Covid 19 Karnataka Update: ಕರ್ನಾಟಕದಲ್ಲಿ 5983 ಮಂದಿಗೆ ಕೊರೊನಾ ಸೋಂಕು, 138 ಸಾವು

ಬೆಂಗಳೂರಿನಲ್ಲಿ 1,209 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 17 ಜನರು ಸಾವನ್ನಪ್ಪಿದ್ದಾರೆ.

Covid 19 Karnataka Update: ಕರ್ನಾಟಕದಲ್ಲಿ 5983 ಮಂದಿಗೆ ಕೊರೊನಾ ಸೋಂಕು, 138 ಸಾವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 17, 2021 | 7:53 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸತತವಾಗಿ ಇಳಿಯುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ವರದಿಯಾಗಿರುವ ಒಟ್ಟು ಸೋಂಕಿತರ ಸಂಖ್ಯೆ 6 ಸಾವಿರಕ್ಕೆ ಕಡಿಮೆ. ಕರ್ನಾಟಕದಲ್ಲಿ ಇಂದು ಒಂದೇ ದಿನ 5,983 ಜನರಿಗೆ ಸೋಂಕು ದೃಢಪಟ್ಟಿದ್ದು, 138 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 1,209 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 17 ಜನರು ಸಾವನ್ನಪ್ಪಿದ್ದಾರೆ.

ಕರ್ನಾಟಕದಲ್ಲಿ ಈವರೆಗೆ ಒಟ್ಟು 27,90,338 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 26,101,57 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 1,46,726 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಈವರೆಗೆ ಒಟ್ಟು 33,434 ಮಂದಿ ಕೊವಿಡ್​ನಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಇಂದು ಒಂದೇ ದಿನ 1,209 ಜನರಿಗೆ ಸೋಂಕು ದೃಢಪಟ್ಟಿದ್ದು, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,01,963ಕ್ಕೇರಿಕೆಯಾಗಿದೆ. ಈ ಪೈಕಿ 11,07,648 ಜನ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 17 ಜನರು ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 15371 ಜನರು ಸಾವನ್ನಪ್ಪಿದ್ದಾರೆ. 78943 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ಕರ್ನಾಟಕದಲ್ಲಿ ಇಂದು ಹೊಸದಾಗಿ 5,983 ಜನರಿಗೆ ಕೊರೊನಾ ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 1209 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಬಾಗಲಕೋಟೆ 22, ಬಳ್ಳಾರಿ 128, ಬೆಳಗಾವಿ 172, ಬೆಂಗಳೂರು ಗ್ರಾಮಾಂತರ 226, ಬೀದರ್ 8, ಚಾಮರಾಜನಗರ 98, ಚಿಕ್ಕಬಳ್ಳಾಪುರ 119, ಚಿಕ್ಕಮಗಳೂರು 198, ಚಿತ್ರದುರ್ಗ 110, ದಕ್ಷಿಣ ಕನ್ನಡ 679, ದಾವಣಗೆರೆ 153, ಧಾರವಾಡ 86, ಗದಗ 34, ಹಾಸನ 424, ಹಾವೇರಿ 42, ಕಲಬುರಗಿ 25, ಕೊಡಗು 152, ಕೋಲಾರ 145, ಕೊಪ್ಪಳ 48, ಮಂಡ್ಯ 309, ಮೈಸೂರು 596, ರಾಯಚೂರು 16, ರಾಮನಗರ 37, ಶಿವಮೊಗ್ಗ 229, ತುಮಕೂರು 289, ಉಡುಪಿ 166, ಉತ್ತರ ಕನ್ನಡ 169, ವಿಜಯಪುರ 83, ಯಾದಗಿರಿ 11 ಪ್ರಕರಣಗಳು ಪತ್ತೆಯಾಗಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು? ರಾಜ್ಯದಲ್ಲಿ ಇಂದು ಒಟ್ಟು 138 ಮಂದಿ ಮೃತಪಟ್ಟಿದ್ದಾರೆ. ಜಿಲ್ಲಾವಾರು ವಿವರ ಇಂತಿದೆ. ಮೈಸೂರು 26, ಬೆಂಗಳೂರು 17, ಬಳ್ಳಾರಿ 5, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 2, ಚಾಮರಾಜನಗರ, ಚಿಕ್ಕಬಳ್ಳಾಪುರ 5, ದಕ್ಷಿಣ ಕನ್ನಡ, ದಾವಣಗೆರೆ 11, ಧಾರವಾಡ 9, ಹಾಸನ 7, ಹಾವೇರಿ 3, ಕಲಬುರ್ಗಿ 1, ಕೋಲಾರ 5, ಕೊಪ್ಪಳ 4, ಮಂಡ್ಯ 3, ರಾಯಚೂರು 2, ರಾಮನಗರ 1, ಶಿವಮೊಗ್ಗ 5, ತುಮಕೂರು 1, ಉಡುಪಿ 3, ಉತ್ತರ ಕನ್ನಡ 2, ವಿಜಯಪುರ 1 ಜನರು ಮೃತಪಟ್ಟಿದ್ದಾರೆ.

(Karnataka Coronavirus Numbers 5983 People Infected of covid on June 17)

ಇದನ್ನೂ ಓದಿ: ಕೊವಿಡ್​ಗೆ ಅಲೋಪತಿ ಚಿಕಿತ್ಸೆ ಬಗ್ಗೆ ತಪ್ಪು ಮಾಹಿತಿ ಹರಡಿದ ಆರೋಪ: ಬಾಬಾ ರಾಮ್​ದೇವ್ ವಿರುದ್ಧ ಎಫ್​ಐಆರ್ ದಾಖಲು

ಇದನ್ನೂ ಓದಿ: ಕೊರೊನಾ ಸೋಂಕಿತರಲ್ಲಿ ಕಡಿಮೆಯಾದ ಬ್ಲ್ಯಾಕ್ ಫಂಗಸ್, ಕೊವಿಡ್‌ನಿಂದ ಗುಣಮುಖರಾದವರಲ್ಲಿ ಹೆಚ್ಚಳ

Published On - 7:29 pm, Thu, 17 June 21