AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Covid Update: ಕರ್ನಾಟಕದಲ್ಲಿ ಇಂದು 1,453 ಹೊಸ ಕೊವಿಡ್ ಪ್ರಕರಣ ದೃಢ, 17 ಜನರು ನಿಧನ

ರಾಜ್ಯದಲ್ಲಿ ಇಂದು ಒಂದೇ ದಿನ 1,73,000 ಜನರಿಗೆ ಕೊವಿಡ್ ಸೋಂಕು ಪರೀಕ್ಷೆ ಮಾಡಲಾಗಿದೆ.

Karnataka Covid Update: ಕರ್ನಾಟಕದಲ್ಲಿ ಇಂದು 1,453 ಹೊಸ ಕೊವಿಡ್ ಪ್ರಕರಣ ದೃಢ, 17 ಜನರು ನಿಧನ
ಪ್ರಾತಿನಿಧಿಕ ಚಿತ್ರ
TV9 Web
| Updated By: guruganesh bhat|

Updated on: Aug 20, 2021 | 11:27 PM

Share

ಬೆಂಗಳೂರು: ಕರ್ನಾಟಕದಲ್ಲಿ ಇಂದು 1,453 ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಕೊವಿಡ್ ಪ್ರಕರಣಗಳ ಸಂಖ್ಯೆ 21,161ಕ್ಕೆ ಏರಿಕೆಯಾಗಿದೆ. ಇಂದು 17 ಜನರು ಕೊವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ. ಜತೆಗೆ ಇಂದು ಒಂದೇ ದಿನ 1,408 ಜನರು ಕೊವಿಡ್​ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ಸೇರಿದ್ದಾರೆ. ಬೆಂಗಳೂರು ನಗರದಲ್ಲಿ 352 ಕೊವಿಡ್ ಪ್ರಕರಣಗಳು ಖಚಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೊವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 341 ಜನರಲ್ಲಿ ಕೊವಿಡ್ ಸೋಂಕು ಖಚಿತವಾಗಿದೆ. ಅಂದಹಾಗೆ ಇಂದು ಬೆಂಗಳೂರಿನಲ್ಲಿ ಖಚಿತಪಟ್ಟ ಕೊವಿಡ್ ಸೋಂಕಿತರ ಸಂಖ್ಯೆ 352. ಹೀಗಾಗಿ ಬೆಂಗಳೂರು ನಗರದಲ್ಲಿ ಖಚಿತಪಡುವಷ್ಟೇ ಪ್ರಮಾಣದಲ್ಲಿ ದಕ್ಷಿಣ ಕನ್ನಡದಲ್ಲಿಯೂ ಖಚಿತಪಡುತ್ತಿದೆ. 

ರಾಜ್ಯದಲ್ಲಿ ಇಂದು ಒಂದೇ ದಿನ 1,73,000 ಜನರಿಗೆ ಕೊವಿಡ್ ಸೋಂಕು ಪರೀಕ್ಷೆ ಮಾಡಲಾಗಿದೆ. ಇಂದು ಮೃತಪಟ್ಟ 17 ಜನರಲ್ಲಿ 6 ಜನರು ದಕ್ಷಿಣ ಕನ್ನಡದವರೇ ಆಗಿದ್ದಾರೆ. ಜತೆಗೆ ಉತ್ತರ ಕನ್ನಡ ಜಿಲ್ಲೆ ಮತ್ತು ಮೈಸೂರು ಜಿಲ್ಲೆಗಳಲ್ಲಿಯೂ ತಲಾ ಇಬ್ಬರು ಇಂದು ಕೊವಿಡ್​ನಿಂದ ಮೃತಪಟ್ಟಿದ್ದಾರೆ. ಹಾವೇರಿ, ಕೋಲಾರ, ದಾವಣಗೆರೆ, ಧಾರವಾಡ, ಬೆಂಗಳೂರು ನಗರ, ತುಮಕೂರು, ಮಂಡ್ಯಗಳಲ್ಲಿ ತಲಾ ಒಬ್ಬರು ಕೊವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಕರ್ನಾಟಕದಲ್ಲಿ ನಿನ್ನೆ  1,432 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 27 ಜನರು ನಿಧನರಾಗಿದ್ದರು. ನಿನ್ನೆ ರಾಜ್ಯದಲ್ಲಿ 21,133 ಜನರಲ್ಲಿ ಕೊರೊನಾ ಸೋಂಕು ಪ್ರಕರಣ ಸಕ್ರಿಯವಾಗಿತ್ತು. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 318 ಜನರಿಗೆ ಸೋಂಕು ಖಚಿತಪಟ್ಟಿತ್ತು. ಇಬ್ಬರು ಬೆಂಗಳೂರು ನಗರ ಜಿಲ್ಲೆಯಲ್ಲಿ ಮೃತಪಟ್ಟಿದ್ದರು. ಹೀಗೆ ದಿನದಿವೂ ಒಂದೇ ಪ್ರಮಾಣದಲ್ಲಿ ಕೊವಿಡ್ ಸೋಂಕು ಖಚಿತಪಡುತ್ತಿದ್ದು, ಮೂರನೇ ಅಲೆ ದಾಳಿಯಿಟ್ಟಿದೆಯೋ ಇಲ್ಲವೋ ಎಂಬುದು ಖಚಿತಪಟ್ಟಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆಪ್ಟೆಂಬರ್ ಎರಡನೇ ವಾರದಲ್ಲಿ ಈ ಕುರಿತು ಅಧಿಕೃತ ಮಾಹಿತಿ ದೊರೆಯಲಿದೆ ಎಂದು ಈಮುನ್ನವೇ ತಿಳಿಸಿದ್ದಾರೆ.

ಇದನ್ನೂ ಓದಿ: 

ZyCov-D Vaccine: ಭಾರತಕ್ಕೆ ಮತ್ತೊಂದು ಕೊವಿಡ್ ಲಸಿಕೆ ಲಭ್ಯ; ಝಿಕೊವ್-ಡಿ ತುರ್ತು ಬಳಕೆಗೆ ಅನುಮತಿ

ಸಾಂಕ್ರಾಮಿಕದ ನಡುವೆಯೇ ಕೇರಳದಲ್ಲಿ ಓಣಂ ಹಬ್ಬ; ವ್ಯಾಪಾರ ಚುರುಕಾಗುವ ಜತೆಗೆ ಏರಬಹುದು ಕೊವಿಡ್ ಪ್ರಕರಣ

(Karnataka Covid Update 1453 new cases and 17 death today)