ಕೊಡಗು: ತಾಯಿ, ಮಗನಿಗೆ ಗುಂಡಿಕ್ಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಮೃತ ಆರೋಪಿ ಆಲೆಮಾಡ ಸಾಗರ್ ತಾಯಿ, ಮಗನಿಗೆ ಶೋಟ್ ಮಾಡಿದ್ದಾನೆ. ಈ ಪೈಕಿ ಮಗ ಮಧು ಸ್ಥಳದಲ್ಲೇ ಮೃತಪಟ್ಟಿದ್ದು ತಾಯಿ ಯಶೋದಾ ಸ್ಥಿತಿ ಗಂಭೀರವಾಗಿದೆ.

ಕೊಡಗು: ತಾಯಿ, ಮಗನಿಗೆ ಗುಂಡಿಕ್ಕಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಪ್ರಾತಿನಿಧಿಕ ಚಿತ್ರ

ಕೊಡಗು: ತಾಯಿ, ಮಗನಿಗೆ ಗುಂಡಿಕ್ಕಿ ವ್ಯಕ್ತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಿರಗೂರು ಗ್ರಾಮದಲ್ಲಿ ನಡೆದಿದೆ. ಮಗ ಮಧು(42) ಸಾವು, ತಾಯಿ ಯಶೋಧಾ(40) ಮೈಸೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿ ಆಲೆಮಾಡ ಸಾಗರ್(52) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಆರೋಪಿ ಆಲೆಮಾಡ ಸಾಗರ್ ತಾಯಿ, ಮಗನಿಗೆ ಶೋಟ್ ಮಾಡಿದ್ದಾನೆ. ಈ ಪೈಕಿ ಮಗ ಮಧು ಸ್ಥಳದಲ್ಲೇ ಮೃತಪಟ್ಟಿದ್ದು ತಾಯಿ ಯಶೋಧಾ ಮೈಸೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಇನ್ನು ಶೋಟ್ ಮಾಡಿದ ಬಳಿಕ ಆರೋಪಿ ಸಾಗರ್ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಕೊಲೆಯಾದ ಮಧು, ಸಾಗರ್‌ನಾ ಚಿಕ್ಕಮ್ಮನ ಮಗ. ಘಟನಾ ಸ್ಥಳಕ್ಕೆ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಜಯರಾಂ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಮತ್ತೊಂದು ಕಡೆ ಹಾಸನ ಜಿಲ್ಲೆ‌ಯ ಹೊಳೆನರಸೀಪುರ ತಾಲೂಕಿನ ಮೂಡಲಹಿಪ್ಪೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶದಿಂದ ರೈತ ಮತ್ತು ಎರಡು ಎತ್ತುಗಳು ಮೃತಪಟ್ಟಿವೆ. ಹೊಲದಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ರೈತ ರಾಮೇಗೌಡ(72) ಮತ್ತು ಎರಡು ಎತ್ತುಗಳು ಮೃತಪಟ್ಟಿವೆ.

ಇಂದು ಬೆಳಿಗ್ಗೆಯೇ ಹೊಲ‌ ಉಳುಮೆಗೆ ಎಂದು ರಾಮೇಗೌಡ ತನ್ನ ಎತ್ತುಗಳನ್ನು ಕರೆದುಕೊಮಡು ಹೋಗಿದ್ದ. ಈ ವೇಳೆ ಹೊಲದಲ್ಲಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ಹರಿದು ರೈತ ಮತ್ತು ಎತ್ತುಗಳು ಪ್ರಾಣ ಕಳೆದುಕೊಂಡಿವೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಅರ್ಚಕನನ್ನು ದೇಗುಲದ ಆವರಣದಲ್ಲೇ ಹತ್ಯೆಗೈದ ದುಷ್ಕರ್ಮಿಗಳು; ಪುತ್ರನೇ ಕಾರಣವಂತೆ ತಂದೆಯ ಕೊಲೆಗೆ !

Click on your DTH Provider to Add TV9 Kannada