧಾನ ಬಾಹಿರ ಬಿಜೆಪಿಗೆ ಧಿಕ್ಕಾರ’ ‘ಮೋದಿಗೆ ಧಿಕ್ಕಾರ’ ಎಂದು ಘೋಷಣೆ ಹಾಕುತ್ತಾ ರಾಜಭವನದತ್ತ ತೆರಳುತ್ತಿದ್ದಾರೆ. ಗಮನಾರ್ಹವೆಂದ್ರೆ ಕಾಂಗ್ರೆಸ್ ಪ್ರತಿಭಟನೆಗೆ ಜೆಡಿಎಸ್ ಮುಖಂಡ ವೈಎಸ್​ವಿ ದತ್ತಾ ಸಾಥ್ ನೀಡಿದ್ದಾರೆ. ವಿಧಾನ ಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ಮುಗಿಸಿ, ಹೈಕೋರ್ಟ್ ಮಾರ್ಗವಾಗಿ ರಾಜಭವನದತ್ತ ಕಾಂಗ್ರೆಸ್​ ನಾಯಕರ ಪ್ರತಿಭಟನಾ ರ್ಯಾಲಿಯಲ್ಲಿ ಸಾಗಿದ್ದಾರೆ. ವಿಧಾನ ಸೌಧ ಪೂರ್ವ ದ್ವಾರದ ಬಳಿಯೇ ಕೈ ನಾಯಕರಿಗೆ ಪೋಲಿಸರು ತಡೆಯೊಡ್ಡಿದ್ದಾರೆ. ಆದರೆ ಪೊಲೀಸರಿಗೆ ಆವಾಜ್ ಹಾಕಿ ಸಿದ್ದರಾಮಯ್ಯ ಗೇಟ್ ಓಪನ್ ಮಾಡಿಸಿ ಮುಂದೆ ಸಾಗಿದ್ದಾರೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕ ಕೈ ನಾಯಕರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ.

ಸಿಎಂ ಯಡಿಯೂರಪ್ಪ ರಾಜೀನಾಮೆ ವಿಚಾರ ಮಾತಾನಾಡಿರುವ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದೇ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು 6 ತಿಂಗಳ ಮೊದಲೇ ಹೇಳಿದ್ದೆ. ಯಡಿಯೂರಪ್ಪ ಬದಲಾವಣೆ ಆಗ್ತಾರೆ ಅಂತ.. ನನ್ನ ಮಾತನ್ನ ಯಾರೂ ನಂಬಲಿಲ್ಲ.. ನನಗೆ ಖಚಿತ ಮಾಹಿತಿ ಇತ್ತು ಎಂದಿದ್ದಾರೆ.

ಸಿದ್ದರಾಮಯ್ಯ ಕಾರು ಚಾಲಕನಿಗೆ ಡಿಸಿಪಿ ಕ್ಲಾಸ್..! ಪ್ರತಿಭಟನೆ ಸಂದರ್ಭದಲ್ಲಿಕಾಂಗ್ರೆಸ್ ನಾಯಕರನ್ನು ಬಂಧಿಸಿ, ಬಿಎಂಟಿಸಿ ಬಸ್ ನಲ್ಲಿ ಪೊಲೀಸರು ಕರೆದೊಯ್ಯುತ್ತಿದ್ದರು. ಆ ವೇಳೆ ಬಸ್ ಅನ್ನೇ ಹಿಂಬಾಲಿಸಿ ಬರುತ್ತಿದ್ದ ಸಿದ್ದರಾಮಯ್ಯ ಕಾರು ಚಾಲಕ  ಬಸ್ ಹಿಂದೆ ಬಂದಾಗ ಸಿದ್ದರಾಮಯ್ಯ ಕಾರು ಟಚ್ ಆಗಿದೆ. ಈ ವೇಳೆ ಡ್ರೈವರ್ ಗೆ ಸ್ವಲ್ಪ ಹೊತ್ತು ನಿಲ್ಲಕ್ಕಾಗಲ್ವಾ? ಎಂದು ಸಿದ್ದರಾಮಯ್ಯ ಕಾರು ಚಾಲಕನ ಮೇಲೆ ಡಿಸಿಪಿ ಅನುಚೇತ್ ಗರಂ ಆದರು.

CM BS Yediyurappa: ಇವತ್ತಿನ ಕ್ಯಾಬಿನೆಟ್ ಸಭೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಕೊನೆಯ ಸಭೆ?

(karnataka congress leaders protest against pegasus spyware near the Raj Bhavan bangalore)

Published On - 12:50 pm, Thu, 22 July 21