ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ವಿಚಾರಣೆ ವೇಳೆ ಕಿಂಗ್ಪಿನ್ ಶ್ರವಣ್ ಮೌನ
Ramesh Jarkiholi CD Case: ಕ್ಯಾಮರಾ ಎಲ್ಲಿದೆ, ಒರಿಜಿನಲ್ ವಿಡಿಯೋ ಎಲ್ಲಿ ಎಂದು ಪ್ರಶ್ನೆ ಕೇಳಿದಾಗ ಎಸ್ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡದ ಶ್ರವಣ್ ಮೌನಕ್ಕೆ ಶರಣಾಗಿದ್ದಾರೆ.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಮುಂದುವರಿದಿದೆ. ಇಂದು (ಜೂನ್ 17) ನಡೆದ ಎಸ್ಐಟಿ ವಿಚಾರಣೆಯ ವೇಳೆ ಕಿಂಗ್ಪಿನ್ ಶ್ರವಣ್ ಮೌನವಹಿಸಿದ್ದಾರೆ. ಶ್ರವಣ್ ಮುಂದೆ ಇಂದು ದಾಖಲೆಗಳನ್ನು ಇಟ್ಟ ಎಸ್ಐಟಿ ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಶ್ರವಣ್ ಮೌನವಾಗಿದ್ದು ಉತ್ತರ ನೀಡದೆ ಉಳಿದಿದ್ದಾರೆ.
ಕ್ಯಾಮರಾ ಖರೀದಿಗೆ ದಾಖಲೆ ಮತ್ತು ಸಿಸಿಟಿವಿ ದೃಶ್ಯದ ಸಾಕ್ಷಿ. ಸಹೋದರ ಚೇತನ್ ಅಕೌಂಟ್ಗೆ ₹20 ಲಕ್ಷ ವರ್ಗಾವಣೆ ಈ ಬಗ್ಗೆ ಎಸ್ಐಟಿ ಕೇಳಿದ ಪ್ರಶ್ನೆಗೆ ಅದು ಸಾಲ ಎಂದು ಶ್ರವಣ್ ಹೇಳಿರುವುದಾಗಿ ತಿಳಿದುಬಂದಿದೆ. ಸಾಲ ಪಡೆದಿದ್ದಲ್ಲ ನಗದು ನೀಡಿ ಅಕೌಂಟ್ಗೆ ಹಣ ಹಾಕಿಸಿದ್ದು ಎಂದು ಹೇಳಿದ್ದಾರೆ. ಹಣ ಹಾಕಿದ ಸಂಬಂಧ ಎಸ್ಐಟಿಯಿಂದ ನಾಲ್ವರ ಹೇಳಿಕೆ ದಾಖಲು ಮಾಡಲಾಗಿದೆ.
ಇಲ್ಲ ಹಣ ಹಾಕಿದವರೇ ಸುಳ್ಳು ಹೇಳಿದ್ದಾರೆ ಎಂದು ಶ್ರವಣ್ ಇಂದು ಪ್ರತಿಕ್ರಿಯಿಸಿದ್ದಾರೆ. ಸಿಡಿ ಯುವತಿಯ ಅಕೌಂಟ್ಗೆ ಹಣ ವರ್ಗಾವಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಹಣ ವರ್ಗಾವಣೆ ಮಾಡಿದ್ದಕ್ಕೆ SITಯಿಂದ ದಾಖಲೆ ಸಂಗ್ರಹ ಮಾಡಲಾಗಿದೆ. ಯುವತಿ ಜೊತೆ ಸಿಡಿ ರೆಕಾರ್ಡ್ ಮಾಡಿರುವ ವೇಳೆ ಸಂಪರ್ಕದಲ್ಲಿ ಇರುವುದಕ್ಕೆ ಎಸ್ಐಟಿ ದಾಖಲೆ ನೀಡಿ ಪ್ರಶ್ನಿಸಿದೆ. ಅದಕ್ಕೂ ಎಸ್ಐಟಿ ಮುಂದೆ ಶ್ರವಣ್ ಮೌನವಾಗಿಯೇ ಇದ್ದರು ಎಂದು ತಿಳಿದುಬಂದಿದೆ.
ಕ್ಯಾಮರಾ ಎಲ್ಲಿದೆ, ಒರಿಜಿನಲ್ ವಿಡಿಯೋ ಎಲ್ಲಿ ಎಂದು ಪ್ರಶ್ನೆ ಕೇಳಿದಾಗ ಎಸ್ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡದ ಶ್ರವಣ್ ಮೌನಕ್ಕೆ ಶರಣಾಗಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ಗೆ ಸಂಬಂಧಿಸಿ, ಎಸ್ಐಟಿಯಿಂದ ಹೈಕೋರ್ಟ್ಗೆ ತನಿಖಾ ಪಾಲನಾ ವರದಿ ಸಲ್ಲಿಕೆ ಮಾಡಲಾಗಿದೆ. ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದೆ. ಕಳೆದ ಬಾರಿ ಸಹಿ ಹಾಕದೆ ವರದಿ ನೀಡಿದ್ದ ಎಸ್ಐಟಿ ಅಧಿಕಾರಿಗಳು, ಎಸ್ಐಟಿ ಮುಖ್ಯಸ್ಥರು ಮೆಡಿಕಲ್ ರಜೆಯಲ್ಲಿರುವ ಕಾರಣ ನೀಡಿದ್ದರು. ಆದರೆ, ಈ ಬಾರಿ ಡಿಐಜಿ ಸಂದೀಪ್ ಪಾಟೀಲ್ ಸಹಿ ಹಾಕಿಸಿ ವರದಿ ನೀಡಲಾಗಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಕಾಮನ್ ಫ್ರೆಂಡ್ ಮೂಲಕ ಯುವತಿ ಪರಿಚಯ; ವಿಚಾರಣೆ ವೇಳೆ ನರೇಶ್ ಮಾಹಿತಿ
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸತತ ಐದು ಗಂಟೆಗಳ ಕಾಲ ಆರೋಪಿ ನರೇಶ್ ವಿಚಾರಣೆ ನಡೆಸಿದ ಎಸ್ಐಟಿ