ಪಾಕ್, ಬಾಂಗ್ಲಾ, ನೇಪಾಳಕ್ಕಿಂತಲೂ ಭಾರತದಲ್ಲಿ ಹಸಿವು, ಅಪೌಷ್ಟಿಕತೆ ಹೆಚ್ಚಿರುವುದು ಕಳವಳಕಾರಿ: ಕರ್ನಾಟಕ ಕಾಂಗ್ರೆಸ್

Karnataka Congress: ಪಾಕ್, ಬಾಂಗ್ಲಾ, ನೇಪಾಳಕ್ಕಿಂತಲೂ ಹಸಿವು, ಅಪೌಷ್ಟಿಕತೆ ಹೊಂದಿರುವುದು ಕಳವಳಕಾರಿ. ಮೋದಿಯವರ 'ನಹಿ ಖಾನೆ ದುಂಗಾ' ಮಾತಿನ ಅಸಲಿ ಅರ್ಥ ಇದೇ ಏನೋ! ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಪಾಕ್, ಬಾಂಗ್ಲಾ, ನೇಪಾಳಕ್ಕಿಂತಲೂ ಭಾರತದಲ್ಲಿ ಹಸಿವು, ಅಪೌಷ್ಟಿಕತೆ ಹೆಚ್ಚಿರುವುದು ಕಳವಳಕಾರಿ: ಕರ್ನಾಟಕ ಕಾಂಗ್ರೆಸ್
ಕಾಂಗ್ರೆಸ್

ಬೆಂಗಳೂರು: ಹಬ್ಬದ ಸಡಗರದ ನಡುವೆ, ಭಾರತದಲ್ಲಿ ಹಸಿದವರ ಸಂಖ್ಯೆ ಹೆಚ್ಚಿರುವ ವಿಷಾದಕರ ಸಂಗತಿ ಬೆಳಕಿಗೆ ಬಂದಿದೆ. ಭಾರತ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 94ನೇ ಸ್ಥಾನದಿಂದ 101ನೇ ಸ್ಥಾನಕ್ಕೆ ಕುಸಿದಿದೆ. ಪಾಕ್, ಬಾಂಗ್ಲಾ, ನೇಪಾಳಕ್ಕಿಂತಲೂ ಹಸಿವು, ಅಪೌಷ್ಟಿಕತೆ ಹೊಂದಿರುವುದು ಕಳವಳಕಾರಿ. ಮೋದಿಯವರ ‘ನಹಿ ಖಾನೆ ದುಂಗಾ’ ಮಾತಿನ ಅಸಲಿ ಅರ್ಥ ಇದೇ ಏನೋ! ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ದೇಶ 101ನೇ ಸ್ಥಾನದಲ್ಲಿದೆ. 2020ನೇ ವರ್ಷದಲ್ಲಿ 94ನೇ ಸ್ಥಾನದಲ್ಲಿ ಇದ್ದ ಭಾರತ ಇದೀಗ 101ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟೀಕೆ ಮಾಡಿದೆ.

ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವು ಸೂಚ್ಯಂಕದ (GHI) ಪ್ರಕಾರ ಚೀನಾ, ಬ್ರೆಜಿಲ್ ಮತ್ತು ಕುವೈತ್ ಸೇರಿದಂತೆ 18 ದೇಶಗಳು ಐದಕ್ಕಿಂತ ಕಡಿಮೆ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿವೆ. 2020 ರಲ್ಲಿ ಭಾರತ 107 ದೇಶಗಳ ಪೈಕಿ 94 ನೇ ಸ್ಥಾನದಲ್ಲಿತ್ತು. ಈಗ ಈ ಪಟ್ಟಿಯಲ್ಲಿ 116 ದೇಶಗಳಿದ್ದರೆ, ಭಾರತ 101 ನೇ ಸ್ಥಾನಕ್ಕೆ ಕುಸಿದಿದೆ. ಭಾರತದ ಜಿಹೆಚ್ಐ ಸ್ಕೋರ್ ಕೂಡ ಕಡಿಮೆಯಾಗಿದೆ. 2000 ರಲ್ಲಿ 38.8 ಇದ್ದ್ದು 2012 ಮತ್ತು 2021 ರ ನಡುವೆ 28.8 – 27.5 ರ ಒಳಗೆ ಇದೆ.

ನೇಪಾಳ (76), ಬಾಂಗ್ಲಾದೇಶ (76), ಮ್ಯಾನ್ಮಾರ್ (71) ಮತ್ತು ಪಾಕಿಸ್ತಾನ (92) ನಂತಹ ನೆರೆಯ ದೇಶಗಳು ತನ್ನ ಪ್ರಜೆಗಳಿಗೆ ಭಾರತಕ್ಕಿಂತ ಉತ್ತಮ ಆಹಾರ ನೀಡಿದರೂ, ಈ ದೇಶಗಳನ್ನು ‘ಆತಂಕಕಾರಿ’ ಹಸಿವಿನ ವರ್ಗದಲ್ಲಿ ಸೇರಿಸಲಾಗಿದೆ. ವರದಿಯ ಪ್ರಕಾರ ಭಾರತದಲ್ಲಿ 1998-2002ರ ನಡುವೆ ಮಕ್ಕಳಲ್ಲಿ ಅಪೌಷ್ಟಿಕತೆ ಪಾಲು 17.1 ಶೇಕಡದಿಂದ 17.3 ಪ್ರತಿಶತಕ್ಕೆ ಏರಿಕೆಯಾಗಿದೆ. “ಕೊವಿಡ್ -19 ಮತ್ತು ಭಾರತದಲ್ಲಿ ಸಾಂಕ್ರಾಮಿಕ ಸಂಬಂಧಿತ ನಿರ್ಬಂಧಗಳಿಂದ ಜನರು ತೀವ್ರವಾಗಿ ತೊಂದರೆಗೊಳಗಾಗಿದ್ದಾರೆ, ವಿಶ್ವದಾದ್ಯಂತ ಅತಿಹೆಚ್ಚು ಮಕ್ಕಳ ಅಪೌಷ್ಟಿಕತೆ ಹೊಂದಿರುವ ದೇಶ” ಎಂದು ವರದಿ ಹೇಳಿದೆ.

ಇದನ್ನೂ ಓದಿ: Global Hunger Index ಜಾಗತಿಕ ಹಸಿವು ಸೂಚ್ಯಂಕದಲ್ಲಿ 101ನೇ ಸ್ಥಾನಕ್ಕೆ ಕುಸಿದ ಭಾರತ: ಮೋದಿಗೆ ಅಭಿನಂದನೆ ಎಂದು ಟ್ವೀಟ್ ಮಾಡಿದ ಕಪಿಲ್ ಸಿಬಲ್

ಇದನ್ನೂ ಓದಿ: ಮುಂದಿನ ವಾರ ತಾಲಿಬಾನ್ ಜೊತೆ ಮಾತುಕತೆಗೆ ರಷ್ಯಾದ ಆಹ್ವಾನ ಸ್ವೀಕರಿಸಿದ ಭಾರತ

Click on your DTH Provider to Add TV9 Kannada