AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹಿರಂಗ ಹೇಳಿಕೆ ನೀಡುತ್ತಿರುವವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಕರ್ನಾಟಕ ಬಿಜೆಪಿ

ಬಹಿರಂಗ ಹೇಳಿಕೆ ನೀಡಿರುವ ಇನ್ನೂ ಕೆಲವು ಶಾಸಕರ ಹೆಸರನ್ನು ಕೂಡ ಉಲ್ಲೇಖ ಮಾಡಲಾಗಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಶಿಸ್ತು ಸಮಿತಿ ಈ ಬಗ್ಗೆ ಮನವಿ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬಹಿರಂಗ ಹೇಳಿಕೆ ನೀಡುತ್ತಿರುವವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಕರ್ನಾಟಕ ಬಿಜೆಪಿ
ಬಿಜೆಪಿ ಬಾವುಟ
Follow us
TV9 Web
| Updated By: ganapathi bhat

Updated on: Jun 17, 2021 | 7:59 PM

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ಮುಜುಗರ ತರುವಂಥ ಬಹಿರಂಗ ಹೇಳಿಕೆ ನೀಡುತ್ತಿರುವ ಶಾಸಕ, ಸಚಿವ ಅಥವಾ ಬಿಜೆಪಿ ಮುಖಂಡರ ವಿರುದ್ಧ ಶಿಸ್ತು ಕ್ರಮಕ್ಕೆ ರಾಜ್ಯ ಬಿಜೆಪಿ ಮುಂದಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರ ಹಾಗೂ ವಿರುದ್ಧ ಬಹಿರಂಗ ಹೇಳಿಕೆ ನೀಡಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಶಿಸ್ತು ಸಮಿತಿಯಿಂದ ಕೇಂದ್ರೀಯ ಶಿಸ್ತು ಸಮಿತಿಗೆ ಶಿಫಾರಸು ಮಾಡಲಾಗಿದೆ.

ಲಿಂಗರಾಜ್ ಪಾಟೀಲ್ ಅಧ್ಯಕ್ಷತೆಯ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಈ ರೀತಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಕಳೆದ ವಾರದ ಹೇಳಿಕೆಗಳನ್ನು ನೀಡುತ್ತಿರುವ ಶಾಸಕರು, ಸಚಿವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕ ಅರವಿಂದ್ ಬೆಲ್ಲದ, ಸಚಿವ ಸಿ.ಪಿ. ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

ಬಹಿರಂಗ ಹೇಳಿಕೆ ನೀಡಿರುವ ಇನ್ನೂ ಕೆಲವು ಶಾಸಕರ ಹೆಸರನ್ನು ಕೂಡ ಉಲ್ಲೇಖ ಮಾಡಲಾಗಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಶಿಸ್ತು ಸಮಿತಿ ಈ ಬಗ್ಗೆ ಮನವಿ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕುಟುಂಬ ರಾಜಕಾರಣ, ರಾಕ್ಷಸ ರಾಜಕಾರಣ, ಭ್ರಷ್ಟಾಚಾರದ ವಿರುದ್ಧ ದಂಗೆ ಎದ್ದು ಅಲ್ಲಿಂದ ಹೊರಬಂದೆವು. ಕಾಂಗ್ರೆಸ್, ಜೆಡಿಎಸ್​ನಿಂದ 17 ಶಾಸಕರು ಹೊರಬಂದೆವು. ಬಿಜೆಪಿ ಬಂದ ಬಳಿಕ ಇಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟಿವಿ9ಗೆ ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್​ ಪ್ರತಿಕ್ರಿಯೆ ನೀಡಿದ್ದರು.

ಯಡಿಯೂರಪ್ಪಗೆ ಸಿಎಂ ಹುದ್ದೆ ನಿಭಾಯಿಸಲು ಆಗುತ್ತಿಲ್ಲ. ಎಲ್ಲಾ ಇಲಾಖೆಗಳಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಾನು ಸತ್ಯ ಹೇಳುತ್ತೇನೆ, ಬೇರೆಯವರು ಹೇಳಿಕೊಳ್ಳುತ್ತಿಲ್ಲ. ಯಾವೊಬ್ಬ ಸಚಿವರು ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಜಿಂದಾಲ್ ಕಂಪನಿ​ಗೆ ಭೂಮಿ ಪರಭಾರೆಯನ್ನು ವಿರೋಧಿಸಿದ್ದೆ. ಭೂಮಿ ಪರಭಾರೆಯಿಂದ ಕಿಕ್​ಬ್ಯಾಕ್​ ಪಡೆಯಲು ಯತ್ನ. 10 ಪರ್ಸೆಂಟ್​ ಪಡೆಯಲು ನಿರ್ಧರಿಸಿದ್ದೇವೆ ಎಂದಿದ್ದರು. ಆ ಹಣವನ್ನು ಕೇಂದ್ರಕ್ಕೆ ಕೊಡಬೇಕು ಎಂದು ಹೇಳಿದ್ದರು. ಕೇಂದ್ರದ ನಾಯಕರಿಗೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದ್ದರು.

ಅರವಿಂದ್ ಬೆಲ್ಲದ್, ಸಿ.ಪಿ. ಯೋಗೇಶ್ವರ್, ರೇಣುಕಾಚಾರ್ಯ ಕೂಡ ಮುಖ್ಯಮಂತ್ರಿ ಬದಲಾವಣೆ, ಫೋನ್ ಕದ್ದಾಲಿಕೆ ಆರೋಪ, ದೆಹಲಿ ಪ್ರಯಾಣ ಇತ್ಯಾದಿಯಲ್ಲಿ ತೊಡಗಿಸಿಕೊಂಡು ಕಳೆದ ಕೆಲವು ದಿನಗಳಿಂದ ರಾಜಕೀಯ ಗೊಂದಲ ಸೃಷ್ಟಿಯಾಗಲು ಕಾರಣವಾದಂತೆ ಕಂಡುಬಂದಿದ್ದರು.

ಇದನ್ನೂ ಓದಿ: ಯಾರೋ ನನ್ನ ಮೊಬೈಲ್​ ಟ್ಯಾಪ್ ಮಾಡ್ತಿದ್ದಾರೆ, ಎಲ್ಲೇ ಹೋದರೂ ಕೆಲ ವ್ಯಕ್ತಿಗಳು ಹಿಂದೆ ಬರುತ್ತಾರೆ: ಅರವಿಂದ್ ಬೆಲ್ಲದ್ ಆರೋಪ

ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ; ಬಸವಣ್ಣನ ವಚನದ ಮೂಲಕ ಬಿಜೆಪಿ ಟೀಕಿಸಿದ ಕುಮಾರಸ್ವಾಮಿ